ಮನೋಜ್ ಕೋಟ್ಯಾನ್
'ಮನೋಜ್ ಕೋಟ್ಯಾನ್'
[ಬದಲಾಯಿಸಿ]ಒಬ್ಬ ಅತ್ಯಂತ ಸಮರ್ಥ ಬ್ಯಾಸ್ಕೆಟ್ಬಾಲ್ ಆಟಗಾರ, ಹಾಗೂ ಈಗ ಅಂತಾರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ತಂಡದ ರೆಫ್ರಿಯಾಗಿ ಆರಿಸಲ್ಪಟ್ಟಿರುವ ಮನೋಜ್, ಜನಪ್ರಿಯ ಮುಂಬಯಿಕರ್ ಹಾಗೂ ಕನ್ನಡಿಗರು ಕೂಡ.ಮುಂಬಯಿನ ಘಾಟ್ಕೋಪರ್ ನಲ್ಲಿರುವ 'ಪಂತ್ ನಗರದ ಮುನಿಸಿಪಲ್ ಶಾಲೆ', 'ಮುಲುಂಡ್ ವಿದ್ಯಾವರ್ಧಕ ಪ್ರಸಾರ ಮಂಡಲಿ' ಯವರು ನಡೆಸುತ್ತಿರುವ 'ಮಂಡಲ ಹೈಸ್ಕೂಲ್', ನಲ್ಲಿ ಪ್ರೌಢವಿದ್ಯಾಭ್ಯಾಸದ ನಂತರದ ಕಾಲೇಜ್ ಶಿಕ್ಷಣ, 'ವಿದ್ಯಾವಿಹಾರ್ ನಲ್ಲಿರುವ ಸೋಮಯ್ಯಾ ಕಾಲೇಜ್' ನಲ್ಲಿ ವಿದ್ಯಾಭ್ಯಾಸಮಾಡಿರುವ ಕನ್ನಡಿಗ, ಮನೋಜ್ ಕೋಟ್ಯಾನ್, "ಫೆಡರೇಶನ್ ಆಫ್ ಇಂಟರ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್' [FIBB] 'ಅಂತಾರಾಷ್ಟ್ರೀಯ ಮ್ಯಾಚ್ ರೆಫ್ರಿ' ಯಾಗಿ ಆಯ್ಕೆಯಾಗಿದ್ದಾರೆ. ಮುಂಬಯಿನ ಒಬ್ಬ 'ಕ್ರಿಯಾಶೀಲ ರೆಫ್ರಿ' ಕೂಡ. ಕ್ರಿಕೆಟ್ ಅಟದಲ್ಲಿ (BCCI) ನಲ್ಲಿ ಪ್ರೊ. 'ರತ್ನಾಕರ ಶೆಟ್ಟಿ' ಯವರು, ಹಾಗೂ 'ಬೂಧಿ ಕುಂದರನ್' ಬಿಟ್ಟರೆ, ದಕ್ಷಿಣ ಕನ್ನಡಿಗರ ಪಾಲು ಕ್ರೀಡೆಗಳಲ್ಲಿ ಕಡಿಮೆ. ಹೋಟೆಲ್, ಹಾಗೂ ಬೇರೆ ಬೇರೆ ಉದ್ಯಮಗಳಲ್ಲಿ ಮಂಚೂಣಿಯಲ್ಲಿರುವ ಅವರು ಕ್ರೀಡೆಯಲ್ಲೂ ಮುಂದೆಬರುವ ಪ್ರಯತ್ನ ನಡೆದಿದೆ. ಮುಂಬರುವ ನವೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುವ ' ಸೀನಿಯರ್ 'ವಿಮೆನ್ಸ್ ಏಶಿಯನ್ ಬ್ಯಾಸ್ಕೆಟ್ ಬಾಲ್ ಛಾಂಪಿಯನ್ ಶಿಪ್,' ನಲ್ಲಿ 'ಅಂತಾರಾಷ್ಟ್ರೀಯ ರೆಫ್ರಿ' ಯಾಗಿ ಪ್ರಥಮ ಬಾರಿಗೆ ಕಾರ್ಯನಿರ್ವಹಿಸಲಿದ್ದಾರೆ.
'ಬ್ಯಾಸ್ಕೆಟ್ಬಾಲ್ ಮ್ಯಾಚ್ ರೆಫ್ರಿ' ಯಾಗಲು ಬೇಕಾದ ಅರ್ಹತೆಗಳು
[ಬದಲಾಯಿಸಿ]ಹಾಂಕಾಂಗ್ ನಲ್ಲಿ ನಡೆದ ಕಠಿಣ ಬ್ಯಾಸ್ಕೆಟ್ಬಾಲ್ ಮ್ಯಾಚ್ ರೆಫರಿಂಗ್ ಟೆಸ್ಟ್,' ನಲ್ಲಿ ತೇರ್ಗಡೆಯಾಗಿದ್ದಾರೆ. ಬ್ಯಾಸ್ಕೆಟ್ಬಾಲ್ ಪಂದ್ಯದ ದೈಹಿಕ, ತಾಂತ್ರಿಕ (ಟೆಕ್ನಿಕಲ್) ಹಾಗೂ ಪ್ರಾಯೋಗಿಕ( ಪ್ರಾಕ್ಟಿಕಲ್) ಜ್ಞಾನವನ್ನು ಪರಿಶೀಲಿಸಲಾಗುತ್ತದೆ. ಮನೋಜ್ ಕೊಟ್ಯಾನ್, ಭಾರತದ ೧೭ ನೇ ಅಂತಾರಾಷ್ಟ್ರೀಯ ರೆಫ್ರಿ, ಮಹಾರಾಷ್ಟ್ರದ ೪ ನೆಯ, ಹಾಗೂ ದಕ್ಷಿಣ ಕನ್ನಡದ ಪ್ರಪ್ರಥಮ ರೆಫ್ರಿ ಆಯ್ಕೆಗಾಗಿ ಯಾಗಿದ್ದಾರೆ. ವಿಶ್ವದ ೧೩ ದೇಶಗಳಿಂದ ಸುಮಾರು ೪೦ ಮಂದಿ ರೆಫ್ರಿ ತೆಸ್ಟ್ ನಲ್ಲಿ ಭಾಗವಹಿಸಿದ ಆಟಗಾರರಲ್ಲಿ ಮನೋಜ್ ತೇರ್ಗಡೆಯಾಗಿದ್ದಾರೆ. ೨೦೦೫ ರಲ್ಲಿ, ' ನ್ಯಾಷನಲ್ ಬಿ ಪ್ಯಾನಲ್, ಇಲೈಟ್ 'ಎ' ಪ್ಯಾನೆಲ್ ಪೂರ್ತಿಗೊಳಿಸಿದ್ದರು. ಮೊದಲಿಗೆ ಏಷ್ಯಾಮಟ್ಟದಲ್ಲಿ ತಮ್ಮ ಕೌಶಲ್ಯವನು ಸಾಬೀತುಮಾಡಿರುವ 'ನ್ಯಾಶನಲ್ ಬ್ಯಾಸ್ಕೆಟ್ಬಾಲ್ ಅಮೆರಿಕ' ದ ಹಂತಕ್ಕೆ ಭಡ್ತಿಪಡೆದಿರುತ್ತಾರೆ. (NBA) ಪ್ರತಿ ೪ ವರ್ಷಗಳಿಗೊಮ್ಮೆ 'ರೆಫರಿಂಗ್ ಟೆಸ್ಟ್' ನ್ನು ಎದುರಿಸಬೇಕು. ಹಾಗೂ ಪ್ರತಿ ೪ ವರ್ಷಕ್ಕೊಮ್ಮೆ 'ರೆಫರಿಂಗ್ ಲೈಸೆನ್ಸ್ ನವೀಕರಣ,' ದ ಅಗತ್ಯತೆ ಇದೆ.
ಜನನ ಹಾಗೂ ಬಾಲ್ಯ
[ಬದಲಾಯಿಸಿ]'ಬಂಟ್ವಾಳ ಸುಬ್ಬಯ್ಯ', ಮತ್ತು 'ಕಾಪು ಮೀನಾ ಕೋಟ್ಯಾನ್' ದಂಪತಿಗಳ ಪುತ್ರನಾಗಿ, ಮನೋಜ್ ಕೊಟ್ಯಾನ್ ರವರು, ೨೩, ಸೆಪ್ಟೆಂಬರ್, ೧೯೭೬ ರಲ್ಲಿ ಜನಿಸಿದರು. ವಿದ್ಯಾಭ್ಯಾಸದ ಜೊತೆಗೆ ಮುಂಬಯಿ ನ ಮುಲುಂಡ್ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದರು. ಸೋಮಯ್ಯಾ ಕಾಲೇಜ್ ನಲ್ಲಿ ಮುಂದಿನ ವಿದ್ಯಾಭ್ಯಾಸ. ಅಲ್ಲಿ ಅವರ ಕ್ರೀಡಾ ಪ್ರತಿಭೆ ಸಿಕ್ಕ ಪುರಸ್ಕಾರದಿಂದ ಅದು ಚಿಗುರಿತು. 'ಕಬಡ್ಡಿ', 'ಫುಟ್ಬಾಲ್', 'ಬ್ಯಾಸ್ಕೆಟ್ ಬಾಲ್', 'ಹ್ಯಾಂಡ್ ಬಾಲ್', ಗಳಲ್ಲಿ ಕಾಲೇಜ್ ಮಟ್ಟ ಹಾಗೂ ವಿಶ್ವ ವಿದ್ಯಾಲಯದ ಮಟ್ಟದಲ್ಲಿ ಪ್ರತಿನಿಧಿಸಿದರು. ಬ್ಯಾಸ್ಕೆಟ್ಬಾಲ್ ಅವರ ಪ್ರೀತಿಯ ಆಟ. ಘಾಟ್ಕೋಪರ್ ವೈ. ಎಮ್. ಸಿ. ಎ ಹಾಗೂ ಸೋಮಯ್ಯ ಕಾಲೇಜ್ ನ ಬ್ಯಾಸ್ಕೆಟ್ ಆಟಕಾರರ ತಂಡದ ಮಾಜೀ ಆಟಗಾರರಾಗಿದ್ದಾರೆ. ೩೨ ರ ಹರೆಯದ ಮನೋಜ್, ಮುಂಬಯಿನ ಉಪನಗರದ ಅನೇಕ ಶಾಲೆಗಳಲ್ಲಿ ಬ್ಯಾಸ್ಕೆಟ್ಬಾಲ್ ಆಟದ ತರಬೇತಿ ನೀಡುತ್ತಿದ್ದಾರೆ. ಅವುಗಳ ವಿವರಗಳು ಹೀಗಿವೆ :
- ಮಾಟುಂಗಾದ 'ಡಾನ್ ಬಾಸ್ಕೋ ಶಾಲೆ'
- ಕೋಟೆಯ 'ಕೆಥೆಡ್ರೆಲ್ ಹಾಗೂ ಜಾನ್ ಕೆನನ್ ಸ್ಕೂಲ್',
- ದಾದರ್ ನ 'ಪಾಲ್ ಕಾನ್ವೆಂಟ್ ಸ್ಕೂಲ್',
ಮುಖ್ಯ ತರಪೇತಿದಾರರಾಗಿದ್ದಾರೆ. ಮಧ್ಯ ಮುಂಬಯಿ ವಿಭಾಗದ ಹಾಗೂ ರಾಜ್ಯಮಟ್ಟದ ಹಾಗೂ 'ಮಹಾರಾಷ್ಟ್ರಾ ಮಹಿಳಾ ತಂಡದ ರಾಷ್ಟ್ರಮಟ್ಟದ ಬ್ಯಾಸ್ಕೆಟ್ಬಾಲ್ ಮಾಜೀಕೋಚ್,' ಎಂದು ಗುರುತಿಸಿಕೊಂಡಿದ್ದಾರೆ. ಮುಂಬಯಿ ನ ೨ ಪ್ರಮುಖ ತಂಡಗಳಾದ, 'ನಾಗ್ಪಾಡ ನೇಬರ್ಹುಡ್' ಹಾಗೂ 'ಮಸ್ತಾನಾ YMCA' ಬ್ಯಾಸ್ಕೆಟ್ಬಾಲ್ ರೆಫ್ರಿಯಾಗಿ ಸೇವೆಸಲ್ಲಿಸಿದ್ದಾರೆ.
ಮನೋಜ್ ಕೊಟ್ಯಾನ್ ರ ಇತರ ಚಟುವಟಿಕೆಗಳು
[ಬದಲಾಯಿಸಿ]'ಸೋಮಯ್ಯಾ ಕಾಲೇಜ್ ನ ಕನ್ನಡಸಂಘದ ಮಾಜೀ ಕಾರ್ಯದರ್ಶಿ' ಯಾಗಿ, 'ಹಳೆಯ ವಿದ್ಯಾರ್ಥಿಸಂಘದ ಅಧ್ಯಕ್ಷ' ರಾಗಿದ್ದರು. ಸೋಮಯ್ಯಾ ಕಾಲೇಜ್ ನ ಹಳೆ ವಿದ್ಯಾರ್ಥಿ ಸಂಘದ ಮಾಜೀ ಸದಸ್ಯರಾಗಿ (ಭಾಈ) ನ ಜಂಟಿ ಕಾರ್ಯದರ್ಶಿಯಾಗಿದ್ದ, ಎಂ. ವೆಂಕಟೇಶ್ ಮತ್ತು ಎಂ ಅಬ್ರಾಹಂ ಪೌಲೋಸ್, ರ ಸೂಕ್ತ ಬೆಂಬಲ, ಸಲಹೆಗಳು ಮತ್ತು ಆವರ ಪ್ರೋತ್ಸಾಹ ಅವರಿಗೆ ಅತ್ಯಂತ ಉಪಯುಕ್ತ ಸಾಧನಗಳಾಗಿದ್ದವು. ರಾಷ್ಟ್ರಮಟ್ಟದ ಪ್ರಮುಖ ಬ್ಯಾಸ್ಕೆಟ್ಬಾಲ್ ಕ್ರೀಡಾಳುವಾಗಿ, ರೆಫ್ರಿಯಾಗಿ ಉತ್ತಮ ಇರುವ ಮನೋಜ್ ಕೊಟ್ಯಾನ್ ಗೆ ಸಿಕ್ಕ ಅವಕಾಶ ನಿಜಕ್ಕೂ ಆದರಣೀಯವಾಗಿದೆ. ೨೦೦೯ ರ ಮುಂಬರಲಿರುವ ನವೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುವ ' ಸೀನಿಯರ್ 'ವಿಮೆನ್ಸ್ ಏಶಿಯನ್ ಬ್ಯಾಸ್ಕೆಟ್ ಬಾಲ್ ಛಾಂಪಿಯನ್ ಶಿಪ್,' ನಲ್ಲಿ 'ಅಂತಾರಾಷ್ಟ್ರೀಯ ರೆಫ್ರಿ' ಯಾಗಿ ಪ್ರಥಮ ಬಾರಿಗೆ ಕಾರ್ಯನಿರ್ವಹಿಸಲಿದ್ದಾರೆ.
ಮುಂಬಯಿನ ಮಾಹಿಮ್,ನಲ್ಲಿರುವ,'ಕರ್ನಾಟಕ ಸಂಘ', ಕೋಟ್ಯಾನ್ ರವರನ್ನು ಸನ್ಮಾನಿಸಿತು
[ಬದಲಾಯಿಸಿ]- 'ಮನೋಜ್ ಕೋಟ್ಯಾನ್,' ರವರನ್ನು ಆಸಕ್ತ ಬ್ಯಾಸ್ಕೆಟ್ಬಾಲ್ ಆಟಗಾರರು, ಸಂಪರ್ಕಿಸಬಹುದು : ದೂರವಾಣಿ ಸಂಖ್ಯೆ : ೯೮೨೦೭೮೭೪೩೪