ಮಾತುಕತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾತುಕತೆ (ಸಂಭಾಷಣೆ, ಸಲ್ಲಾಪ) ಎಂದರೆ ಇಬ್ಬರು ಅಥವಾ ಹೆಚ್ಚು ಜನರ ನಡುವೆ ನಡೆಯುವ ಪರಸ್ಪರ ಪ್ರಭಾವಬೀರುವ ಸಂವಹನ.

ಸಂಭಾಷಣಾ ಕೌಶಲಗಳು ಮತ್ತು ಶಿಷ್ಟವರ್ತನೆಯ ಬೆಳವಣಿಗೆಯು ಸಾಮಾಜಿಕೀಕರಣದ ಮುಖ್ಯ ಭಾಗವಾಗಿದೆ. ಒಂದು ಹೊಸ ಭಾಷೆಯಲ್ಲಿ ಸಂಭಾಷಣಾ ಕೌಶಲಗಳನ್ನು ಬೆಳೆಸಿಕೊಳ್ಳುವುದು ಭಾಷಾ ಬೋಧನೆ ಮತ್ತು ಕಲಿಕೆಯ ಮಾಮೂಲಿನ ಕೇಂದ್ರಬಿಂದುವಾಗಿರುತ್ತದೆ.

ಸಂಭಾಷಣಾ ವಿಶ್ಲೇಷಣೆಯು ಮಾನವ ಸಂವಹನದ ರಚನೆ ಹಾಗೂ ಸಂಯೋಜನೆಯನ್ನು ಅಧ್ಯಯನ ಮಾಡುವ ಸಮಾಜಶಾಸ್ತ್ರದ ಶಾಖೆಯಾಗಿದೆ. ಇದರ ಹೆಚ್ಚಿನ ನಿರ್ದಿಷ್ಟ ಗಮನವು ಸಂಭಾಷಣಾ ಸಂಬಂಧಿ ಸಂವಹನದ ಮೇಲೆ ಇರುತ್ತದೆ.

ಮಾತುಕತೆಯು ಕನಿಷ್ಠಪಕ್ಷ ಇಬ್ಬರು ವ್ಯಕ್ತಿಗಳು ಒಟ್ಟಾಗಿ ಮಾತನಾಡುವುದನ್ನು ಒಳಗೊಳ್ಳುತ್ತದೆ ಎಂಬ ವಾಸ್ತವಾಂಶವನ್ನು ಮೀರಿ, ಮಾತುಕತೆಯ ಯಾವುದೇ ಸಾಮಾನ್ಯವಾಗಿ ಒಪ್ಪಲಾದ ವ್ಯಾಖ್ಯಾನ ಇಲ್ಲ. ಪರಿಣಾಮವಾಗಿ, ಹಲವುವೇಳೆ ಈ ಪದವನ್ನು ಸಾಮಾನ್ಯವಾಗಿ ಇದು ಏನು ಅಲ್ಲ ಎಂಬುದನ್ನು ಆಧರಿಸಿ ವ್ಯಾಖ್ಯಾನಿಸಲಾಗುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಮಾತುಕತೆ&oldid=1153886" ಇಂದ ಪಡೆಯಲ್ಪಟ್ಟಿದೆ