ಮಧು ವೆಂಕರೆಡ್ಡಿ

ವಿಕಿಪೀಡಿಯ ಇಂದ
Jump to navigation Jump to search

ಮಧು ವೆಂಕರೆಡ್ಡಿಯವರು ೧೯೫೧ರ ನವೆಂಬರ ೬ರಂದು ಉತ್ತರ ಕನ್ನಡ ಜಿಲ್ಲೆಯ ಹಲ್ಯಾಳದಲ್ಲಿ ಜನಿಸಿದರು. ತಾಯಿ ಗಿರಿಜಾದೇವಿ; ತಂದೆ ತಿರಕರೆಡ್ಡಿ. ರೋಣದಲ್ಲಿ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣ ಪೂರೈಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಮ್.ಏ. ಹಾಗು ಪಿ.ಎಚ್‍ಡಿ ಪದವಿ ಗಳಿಸಿದರು. ಸದ್ಯ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರು ಧಾರವಾಡದ ವಿದ್ಯಾವರ್ಧಕ ಸಂಘ, ಕರ್ನಾಟಕ ಲೇಖಕಿಯರ ಪರಿಷತ್ತು, ಕರ್ನಾಟಕ ಲೇಖಕಿಯರ ಸಂಘ, ಉತ್ತರ ಕರ್ನಾಟಕ ಲೇಖಕಿಯರ ಸಂಘ, ವಿಶ್ವವಿದ್ಯಾಲಯ ಶಿಕ್ಷಕರ ಸಂಘಗಳ ಸದಸ್ಯರಾಗಿದ್ದಾರೆ ಹಾಗು ವೇಮನ ಪೀಠದ ಸಂಯೋಜಕರಾಗಿದ್ದಾರೆ. ಇವರ ಕೆಲವು ಸಾಹಿತ್ಯಕೃತಿಗಳು ಇಂತಿವೆ.

  • ಥೇರಿಗಾಥಾ (ಅನುವಾದ)
  • ಅಭಿವ್ಯಕ್ತಿ
  • ಅತ್ತಿಮಬ್ಬೆ
  • ಸ್ಫಟಿಕ ಶಲಾಕೆ
  • ಕಾಯಕದ ಮುಕ್ತಿನಾಥಯ್ಯ
  • ನಗೆಮಾರಿ ತಂದೆಯ ವಚನಗಳು
  • ಡಕ್ಕೆಯ ಬೊಮ್ಮಣ್ಣ
  • ಮುಕ್ತಾಯಕ್ಕನ ವಚನಗಳು
  • ವೇಮನ ಸರ್ವಜ್ಞ
  • ಜನಪದ ಕಸೂತಿ