ಮರಿಯಮ್ಮನಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮರಿಯಮ್ಮನಹಳ್ಳಿ

ವಿಜೃಂಭಣೆಯಿಂದ ಮೆರೆದು ತುಂಗಭದ್ರಯ ಆಣೆಕಟ್ಟೆಯ ಹಿನ್ನೀರಿನಲ್ಲಿ ಚಿರನಿದ್ರೆಯಲ್ಲಿ ಮಲಗಿದ ಪುರಾತನ ಇತಿಹಾಸ ಹೊಂದಿದ ನಾರಾಯಣ ದೇವರ ಕೆರೆಯಿಂದ ವಲಸೆಬಂದು ನೆಲೆಸಿದ ಗ್ರಾಮವೇ ಮರಿಯಮ್ಮನಹಳ್ಳಿ ಊರದೇವತೆ ಮಾಯಮ್ಮನ ಹೆಸರಿನಿಂದಾಗಿಯೇ ಮರಿಯಮ್ಮನಹಳ್ಳಿ ಎಂದು ಈ ಗ್ರಾಮಕ್ಕೆ ಹೆಸರು ಬಂದಿದೆ ಎಂಬುದು ಹಿರಿಯರಿಂದ ಬಂದ ಪ್ರತೀತ. ತಮ್ಮ ಆರಾಧ್ಯ ದೇವತೆಗಳಾದ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಶ್ರೀಆಂಜನೇಯ ಸ್ವಾಮಿಯನ್ನು ಮರಿಯಮ್ಮನಹಳ್ಳಿಯಲ್ಲಿಯೇ ಪ್ರತಿಷ್ಠಾಪಿಸಿಕೊಂಡು ನಾರಾಯಣ ದೇವರಕೆರೆಯ ಪರಂಪರೆ ಸಂಪ್ರದಾಯಗಳನ್ನೇ ಮುಂದುವರಿಸಿಕೊಂಡು ಹೋಗುತ್ತಿರುವುದು, ಇಲ್ಲಿನ ಜನ ಶಾಂತಿ ಪ್ರಿಯರು,ಸರ್ವಧರ್ಮ ಸಹಿಷ್ಟರು ಎನ್ನುವುದಕ್ಕೆ ಸಾಕ್ಷಿ ಎನ್ನಬಹುದು.ಸುತ್ತಮುತ್ತಲಿನ 33 ಗ್ರಾಮಗಳ ಜನ ಒಗ್ಗೂಡಿ ಒಂದಾಗಿ ಒಮ್ಮನಸ್ಸಿನಿಂದ ನಡೆಸುವ ಜೋಡಿ ರಥೋತ್ಸವವೇ ಇಲ್ಲಿನ ವಿಶೇಷ. ಕಲೆ ಸಾಹಿತ್ಯ ಸಂಸ್ಕೃತಿಗಳನ್ನು ಮೈಗೂಡಿಸಿ ಕೊಂಡಿರುವು ಮರಿಯಮ್ಮನಹಳ್ಳಿ ಉತ್ತಮ ವ್ಯಾಪಾರ ಕೇಂದ್ರವಾಗಿ ಶೈಕ್ಷಣಿಕ ಹಾಗೂ ರಂಗಕಲೆಗಳ ತವರೂರಾಗಿ,ಕೈಗಾರಿಕಾ ಕೇಂದ್ರವಾಗಿ ವಿಸ್ತಾರವಾಗಿ ಬೆಳೆಯುತ್ತಿದೆ. ಹೊಸಪೇಟೆ ತಾಲೂಕಿನಲ್ಲೇ ಅತ್ಯಂತ ದೊಡ್ಡ ಗ್ರಾಮ ಪಂಚಾಯ್ತಿ ಹೊಂದಿರುವುದು ಈ ಊರ ಹೆಗ್ಗಳಿಕೆ,ತುಂಗಭದ್ರ ಮಡಿಲಲ್ಲಿ ತಮ್ಮೂರನ್ನು ಕಳೆದು ಕೊಂಡ ಇಲ್ಲಿನ ಜನರಿಗೆ ತುಂಗಭದ್ರೆಯ ಮಡಿಲ ನೀರನ್ನೇ ಒದಗಿಸುತ್ತಿರುವುದು ಇಲ್ಲಿಯ ಗ್ರಾಮಪಂಚಾಯಿತಿಯ ಇತ್ತೀಚಿನ ಸಾಧನೆ ಎನ್ನಬಹುದು ಸುಮಾರು 30-40ಸಾವಿರ ಜನಸಂಖ್ಯೆ ಹೊಂದಿರುವ ಈ ಊರು ಪಟ್ಟಣ ಪಂಚಾಯ್ತಿ ಯಾಗುವತ್ತ ವೇಗವಾಗಿ ಹೆಜ್ಜೆ ಹಾಕುತ್ತಿದೆ. - ಲಕ್ಷ್ಮಿನಾರಾಯಣ ಶಾಸ್ತ್ರಿ