ಮಧೋಗಢ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಧೋಗಢ ಕೋಟೆ

ಮಧೋಗಢ ಕೋಟೆಯು ಜೈಪುರದಿಂದ ೪೨ ಕಿಮೀ ದೂರದಲ್ಲಿರುವ ಮಧೋಗಢ ಎಂಬ ಗ್ರಾಮದಲ್ಲಿದೆ. ಮಧೋಗಢ ಕೋಟೆಯನ್ನು ಸುಮಾರು ೪೦೦ ವರ್ಷಗಳ ಹಿಂದೆ ಮಾಧೋ ಸಿಂಗ್ ಜಿ ಅವರು ನಿರ್ಮಿಸಿದರು. ನಂತರ ಜುಲೈ ೨೦೦೦ ರಲ್ಲಿ ಠಾಕೂರ್ ಭವಾನಿ ಸಿಂಗ್ ಜಿ ಅವರು ಇದನ್ನು ನವೀಕರಿಸಿ, ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಿದರು.

ಇತಿಹಾಸ[ಬದಲಾಯಿಸಿ]

ಎರಡನೇ ಮಹಾರಾಜ ಸವಾಯಿ ರಾಮ್ ಸಿಂಗ್‌ರವರು ಮಧೋಘರ್ ಕುಟುಂಬದಲ್ಲಿ ವಿವಾಹವಾದರು ಮತ್ತು ಭಾಟಿ ಕುಲದ ರಜಪೂತ ಠಾಕೂರ್ ಪ್ರತಾಪ್ ಸಿಂಗ್ ಜಿ ಗೆ ಮಧೋಗಢವನ್ನು ಆನುವಂಶಿಕ ಆಸ್ತಿಯಾಗಿ ನೀಡಿದರು. ಮಧೋಗಢ್ ಕೋಟೆಯು ೪೦೦ ವರ್ಷಗಳಷ್ಟು ಹಳೆಯದಾದ ಆಸ್ತಿ. ಇದನ್ನು ಕಚವ ಕುಲದ ರಜಪೂತರಿಗೆ ಸೇರಿದ ಮಾಧೋ ಸಿಂಗ್ ನಿರ್ಮಿಸಿದ್ದಾರೆ.

೨೦೦೦ ರಲ್ಲಿ, ಠಾಕೂರ್ ಭವಾನಿ ಸಿಂಗ್ ಅವರ ಕುಟುಂಬದವರು ಇದನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಿದರು.

೧೭೮೭ ರಲ್ಲಿ ಮರಾಠರ ಯುದ್ಧಕ್ಕೆ ಸಂಬಂಧಿಸಿದ ಐತಿಹಾಸಿಕ ಕೋಟೆ ಇದಾಗಿದೆ. ಇದು ತುಂಗಾ ಯುದ್ಧಭೂಮಿ ಮತ್ತು ಕುಶಲಕರ್ಮಿಗಳ ಸಮುದಾಯಗಳು ವಾಸಿಸುವ ರಾಜಸ್ಥಾನಿ ಹಳ್ಳಿಯ ಮೇಲಿದೆ. ಇದರಲ್ಲಿ ಒಮ್ಮೆ ಮಹಾರಾಜ ಪ್ರತಾಪ್ ಸಿಂಗ್ ಅವರು ಆಕ್ರಮಿಸಿಕೊಂಡಿದ್ದ ಪ್ರತಾಪ್ ಮಹಲ್ ಸೂಟ್ ಮತ್ತು ದಿಯೋಧಿ ಫೂಲಾ ಮಹಲ್ ಸಹ ಇದೆ.

ಉಲ್ಲೇಖಗಳು[ಬದಲಾಯಿಸಿ]