ಮಲ್ಲಿಕಾರ್ಜುನ ಬಂಡೆ
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. (ಏಪ್ರಿಲ್ ೧೮, ೨೦೧೫) |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (ಏಪ್ರಿಲ್ ೧೮, ೨೦೧೫) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಆಳಂದ ತಾಲುಕಿನ ಖಜೂರಿನಲ್ಲಿ ಜನಿಸಿದರು. ಜೊತೆಗೆ ಬಡತನವೆ ಅವರ ಬೆನ್ನಿಗೆ ಬಿದ್ದಿತ್ತು. ಹುಟ್ಟಿದ ಆರೇಳು ವರ್ಷಕ್ಕೆ ಬಂಡೆ ತಾಯಿ ಕಲಾವತಿ ತೀರಿ ಹೋದರು. ಹೀಗಾಗಿ ಮಲ್ಲಿಕಾರ್ಜುನ ಅವರಿಗೆ ತಾಯಿ ಪ್ರೀತಿ ಸಿಗಲಿಲ್ಲ. ತಾಯಿ ಪ್ರೀತಿ ಸಿಗದೆ ಹೋದರು ತಂದೆ ಪ್ರೀತಿಯಲ್ಲಿ ಮಿಂದೆಂದ್ದರು. ಆದರೆ,ಈ ಭಾಗ್ಯ ಅವರ ಇಬ್ಬರು ಮಕ್ಕಳಾದ ಶಿವಾನಿ ಮತ್ತು ಸಾಯಿದರ್ಶನಿಗೆ ಸಿಗಲಿಲ್ಲ. ಅವರಿಬ್ಬರಿಗೂ ಬುದ್ದಿ ಬರುವ ಹೊತ್ತಿಗೆ ತಂದೆ ತೀರಿಕೊಂಡಿದ್ದು ತಂದೆ ಪ್ರೀತಿಯಿಂದ ಮಕ್ಕಳು ವಂಚಿತರಾಗಿದ್ದಾರೆ. ಇದು ವಿಧಿಯಾಟವೇ ಅಲ್ಲದೆ ಮತ್ತೇನು? ಎಂದು ಆತನ ಸ್ನೇಹಿತರು,ಒಡನಾಡಿಗಳು ನೋವಿನಿಂದ ಗೋಳಿಟ್ಟರು. ಜೀವನದಲ್ಲಿ ಎನಾದರು ಸಾಧಿಸಬೇಕು ಎಂಬ ಅದಮ್ಯ ಉತ್ಸಾಹ, ಭಂಡ ಧೈರ್ಯ ಅವನಲ್ಲಿತ್ತು. ವಿದ್ಯಾರ್ಥಿ ಜೀವನದ ಸಂಪೂರ್ಣ ಅರಿವಿದ್ದ ಬಂಡೆ ಲೈಬ್ರರಿ ಮುಚ್ಛುವವರೆಗೆ ಓದುತ್ತಿದ್ದ .ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಎತ್ತಿದ ಕೈ. ಮೇಳಕುಂದಿ ಗುರುಗಳೇ ನಮಗೆಲ್ಲ ರೋಲ್ ಮಾಡಲ್. ಜೀವಕ್ಕೆ ಜೀವ ಕೊಡುವ ಸ್ನೇಹಿತ. ಧೈರ್ಯಂ ಸರ್ವತ್ರ ಸಾಧನಂ ಎಂದು ತಿಳಿದುಕೊಂಡಿದ್ದ ಈ ಉತ್ಸಾಹಿಗೆ ತನ್ನ ಭಂಡ ಧೈರ್ಯವೇ ಮುಳುವಾಗುತ್ತೆ ಅಂತ ಅನಿಸಿರಲಿಲ್ಲ. ಮಲ್ಲಿಕಾರ್ಜುನ ಬಂಡೆ ಕಾಲೇಜುಗಳಲ್ಲಿ ನಡೆಯುತ್ತಿದ್ದ ಮೂಕಾಭಿನಯ, ಚರ್ಚಾ ಸ್ಪರ್ದೆ,ನಾಟಕ ಸೇರಿದಂತೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಎತ್ತಿದ ಕೈ.ಈ ಕಾರ್ಯಕ್ರಮಗಳು ಮತ್ತು ಆಗ ಪ್ರಾಂಶುಪಾಲರಾಗಿದ್ದ ಎಸ್.ಜಿ.ಮೇಳಕುಂದಿ ಅವರ ನಡೆ ಬಂಡೆ ಅವರಲ್ಲಿ ನಾಯಕತ್ವ ಗುಣಗಳು ಬೆಳೆಯಲು ಸಹಕಾರಿಯಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಸ್ನೇಹಿತರು. ೧೯೯೨ ಆಗ ದೇಶದಲ್ಲಿ ರಾಮಜನ್ಮಭೂಮಿ ಗಲಾಟೆ. ಈ ಸಂದರ್ಭದಲ್ಲಿ ಗುಲ್ಬರ್ಗಾ ವಿವಿಯ ಯುವಜನೋತ್ಸವದಲ್ಲಿ ಏಕತೆ ಸಂದೇಶ ಸಾರುವ ನಾಟಕವನ್ನು ಎಸ್.ಬಿ.ಕಾಲೇಜಿನಿಂದ ಪ್ರದರ್ಶಿಸಲಾಗಿತ್ತು. ಬಂಡೆ ಸರ್ದಾರ್ಜೀ ಪಾತ್ರದಲ್ಲಿ ಮಿಂಚಿದ್ದರು. ಚರ್ಚಾ ವಿಶಯಗಳಲ್ಲಿ ಯಾವಾಗಲು ಅವರದ್ದೇ ಪಾರಮ್ಯ, ಎಂದು ಸ್ಮರಿಸುತ್ತಾರೆ ಸ್ನೇಹಿತ ಉಪನ್ಯಾಸಕ ಶರಣಗೌಡ.ವಿವಿದೆಡೆ ನಡೆಯುವ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಚರ್ಚಾ,ಪ್ರಬಂಧ ಸ್ಪರ್ದೆಗಳಲ್ಲಿ ಮಾತ್ರ ಮಿಂಚುತ್ತಿದ್ದ ಎಸ್.ಬಿ.ಕಾಲೇಜು, ನಮ್ಮ ತಂಡದಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಮಿಂಚುವಂತಾಯಿತು. ಅದು ಇಂದಿಗೂ ಮುಂದುವರೆದಿದೆ. ಇದಕ್ಕೆ ಬಂಡೆ ನೇತೃತ್ವದ ನಮ್ಮ ಸ್ನೇಹಿತರ ಗುಂಪು ಕಾರಣ, ಎಂದು ಗೆಳೆಯರು ತಮ್ಮ ಅನಿಸಿಕೆಗಳನ್ನು ಬಿಚ್ಚಿಟ್ಟರು.