ಮಾಣಾ
ಮಾಣಾ ಭಾರತದ ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಗ್ರಾಮವಾಗಿದೆ. ಇದು 3,200 ಮೀಟರ್ ಎತ್ತರದಲ್ಲಿ ಇದೆ.[೧] ಮಾಣಾ ಮಾಣಾ ಕಣಿವೆಮಾರ್ಗದ ಮೊದಲು ಬರುವ ಕೊನೆಯ ಹಳ್ಳಿಯಾಗಿದೆ. ಈ ಗ್ರಾಮವು ಭಾರತ ಟಿಬೇಟ್ ಗಡಿರೇಖೆಯ ಹತ್ತಿರವಿದೆ. ಹಿಂದೂ ತೀರ್ಥಯಾತ್ರಾ ಸ್ಥಳವಾದ ಬದ್ರಿನಾಥ್‌ನಿಂದ ಇದು ೩ ಕಿ.ಮೀ ದೂರದಲ್ಲಿದೆ ಮತ್ತು ಈ ಎರಡೂ ಸ್ಥಳಗಳು ಸಾಂಸ್ಕೃತಿಕವಾಗಿ ಸಂಪರ್ಕ ಹೊಂದಿವೆ.
ಚಳಿಗಾಲದ ತಿಂಗಳುಗಳಲ್ಲಿ, ಇಡೀ ಜನಸಂಖ್ಯೆಯು ಕೆಳ ಸ್ಥಳಗಳಿಗೆ ಬರುತ್ತದೆ, ಏಕೆಂದರೆ ಈ ಪ್ರದೇಶವು ಹಿಮದ ಅಡಿಯಲ್ಲಿ ಆವೃತವಾಗಿರುತ್ತದೆ.
ಸಾಂಸ್ಕೃತಿಕ ಗುರುತು
[ಬದಲಾಯಿಸಿ]ಈ ಗ್ರಾಮದ ಗ್ರಾಮಸ್ಥರು ಸಾಂಸ್ಕೃತಿಕವಾಗಿ ಬದ್ರೀನಾಥ್ ದೇವಾಲಯದ ಚಟುವಟಿಕೆಗಳು ಮತ್ತು ಮಾತಾ ಮೂರ್ತಿಯ ವಾರ್ಷಿಕ ಜಾತ್ರೆಯೊಂದಿಗೆ ಸಂಬಂಧ ಹೊಂದಿದ್ದಾರೆ.[೧] ಇವರು ಮುಂಚಿನ ದಿನಗಳಲ್ಲಿ ಟಿಬೆಟ್‌ನೊಂದಿಗೆ ವ್ಯಾಪಾರ ಮಾಡುತ್ತಿದ್ದರು. ಮಾಣಾದಲ್ಲಿ ವ್ಯಾಸ್ ಗುಫಾ ಎಂಬ ಹೆಸರಿನ ಒಂದು ಸಣ್ಣ ಗುಹೆ ಇದೆ ಮತ್ತು ಮಹರ್ಷಿ ವ್ಯಾಸರು ಈ ಗುಹೆಯಲ್ಲಿ ಮಹಾಭಾರತವನ್ನು ರಚಿಸಿದರು ಎಂದು ನಂಬಲಾಗಿದೆ. ಇನ್ನೂ ಒಂದು ಗುಹೆಯನ್ನು ಗಣೇಶ ಗುಫಾ ಎಂದು ಕರೆಯಲಾಗುತ್ತದೆ ಮತ್ತು ಪ್ರವಾಸಿಗರು ಈ ಎರಡೂ ಗುಹೆಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ.
ಇತರ ಸ್ಥಳಗಳು
[ಬದಲಾಯಿಸಿ]ಹತ್ತಿರದ ಸ್ಥಳಗಳಲ್ಲಿ ವಸುಧಾರಾ ಜಲಪಾತ, ಸತೋಪಂಥ್ ಸರೋವರ, ಭೀಮ್ ಪುಲ್, ಸರಸ್ವತಿ ದೇವಾಲಯ ಇತ್ಯಾದಿಗಳು ಸೇರಿವೆ. [ ಉಲ್ಲೇಖದ ಅಗತ್ಯವಿದೆ ]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Bisht, Harshwanti (1994). Tourism in Garhwal Himalaya : with special reference to mountaineering and trekking in Uttarkashi and Chamoli Districts. New Delhi: Indus Pub. Co. pp. 90–92. ISBN 9788173870064.