ವಿಷಯಕ್ಕೆ ಹೋಗು

ಮಹೇಶ್ವರಿ ಯು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹೇಶ್ವರಿ ಯು.

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಸಂಶೋಧನ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದು ನಿವೃತ್ತಿ ಹೊಂದಿ, ಪ್ರಸ್ತುತ ಕಣ್ಣೂರು ವಿಶ್ವವಿದ್ಯಾನಿಲಯದ ಭಾಷಾ ಅಧ್ಯಯನಾಂಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಯು.ಮಹೇಶ್ವರಿಯವರು ಕವಯಿತ್ರಿ ಹಾಗೂ ವಿಮರ್ಶಕಿ. ಕಾಸರಗೋಡು ಜಿಲ್ಲೆಯ ಭರವಸೆಯ ಕವಯಿತ್ರಿಯರಲ್ಲಿ ಮಹೇಶ್ವರಿಯವರು ಒಬ್ಬರಾಗಿದ್ದಾರೆ. ಇವರು ಮೂರು ಮಂದಿ ಸಹೋದರರು ಐದು ಮಂದಿ ಸಹೋದರಿಯರ ದೊಡ್ದ ಕುಟುಂಬದಲ್ಲಿ ಬೆಳೆದವರು.

ಜೀವನ, ಬಾಲ್ಯ, ವಿದ್ಯಾಭ್ಯಾಸ

[ಬದಲಾಯಿಸಿ]

ಗಂಗಾಧರ ಭಟ್ ಮತ್ತು ಸರಸ್ವತಿ ಅಮ್ಮ ದಂಪತಿಗಳಿಗೆ ೧೯೫೮ ಮಾರ್ಚ್ ೧೮ರಂದು ಜನಿಸಿದ ಅವಳಿ ಮಕ್ಕಳಲ್ಲಿ ಮಹೇಶ್ವರಿಯವರು ಒಬ್ಬರು (ಇನ್ನೊಬ್ಬರು ಇವರ ತಮ್ಮ ಶಿವಶಂಕರ). ಕಾಸರಗೋಡು ತಾಲೂಕಿನ ಬೇಳ ಗ್ರಾಮದ ಉಳ್ಳೋಡಿ ಇವರ ಹುಟ್ಟೂರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯಲ್ಲಿಯೂ, ಪ್ರೌಢ ಶಾಲೆಯ ವಿದ್ಯಾಭ್ಯಾಸವನ್ನು ನವಜೀವನ ಪ್ರೌಢ ಶಾಲೆ ಪೆರಡಾಲದಲ್ಲಿಯೂ ಪಡೆದುಕೊಂಡಿದ್ದಾರೆ. ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ (ಪದವಿಪೂರ್ವದಿಂದ ಸ್ನಾತಕೋತ್ತರದವರೆಗೆ) ಕಾಲೇಜು ವಿದ್ಯಾಭಾಸವನ್ನು ಪೂರೈಸಿದ್ದಾರೆ. ಇದರ ಜೊತೆಗೆ ಅಂಚೆ ತೆರಪಿನ ಶಿಕ್ಷಣದ ಮೂಲಕ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ಬಾಲ್ಯದಲ್ಲಿಯೇ ಇವರಲ್ಲಿ ಸಾಹಿತ್ಯದ ಆಸಕ್ತಿಯನ್ನು ಹುಟ್ಟಿಸಿದವರು ಗುರುಗಳಾದ ಕಯ್ಯಾರ ಕಿಞ್ಞಣ್ಣ ರೈಯವರು.

ಸಾಹಿತ್ಯ ಕೃತಿಗಳು

[ಬದಲಾಯಿಸಿ]
  1. ಮುಗಿಲಹಕ್ಕಿ,೧೯೯೬ (ಕವನ ಸಂಕಲನ)
  2. ಇದು ಮಾನುಷಿಯ ಓದು, ೨೦೦೧ (ವಿಮರ್ಶೆ, ಸಂಶೋಧನೆ)
  3. ಮಧುರವೇ ಕಾರಣ, ೨೦೦೪ (ಲೇಖನಗಳ ಸಂಕಲನ)-ಇವು ಪ್ರಕಟಗೊಂಡ ಕೃತಿಗಳು.
  4. ಧರೆಯ ಗರುವದಿ ಮರೆಯಲಿ (ಕವನ ಸಂಕಲನ)
  5. ಕಯ್ಯಾರ ಕಿಞ್ಞಣ್ಣ ರೈ
  6. ಬದುಕು ಬರಹ-ಕೃತಿಗಳು ಪ್ರಕಟಣೆಗೆ ಸಿದ್ಧವಾಗಿವೆ.[]

ಪ್ರಶಸ್ತಿಗಳು

[ಬದಲಾಯಿಸಿ]
  • ಜಗಜ್ಯೋತಿ ಕಲಾವೃಂದ (ರಿ) ಮುಂಬಯಿ ಆಯೋಜಿಸಿದ ಶ್ರೀಮತಿ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿಯನ್ನು ಇವರ 'ಧರೆಯ ಗರುವದಿ ಮೆರೆಯಲಿ',ಕವನ ಸಕಂಲನದ ಹಸ್ತಪ್ರತಿಯು ಪಡೆದುಕೊಂಡಿದೆ.
  • ಸಂಕ್ರಮಣ ಸಾಹಿತ್ಯ ಸ್ವರ್ಧೆ(೨೦೦೨)ಯ ಕಾವ್ಯ ವಿಭಾಗದಲ್ಲಿ ಇವರ 'ಮುಟ್ಟಾದ ಹುಡುಗಿ ಮತ್ತು ಪದ್ಯ' ಕವನವು ಬಹುಮಾನ ಪಡೆದುಕೊಂಡಿದೆ.[]
  1. ಚಂದ್ರಗಿರಿ ನಾಡೋಜ ಡಾ ಸಾರಾ ಅಬೂಬಕ್ಕರ್ ಅಭಿನಂದನ ಗ್ರಂಥ, ಸಂಪಾದಕರು - ಡಾ. ಸಬಿಹಾ, ಸಿರಿವರ ಪ್ರಕಾಶನ, ಬೆಂಗಳೂರು, ಮೊದಲ ಮುದ್ರಣ ೨೦೦೯, ಪು.೪೩೦
  2. "ಆರ್ಕೈವ್ ನಕಲು". Archived from the original on 2016-03-06. Retrieved 2015-12-12.