ವಿಷಯಕ್ಕೆ ಹೋಗು

ಮರಕೋತಿ ಆಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮರಕೋತಿ ಆಟ

ಆಡಲು ಬೇಕಾಗಿರುವ ವಸ್ತುಗಳುಕೋಲು , ಮರದ ಕೆಳಗೆ ಜಾಗ

ಆಟದವಿವರಣೆ

ಮರಕೋತಿ ಆಟವು ಹಳ್ಳಿಗಳಲ್ಲಿ ಎಲ್ಲಾ ಮಕ್ಕಳಿಗೂ ತಿಳಿದಿರುವ ಹಾಗು ಇಷ್ಟವಾದ ಆಟ ಕೋತಿಗಳಂತೆ ಮರಕ್ಕೆ ಹತ್ತುವುದು ಮರದಿಂದ ಜಿಗಿಯುವುದು ಈ ಆಟದ ಪ್ರಮುಖ ಆಕರ್ಷಣೆ ಹಾಗು ಮಜ ಅದಕ್ಕೇ ಏನೋ ಇದನ್ನು ಮರಕೋತಿ ಎಂದು ಹಿರಿಯರು ಕರೆದಿದ್ದು. ಬೇಸಿಗೆ ಸಮಯದಲ್ಲಿ ರಜಾ ಹಾಗೂ ವಿವಿಧ ಹಣ್ಣುಗಳಿರುವ ಮರದಲ್ಲಿನ ಕೋತಿಗಳಾಗುವುದಂತು ಮಕ್ಕಳಿಗೆ ಖುಷಿಯೋ ಖುಷಿ.

ಆಡುವ ವಿಧಾನ

·        ಈ ಆಟದಲ್ಲಿ ಒಟ್ಟು 10 ರಿಂದ 15 ಆಟಗಾರರು ಇರುತ್ತಾರೆ.

·        ಈ ಆಟವನ್ನು ಮರದ ಕೆಳಗೆ ಆಡಲಾಗುತ್ತದೆ.

·        ಅದರಲ್ಲಿ ಇಬ್ಬರು ಆಟಗಾರರು ಮರದ ಕೆಳಗೆ ನಿಂತಿರುತ್ತಾರೆ ಮತ್ತು ಉಳಿದ ಆಟಗಾರರು ಮರಕ್ಕೆ ಹತ್ತಿರುತ್ತಾರೆ.

·        ಮರದ ಕೆಳಗೆ ಒಂದು ವೃತ್ತವನ್ನು ಬಿಡಿಸಬೇಕು.

·        ಮರದ ಕೆಳಗೆ ನಿಂತಿರುವ ಆಟಗಾರರಲ್ಲಿ ಆಟಗಾರರಲ್ಲಿ ಒಬ್ಬಾತ ಕೋಲನ್ನು ಆದಷ್ಟು ದೂರಕ್ಕೆ ಎಸೆದು ಮರಕ್ಕೆ ಹತ್ತಬೇಕು

·        ಕೆಳಗೆ ನಿಂತಿರುವ ಇನ್ನೊಬ್ಬ ಆಟಗಾರನು ಓಡಿ ಹೋಗಿ ಆ ಕೋಲನ್ನು ತಂದು ಬಿಡಿಸಿರುವ ವೃತ್ತದ ಒಳಗಡೆ ಇರಿಸಿ ಮರದಲ್ಲಿರುವ ಆಟಗಾರರನ್ನು  ಹಿಡಿಯಬೇಕು.

·        ಆದರೆ ಹಿಡಿಯುವುದರ ಮೊದಲೆ ಮರದ ಮೇಲಿನ ಆಟಗಾರರಲ್ಲಿ ಯಾರಾದರೂ ಇಳಿದು ಬಂದು ಕೋಲನ್ನು ಮುಟ್ಟಿದಲ್ಲಿ ಮೊದಲು ಕೋಲನ್ನು ವೃತ್ತದಲ್ಲಿರಿಸಿದ ಆಟಗಾರನೇ ಆಟವನ್ನು ಮುಂದುವರಿಸುತ್ತಾನೆ.

·        ಆದರೆ ಯಾರಾದರೂ ಹಿಡಿಯಲ್ಪಟ್ಟಲ್ಲಿ ಹಿಡಿಯಲ್ಪಟ್ಟ ಆಟಗಾರನು ಮುಂದಿನ ಸರದಿಯಲ್ಲಿ ಕೋಲನ್ನು ವೃತ್ತದ ಒಳಗಿರಿಸಬೇಕು.

·        ಕೋಲನ್ನು ಎಸೆಯಲು ಆಟಗಾರರು ಒಬ್ಬರ ನಂತರ ಇನ್ನೋಬ್ಬರಂತೆ ಸರದಿಯನ್ನು ಪಾಲಿಸುತ್ತಾರೆ, ಹಾಗೆ ಎಲ್ಲಾ ಆಟಗಾರರಿಗೂ ಕೋಲೆಸೆಯಲು ಅವಕಾಶವಿರುತ್ತದೆ.

ಮಾಹಿತಿ ಸಂಗ್ರಹಣೆ- ಅಸ್ಫಿಯಾ ಎಸ್. ಎಮ್

                       ಆಲಂಬ ಮಾಲೂರು