ಮಧ್ಯಗೇಹ ಭಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಧ್ಯಗೇಹ ಎಂಬುದು ನಡಿಲ್ಲಾಯ ಎಂಬ ತುಳು ಭಾಷೆಯ ಪದದ ರೂಪಾಂತರ. ನಡು(ಮಧ್ಯ) ಮನೆಯವನು ಎಂದು ಅದರ ಅರ್ಥ. ಇದು ಒಂದು ಉಪನಾಮ(ಸರ್ ನೇಮ್). ಅವರ ನಿಜವಾದ ಹೆಸರನ್ನು ಮಧ್ವಾಚಾರ್ಯರ ಅಧಿಕೃತ ಜೀವನ ಚರಿತ್ರೆಯನ್ನು ಬರೆದ ನಾರಾಯಣ ಪಂಡಿತಾಚಾರ್ಯರು ತಿಳಿಸದೇ ಇರುವುದು ಬಹಳ ಆಶ್ಚರ್ಯವನ್ನುಂಟು ಮಾಡುತ್ತದೆ. ತಾಯಿಯ ಹೆಸರು ವೇದವತಿ ಎಂಬುದು ಬಾಯಿಂದ ಬಾಯಿಗೆ ಬಂದದ್ದೇ ಆಗಿದೆ; ಹೊರತು ಯಾವುದೇ ಅಧಿಕೃತ ದಾಖಲೆಗಳು ಈ ವಿಷಯದಲ್ಲಿ ಸಿಗುವುದಿಲ್ಲ.