ಮಾಂದಲಪಟ್ಟಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಮಾಂದಲಪಟ್ಟಿಯು ಕೊಡಗು ಜಿಲ್ಲೆಯಲ್ಲಿರುವ ಒಂದು ಸುಂದರವಾದ ಪ್ರಕೃತಿ ತಾಣ. ಮಾಂದಲಪಟ್ಟಿಯು ಮಡಿಕೇರಿಯಿಂದ ೨೦ ಕಿ.ಮೀ ದೂರದಲ್ಲಿದೆ. ಎಲ್ಲಿ ನೋಡಿದರಲ್ಲಿ ಪ್ರಕೃತಿ ಸೌಂದರ್ಯ ಕಂಗೊಳಿಸುವ ಸ್ಥಳವಿದು. ಹಸಿರಿನ ಗಿರಿಗಳ ಮೇಲೆ ಬಿಳಿ ಮೋಡಗಳ ಚಿತ್ತಾರ ಇಲ್ಲಿಯ ದೃಶ್ಯ ವೈಭವನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಪುಷ್ಪಗಿರಿ ವನ್ಯ ಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಅರಣ್ಯ ಇಲಾಖೆಯವರು ಇಲ್ಲಿ ಒಂದು ವೀಕ್ಷಣಾ ಗೋಪುರವನ್ನು ನಿರ್ಮಿಸಿದ್ದಾರೆ. ಇದಕ್ಕೆ ಒಬ್ಬರಿಗೆ ೪೦ ರೂ. ಕೊಟ್ಟು ವೀಕ್ಷಣಾ ಗೋಪುರದಿಂದ ನೋಡಬಹುದು.