ಮಹಮದ್ ಬಿನ್ ತುಘಲಕ್
![]() | ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ ಲೇಖನ ಕಡೆಯ ಬಾರಿ ಸಂಪಾದಿಸಿದ್ದು ಇವರು 2401:4900:3362:AB60:8706:A28B:BE58:AD35 (ಚರ್ಚೆ | ಕೊಡುಗೆಗಳು) 65588925 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ಮಹಮದ್ ಬಿನ್ ತುಘಲಕ್ (ಸಾ.ಯು ೧೩೨೫ - ೧೩೫೧)ತುಘಲಕ್ ಸಂತತಿಯ ಪ್ರಸಿದ್ಧ ಸುಲ್ತಾನ. ಜುನಾಖಾನ್ ಎಂಬುದು ಅವನ ಮೊದಲ ಹೆಸರು. ಈತ ತುಘಲಕ್ ಸಂತತಿಯ ಸ್ಥಾಪಕನಾದ ಘಿಯಾಸುದ್ದೀನ್ ತುಘಲಕ್ ನ ಮಗ. ಮಹಮದನು ಭಾರತವನ್ನಾಳಿದ ಚಕ್ರವರ್ತಿಗಳಲ್ಲಿ ಅತ್ಯಂತ ವಿವಾದಾಸ್ಪದನಾಗಿದ್ದ. ಇವನು ಒಳ್ಳೆಯ , ಕೆಟ್ಟ , ನೀಚ , ಬುದ್ಧಿವಂತ ಹಾಗೂ ಹುಚ್ಚು ಗುಣಗಳ ಸಮಾವೇಶದಂತಿದ್ದನು. ಅವನು ಪರ್ಶಿಯನ್ ಮತ್ತು ಅರೆಬಿಕ್ ಭಾಷೆಗಳಲ್ಲ್ಲಿ ಪಂಡಿತನಾಗಿದ್ದ. ಸಾಹಿತ್ಯ, ಧರ್ಮ , ಖಗೋಳಶಾಸ್ತ್ರ, ತಕಶಾಸ್ರ , ತತ್ವಶಶಾಸ್ತ್ರ ಮತ್ತು ಗಣಿತಗಳಲ್ಲಿ ವಿದ್ವಾಂಸನಾಗಿದ್ದ. ಅವನು ತೀಕ್ಷ್ಮ ಬುದ್ಧಿವಂತಿಕೆ ಹೊಂದಿದ್ದು, ಅವನ ಕಾಲಕ್ಕಿಂತ ಹೆಚ್ಚು ಮುಂದುವರಿದ ವಿಚಾರಗಳನ್ನು ವ್ಯಕ್ತಪಡಿಸಿದ ಜೊತಗೆ ಮುಂಗೋಪಿಯಾಗಿದ್ದ ಈತನು ತನ್ನ ಅಧಿಕಾರಿಗಳನ್ನು ಕಠಿಣವಾಗಿ ಶಿಕ್ಷಿಸುತ್ತಿದ್ದನು ಎಂದು ತಿಳಿದು ಬರುತ್ತದೆ. ಅವನಲ್ಲಿ ಸಮತೂಕ ಪ್ರಜ್ಞೆಯಾಗಲಿ, ಪ್ರಾಯೋಗಿಕ ಜ್ಞಾನವಾಗಲಿ ಇರಲಿಲ್ಲ.ಪರಸ್ಪರ ತದ್ವಿರುದ್ದ ಗುಣಗಳು ಅವನಲ್ಲಿ ಮಿಳಿತವಾಗಿದ್ದವು. ಆದ್ದರಿಂದ ಇತಿಹಾಸದಲ್ಲಿ ಈತ ಐಲು ದೊರೆ, ವೀಲಕ್ಷಣವಾದ ಸುಲ್ತಾನನೆಂದೇ ದಾಖಲಾಗಿದ್ದಾನೆ.
ವ್ಯಕ್ತಿತ್ವ[ಬದಲಾಯಿಸಿ]
ಮಹಮದ್ ಬಿನ್ ತೋಘಲಕ್ನ ಗುಣ ಸ್ವಾಭಾವಗಳ ಬಗ್ಗೆ ಇತಿಹಾಸಕಾರರಲ್ಲಿ ಭೀನ್ನಾಭಿಪ್ರಾಯಗಳಿವೆ. ಕೆಲವರು ಅವನು ಹುಚ್ಚ ನೀಚ ಎಂದು, ಮತ್ತೆ ಕೆಲವರು ಬುದ್ಧಿವಂತ ಎಂದಿದ್ದಾರೆ. ವಿ.ಎ.ಸ್ಮಿತ್ ರು 'ಆತ ಪರಸ್ಪರ ವಿರುದ್ಧ ಗುಣಗಳ ಆಶ್ಛಯಕರ ಸಮಾವೇಶ' ಎಂದು ಬರೆದಿದ್ದಾರೆ. ಅವನು ಘನ ವಿದ್ವಾಂಸ. ಅವನು ಧಾಮಿಕವಾಗಿ ಉದಾರಿ. ಸಮಕಾಲೀನ ಸುಲ್ತಾನರಲ್ಲಿ ಮನೆಮಾಡಿದ್ದ ಎಲ್ಲಾ ದುಶ್ಚಟಗಳಿಂದ ಆತ ಮುಕ್ತನಾಗಿದ್ದ. ಅವನ ಆಸ್ಥಾನಕ ಇತಿಹಾಸಕಾರ ಜಿಯಾವುದ್ದಿನ್ ಬರಣಿ ತಾರೀಖ್ - ಇ - ಫಿರೋಜ್ ಷಾಹಿ ಎಂಬ ಗ್ರಂಥವನ್ನು ಬರೆದನು. "ಮಧ್ಯಯುಗದಲ್ಲಿ ಕಿರೀಟ ಧರಿಸಿದವರೆಲ್ಲೆಲ್ಲಾ ನಿಸ್ಸಂದೇಹವಾಗಿ ಶ್ರೇಷ್ಠ. ದೆಹಲಿ ಸಿಂಹಾಸನವೇರಿದವರಲ್ಲಿ ಮಹಮದನು ಅಸಾದರಣ ಮೇಧಾವಿ" ಎಂದು ಈಶ್ವರಿ ಪ್ರಸಾದ್ ಬರೆದಿದ್ದಾರೆ. ಅವನು ಮುಂಗೋಪಿಯಾಗಿದ್ದ. ಸಮತೂಕ ಪ್ರಜ್ಞೆ ಇಲ್ಲದೆ ಆಡಳಿತದಲ್ಲಿ ವಿಫಲನಾದ. ಉದಾಹರಣೆಗೆ ದೋಆಚ್ ನಲ್ಲಿ ಕ್ಷಾಮದ ವೇಳೆ ಬಿಟ್ಟು ತೆರಿಗೆ ಹಚ್ಚಿಸಿದ್ದರೆ, ಕೇವಲ ಅಧಿಕಾರಿಗಳನ್ನು ಮಾತ್ರ ಹೋಸ ರಾಜಧಾನಿಗೆ ವಗಾಯಿಸಿದ್ದರೆ, ಕೇವಲ ಸರಕಾರಿ ಸ್ವಾಮ್ಯದಲ್ಲಿ ಮಾತ್ರ ನಾಣ್ಯ ಟಂಕಿಸಿದ್ದರೆ ಅವು ಯಶಸ್ವಿಯಾಗುತ್ತಿದ್ದವು. ಅಲ್ಲದೆ ಅವನು ವ್ಯಕ್ತಪಡಿಸಿದ ವಿಚಾರಗಳು ಆ ಕಾಲದ ಜನರಿಗಿಂತ ಹೆಚ್ಚು ಮುಂದುವರಿದಿದ್ದವು. ಇವು ಸುಲ್ತಾನನ ವಿಫಲತೆಗೆ ಕಾರಣಗಳು. ಲೇನ್ ಪೋಲ್ ಬರೆದಂತೆ " ಆತನು ವ್ಯಕ್ತಪಡಿಸಿದ ವಿಚಾರಗಳು ಅವನ ಕಾಲದ ಜನತೆಯ ಕಲ್ಪನೆಗೆ ನಿಲುಕದಂತಹ ವಿಚಾರಗಳಾಗಿದ್ದವು" ಎಂದಿರುವುದು ಸರಿ. ಮುಂದುವರಿದು ಹೇಳುತ್ತಾ " ಅವನದು ಮಹೋದ್ಧೇಶಗಳ ಆದರೆ ಸ್ವಯಂ ಪರಾಭವ ದುರಂತ. ಮುಗಿಲೆತ್ತರದ ಆಶೋತ್ತರ ಆದರೆ ನೆಲ ಕಚ್ಚಿದ ಸಾಧನೆ. ತಾಳ್ಮೆ ಪ್ರಮಾಣ ಜ್ಞಾನವಿಲ್ಲದೆ ವಿಫಲನಾದ " . ಇದರಿಂದ ಅವನ ವ್ಯಕಿತ್ವದ ಸೂಕ್ಷ್ಮ ಗುಣ ಅರಿವಾಗುವುದು.
ಮಹಮದ್ ಬಿನ್ ತುಘಲಕನ ದಂಡಯಾತ್ರೆಗಳು[ಬದಲಾಯಿಸಿ]
ವಾರಂಗಲ್ ಆಕ್ರಮಣ[ಬದಲಾಯಿಸಿ]
ವಾರಂಗಲ್ ರಾಜ ಪ್ರತಾಪರುದ್ರನು ಸುಲ್ತಾನನಿಗೆ ವಾಷಿಕ ಕಪ್ಪಕಾಣಿಕೆಯನ್ನು ಕೊಡುವುದನ್ನು ನಿಲ್ಲಿಸಿದ. ಮಹಮದನು ೧೩೨೨ - ೨೩ ರಲ್ಲಿ ೨ ಬಾರಿ ವಾರಂಗಲ್ನ ಮೇಲೆ ದಾಳಿ ಮಾಡಿ ಪ್ರತಾಪರುದ್ರನನ್ನು ಸೋಲಿಸಿದ. ಕಾಕತೀಯರು ದೆಹಲಿಯ ಸಾವಭೌಮತ್ವಕ್ಕೆ ಒಳಗಾದರು.
ಮಧ್ಯ ಏಷ್ಯಾ ದಂಡಯಾತ್ರೆ[ಬದಲಾಯಿಸಿ]
ಮಹಮದನು ಮಧ್ಯ ಏಷ್ಯಾದ ಇರಾಕ್ , ಖುರಸಾನ್ಗಳನ್ನು ಗೆಲ್ಲಲು ಯೋಜನೆ ಹಾಕಿದ. ಇದಕ್ಕಾಗಿ ಮುಂಗಡವಾಗಿ ೩ , ೭೦,೦೦೦.೦೦ ಸ್ಯನಿಕರನ್ನು ನೇಮಿಸಿಕೊಂಡು ಅವರಿಗೆ ೧ ವಷದ ವೇತನ ಮೊದಲೇ ಕೊಟ್ಟುಬಿಟ್ಟನು. ಅಲ್ಲದೆ ಕುದುರೆ ಮತ್ತು ಶಸ್ರಾಸ್ರಗಳನ್ನು ಕೊಳ್ಳು ಅಪಾರ ಹಣವ್ಯಯ ಮಾಡಿದ. ಆದರೆ ಅನಂತರ ಮಧ್ಯ ಏಷ್ಯಾ ದಂಡಯಾತ್ರೆ ಕಾಲದಲ್ಲಿ ಒದಗುವ ಸಾರಿಗೆ ಸಂಪಕ ಆಹಾರದ ಕೊರೆತೆ ಮತ್ತು ರಾಜಕೀಯ ಏರಿಳಿತವನ್ನು ಯೋಚಿಸಿ ಮಧ್ಯ ಏಷ್ಯಾ ದಂಡಯಾತ್ರೆಯನ್ನು ರದ್ದುಗೊಳಿಸಿದನು.
ನಾಗರಕೋಟ ಆಕ್ರಮಣ[ಬದಲಾಯಿಸಿ]

ಮಹಮದನು ಪಂಜಾಬಿನ ಕಾಂಗ್ರ ಜಿಲ್ಲೆಯ ನಾಗರಕೋಟವನ್ನು ಜಯಿಸಿದನು. ಆದರೂ ಅದನ್ನು ಮರಳಿ ಹಿಂದೂ ರಾಜನಿಗೆ ಒಪ್ಪಿಸಿದನು.
ಕರಾಜಲ್ ದಂಡಯಾತ್ರೆ[ಬದಲಾಯಿಸಿ]
ಭಾರತ ಮತ್ತು ಚೀನಾಗಳ ನಡುವಣ ಕರಾಜನಲ್ ಆಕ್ರಮಣಕ್ಕೆ ಮಹಮದ್ ನು ಯೋಜನೆ ಹಾಕಿದ. ಅವನ ಸಮಕಾಲೀನ ಬರಹಗಾರನಾದ ಇಬನ್ ಬಟೊಡನ ಪ್ರಕಾರ ಅಲ್ಲಿನ ಗುಡ್ಡಗಾಡು ಜನರನ್ನು ಸೋಲಿಸುವುದು ಮಹಮದನ ಇಂಗಿತವಾಗಿತ್ತು. ಕರಾಜಲ್ ನ ದಂಡಯಾತ್ರೆಗೆ ೧ ಲಕ್ಷ ಸ್ಯನಿಕರನ್ನು ಖುಸ್ರು ಮಲ್ಲಕ್ನ ನೇತ್ರತ್ವದಲ್ಲಿ ಕಳುಹಿಸಿದನು. ಆದರೆ ಕರಾಜನಲ್ ಇದ್ದ ಹಿಮಾಲಯ ಪವತಗಳ ಅತಿಯಾದ ಚಳಿ, ಸಾಂಕ್ರಾಮಿಕ ರೋಗ ಹಾಗೂ ಆಹಾರದ ಕೊರೆತೆಗೆ ಸಿಕ್ಕಿ ಅಪಾರ ಸಂಖ್ಯೆಯಲ್ಲಿ ಸ್ಯನಿಕರು ಹಸುನೀಗಿದರು. ಆ ದುರಂತ ಕಥೆಯನ್ನು ಹೇಳಲು ಕೇವಲ ೧೦ ಮಂದಿ ಮಾತ್ರ ಹಿಂತಿರುಗಿದರು.
ಚೀನಾದೊಡನೆ ಸಂಬಂಧ[ಬದಲಾಯಿಸಿ]
ಮಹಮದನು ಚೀನಾದ ಅರಸ ತೊಘಾನ್ ತಿಮೂರನೋಂದಿಗೆ ಸ್ನೇಹಯುತ ಸಂಬಂಧ ಹೊಂದಿದ್ದನು. ತನ್ನ ಆಸ್ಥಾನದ ಟುನಿಷಿಯಾದ ( ಮರಾಕ್ಕೂ) ವಿದ್ವಾಂಸ ಇಬನ್ ಬಟೊಟನನ್ನು ತನ್ನ ರಾಜಭಾರಿಯಾಗಿ ಕಾಣಿಕೆಗಳೊಂದಿಗೆ ತೊಘಾಸ್ನ ಆಸ್ಥಾನಕ್ಕೆ ಕಳುಹಿಸಿದನು. ಇವನ ಆಳ್ವಿಕೆಯ ಉದ್ದಕ್ಕೂ ದಂಗೆಗಳು ಸಂಭವಿಸಿದವು. ಸಾಗರದ ಬಹುದ್ದೀನ್ ದಂಗೆ, ಬಂಗಾಳದ ಘಕ್ರದ್ಧೀನ್ ದಂಗೆ, ಔಧನ ಮಲ್ಲಿಕ್ನ ದಂಗೆ, ಗುಜರಾಗಿನ ದಂಗೆ, ದಖಲನಲ್ಲಿ ದ್ವೌಲತಾಬಾದಿನಲ್ಲಿ ಹಸನ್ ಗಂಗ್ ನ ದಂಗೆ, ವೀರಬಲ್ಲಾಳ ಮತ್ತು ಹರಿಹರರಿಂದ ದಂಗೆಗಳಾದವು. ಇವುಗಳನ್ನು ಕೆಲವನ್ನು ಹತ್ತಿಕ್ಕಲಾಗಯಿತು. ಆದರೆ ಅವನ್ನು ಸಂಪೂಣವಾಗಿ ಹತ್ತಿಕ್ಕಲಾಗಿಲಿಲ್ಲ.
ಆಡಳಿತ ಸುಧಾರಣೆಗಳು[ಬದಲಾಯಿಸಿ]
ಕೃಷಿ ಸುಧಾರಣೆ[ಬದಲಾಯಿಸಿ]
ದಿವಾನ್ - ಇ - ಕೊಹಿ ಎಂ ಕೃಷಿ ಇಲಾಖೆಯನ್ನು ಸ್ಥಾಪಿಸಿದನು. ಬಂಜರು ಭೊಮಿಯನ್ನು ಸಾಗುವಳಿಗೆ ಇಳಿಸುವುದು, ರಾಜ್ಯಾದಾಯ ಹೆಚ್ಚಿಸುವುದು, ಸರಕಾರದಿಂದ ಕೃಷಿಕರಿಗೆ ಸಾಲಸೌಲಭ್ಯ ಒದಗಿಸಿಕೊಡುವುದು, ಭೊಹೀನರಿಗೆ ಭೊಮಿ ಕೊಡಿಸುವುದು ಇದರ ಉದ್ಧೇಶಗಳಾಗಿದ್ದವು. ಇದು ೬೦ ಚದರ ಮೈಲಿಗಳಷ್ಟು ಭೊಮಾಪನ ಕಾರ್ಯ ಕ್ಐಗೋಂಡಿತ್ತು. ದೋಅಬ್ ನಲ್ಲಿ ಕ್ಋಷಿ ಪ್ರಗತಿಗೆ ೭೦ ಲಕ್ಷ ವೆಚ್ಚ ಮಾಡಿತು. ಆದರೆ ಅಧಿಕಾರಿಗಳ ಹಣ ದುರುಪಯೋಗದಿಂದಾಗಿ ಇವು ಸಫಲವಾಗಲಿಲ್ಲ.
ತೆರಿಗೆ ಸುಧಾರಣೆಗಳು - ೧೩೨೬[ಬದಲಾಯಿಸಿ]
ಗಂಗಾ - ಯುಮುನಾ ನದಿಗಳ ಫಲವತ್ತಾದ ಬಯಲು ಪ್ರದೇಶವೇ ದೋ ಅಬ್ ಪ್ರಾಂತ್ಯ. ಇಲ್ಲಿ ಸುಲ್ತಾನ ಸು. ೧೦ ಪಟ್ಟು ತೆರಿಗೆಯನ್ನು ಹೆಚ್ಚಿಸಿದ. ಬರಣಿ ಪ್ರಕಾರ ತೆರಿಗೆ ಹೆಚ್ಚಳ ಪ್ರಮಾಣ ೧೦ ರಿಂದ ೨೦ ಪಟ್ಟು ಹೆಚ್ಚಿಸಲಾಯಿತು. ಹೆಚ್ಚಳಕ್ಕೆ ಈ ಕಾರಣಗಳನ್ನು ಮುಂದಿಟ್ಟನು. ದೋಅಬ್ ಪ್ರಾಂತ್ಯ ಹೆಚ್ಚು ಫಲವತ್ತಾಗಿತ್ತೆಂದು, ಅಲ್ಲಿನ ಜನ ಅಧಿಕ ಶ್ರೀಮಂತರಾಗಿ, ಸೋಮಾರಿಗಳಾಗಿ ದಂಗೆಗಳಲ್ಲಿ ತೊಡಗಿದ್ದು ಅವರ ಸೋಕ್ಕು ಮುರಿಯುವುದಾಗಿತ್ತು. ತೆರಿಗೆ ಹೆಚ್ಚಳವೇನು ಸಮಂಜಸವಾಗಿತ್ತು. ಆದರೆ ಹೆಚ್ಚಳದ ಸಮಯ ಸೂಕ್ತವಾಗಿರಲಿಲ್ಲ. ಆಗ ದೋಅಬ್ ಪ್ರಾಂತ್ಯ ಭೀಕರ ಕ್ಷಾಮಕ್ಕೆ ತುತ್ತಾಗಿದ್ದರಿಂದ ರೆfಐತರು ಕಂದಾಯ ಅಥವಾ ತೆರಿಗೆ ಕೊಡಲಾಗಲಿಲ್ಲ. ಆದರೆ ಕಂದಾಯ ಅಧಿಕಾರಿಗಳು ಬಲತ್ಕಾರದಿಂದ ಕಂದಾಯ ಸಂಗ್ರಹಿಸಿದರು. ಹೀಗಾಗಿ ರೈತರು ಕಾಡುಗಳಲ್ಲಿ ತಲೆ ಮರಿಸಿಕೊಂಡರು. ಬಂಜರು ಭೊಮಿ ಹೆಚ್ಚಾಯಿತು. ಈಶ್ವರಿ ಪ್ರಸಾದರು ಇದನ್ನು ವ್ಯಥಕಾರ್ಯವೆಂದು ಟೀಕಿಸಿದ್ದಾರೆ. ಅದೇ ಪ್ರಾಂತ್ಯದ ಬರಣಿ ಬರೆದಂತೆ " ರ್ಐತರ ಬೆನ್ನು ಮುರಿಯಲಾಯಿತು. ಅನುಕೊಲಸ್ಥ ಶ್ರೀಮಂತರೆಲ್ಲಾ ಕ್ರಾಂತಿಕಾರಿಗಳಾದರು. ಫಲವತ್ತಾದ ಭೊಮಿ ಪಾಲುಬಿದ್ದಿತು. ಕ್ಷಾಮ ಹಲವು ವಷಗಳ ಕಾಲ ಮುಂದುವರಿಯಿತು. ಸಾವಿರಾರು ಮಂದಿ ನಾಶವಾದರು" ಲೇನ್ ಪೋಲ್ ಬರೆದಂತೆ " ಕಂದಾಯ ಸಂಗ್ರಹದಲ್ಲಿ ವಿಫಲತೆ ಕಂಡ ಸುಲ್ತಾನ ಕೋಧದಿಂದ ಹಿಂದೂಗಳನ್ನು ಕಾಡುಮ್ಋಗಗಳಂತೆ ಕಾಡುಗಳಲ್ಲಿ ಸುತ್ತುವರಿದು ಸಾವಿರಾರು ಮುಗ್ಧ ಜನರನ್ನು ಕೋಲ್ಲಿಸಿದನು." ಕೊನೆಗೆ ತನ್ನ ಮೂಖತನವನ್ನು ಅರಿತ ಸುಲ್ತಾನ ಜನರ ನೆರವಿಗೆ ದಾವಿಸಿದನು. ಅವರಿಗೆ ಸಾಲ ಸೌಲಭ್ಯ ಕೊಟ್ಟನು. ಕೆರೆ, ಕಾಲುವೆ , ರಸ್ತೆ, ಬಾವಿಗಳನ್ನು ನಿಮಿಸಿದನು. ಗಂಜಿ ಕೇಂದ್ರಗಳನ್ನು ತೆರೆದನು. ಆದರೆ ಆ ಪರಿಹಾರ ಕಾರ್ಯಗಳು ಬಹಳ ವಿಳಂಭವಾಗಿ ಜನತೆಗೆ ಮುಟ್ಟಲೇ ಇಲ್ಲ.
ರಾಜಧಾನಿ ಬದಲಾವಣೆ- ೧೩೨೭[ಬದಲಾಯಿಸಿ]
ಸುಲ್ತಾನನು ರಾಜಧಾನಿಯನ್ನು ದೆಹಲಿಯಿಂದ ಮಹಾರಾಷ್ಟ್ರದ ದೇವಗಿರಿfಎ (ದೌಲತಾಬಾದ್)ಗೆ ಬದಲಾಯಿಸಿದನು. ಇದಕ್ಕೆ ಅವನು ಕೋಟ್ಟ ಕಾರಣಗಳೆಂದರೆ, ೧. ರಾಜಧಾನಿ ಸಾಮ್ರಾಜ್ಯದ ಮಧ್ಯದಲ್ಲಿರಬೇಕೆಂದು. ೨ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವು ಹೆಚ್ಚು ಸಮ್ಋದ್ಧವಾಗಿದೆ ಎಂದು. ೩. ದೆಕ್ಷಿಣ ಭಾರತದಲ್ಲಿ ಇಸ್ಲಾಂ ಪ್ರಚಾರ ಮಾಡುವುದು. ೪. ಉತ್ತರಕ್ಕೆ ಸೀಮಿತವಾಗಿದ್ದ ಇಸ್ಲಾಂ ಪ್ರಭುತ್ವವನ್ನು ದಕ್ಷಿಣಕ್ಕೆ ವಿಸ್ತರಿಸುವುದು. ೫. ಮುಂಗೋಲರ ದಾಳಿಗಳಿಂದ ರಾಜಧಾನಿಯನ್ನು ರಕ್ಷಿಸುವುದು. ೬. ಅವಾಚ್ಯ ಶಬ್ಧಗಳಿಂದ ಬ್ಐಯ್ದು ದೆಹಲಿಯ ನಾಗರೀಕರು ಸುಲ್ತಾನನಿಗೆ ಪತ್ರ ಬರೆಯುತ್ತಿದ್ದರು. ಅವುಗಳಿಂದ ಮುಖ್ತನಾಗಲು . ಇತ್ಯಾದಿ. ಹೋಸ ರಾಜಧಾನಿಯಲ್ಲಿ ಕಟ್ಟಡಗಳು ನಿಮಿಸಲು ಹಣವನ್ನು ನೀರಿನಂತೆ ಚೆಲ್ಲಿದನು. ಅನಂತರ ಸುಲ್ತಾನ ಆಜ್ಞೆ ಕೋಟ್ಟು ದೆಹಲಿಯ ಎಲ್ಲಾ ನಾಗರೀಕರು ತಮ್ಮ ಗಂಟು ಮೂಟೆ ಕಟ್ಟಿಕೋಂಡು ದೇವಗಿರಿಗೆ ಹೋಗಬೇಕೆಂದು ತಿಳಿಸಿದನು. ದೆಹಲಿಯಲ್ಲಿ ಈಗ ನೋಡಲು ಒಂದು ನರಪಿಳ್ಳೆಯಾಗಲಿ, ಬೆಕ್ಕಿನ ಮರಿಯಾಗಲಿ ಇರಲಿಲ್ಲ. ಅದು ನೋಡಲು ಸ್ಮಶಾನದಂತಿತ್ತು. ಹೀಗಾಗಿ ಮಂಗೋಲರು ದೆಹಲಿಯನ್ನು ಮುತ್ತಿ ಲೂಟಿ ಮಾಡಿದರು. ದೆಹಲಿ ತನ್ನ ಶತಮಾನಗಳ ವ್ಐಭವನ್ನು ಕಳೆದುಕೋಂಡಿತು. ಕೋನೆಗೆ ತನ್ನ ಅರಿತ ಸುಲ್ತಾನ ಪುನಃ ಜನರಿಗೆ ದೇವಗಿರಿಯಿಂದ ದೆಹಲಿಗೆ ಹಿಂತಿರುಗಬೇಕೆಂದು ಆಜ್ಙಾಪಿಸಿದನು. ಅದನ್ನು ಕೇಳಿದ ಅವರಿಗೆ ಪ್ರಾಣವೇ ಹೋದಂತಾಗಿತು. ಆದರೂ ಸುಲ್ತಾನನ ಆಜ್ಙೆಯನ್ನು ಪಾಲಿಸಲೇಬೇಕಿತ್ತು. ದೆಹಲಿ ಮತ್ತು ದೇವಗಿರಿಗಳ ನಡುವೆ ೭೦೦ ಮೇಲಿ ಉದ್ದದ ರಸ್ತೆ ಕಲ್ಲುಮುಳ್ಳುಗಳಿಂದ ತುಂಬಿದ್ದು, ಆಹಾರವಿಲ್ಲದೆ ಹಿಂತಿರುಗುವಾಗ ಮುಕ್ಕಾಲು ಭಾಗ ಜನ ಸತ್ತರು. ದೆಹಲಿ ಪುನಃ ತನ್ನ ವ್ಐಭವನ್ನು ಪಡೆಯಲು ಹಲವು ವಷಗಳೇ ಬೇಕಾದವು. ಲೇನ್ ಪೋಲರು ರಾಜಧಾನಿ ಬದಲಾವಣೆಯನ್ನು 'ಶಕ್ತಿಯ ಆಪ ನಿದೇಶಿತ ಸ್ಮಾರಕ" ವಾಗಿತ್ತೆಂದು ಟೀಕಿಸಿದ್ದಾರೆ.
ನಾಣ್ಯ ಸುಧಾರಣೆ - ೧೩೩೦[ಬದಲಾಯಿಸಿ]
ರಾಜಧಾನಿ ಬದಲಾವಣೆ ಮತ್ತು ತೆರಿಗೆ ಸುಧಾರಣೆಗಳಿಂದ ಖಜಾನೆ ಬರಿದಾಗಿತ್ತು. ವಿಶಾಲ ಸಾಮ್ರಾಜ್ಯ ಮತ್ತು ಅಗಾಧ ಸೈನ್ಯದ ನಿವಹಣೆಗೆ ಹಣದ ಅವಶ್ಯಕತೆ ಹೆಚ್ಚಾಯಿತು. ಅದೇ ವೇಳೆ ಚೀನಾ ಮತ್ತು ಪಶೀಯಾಗಳಲ್ಲಿ ಹೋಸ ಕರೆನ್ಸಿ ಚಲಾವಣೆಗೆ ತಂದಿದ್ದು ಸುಲ್ತಾನನಿಗೆ ಸ್ಫೂರ್ತಿಯಾಯಿತು. ಅಲ್ಲದೆ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಅಭಾವ ತಲೆದೋರಿತ್ತು. ಈ ಕಾರಣಗಳಿಂದ ಮಹಮದನು ತಾಮ್ರದ ನಾಣ್ಯಗಳನ್ನು ಟಂಕಿಸಿ ಚಲಾವಣೆಗೆ ಬಿಟ್ಟನು. ಅದನ್ನು ಅಧಿಕ್ಋತ ಹಣ ಎಂದು ಸಾರಿದನು. ಇದೇ ಅವನ ಪ್ರಸಿದ್ಧ ಸಾಂಕೇತಿಕ 'ನಾಣ್ಯ ಪದ್ದತಿ' ಸುಲ್ತಾನ ಬೆಳ್ಳಿ ಮತ್ತು ಬಂಗಾರದ ನಾಣ್ಯಗಳ ಬದಲಾಗಿ ಎಲ್ಲಾ ವ್ಯವಹಾರಗಳಲ್ಲೂ ತಾಮ್ರದ ನಾಣ್ಯಗಳನ್ನು ಬಳಸುವಂತೆ ಆಜ್ಙಾಪಿಸಿದನು. ಒಂದು ವಿಚಿತ್ರ ಸಂಗತಿ ಎಂದರೆ ನಾಣ್ಯಗಳನ್ನು ಮುದ್ರಿಸುವ ಏಕಸ್ವಾಮ್ಯ ಸರಕಾರಕ್ಕೆ ಮಾತ್ರ ಒಳಪಡಿಸದೆ ಖಾಸಗಿಯವರಿಗೂ ನಾಣ್ಯ ಟಂಕಿಸುವ ಹಕ್ಕು ಕೋಟ್ಟನು. ಇದರಿಂದಾಗಿ ಪ್ರತಿ ಮನೆಯಲ್ಲಿ ಒಂದೋಂದು ಟಂಕಸಾಲೆ ತೆರಯಲ್ಪಟ್ಟಿತು. ಖೋಟಾ ನಾಣ್ಯಗಳ ಹಾವಳಿ ಹೆಚ್ಚಾಯಿತು. ಜನ ಬೆಳ್ಳಿ ಮತ್ತು ಬಂಗಾರದ ನಾಣ್ಯಗಳನ್ನು ಬಚ್ಚಿಟ್ಟರು. ಅವು ದಾಬಾರಿಯಾದವು.. ಸರಕಾರಕ್ಕೆ ಯಾರು ತೆರಿಗೆ ಕೋಡುತ್ತಾರೋ ಅವರೆಲ್ಲಾ ಖೋಟಾ ನಾಣ್ಯ ವನ್ನೇ ಬಳಸಿ ಶ್ರೀಮಂತರಾದರು. ಜಾಣ ವತಕರು ಖೋಟಾ ನಾಣ್ಯದಿಂದ ವಸ್ತುಗಳನ್ನು ಖರೀದಿಸಿ ಚಿನ್ನದ ನಾಣ್ಯಕ್ಕೆ ವಸ್ತು ಮಾರಿದರು. ಜಿಯಾವುದ್ಧಿನ್ ಬರಣಿ ಬರೆದಂತೆ " ಎಲ್ಲಾ ಹಿಂದೂಗಳ ಮನೆಗಳು ಟಂಕ ಸಾಲೆಗಳಾದವು. ವಿವಿಧ ಪಾಂತ್ಯಗಳಲ್ಲಿದ್ದ ಹಿಂದೂಗಳು ಕೋಟಿ - ಕೋಟಿಗಟ್ಟಲೆ ಟನ್ ಗಟ್ಟಲೆ ತಾಮ್ರ ನಾಣ್ಯಗಳನ್ನು ಟಂಕಿಸಿದರು " ತೆರಿಗೆಗೆ ಖೋಟಾ ನಾಣ್ಯ ಕೋಟ್ಟು ಸರಕಾರವನ್ನು ವಂಚಿಸಿದರು. ವಿದೇಶಿ ವ್ಯಾಪಾರ ಕುಗ್ಗಿತು. ಕಾರಣ ವಿದೇಶಿಯರು ಹೋಸ ನಾಣ್ಯ ಬಳಸಲು ನಿರಾಕರಿಸಿದರು. ಎಲ್ಲಾ ಆಥಿಕ ಚಟುವಟಿಕೆಗಳು ಸ್ತಬ್ದವಾದವು. ಹಣದುಬ್ಬರ ಹೆಚ್ಚಾಯಿತು. ಹಣದ ಮೌಲ್ಯ ಮಡಿಕೆ ಚೂರುಗಳಿಗಿಂತ ಕಡಿಮೆಯಾಯಿತು. ನಾಲ್ಕು ವಷಗಳ ನಂತರ ಸುಲ್ತಾನ ತನ್ನ ತಪ್ಪನ್ನು ಅರಿತು ತಾಮ್ರದ ನಾಣ್ಯಗಳನ್ನು ಹಿಂತಿರುಗಿಸಿ ಪುನಃ ತನ್ನ ಖಜಾನೆಯಿಂದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಪಡೆಯುವಂತೆ ಆಜ್ಞಾಪಿಸಿದನು. ಈಗ ಜಾಣ ಜನ ಖೋಟಾ ನಾಣ್ಯಗಳನ್ನು ಹಿಂತಿರುಗಿಸಿ ಅಪ್ಪಟ ಬಂಗಾರದ ನಾಣ್ಯಗಳನ್ನು ಪಡೆದರು. ಹೀಗೆ ಸುಲ್ತಾನ ತನ್ನ ಜನರಿಂದಲೇ ಮೋಸ ಹೋದನು. ವಾಪಸ್ಸಾದ ತಾಮ್ರದ ನಾಣ್ಯಗಳು ಅವನ ತುಘಲಕಬಾದ್ ಅರಮನೆಯ ಮುಂದೆ ಬೆಟ್ಟದಂತೆ ಅವನ ಮೂಖತನ ಹೇಳುತ್ತಾ ಹಲವು ವಷಗಳ ಕಾಲ ಬಿದ್ದಿದ್ದವು. ಇ-ಥಾಮಸ್ ಇವನನ್ನು 'ಹಣಗಾರರ ರಾಜ' ಇಂದು ವಣಿಸಿರುವುದು. ಈ ವಿಚಿತ್ರದಿಂದಲೇ .
ಮಂಗೋಲರ ನೀತಿ[ಬದಲಾಯಿಸಿ]
ಮಂಗೋಲರು ದೆಹಲಿಯ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದರು. ಅವರ ದಾಳಿಯನ್ನು ತಡೆಯಲು ವಿಫಲನಾದ ಸುಲ್ತಾನ ಅವರು ಬಂದಾಗಲೆಲ್ಲಾ ಅವರಿಗೆ ಹಣ ಕೋಟ್ಟು ವಾಪಸ್ಸು ಕಳುಹಿಸುವ ನೀತಿಯನ್ನು ಅನುಸರಿಸಿದ. ಇದರಿಂದ ಅದೇ ಪಾಠ ಕಲಿತು ಪದೇ ಪದೇ ದಾಳಿ ಮಾಡುತ್ತಿದ್ದರು. ಮಂಗೋಲರಿಗೆ ಕೋಟ್ಟ ಹಣವನ್ನೇಲ್ಲ ಸೈನ್ಯ ಕಟ್ಟಲು ಬಳಸಿದ್ಧೇ ಆದರೆ ಮಂಗೋಲರನ್ನು ದಮನ ಮಾಡಬಹುದಿತ್ತಂತೆ.
ಜನಪ್ರಿಯ ಪ್ರಕಾರಗಳಲ್ಲಿ[ಬದಲಾಯಿಸಿ]
- ಕನ್ನಡದ ನಾಟಕಕಾರ ಗಿರೀಶ್ ಕಾರ್ನಾಡ್ ೧೯೬೮ರಲ್ಲಿ ರಚಿಸಿರುವ "ತುಘಲಕ್" ನಾಟಕ ಸಾಕಷ್ಟು ಪ್ರಖ್ಯಾತವಾಗಿದೆ.
- ೧೯೬೮ರಲ್ಲಿ "ಮಹಮದ್ ಬಿನ್ ತುಘಲಕ್ " ಎಂಬ ವಿಡಂಬನಾತ್ಮಾಕ ರಾಜಕೀಯ ನಾಟಕವನ್ನು ತಮಿಳು ಭಾಷೆಯಲ್ಲಿ ಚೋ.ರಾಮಸ್ವಾಮಿಯವರು ರಚಸಿದ್ದಾರೆ.