ಮನು ಬಳಿಗಾರ
ಹೆಸರು | ಮನು ಬಳಿಗಾರ್ |
---|---|
ಪಾಲಕರು | ತಂದೆ: ಪರಮೇಶ್ವರಪ್ಪ ಬಳಿಗಾರ್ ತಾಯಿ: ಶ್ರೀಮತಿ. ಶಂಕ್ರಮ್ಮ ಬಳಿಗಾರ್ |
ಹುಟ್ಟು | ಶಿಗ್ಲಿ, ಗದಗ, ಕರ್ನಾಟಕ, ಭಾರತ. |
ವಿದ್ಯಾಭ್ಯಾಸ | ಎಂಎ, ಎಲ್‌ಎಲ್‌ಬಿ |
ವ್ಯಾಸಂಗಾಲಯ | ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ. |
ವೃತ್ತಿ | ನಿವೃತ್ತ ಕರ್ನಾಟಕ ರಾಜ್ಯ ಆಡಳಿತ ಸೇವೆಯ ಅಧಿಕಾರಿ |
ಸಂಸ್ಥೆ(ಗಳು) | ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ. |
ಪ್ರವೃತ್ತಿ | ಕವಿ, ಬರಹಗಾರ, ವಾಗ್ಮಿ |
ಗಮನಾರ್ಹ ಕೃತಿಗಳು | ಬೆಳಕ ಬೆಡಗು, ಮೈಲಾರ ಮಹಾದೇವ (೨೦೦೭), ಅಪ್ಪ (೨೦೧೨), ಕೆಲವು ಕತೆಗಳು (೨೦೦೫) ಅತಿ ವಿರಳ ರಾಜಕರಣಿ ಎಸ್.ಆರ್.ಕಂಠಿ (೨೦೦೧), ಅಬ್ದುಲ್ ನಜೀರ್ ಸಾಬ್ (೨೦೦೫). |
ನಾಡೋಜ ಡಾ. ಮನು ಬಳಿಗಾರ್ ಅವರು ಭಾರತೀಯರು. ಕನ್ನಡದ ಸಾಹಿತಿ, ಕರ್ನಾಟಕ ಆಡಳಿತ ಸೇವೆಯಲ್ಲಿದ್ದವರು, ಬುದ್ಧಿಜೀವಿ, ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು.
ಇವರು ಕರ್ನಾಟಕದ ಅಂದಿನ ಧಾರವಾಡ ಜಿಲ್ಲೆಯ (ಈಗ ಗದಗ ಜಿಲ್ಲೆಯಲ್ಲಿದೆ) ಶಿಗ್ಲಿಯಲ್ಲಿ ಪ್ರಗತಿಪರ ಕೃಷಿ ಕುಟುಂಬದಲ್ಲಿ ಜನಸಿದವರು. ಇವರ ತಂದೆ ಪರಮೇಶ್ವರಪ್ಪ ಬಳಿಗಾರ್, ತಾಯಿ ಶಂಕ್ರಮ್ಮ ಬಳಿಗಾರ್. ನಿವೃತ್ತ ಭಾರತೀಯ ಆಡಳಿತ ಸೇವಾ ಅಧಿಕಾರಿ ವಿ.ಪಿ. ಬಳಿಗಾರ್ ಅವರು ಮನು ಬಳಿಗಾರ್ ಅವರ ತಮ್ಮಂದಿರು.
ವಿದ್ಯಾಭ್ಯಾಸ
[ಬದಲಾಯಿಸಿ]ಎಂ ಎ, ಎಲ್‌ಎಲ್‌ಬಿ (ವಿಶೇಷ)
ವೃತ್ತಿ
[ಬದಲಾಯಿಸಿ]೧೯೭೯ರಲ್ಲಿ ಕೆ ಎ ಎಸ್ ಮಾಡಿದ ಮನು ಬಳಿಗಾರ್ ಅವರು ಕರ್ನಾಟಕ ಆಡಳಿತ ಸೇವೆಯಲ್ಲಿದ್ದವರು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿ ನಿವೃತ್ತರಾದರು.
ಅಲ್ಲದೆಯೇ ಇವರು ನಿರ್ವಹಿಸಿದ ಇತರ ಹುದ್ದೆಗಳೆಂದರೆ,
ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಕಂದಾಯ ಇಲಾಖೆ.
ಡೆಪ್ಯೂಟಿ ಕಮೀಷನರ್ ಹಾಗೂ ಕೌನ್‌ಸಿಲ್ ಕಾರ್ಯದರ್ಶಿ, ಬಿ.ಬಿ.ಎಂ.ಪಿ.-ಬೆಂಗಳೂರು. ೨೦೦೪-೨೦೦೭.
ಆಪ್ತ ಕಾರ್ಯದರ್ಶಿ, ಗ್ರಾಮೀಣಾಭಿವೃದ್ದಿ & ಪಂಚಾಯತ್‌ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಆಹಾರ ನಾಗರಿಕ ಪೂರೈಕೆ ಇಲಾಖೆ, ಪ್ರವಾಸೋದ್ಯಮ, ಐ.ಟಿ.ಬಿ.ಟಿ ಇಲಾಖೆಗಳ ಸಚಿವರುಗಳಿಗೆ
ಸಿ ಇ ಓ, ರೋರಿಕ್ & ದೇವಿಕಾರಾಣಿ ಎಸ್ಟೇಟ್ ಬೋರ್ಡ್
ಮನು ಬಳಿಗಾರ್ ಅವರು ೦೩ ಮಾರ್ಚ್ ೨೦೧೬ ರಂದು ಕನ್ನಡ ಭಾಷೆ ಮತ್ತು ಸಾಹಿತ್ಯದ ಏಳಿಗೆಗಾಗಿ ಮೀಸಲಾದ ಒಂದು ಸರ್ವೋಚ್ಚ ಸಂಸ್ಥೆ; ಕನ್ನಡ ಸಾಹಿತ್ಯ ಪರಿಷತ್ತು ವಿನ ಅಧ್ಯಕ್ಷರಾಗಿ, ೦೩ ಸೆಪ್ಟಂಬರ್ ೨೦೨೧ರವರೆಗೆ ತಮ್ಮ ಅನುಪಮ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೈಗೊಂಡ ಕಾರ್ಯಕ್ರಮಗಳು
[ಬದಲಾಯಿಸಿ]- ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಪ್ರಪ್ರಥಮಬಾರಿಗೆ ಬಹರೇನ್ ಕನ್ನಡ ಸಂಘ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಬಹರೇನ್‌ನಲ್ಲಿ ಐತಿಹಾಸಿಕ ಪ್ರಥಮ ಅಂತರರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಜರುಗಿಸಲಾಗಿದೆ.
- ದೆಹಲಿಯಲ್ಲಿ ಹೊರನಾಡ ಕನ್ನಡಿಗರ ಪ್ರಥಮ ರಾಷ್ಟ್ರೀಯ ಸಮಾವೇಶ, ನಂತರದಲ್ಲಿ ಮುಂಬೈನಲ್ಲಿ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.
- ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನವನ್ನು ಶ್ರೀಕ್ಷೇತ್ರ ಶ್ರವಣಬೆಳಗೊಳದ ಮಹಾಸ್ವಾಮಿಗಳ ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಿ ಯಶಸ್ವಿಯಾಗಿಸಲಾಗಿದೆ.
- ಮಹಾರಾಷ್ಟ್ರದ ಪ್ರಥಮ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸೊಲ್ಲಾಪುರದಲ್ಲಿ ಯಶಸ್ವಿಯಾಗಿ ಜರುಗಿಸಲಾಗಿದೆ.
- ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಸಹಯೋಗದಲ್ಲಿ ರಾಜ್ಯಾದ್ಯಂತ ಸಹಕಾರ, ಕೃಷಿ, ತೋಟಗಾರಿಕೆ, ನೀರಾವರಿ, ಬ್ಯಾಂಕಿಂಗ್, ಇತ್ಯಾದಿ.. ವಿಷಯಗಳ ಸಾಹಿತ್ಯ ಕುರಿತು ೧೪ ಕಡೆಗಳಲ್ಲಿ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಇದೂ ಕೂಡ ಕಸಾಪದ ಇತಿಹಾಸದಲ್ಲಿ ಮೊದಲ ಪ್ರಯತ್ನವೆನಿಸಿದೆ.
- ಕ.ಸಾ.ಪ. ದ ಮೂರು ಅಂತಸ್ತಿನ ಶತಮಾನೋತ್ಸವ ಸ್ಮಾರಕ ಭವನದ ನಿರ್ಮಾಣ ಕಾರ್ಯವನ್ನು ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ೧೯ ತಿಂಗಳ ಕಾಲಾವಧಿಯೊಳಗೆ ನಿರ್ಮಿಸಲಾಗಿದೆ. ಕನ್ನಡದ ಆದಿ ಕವಯಿತ್ರಿ ಅಕ್ಕಮಹಾದೇವಿ ಹೆಸರಿನ ಸುಸಜ್ಜಿತ ಸಭಾಂಗಣ, ಕಚೇರಿಗಾಗಿ ಸ್ಥಳಾವಕಾಶ ಮತ್ತು ಅತಿಥಿಗಳಿಗಾಗಿ ಆರು ಕೊಠಡಿಗಳನ್ನು ಇದು ಒಳಗೊಂಡಿದೆ.
- ಇವರ ಅವಧಿಯಲ್ಲಿ ಪ್ರಥಮ ಬಾರಿಗೆ ರಾಜ್ಯದ ೨೨ ಕಡೆ ಕನ್ನಡ/ಸಾಹಿತ್ಯ ಭವನಗಳನ್ನು ನಿರ್ಮಿಸಲು ಆರಂಭಿಸಿ, ೧೫ ಕಡೆ ಈಗಾಗಲೇ ಕನ್ನಡ ಭವನಗಳನ್ನು ಲೋಕಾರ್ಪಣೆಗೊಳಿಸಲಾಗಿದೆ.
- ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ೧೫೦ಕ್ಕೂ ಹೆಚ್ಚಿನ ಮೌಲಿಕ ಕೃತಿಗಳನ್ನು, ಕನ್ನಡ-ಕನ್ನಡ ಬೃಹತ್ ನಿಘಂಟಿನ ೮ ಸಂಪುಟಗಳನ್ನು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಸಹಯೋಗದೊಂದಿಗೆ ಭಾರತವಾಣಿ ಪೋರ್ಟಲ್ ಮೂಲಕ ಡಿಜಿಟಲೈಜೇಶನ್ ಮಾಡಿಸಿ ಅಂತರ್ಜಾಲ ತಾಣದ ಓದುಗರಿಗೆ ಒದಗಿಸಿಕೊಡುವ ಕೆಲಸ ಮಾಡಲಾಗಿದೆ.
- ಭಾಷಾ ಬೆಳವಣಿಗೆಗೆ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪ್ರಚಾರ ಮಾಡುವ ನಿಟ್ಟಿನಲ್ಲಿ ನೇಪಾಳಿ ಕಲಾ ಡಾಟ್ ಕಾಂ ಪ್ರತಿಷ್ಠಾನದೊಂದಿಗೆ ಪರಿಷತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಒಡಂಬಡಿಕೆಯನ್ವಯ ಪರಸ್ಪರ ಭಾಷೆಗಳ ೫೦ ಕ್ಕೂ ಹೆಚ್ಚು ಕವಿಗಳ ಒಂದೊಂದು ಕವನಗಳನ್ನು ಭಾಷಾಂತರಿಸಿ ಕನ್ನಡ ಹಾಗೂ ನೇಪಾಳಿ ಭಾಷೆಗಳಲ್ಲಿ ಪ್ರಕಟಿಸುವ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.
- ಗೋವಾ ರಾಜ್ಯದ ಕ.ಸಾ.ಪ. ಗಡಿನಾಡು ಘಟಕವನ್ನು ೨೦೧೮ರ ಸೆಪ್ಟೆಂಬರ್ ೯ರಂದು ವಿಧ್ಯುಕ್ತವಾಗಿ ಉದ್ಘಾಟಿಸಿ, ಅಲ್ಲಿನ ಕನ್ನಡಿಗರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಇದೊಂದು ದಾಖಲೆ ಎನಿಸಿದೆ.
- ಮುಂಬಯಿ, ಪುಣೆ, ಸೊಲ್ಲಾಪೂರ ಜಿಲ್ಲಾ ಘಟಕಗಳು ಮತ್ತು ಅಂಬೇಂಗಾವ, ಹವೇಲಿ ತಾಲ್ಲೂಕು ಇತ್ಯಾದಿ ಆರು ತಾಲ್ಲೂಕು ಕ.ಸಾ.ಪ. ಘಟಕಗಳನ್ನು ಉದ್ಘಾಟಿಸಿ ಮಹಾರಾಷ್ಟ್ರ ಗಡಿನಾಡು ಘಟಕದಲ್ಲಿ ಕನ್ನಡಪರ ಕೆಲಸಗಳಿಗೆ ಚಾಲನೆ ನೀಡಲಾಗಿದೆ.
- ಸಾಹಿತ್ಯದ ವಿವಿಧ ಪ್ರಕಾರಗಳ ದಲಿತ ಸಾಹಿತ್ಯ ಸಂಪುಟಗಳ ಪ್ರಕಟಣೆಗೆ ಚಾಲನೆ ನೀಡಲಾಗಿದ್ದು, ೧೦ ಸಂಪುಟಗಳನ್ನು ಬಿಡುಗಡೆ ಮಾಡಲಾಗಿದೆ. ಇದೂ ಕೂಡ ಕ.ಸಾ.ಪ. ದ ಇತಿಹಾಸದಲ್ಲಿ ಮೊದಲನೆಯದೆನಿಸಿದೆ.
- ಕೋಲಾರದಲ್ಲಿ ಪ್ರಥಮ ರಾಜ್ಯಮಟ್ಟದ ದಲಿತ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು.
- ಮಹಿಳಾ ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಪ್ರಕಾರಗಳ ೮ ಮಹಿಳಾ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಲಾಗಿದೆ. ಅಲ್ಲದೇ ಛಿಕ್ಕಮಗಳೂರಿನಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ನೆರವೇರಿಸಲಾಗಿದೆ.
- ಕನ್ನಡ ಸಾರಸ್ವತ ಲೋಕಕ್ಕೆ ಅದ್ವಿತೀಯ ಕಾಣಿಕೆ ನೀಡಿದ ಮಹನೀಯರುಗಳಾದ ಡಾ. ಗೋಪಾಲಕೃಷ್ಣ ಅಡಿಗರು, ಶ್ರೀಮತಿ ಎಂ.ಕೆ. ಇಂದಿರಾ, ಶ್ರೀಮತಿ ವಾಣಿ, ಶ್ರೀ ಬೆಳಗೆರೆ ಕೃಷ್ಣಶಾಸ್ತಿçà ಹಾಗೂ ಡಾ. ದೇ. ಜವರೇಗೌಡರ ಜನ್ಮ ಶತಮಾನೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ.
- ಕನ್ನಡಿಗರಿಗೆ ಉದ್ಯೋಗ ಸಂಬಂಧಿತ ಸಿ ಮತ್ತು ಡಿ ಗ್ರೂಫ್ ಕೆಲಸಕ್ಕಾಗಿ ಉದ್ಯೋಗ ಪೋರ್ಟಲ್ ಸ್ಥಾಪನೆ ಮಾಡಲಾಗಿದೆ. ಈ ಮೂಲಕ ಸ್ವೀಕೃತವಾದ ಅಂದಾಜು ೪೫ ಸಾವಿರ ಉದ್ಯೋಗ ಅರ್ಜಿಗಳನ್ನು ೩೭೫ ಬಹುರಾಷ್ಟ್ರೀಯ ಮತ್ತು ಇತರೆ ಕಂಪನಿಗಳಿಗೆ ಕಳಿಸಿ ಸಿ ಮತ್ತು ಡಿ ದರ್ಜೆಯ ನೌಕರಿಗಳನ್ನು ಕನ್ನಡಿಗರಿಗೆ ನೀಡುವಂತೆ ಮನವಿ ಸಲ್ಲಿಸುವುದರ ಮೂಲಕ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಪರಿಷತ್ತು ಕಾರ್ಯ ನಿರ್ವಹಿಸಿದೆ.
ಇವರಿಗೆ 2019 ರಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಅತ್ಯಂತ ಪ್ರತಿಷ್ಠಿತ "ನಾಡೋಜ ಪ್ರಶಸ್ತಿ" ಮತ್ತು "ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ" ದಿಂದ ಸಾಹಿತ್ಯಕ್ಕಾಗಿ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳನ್ನು ನೀಡಲಾಗಿದೆ. ಅಲ್ಲದೆ, ನಾಗರಿಕ ಸೇವಕರಾಗಿ ಅವರ ವೃತ್ತಿಜೀವನದಲ್ಲಿ IRDP ಯಲ್ಲಿ ಅವರ ಅನುಕರಣೀಯ ಕೆಲಸಕ್ಕಾಗಿ ಅವರಿಗೆ ಎರಡು ಚಿನ್ನದ ಪದಕಗಳನ್ನು ನೀಡಲಾಗಿದೆ.
ಸಾಹಿತ್ಯ ಕ್ಷೇತ್ರ
[ಬದಲಾಯಿಸಿ]ಮನು ಬಳಿಗಾರ್ ಅವರು ಸಾಹಿತ್ಯ ಮತ್ತು ಸರಕಾರಿ ಅಧಿಕಾರಿಯಾಗಿ ಏಕಕಾಲದಲ್ಲಿ ಎರಡೂ ಕಡೆಯಲ್ಲಿ ನೀಡಿದ ಶ್ರೀಮಂತ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ಐದು ಕಥಾ ಸಂಕಲನಗಳು, ಆರು ಕವನ ಸಂಕಲನಗಳು, ಒಂದು ನಾಟಕ ಮತ್ತು ನಾಲ್ಕು ಜೀವನಚರಿತ್ರೆಗಳನ್ನು ಒಳಗೊಂಡಂತೆ 30 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
ಕೃತಿಗಳು
[ಬದಲಾಯಿಸಿ]ಕಥಾ ಸಂಕಲನಗಳು
[ಬದಲಾಯಿಸಿ]ಅವ್ಯಕ್ತ (೧೯೮೩)
ಋಣ (೧೯೯೮)
ಬದುಕು ಮಾಯೆಯ ಮಾಟ (೨೦೦೨)
ದ ಡೆತ್ & ಅದರ್ ಸ್ಟೋರೀಸ್ (೨೦೦೪)
ಕೆಲವು ಕತೆಗಳು (೨೦೦೫)
ಕವನ ಸಂಕಲನಗಳು
[ಬದಲಾಯಿಸಿ]ನನ್ನ ನಿನ್ನೊಳಗೆ (೧೯೮೩)
ಎದ್ದವರು ಬಿದ್ದವರು (೧೯೯೪)
ಸಾಕ್ಷರ ಗೀತೆಗಳು (೧೯೯೪)
ನಯಾಗರ ಮತ್ತು ಜಲಪಾತಗಳು (೧೯೯೮)
ಕವಿ ರವೀಂದ್ರರ ಮಿಂಚಿನ ಹನಿಗಳು (೨೦೦೪)
ಆಯ್ದ ಕವನಗಳು (೨೦೧೧)
ಲಲಿತ ಪ್ರಬಂಧ ಸಂಕಲನಗಳು
[ಬದಲಾಯಿಸಿ]ಏಕಾಂತ ಮತ್ತು ಏಕಾಗ್ರತೆ (೨೦೦೪)
ಬೆಳಕ ಬೆಡಗು (೨೦೦೯)
ಸಂಸ್ಕೃತಿ ವಿಹಾರ(೨೦೧೨)
ದೇಶ ವಿದೇಶ ಉಪನ್ಯಾಸಗಳು (೨೦೨೪)
ನಾಟಕ
[ಬದಲಾಯಿಸಿ]ಮೈಲಾರ ಮಹಾದೇವ (೨೦೦೭)
ಜೀವನ ಚರಿತ್ರೆಗಳು
[ಬದಲಾಯಿಸಿ]ಅತಿ ವಿರಳ ರಾಜಕಾರಣಿ ಎಸ್.ಆರ್. ಕಂಠಿ (೨೦೦೧)
ಪ್ರತಿಭಾವಂತ ಸಂಸದೀಯ ಪಟುಗಳು(೨೦೦೫)
ಅಬ್ದುಲ್ ನಜೀರ್‌ಸಾಬ್ (೨೦೦೫)
ಅಪ್ಪ (೨೦೧೨)
ಸಂಪಾದನೆ
[ಬದಲಾಯಿಸಿ]ಬಹುಮುಖಿ (ಶಿವರಾಮ ಕಾರಂತರ ಬದುಕು-ಬರಹ),
ಗಾನಗಂಧರ್ವ (ಕುಮಾರ ಗಂಧರ್ವರ ಜೀವನ, ಸಾಧನೆ),
ಜ್ಞಾನಪ್ರಭಾ
ಕಲ್ಪವೃಕ್ಷ
ತಲಸ್ಪರ್ಶಿ
ತುಳಸಿ
ಭಾಷಾಂತರ
[ಬದಲಾಯಿಸಿ]ಮನು ಬಳಿಗಾರ್ ಅವರು ರವೀಂದ್ರನಾಥ ಠಾಕೂರ ಅವರ ೨೦೭ ಹೆಚ್ಚು ಕವನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅಲ್ಲದೆಯೇ ಹಲವಾರು ಕಥೆಗಳು ಇಂಗ್ಲೀಷ್, ಓರಿಯಾ, ತೆಲುಗು, ಸಂಸ್ಕ್ರುತ ಮತ್ತು ಹಿಂದಿಗೆ ಭಾಷಾಂತರಗೊಂಡಿವೆ. ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಾಹಿತ್ಯಕ್ಕಾಗಿ ಗೌರವ ಡಾಕ್ಟರೇಟ್ ಪಡೆದ ಏಕೈಕ ಅಧಿಕಾರಿಯೂ ಹೌದು. ಅವರ ಪ್ರಸಿದ್ಧ ಕೃತಿಗಳಲ್ಲಿ ಕೆಲವು - ಪ್ರಜಾವಾಣಿ ದಿನಪತ್ರಿಕೆಯಲ್ಲಿ ಅವರ ಅಂಕಣಗಳ ಸಂಕಲನ - ಬೆಳಕ ಬೆಡಗು , ಪೌರಾಣಿಕ ಹುತಾತ್ಮರ ಜೀವನದ ನಾಟಕ - ಮೈಲಾರ ಮಹಾದೇವ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಕಂಠಿ, ಅಬ್ದುಲ್ ನಜೀರ್ ಸಾಬ್ ಅವರ ಜೀವನ ಚರಿತ್ರೆಗಳು ಸೇರಿವೆ . ಮನು ಬಳಿಗಾರ್ ಅವರು ೨೦೧೧ ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವಪ್ರಸಿದ್ಧ ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ಕನ್ನಡ ಸಾಹಿತ್ಯದ ಕುರಿತು ಹಲವಾರು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಯುಕೆ, ಅಮೆರಿಕ, ಆಸ್ಟ್ರೇಲಿಯಾ, ನೇಪಾಳ, ಬಹರೇನ್ ಮತ್ತು ಸಿಂಗಾಪುರದಂತಹ ದೇಶಗಳಲ್ಲಿ ನಡೆದ ಅಂತರರಾಷ್ಟ್ರೀಯ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಸಾಹಿತ್ಯದ ಕುರಿತು ಅಸಂಖ್ಯಾತ ಪ್ರಮುಖ ಉಪನ್ಯಾಸಗಳನ್ನು ನೀಡಿದ್ದಾರೆ. ಅವರ ಸಮರ್ಥ ನಾಯಕತ್ವ ಮತ್ತು ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಗತಿ ಮತ್ತು ಸಾಧನೆಗಳನ್ನು ಪರಿಷತ್ ವೆಬ್‌ಸೈಟ್‌ನಲ್ಲಿ ಕಾಯಕ ಪಥ (೦೩/೦೩/೨೦೧೬ ರಿಂದ ೩೧/೧೦/೨೦೧೭ ರ ಅವಧಿಯಲ್ಲಿನ ಪ್ರಗತಿ) ಮತ್ತು ಕಾಯಕ ನಿರತ (೦೧/೧೧/೨೦೧೭ ರಿಂದ ೦೫/೧೦/೨೦೧೯ ರ ಅವಧಿಯಲ್ಲಿನ ಪ್ರಗತಿ) ಎಂಬ ಪುಸ್ತಕಗಳ ರೂಪದಲ್ಲಿ ದಾಖಲಿಸಲಾಗಿದೆ ಮತ್ತು ಪ್ರಸ್ತುತಪಡಿಸಲಾಗಿದೆ.
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]- ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರಿಂದ ಗೌರವ ನಾಡೋಜ ಪದವಿ - ೨೦೧೯
- ಸಾಹಿತ್ಯ ಕ್ಷೇತ್ರದಲ್ಲಿನ ಅನನ್ಯ ಸೇವೆಗಾಗಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಗೌರವ ಡಾಕ್ಟರೇಟ್ (೨೦೧೧) ನೀಡಿದೆ.
- ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ "ನೇಪಾಳಿ ಸಮ್ಮಾನ್ ಪ್ರಶಸ್ತಿ" ಯನ್ನು ನೇಪಾಳದ ಉಪರಾಷ್ಟ್ರಪತಿಗಳೇ ಪ್ರದಾನ ಮಾಡಿದ್ದೊಂದು ವಿಶೇಷವಾಗಿದೆ.
- ಸರಕಾರಿ ಸೇವೆಯಲ್ಲಿ ಅತ್ಯುತ್ತಮ ಅಧಿಕಾರಿಯೆಂದು ಎರಡು ಚಿನ್ನದ ಪದಕ ಸಮೇತ ಒಟ್ಟು ೫ ಬಹುಮಾನಗಳು (೧೯೮೨-೮೩ ರಿಂದ ೧೯೮೫-೮೬)
- ಸಾಕ್ಷರತಾ ಆಂದೋಲನ ಬೆಳಗಾವಿ ಜಿಲ್ಲಾ ಸಮಿತಿಯ ಪಾಕ್ಷಿಕ "ಅಕ್ಷರ ಪ್ರಭಾ" ಸಂಪಾದಕರಾಗಿದ್ದಾಗ ಜಿಲ್ಲೆಗೆ ರಾಷ್ಟ್ರಪತಿಗಳ "ಸತ್ಯೇನ್ ಮೈತ್ರ ಪ್ರಶಸ್ತಿ" (೧೯೯೪-೯೫)
- "ವಿಶ್ವಮಾನವ ಪ್ರಶಸ್ತಿ" ೨೦೦೮, ಇತ್ಯಾದಿ
ಸಾಹಿತ್ಯ ಪುರಸ್ಕಾರಗಳು
[ಬದಲಾಯಿಸಿ]- ಬೆಟಗೇರಿ ಕೃಷ್ಣಶರ್ಮ ಕಥಾ ಪ್ರಶಸ್ತಿ,
- ರನ್ನ ಸಾಹಿತ್ಯ ಪ್ರಶಸ್ತಿ
- ಗೊರೂರು ಸಾಹಿತ್ಯ ಪ್ರಶಸ್ತಿ
- ಪು.ತಿ.ನ ಪ್ರಶಸ್ತಿ
- ಕೆಂಪೇಗೌಡ ಸಾಹಿತ್ಯ ಪ್ರಶಸ್ತಿ
- ಲಿಂಗರಾಜ ದೇಸಾಯಿ ಸಾಹಿತ್ಯ ಪ್ರಶಸ್ತಿ
- ಬೆಳಗಾವಿಯ ಎಂ.ಕೆ. ಪಬ್ಲಿಸಿಟಿ ಪ್ರಶಸ್ತಿ,
ವಿದೇಶ ಪ್ರವಾಸ ಹಾಗೂ ಉಪನ್ಯಾಸಗಳು
[ಬದಲಾಯಿಸಿ]- ಸಿಂಗಾಪುರದಲ್ಲಿ ನಡೆದ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ (೨೦೦೫)
- ಅಮೇರಿಕಾದ ವಿ.ಎಸ್.ಎನ್.ಎ. ರಜತ ಮಹೋತ್ಸವದಲ್ಲಿ ಪ್ರಧಾನ ಭಾಷಣ - ೧೯೯೭, ೨೦೦೩, ೨೦೦೭.
- ಆಸ್ಟ್ರೇಲಿಯಾದ ಮೆಲ್ಬರ್ನ್ ಕನ್ನಡ ಸಂಘದ ರಜತ ಮಹೋತ್ಸವದಲ್ಲಿ ಮುಖ್ಯಅತಿಥಿ-ಉಪನ್ಯಾಸ- ೨೦೧೦.
- ಲಂಡನ್‌ನಲ್ಲಿ ರವೀಂದ್ರನಾಥ್ ಟ್ಯಾಗೂರ್ ೧೫೦ನೇ ವರ್ಷಾಚರಣೆಯಲ್ಲಿ ಮುಖ್ಯಅತಿಥಿ-ಉಪನ್ಯಾಸ- ೨೦೧೧.
- ಬಹರೇ ಹಾಗೂ ಮಸ್ಕತ್, ದುಬೈನಲ್ಲಿ ನಡೆದ ಸಮ್ಮೇಳನಗಳಲ್ಲಿ ಉಪನ್ಯಾಸ.
- ಗದಗ ಜಿಲ್ಲಾ ಕನ್ನಡ ಸಾಹಿತ್ಯದ ಸಮ್ಮೇಳನದ ಅಧ್ಯಕ್ಷತೆ (೨೦೦೪)
- ಸದಸ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ (೧೯೯೯-೨೦೦೧)
- ಬಿಜಾಪುರ ಜಿಲ್ಲಾ ೫ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ರು (೧೯೯೦) ಈ ಸಮ್ಮೇಳನವನ್ನು ಡಾ. ಶಿವರಾಮ ಕಾರಂತರು ಉದ್ಘಾಟಿಸಿದ್ದರು.
- ಮಾರ್ಚ್ ೨೦೧೧ರಲ್ಲಿ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವಲ್ಲಿ ಮಹತ್ವದ ಪಾತ್ರವಹಿಸಿದ್ದು.
- ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ (೧೯೯೯) ಕನಕಪುರ ಮತ್ತು ಸಾಂಸ್ಕೃತಿಕ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದ್ದು (೨೦೦೩) ಮೂಡಬಿದ್ರೆ.
- ರಾಷ್ಟ್ರೀಯ ಕನ್ನಡ ಸಮ್ಮೇಳನ ಅಧ್ಯಕ್ಷತೆ, ನವದೆಹಲಿ (೨೦೧೦)
- ೨೦೦೮ ಮತ್ತು ೨೦೦೯ರಲ್ಲಿ ಪ್ರಜಾವಾಣಿ ದಿನಪತ್ರಿಕೆಯಲ್ಲಿ "ಸಾಕ್ಷಿಪ್ರಜ್ಞೆ" ಎಂಬ ಅಂಕಣ ಬರೆದದ್ದು.
- ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ , ಥೈಲ್ಯಾಂಡ್, ಮಲೇಷಿಯಾ, ದುಬೈ, ಬಹರೇನ್, ಓಮಾನ್, ಸಿಂಗಾಪುರಗಳ ವ್ಯಾಪಕ ಪ್ರವಾಸ (೧೯೯೭-೨೦೦೩-೨೦೦೫-೨೦೦೭-೨೦೦೮, ೨೦೧೦, ೨೦೧೧)
- ಮನು ಬಳಿಗಾರ್ ಅವರ ಸಾಹಿತ್ಯ ಕುರಿತು ಮೂರು ಪಿ ಎಚ್ ಡಿ (೨೦೨೦, ೨೦೨೨, ೨೦೨೪) ಹಾಗೂ ಒಂದು ಎಂ ಫಿಲ್ (೨೦೨೫) ಮಹಾಪ್ರಬಂಧಗಳು ಹೊರಬಂದಿವೆ.