ಮಹಾ ವೈದ್ಯನಾಥ ಅಯ್ಯರ್
ಕನಾ೯ಟಕ ಸಂಗೀತದಲ್ಲಿ ವಾಗ್ಗೇಯಕಾರರು ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಲು ಕಾರಣರಾಗಿದ್ದಾರೆ.ಇಂತಹ ವಾಗ್ಗೇಯಕಾರರ ಕೊಡುಗೆಯಿಂದ ಕನಾ೯ಟಕ ಸಂಗೀತ ರಚನ ಭಂಡಾರವು ಶ್ರೀಮಂತವಾಗಿದೆ.ಇವರಲ್ಲಿ ಒಬ್ಬರುಮಹಾ ವೈದ್ಯನಾಥ ಅಯ್ಯರ್.
ತ್ಯಾಗರಾಜರ ಶಿಷ್ಯಪರಂಪರೆಗೆ ಸೇರಿದ ವೈದ್ಯನಾಥ ಅಯ್ಯರ್ ಹನ್ನೆರಡನೆಯ ವಯಸ್ಸಿಗೇ ಪಂಡಾರು ಸನ್ನಿಧಿಯ ಮಠಾಧಿಪತಿಗಳಿಂದ ಮಹಾ ಎಂಬ ಬಿರುದನ್ನು ಪಡೆದವರು.ಉತ್ತಮ ಗಾಯಕರು,ಪಲ್ಲವಿಯ ನಿರೂಪಣೆಯಲ್ಲಿ ನಿಪುಣರು.ಗಂಧವ೯ ಗಾನಕ್ಕೆ ಸಮನಾದ ಇವರ ಗಾನವು ಸಹಸ್ರಾರು ಶ್ರೋತೃಗಳನ್ನು ಆನಂದಪರವಶರನ್ನಾಗಿ ಮಾಡುತಿತ್ತು.
ಹುಟ್ಟು
[ಬದಲಾಯಿಸಿ]ತಂಜಾವೂರಿನ ಸಮೀಪವಿರುವ ವೈಯಚ್ಚೇರಿಯಲ್ಲಿ ಪಂಚನದ ಅಯ್ಯರ್ ರವರ ಪುತ್ರರಾಗಿ ವೈದ್ಯನಾಥರು ೧೮೪೪ರಲ್ಲಿ ಜನಿಸಿದರು.ಕೌಂಡಿನ್ಯಗೋತ್ರ. ತಂದೆ ಉತ್ತಮ ಗಾಯಕರು.ತ್ಯಾಗರಾಜರಿಂದ ಆಶೀವಾ೯ದವನ್ನು ಪಡೆದಿದ್ದರು.ಅಣ್ಣ ರಾಮಸ್ವಾಮಿ ಶಿವನ್,ಪಂಡಿತರು.
ವೈದ್ಯನಾಥನ ಸಂಗೀತ ಶಿಕ್ಷಣವು ವಾಗ್ಗೇಯಕಾರ ಆನಯ್ಯನವರಲ್ಲಿ ಪ್ರಾರಂಭವಾಗಿ ಮಾನಂಬು ಚಾವಡಿ ವೆಂಕಟಸುಬ್ಬಯ್ಯರ್ ಅವರಲ್ಲಿ ಮುಂದುವರಿಯಿತು.ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ರವರ ಸಹಪಾಠಿಯಾದರು. ವೈದ್ಯನಾಥ ಏಳನೆಯ ವಯಸ್ಸಿಗೇ ರಾಗಾಲಾಪನೆಯಲ್ಲಿ ನಿಸ್ಸೀಮರೆನಿಸಿ ಹತ್ತನೆಯ ವಯಸ್ಸಿಗೆ ಅಣ್ಣನೊಡನೆ ಸಂಗೀತ ಕಛೇರಿ ಮಾಡುತಿದ್ದರು. ಅನೇಕ ಸಂಸ್ಥಾನಗಳಲ್ಲಿ ಹಾಡಿ ಸನ್ಮಾನಗಳನ್ನು ಪಡೆದರು. ಸಹೋದರರಿಬ್ಬರೂ ಸೇರಿ ಕಥಾ ಕಾಲಕ್ಷೇಪವನ್ನೂ ಮಾಡುತಿದ್ದರು.ವೈದ್ಯನಾಥ ಸಂಗೀತ ಭಾಗವನ್ನೂ ರಾಮಸ್ವಾಮಿ ನಿರೂಪಣಾ ಭಾಗನನ್ನೂ ಹಂಚಿಕೊಳ್ಳುತ್ತಿದ್ದರು. ಮೂರು ಸ್ಥಾಯಿಗಳಲ್ಲೂ ಸುಲಭವಾಗಿ ಸಂಚರಿಸುವ ದ್ರುತಗತಿಯ ಸ್ಪಷ್ಟವಾದ ನುಡಿಕಾರವುಳ್ಳ ಶಾರೀರ ಇವರದು. ಐದನೇ ಶ್ರುತಿಯಲ್ಲಿ ಹಾಡಿ ಶ್ರೋತೃಗಳನ್ನು ಮೋಡಿ ಮಾಡುತ್ತಿದ್ದರು. ಇಂತಹ ಶಾರೀರವನ್ನು ಕಾಪಾಡಿಕೊಳ್ಳಲು ಮಿತಭಾಷಿಯಾದರು.ಮಿತಾಹಾರಿಯಾದರು.ಮಾತನಾಡುವಾಗ ನಾದಮಯವಾಗಿ ಆಡಿ ತಮ್ಮ ಶ್ರುತಿಯ ಕಡೆಗೆ ಗಮನವೀಯುತ್ತಿದ್ದರು.
ಬಾಲ್ಯದಿಂದಲೇ ಸಂಗೀತ ಕಾಯ೯ಕ್ರಮಗಳನ್ನು ಕೊಡಲು ಪ್ರಾರಂಭಿಸಿದ್ದರಿಂದ ಹೆಚ್ಚು ಕೃತಿಗಳನ್ನು ಅಭ್ಯಾಸ ಮಾಡಲಾಗಲಿಲ್ಲ. ಮನೋಧಮ೯ಕ್ಕೆ ಪ್ರಾಶಸ್ತ್ಯ ಕೊಟ್ಟು ರಾಗ,ತಾನ, ಪಲ್ಲವಿಯನ್ನು ವಿಶದವಾಗಿ ಹಾಡುತ್ತಿದ್ದರು.ನಾರಾಯಣಗೌಳ ರಾಗದಲ್ಲಿ ಪಲ್ಲವಿಯನ್ನು ಹಾಡಿದ್ದರು.
ಉಚ್ಛಿಷ್ಠ ಗಣಪತಿಯ ಉಪಾಸಕರಾದ ಮಹಾವೈದ್ಯನಾಥ ಅಯ್ಯ್ರರ್ ನಿಷ್ಠಾವಂತರು.ಶಿವಪೂಜೆ ಮಾಡುವಾಗ ತೇವಾರದ ಒಂದು ಪಾಶುರ (ಪದ್ಯ)ವನ್ನು ತಪ್ಪದೇ ಹಾಡುತ್ತಿದ್ದರು.ತ್ರಿಕಾಲ ಗಾಯತ್ರಿಯಲ್ಲಿ ನಂಬಿಕೆ. ಸಂಗೀತ ಕಛೇರಿಯ ಮಧ್ಯದಲ್ಲಿ ವಿರಾಮವಿತ್ತು ಸಂದ್ಯಾವಂದನೆ ಮಾಡುತ್ತಿದ್ದರು.ಶಿಷ್ಯರಿಂದ ತಂಬೂರಿ ನಾದ ಸಾಗುತ್ತಿತ್ತು.
ಗುರುದಾಸನೆಂಬ ಅಂಕಿತದಿಂದ ಸಂಗೀತ ರಚನೆಗಳನ್ನು ರಚಿಸಿದ್ದಾರೆ.ಪ್ರಸಿದ್ಧವಾದುದು ಎಪ್ಪತ್ತೆರಡು ಮೇಳರಾಗಮಾಲಿಕೆ. ಸಿಂಹನಂದನ ತಾಳದಲ್ಲಿ ತಿಲ್ಲಾನವನ್ನು ರಚಿಸಿದ್ದಾರೆ. ಹಂಸಧ್ವನಿ ರಾಗದ ವಾತಾಪಿಗಣಪತಿಂ ಕೃತಿಗೆ ಸಂಗತಿಗಳನ್ನು ಸಂಯೋಜಿಸಿ ರೂಢಿಗೆ ತಂದವರಿದರು. ಸಹೋದರರಿಬ್ಬರೂ ಸೇರಿ ರಚಿಸಿರುವ ಪೆರಿಯಪುರಾಣ ಕೀತ೯ನೆಗಳು,ಅರವತ್ತಮೂರು ನಾಯಮ್ ನಾರ್ (ಶೈವ ಸಂತರು) ಅವರ ಚರಿತ್ರೆಯನ್ನು ತಿಳಿಸುತ್ತದೆ.