ವಿಷಯಕ್ಕೆ ಹೋಗು

ಮಾದರ ಚೆನ್ನಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾದರ ಚೆನ್ನಯ್ಯ - 12ನೆಯ ಶತಮಾನದ ಶಿವಶರಣ ಹಾಗೂ ವಚನಕಾರ. ಬಸವಣ್ಣನವರ ಸಮಕಾಲೀನ. ಬಸವಣ್ಣ, ಚೆನ್ನಬಸವಣ್ಣ ಮೊದಲಾದ ವಚನಕಾರರು ಈತನನ್ನು ಸ್ಮರಿಸಿದ್ದಾರೆ. ಬಸವಣ್ಣ ಈತನನ್ನು ತಮ್ಮ ವಚನಗಳಲ್ಲಿ ಅತಿ ಪೂಜ್ಯಭಾವದಿಂದ ಕೊಂಡಾಡಿದ್ದಾರೆ.[]

ಹಿನ್ನಲೆ

[ಬದಲಾಯಿಸಿ]

ಜಾತಿಯಿಂದ ಮಾದರನಾದ ಚೆನ್ನಯ್ಯ ತಮಿಳುನಾಡಿನ ಕರಿಕಾಲ ಚೋಳರಾಜನ ಕುದುರೆಲಾಯದಲ್ಲಿ ಕೆಲಸಕ್ಕಿದ್ದ. ಹುಲ್ಲು ಕೊಯ್ಯುವುದು ಇವನ ಕಾಯಕ. ಅರಣ್ಯದಲ್ಲಿ ಈ ಕಾಯಕದಲ್ಲಿ ಮಗ್ನನಾದಾಗ ಏಕಾಂತ ಸ್ಥಳವೊಂದರಲ್ಲಿ ಹೋಗಿ ತನ್ನ ಇಷ್ಟಲಿಂಗದಲ್ಲಿ ಧ್ಯಾನಮಗ್ನನಾಗಿದ್ದು ಶಿವನನ್ನು ಪ್ರತ್ಯಕ್ಷ ಒಲಿಸಿಕೊಂಡು ತನ್ನ ಹೆಂಡತಿ ತಯಾರಿಸಿದ ಅಂಬಲಿಯನ್ನು ಶಿವನಿಗರ್ಪಿಸಿ ಅದರ ಸವಿಯನ್ನು ಶಿವನ ಜತೆ ಕುಳಿತು ಸವಿದ ಮಹಾನ ಶಿವಶರಣರು. ರಾಜನ್ನು ಪ್ರತಿ ವಾರದಲ್ಲಿ ಒಂದು ದಿನ ಆನಂದಪಟ್ಟು ತಾನೂ ಮೃಷ್ಟಾನ್ನ ಮಾಡಿಸಿ ಹೀಗೆ ವರುಷಗಳಿಂದ ಶಿವನಿಗೆ ನೈವೇದ್ಯ ನೀಡಿತ್ತಾ ಬಂದಿರುತ್ತಾನೆ . ಕೆಲವು ವರುಷಗಳೀಂದ ಶಿವ ಊಟಮಾಡದಿರಲು ಕಾರಣ ನನ್ನ ಭಕ್ತಿಯಲ್ಲಿ ಎನೊ ಲೋಪಾವಾಗಿದೆ ಎಂದು ಬೇಸರದಿಂದ` ಆತ ತನ್ನ ರುಂಡವನ್ನೇ ಕತ್ತರಿಸಿಕೊಳ್ಳಲು ಅಣಿಯಾದ. ಆಗ ಶಿವ ಚೆನ್ನಯ್ಯನ ಅಂಬಲಿ ನನಗೆ ಸವಿಯಾದದ್ದು; ಅದನ್ನು ನಾನು ದಿನಾಲು ಅವನೊಡನೆ ಉಣ್ಣುತ್ತೇನೆಂದು ತಿಳಿಸಿ ಅವನ್ ಪ್ರಾಣವನ್ನು ರಕ್ಷಿಸಲ್ಲು ಬಂದಿರುವುದಾಗಿ ಎಂದು ತಿಳಿಸಿದನ್ನು. ರಾಜ ಇಂಥ ಭಕ್ತನನ್ನು ಕಾಣಲು ಬಂದ. ಅಲ್ಲಿವರೆಗು ತಾನೆ ಶ್ರೇಷ್ಠ ಶಿವಭಕ್ತ ನೇಂಬ ಻ ಅಗ್ಗಳಕೆಗೆ ಪಾತ್ರನಾಗಿಇದ್ದ ಕರಿಕಾಲ ಚೋಳರಾಜನಿ ಗೆ ಜ್ಞಾನೋದಯವಾಯಿತ್ತು ಜೋತೆಗೆ ಕಿರಿ ಕಿರಿ ಆಯಿತ್ತು ಅಯ್ಯೊ ಻ಎಂಥ ಶ್ರೇಷ್ಠ ಶಿವ ಭಕ್ತನಿಂದ ಕಡೆಯಿಂದ ಸೇವೆಮಾಡಿಸಿಕೋಂಡೆನಲ್ಲ ಎಂದು ಹಲುಬಿದನ್ನು ಕರಿಕಾಲ ಚೋಳರಾಜ ದೇವಾಲಯದಿಂದ ನೇರಾವಾಗಿ ಮಾದರ ಚೇನ್ನಯ್ಯನ ಮನೆಗೆ ಹುಡುಕುತ್ತ ಹೋರಟನ್ನು ರಾಜ ಪರಿವಾರವು ಆತನ್ನನು ಅನುಸರಿಸಿತ್ತು ರಾಜ ಮತ್ತು ರಾಜಪರಿವಾರವೆ ಮಾದರ ಕೇರಿಗೆ ಬಂದದನ್ನು ಕಂಡು ಕೇರಿಯ ಜನಗಳು ಭಯಭೀತಾರಾದರು. ಚೆನ್ನಯ್ಯ ಮತ್ತು ಆತನ ಪತ್ನಿ ಏನು ಆಚತಯ್ರ಻ಜರುಗೆದೆ ಎಂದು ಗಾಬರಿಆದರು. ರಾಜನ್ನು ಮಾದರ ಕೇರಿಗೆ ಬರುವಾಗ ಮಾದರ ಚೆನ್ನಯ್ಯ , ಮಾದರ ಚೆನ್ನಯ್ಯ ,ಮಾದರ ಚೆನ್ನಯ್ಯ ,ಎಂದು ಚೆನ್ನಯ್ಯನನ್ನು ಕರಿಯುತ್ತಾ ಬರುತ್ತಾನೆ ತನ್ನ ಹೆಸರನ್ನು ಯಾರೊ ಕರಿಯುತಾರೆ ಎಂಬ ಆತಂಕದಿಂದ ಚನ್ನಯ್ಯ ಬಾಗಿಲು ತೆರಯುತ್ತಾನೆ ಕರಿಕಾಲ ಚೋಳರಾಜ ನೇರಾವಾಗಿ ಚನ್ನಯ್ಯನ ಕಾಲಿಗೆರಗಿದನು ತಬ್ಬಿಬಾದ ಚನ್ಯ್ಯ ೆದೇನು ಮಾಡಿತಿರುವೆ ರಾಜರೆ ನಾನುನೀಮ್ಮ ಸೇವಕ ಮೇಲಾಗಿ ಕೆಳ ವಗ್ರದವನ್ನು ಅಂಥದರಲ್ಲಿ ನೀವು ಶ್ರೇಷ್ಠ ಕುಲದವರು ನ ್ನನ ಕಾಲಿಗೆ ಬಿದ್ದು ನನ್ನನು ಯಾವ ಪಾಪಕ್ಕೆ ತಳುವಿರಿಎಂದು ನುಡುದನ್ನು


ಮಾದರ ಚೆನ್ನಯ್ಯ ಉತ್ತಮ ವಚನಕಾರನೂ ಆಗಿದ್ದು , ನಿಜಾತ್ಮಾರಾಮ ರಾಮನಾ ಎಂಬ ಅಂಕಿತ ಇಟ್ಟುಕೊಂಡು ವಚನಗಳನ್ನು ಬರೆದಿದ್ದಾನೆ. ಈ ತನಕ ಈತನ 10 ವಚನಗಳು ದೊರಕಿವೆ. ಇವುಗಳಲ್ಲಿ ವೀರಶೈವ ತತ್ತ್ವಬೋಧನೆ ಕಂಡುಬರುತ್ತದೆ. ಮಲ್ಲಿಕಾರ್ಜುನ ಪಂಡಿತಾರಾಧ್ಯ ಮತ್ತು ಪಾಲ್ಕುರಿಕೆ ಸೋಮನಾಥ ಇವರ ಗಣಸಹಸ್ರನಾಮದಲ್ಲಿ ಇವನ ಹೆಸರಿದೆ. ಅಬ್ಬಲೂರು, ಜಗಳೂರು ಶಿಲಾಶಾಸನಗಳಲ್ಲಿ ಈತನ ಹೆಸರಿನ ಉಲ್ಲೇಖ ಕಂಡುಬರುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Satyanarayana, K & Tharu, Susie (2011) No Alphabet in Sight: New Dalit Writing from South Asia, Dossier 1: Tamil and Malayalam, New Delhi: Penguin Books.
  2. "ಮಾದರ ಚೆನ್ನಯ್ಯರ ವಚನಗಳು". Archived from the original on 2017-12-15. Retrieved 2017-11-12.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಮಾದರ ಚೆನ್ನಯ್ಯನ ಭಕ್ತಿ ನೋಡಿ ಶಿವನು ಅವನಿಗೆ ಮೆರವಣಿಗೆ ಮಾಡಿಸಿ ಶಿವ ಲೋಕಕ್ಕೆ ಪುಷ್ಪ ದಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಮಾತೇ ಶ್ರೀ ಪಾರ್ವತಿ ಅವನ ಭಕ್ತಿಗೆ ಮೆಚ್ಚಿ ಅವನಿಗೆ " ಗಣ " ಪದವಿಯನ್ನು ನೀಡಿ ಗೌರವಿಸಿತು .

https://www.bookbrahma.com/book/appanu-namma-madara-chennaiah