ಮಮದಾಪೂರ
ಮಮದಾಪೂರ
ಮಮದಾಪೂರ | |
---|---|
village | |
Population (೨೦೧೨) | |
• Total | ೧೫೦೦೦ |
ಮಮದಾಪೂರ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ. ಮಮದಾಪೂರ ಗ್ರಾಮವು ಬಿಜಾಪುರ - ಗಲಗಲಿ ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಾಪೂರದಿಂದ ಸುಮಾರು ೪೫ ಕಿ. ಮಿ. ಇದೆ.
ಚರಿತ್ರೆ
[ಬದಲಾಯಿಸಿ]ಮಮದಾಪೂರದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಸಿಂಡಿಕೇಟ್ ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ. ಮತ್ತು ಅಟಲಜೀ ಜನಸ್ನೇಹಿಕೆಂದ್ರ ಇದ್ದು
ದೇವಾಲಯಗಳು
[ಬದಲಾಯಿಸಿ]ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಮಸೀದಿಗಳು
[ಬದಲಾಯಿಸಿ]ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿ
[ಬದಲಾಯಿಸಿ]ಗ್ರಾಮದ ಪ್ರತಿಶತ ೭೫ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಹಬ್ಬಗಳು
[ಬದಲಾಯಿಸಿ]ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣ
[ಬದಲಾಯಿಸಿ]ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಇವೆ.ಅದರಂತೆ ಸರಕಾರಿ ಪ್ರೌಡ ಶಾಲೆ, ಸರಕಾರಿ ಪದವಿಪೂರ್ವ ಕಲಾ,ವಾಣಿಜ್ಯ ಹಾಗೂ ವಿಜ್ಣಾನ ಮಹಾವಿದ್ಯಾಲಯ ಮತ್ತು ಸರಕಾರಿ ಕಲಾ, ವಾಣಿಜ್ಯ ಹಾಗೂ ವಿಜ್ಣಾನ ಮಹಾವಿದ್ಯಾಲಯ ಒಳ್ಳೆಯ ಶಿಕ್ಷಣ ನೀಡುತ್ತಿವೆ.
ಆರೋಗ್ಯ
[ಬದಲಾಯಿಸಿ]ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.
ಆರಕ್ಷಕ (ಪೋಲಿಸ್) ಠಾಣೆ
[ಬದಲಾಯಿಸಿ]ಗ್ರಾಮದಲ್ಲಿ ಉಪ ಪೋಲಿಸ್ ಠಾಣೆ ಇದೆ.
ವಿದ್ಯುತ್ ಪರಿವರ್ತನಾ ಕೇಂದ್ರ
[ಬದಲಾಯಿಸಿ]೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ.
ಕೆರೆಗಳು
[ಬದಲಾಯಿಸಿ]ಊರಿನ ಹತ್ತಿರ ಒಂದು ಸಣ್ಣ (620 ಎಕರೆ ವಿಸ್ತೀರ್ಣ) ಹಾಗೂ ದೊಡ್ಡ ಕೆರೆ (ಸೂಮಾರು 900 ಎಕರೆ ವಿಸ್ತೀರ್ಣ ವನ್ನು ಹೊಂದಿದೆ)ಗಳುವೆ.
- Pages with non-numeric formatnum arguments
- Short description with empty Wikidata description
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ವಿಜಯಪೂರ ತಾಲ್ಲೂಕಿನ ಹಳ್ಳಿಗಳು
- ಬಿಜಾಪುರ ಜಿಲ್ಲೆ