ಮಲಿವಾಟ ನೃತ್ಯ
ಮಲಿವಟಾ ನೃತ್ಯವು ದಕ್ಷಿಣ-ಪೂರ್ವದ ಟಾಂಜಾನಿಯಾದಿಂದ ಬಂದ ನೃತ್ಯವಾಗಿದ್ದು ವಾಮಕುವಾ ಎಂಬ ಬುಡಕಟ್ಟಿನಿಂದ ಬರುತ್ತದೆ. ಇದನ್ನು ಆಚರಣೆಯ ಸಂದರ್ಭದಲ್ಲಿ ನಡೆಸಲಾಗುತ್ತದೆ. ನೃತ್ತ್ಯ ಎಂಬುದು ಮಾನವ ಚಳುವಳಿಯ ಉದ್ದೇಶಪೂರ್ವಕವಾಗಿ ಆಯ್ದ ಅನುಕ್ರಮಗಳನ್ನು ಒಳಗೊಂಡಿರುವ ಒಂದು ಪ್ರದರ್ಶನ ಕಲೆಯ ರೂಪವಾಗಿದೆ. ಈ ಚಳುವಳಿಯು ಸೌಂದರ್ಯದ ಮತ್ತು ಸಾಂಕೇತಿಕ ಮೌಲ್ಯವನ್ನು ಹೊಂದಿದೆ, ಮತ್ತು ನಿರ್ದಿಷ್ಟ ಸಂಸ್ಕೃತಿಯೊಳಗೆ ಪ್ರದರ್ಶಕರು ಮತ್ತು ವೀಕ್ಷಕರು ನೃತ್ಯವನ್ನು ಅಂಗೀಕರಿಸಿದ್ದಾರೆ, ನೃತ್ಯವನ್ನು ಅದರ ನೃತ್ಯ ಸಂಯೋಜನೆಯ ಮೂಲಕ, ಅದರ ಚರಿತ್ರೆಯ ಮೂಲಕ ಅಥವಾ ಅದರ ಐತಿಹಾಸಿಕ ಅವಧಿ ಅಥವಾ ಮೂಲದ ಸ್ಥಳದಿಂದ ವರ್ಗೀಕರಿಸಬಹುದು ಮತ್ತು ವಿವರಿಸಬಹುದು.ಆಧುನಿಕ ನೃತ್ಯ, ಕ್ಲಾಸಿಕಲ್ ಇಂಡಿಯನ್ ಡ್ಯಾನ್ಸ್ ಮತ್ತು ಚೀನೀ ಹಾಗು ಜಪಾನಿ ಗೀತೆಗಳು, ಹೆಚ್ಚಿನ ಶಾಸ್ತ್ರೀಯ ಪ್ರಕಾರಗಳು ನೃತ್ಯದ ಮೇಲೆ ಕೇಂದ್ರಿಕೃತವಾಗಿರುತ್ತದ್ದೆ, ಆದರೆ ಪ್ರದರ್ಶನ ನೃತ್ಯವು ರಂಗಮಂದಿರಗಳಲ್ಲಿ ನೋಡಬಹುದು.[೧]
ಆಡುವಶೈಲಿ
[ಬದಲಾಯಿಸಿ]ಈ ನೃತ್ಯವನ್ನು ನಿರ್ದಿಷ್ಟವಾಗಿ ಮಹಿಳೆಯರು ನಡೆಸುತ್ತಾರೆ.ಇದು ಎದೆ,ತೋಳು ಮತ್ತು ಕಾಲಿನ ಚಳುವಳಿಯನ್ನು ಒಳಗೊಂಡಿರುವ ವೇಗದ ನೃತ್ಯವಾಗಿದೆ.ಆದರೆ ಲಿಂಗ ಸಮಾನತೆ ಮತ್ತು ವಾಣಿಜ್ಯೀಕರಣದ ಇತ್ತೀಚಿನ ಪ್ರವೃತ್ತಿಗಳ ಕಾರಣದಿಂದಾಗಿ ಇದನ್ನು ಪುರುಷರಿಂದ ಕೂಡಾ ನಿರ್ವಹಿಸಲಾಗುತ್ತದೆ.[೨]
ಉಲ್ಲೇಖ
[ಬದಲಾಯಿಸಿ]