ವಿಷಯಕ್ಕೆ ಹೋಗು

ಮದುಮಗಳ ಅಲಂಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮದುಮಗಳ ಅಲಂಕಾರ

[ಬದಲಾಯಿಸಿ]

ಪ್ರತಿಯೊಬ್ಬ ಹೆಣ್ಣು ತನ್ನ ಮದುವೆಯಲ್ಲಿ ಪರಿಪೂರ್ಣವಾಗಿಕಾಣಲು ಬಯಸುತ್ತಾಳೆ. ಸಿನಿಮಾಗಳಲ್ಲಿ ಸಿಂಗಾರಗೊಳ್ಳುವ ವಧುವಿನಂತೆಯೇ ತಾನು ಕಾಣಿಸಬೇಕು ಎಂಬುದು ಅವಳ ಬಯಕೆ. ಆ ದಿನ ಆಕೆಯೆ ಸೌಂದರ್ಯ ಹಾಗೂ ಆಕರ್ಷಣೆಯ ಕೇಂದ್ರಬಿಂದು.

ಮದುವೆ ಎರಡು-ಮೂರು ದಿನಗಳ ಕಾರ್ಯಕ್ರಮವಾದರೂ ಸೀರೆ, ಆಭರಣ, ಚಪ್ಪಲಿ, ಬ್ಯಾಗು ಖರೀದಿ ಹೀಗೆ ಪೂರ್ವ ತಯಾರಿ ತಿಂಗಳ ಹಿಂದೆಯೇ ಶುರುವಾಗುತ್ತದೆ.

ಮದುವೆ ದಿನ ಉಡಲು ಗುಲಾಬಿ ಅಥವಾ ಕುಂಕುಮ ಬಣ್ಣದ ಸೀರೆಯನ್ನು ಹಿಂದೆ ಬಹುತೇಕ ಯುವತಿಯರು ಆಯ್ಕೆ ಮಾಡುತ್ತಿದ್ದರು. ಆದರೆ ಇಂದು ಈ ಪಟ್ಟಿಗೆ ತಿಳಿಗೆಂಪು, ಆಕಾಶ ನೀಲಿ, ಮೆಜೆಂತಾ, ಕನಕಾಂಬರ ಬಣ್ಣವೂ ಸೇರಿದೆ. ಅತಿ ಭಾರದ ಸಾಂಪ್ರದಾಯಿಕ ಸೀರೆಗಳನ್ನು ಖರೀದಿಸುವ ಕಾಲ ಇಂದು. ಸೀರೆಗಳಲ್ಲಿ ಮುತ್ತುಗಳು, ಸಣ್ಣ-ಸಣ್ಣ ಬಣ್ಣ-ಬಣ್ಣದ ಹರಳುಗಳಿರುವ ಸೀರೆಗಳನ್ನು ಇಂದು ಮದುಮಗಳು ಆರಿಸಿಕೊಳ್ಳುತ್ತಾಳೆ. ಇಂದಿನ ಟ್ರೇಂಡ್‍ಗೆ ತಕ್ಕಂತೆ ಸೀರೆಗಳು ಕೂಡ ವಿಭಿನ್ನ ರೀತಿಯನ್ನು ಪಡೆದುಕೊಂಡಿದೆ. ಇತ್ತಿಚೀಗೆ ಶುಭ-ಸಮಾರಂಭಗಳಿಗೆ ಸರಿ ಹೊಂದುವ ಹಗುರ ರೇಷ್ಮೆ ಸೀರೆಗಳನ್ನು, ಸೀಲ್ಕ್ ಸೀರೆಗಳು, ಕಾಟನ್ ಸೀರೆಗಳನ್ನು ಪಾರ್ಟಿಗೆ ತಕ್ಕಂತೆ ಉಡುವ ಕಾಲ ಇದಾಗಿದೆ. ಆದರೆ ಇಂದು ಮದುಮಗಳ ಸೀರೆಗೆ ತಕ್ಕಂತೆ ಅಂದ ಹೆಚ್ಚಿಸುವ ಬ್ಲೌಸ್ ಡಿಸೈನ್‍ಗಳು ಕೂಡ ಬದಲಾವಣೆ ಆಗಿದೆ.

ಮದುಮಗಳ ಸ್ಯಾರಿಗೆ ತಕ್ಕಂತೆ ಅಂದ ಹೆಚ್ಚಿಸುವ ಬ್ಲೌಸ್ ಡಿಸೈನ್‍ಗಳು

[ಬದಲಾಯಿಸಿ]

ಫ್ಯಾಷನ್ ಲೋಕದಲ್ಲಿ  ಸ್ಯಾರಿಗೆ ಇನ್ನಷ್ಟು ಅಂದ ಹೆಚ್ಚಿಸುವ ಬ್ಲೌಸ್ ಡಿಸೈನ್‍ನ ಲೂಕ್‍ಗಳು ಇನ್ನಷ್ಟು ಅಂದ ಹೆಚ್ಚಿಸುತ್ತದೆ. ಮದುಮಗಳ ಬ್ಲೌಸ್‍ಗಳು ಹೆಚ್ಚಾಗಿ ನೆಕ್ ಲೈನ್ ಮತ್ತು ಸ್ಲೀವ್‍ಗಳನ್ನೇ ಹೆಚ್ಚಾಗಿ ಆಧರಿಸಿರುತ್ತದೆ. ಸ್ಯಾರಿಗಳಿಗೆ ಸರಿ ಹೊಂದುವಂತಹ ಮೆಟಿರೀಯಲ್ ಬ್ಲೌಸ್‍ಗೆ ಹೊಂದುವಂತೆ ಕೈಯಲ್ಲಿ ಬಿಡಿಸುವ ಎಂಬ್ರಾಯಿಡರಿ, ಕನ್ನಡಿ, ಹರಳು ಜೋಡಣೆ, ಕುಂದನ್ ಕುಸುರಿ, ಮುತ್ತುಗಳ ಜೋಡಣೆ ಇವುಗಳಿಂದ ಇಂದು ಬ್ಲೌಸ್‍ಗೆ ವ್ಯಾಲ್ಯೂ ಹೆಚ್ಚಾಗುತ್ತದೆ.

ಸಾಂಪ್ರದಾಯಿಕವಾಗಿ ಜರ್ದೋಸಿ ಎಂಬ್ರಾಯಿಡರಿ ಇರುವ ಬ್ಲೌಸ್ ಇಲ್ಲದೆ ಸೀರೆ ಪರಿಪೂರ್ಣವಾಗಿ ಕಾಣಿಸುವುದಿಲ್ಲ. ಸಮಕಾಲೀನ ವಧುವಿನ ಅಲಂಕಾರದಲ್ಲಿ ಕಟ್ ವರ್ಕ್ ಪ್ರಾಧಾನ್ಯತೆ ಪಡೆದಿದ್ದು ಕಾಂಟ್ರಾಸ್ಟ್ ಲೈನಿಂಗ್ ಜೊತೆ ಇಡೀ ಬ್ಲೌಸ್ ಕಟ್ ವರ್ಕ್ ಉತ್ತಮ ಲುಕ್ ನೀಡುತ್ತದೆ. ಕಚ್ ಎಂಬ್ರಾಯಿಡರಿ ಸೊಗಸು ವರ್ಣಿಸಲಾಗದು. ಇಂದು ದಕ್ಷಿಣ ಭಾರತದ ಮದುವೆಗಳಲ್ಲಿ ವಧುವಿಗೆ ಗುಜರಾತಿಯ ಹಾಗೇ ಸ್ಯಾರಿಯನ್ನು ಉಡಿಸುತ್ತಾರೆ. ಇದಕ್ಕೆ ಸರಿ ಹೊಂದುವಂತಹ ಕಚ್ ಎಂಬ್ರಾಯಿಡರಿ ಬ್ಲೌಸ್‍ಗಳು ಹೆಚ್ಚು ಲುಕ್ ನೀಡುತ್ತದೆ.

ಇನ್ನೂ ಅನೇಕ ರೀತಿಯಾದಂತಹ ಮಧುಮಗಳ ಇಂದಿನ ಅಲಂಕಾರಕ್ಕೆ ತಕ್ಕಂತೆ ಸ್ಯಾರಿಗಳಿಗೆ ಹೊಂದುವಂತಹ ಬ್ಲೌಸ್ ಗಳು ಪ್ರಾಧನ್ಯತೆಯನ್ನು ಪಡೆದುಕೊಂಡಿದೆ. ಬ್ಯಾಲೆನ್ಸ್ಡ್ ಕಲರ್ ಕಾಂಬಿನೇಷನ್ ಜತೆಗೆ ಕೈನಿಂದ ಮಾಡಿದ ಭುಜ್ ಎಂಬ್ರಾಯಿಡರಿ, ಮಿರರ್ ಎಂಬ್ರಾಡಯಿರಿ, ಕಾಂತಾ ವಕ್ರ್À ಸಾಂಪ್ರದಾಯಿಕ ಡಿಸೈನ್, ಜಾಕೆಟ್ ಸ್ಯಾರಿ ಬ್ಲೌಸ್, ಪ್ರಿನೆಸ್ ಕಟ್ ಬ್ಲೌಸ್, ಫುಲ್ ಸೆಕ್ವಿನ್ ವರ್ಕ ಬ್ಲೌಸ್, ಫಾರ್ಮಲ್ ಸಾರಿ ಬ್ಲೌಸ್‍ಗಳು ಇಂದು ವಧುವಿಗೆ ಒಪ್ಪುವಂತಹ ಡಿಸೈನ್‍ಗಳು ಆಗಿದೆ.

ಮದುಮಗಳ ಶೃಂಗಾರಕ್ಕೆ ನೂತನ ಮೊಗ್ಗಿನ ಜಡೆ

[ಬದಲಾಯಿಸಿ]

ಮದುಮಗಳ ಸ್ಯಾರಿ ಮತ್ತು ಬ್ಲೌಸ್‍ಗಳು ಇಂದಿನ ಟ್ರೇಂಡ್‍ಗೆ ತಕ್ಕಂತೆ ಬದಲಾಗುತ್ತದೆ. ಅದೇ ರೀತಿಯಾಗಿ ಡ್ರೆಸ್ಸ್‍ಗೆ ತಕ್ಕಂತೆ ಕೇಶ ಶೃಂಗಾರ ಇಂದು ಬಹಳ ಜನಪ್ರೀಯವಾಗಿದೆ. ಹಿಂದಿನ ಕಾಲದಲ್ಲಿ ಮಲ್ಲಿಗೆ ಹೂವಿನಿಂದ ಜಡೆಗೆ ಅಲಂಕಾರವನ್ನು ಮಾಡುತ್ತಿದ್ದರು. ಅದ್ರೆ ಇದೀಗ ಮೊಗ್ಗಿನ ಜಡೆಯು ಅಧಿಕವಾಗಿ ಉಪಯೋಗಿಸುತ್ತಾರೆ.

ಎಥ್ ನಿಕ್ ಲುಕ್ ಹೊಂದಿರುವಂತೆ, ಜರತಾರಿ, ಹರಳು, ಗುಲಾಬಿ ಹೂಗಳೊಂದಿಗೆ, ಮಣಿಗಳ ರೇಡಿಮೇಡ್ ಮೊಗ್ಗಿನ ಜಡೆಗಳು ಇಂದು ಮದುಮಗಳ ಶೃಂಗಾರವನ್ನು ಹೆಚ್ಚಿಸುತ್ತದೆ. ಕೆಲವೊಬ್ಬರು ಹೆಚ್ಚಾಗಿ ಹೂವಿನ ಅಲಂಕಾರವಿರುವ ಮೊಗ್ಗಿನ ಜಡೆಯನ್ನೇ ಇಷ್ಟ ಪಡುತ್ತಾರೆ. ಇನ್ನು ಕೆಲವರು ನೀಳ ಜಡೆಗೆ ಹರಳು, ಮಣಿಗಳ ರೇಡಿಮೇಡ್ ಮೊಗ್ಗಿನ ಜಡೆಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಇಂದು ಈ ರೀತಿಯ ಜಡೆಯ ಅಲಂಕಾರದೊಂದಿಗೆ ಬೈತಲೆ ಬೊಟ್ಟು ಕೂಡ ವಿಭಿನ್ನತೆಯಿಂದ ಕೂಡಿದೆ. ಸಿಂಗಲ್ ಬೈತಲೆ ಬೊಟ್ಟುವಿನ ಜೊತೆಗೆ ಇಂದು ಚೈನ್‍ಗಳು ವಿಶಿಷ್ಟ ರೀತಿಯಾಗಿ ಅಲಂಕಾರಕ್ಕೆ ಸಹಕಾರಿಯಾಗಿದೆ.    ಈ ರೀತಿಯಾಗಿ ವಧುವಿನ ಜಡೆಯನ್ನು ಅಲಂಕಾರಿಸಿದರೆ ಮದುವೆಯ ದಿನ ಗೊಂಬೆಯಂತೆ ಅಥವಾ ಸ್ವರ್ಗ ಲೋಕದ ಅಪ್ಸರೆಯಂತೆ ಮಿಂಚುವುದರಲ್ಲಿ ಎರಡು ಮಾತಿಲ್ಲ.

ಮದುಮಗಳ ಫ್ಯಾಷನ್‍ಗೆತಕ್ಕಂತೆ ಮಾಂಗಲ್ಯ ಟ್ರೇಂಡ್

[ಬದಲಾಯಿಸಿ]

ಮದುಮಗಳ ಅಲಂಕಾರಕ್ಕೆ ತಕ್ಕಂತೆ ಆಭರಣಗಳನ್ನು ಹಾಕಿಕೊಳ್ಳುತ್ತಾಳೆ. ವಿವಿಧ ರೀತಿಯ ಡಿಸೈನ್ ಗಳನ್ನು ಹೊಂದಿರುವಂತಹ ಆಭರಣಗಳನ್ನು ಇಂದು ಧರಿಸಿಕೊಳ್ಳುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ವಧುವಿಗೆ ಮಾಂಗಲ್ಯವೇ ಭೂಷಣ. ಮಾಂಗಲ್ಯವಿಲ್ಲದೆ ಅವಳ ಅಲಂಕಾರ ಅಪೂರ್ಣ.

ಮೊದಲ್ಲೆಲ್ಲಾ ಬರೀ ಕರಿಮಣಿಗಳನ್ನು ದಾರದಲ್ಲಿ ಪೋಣಿಸಿ ಮಧ್ಯದಲ್ಲಿ 2 ತಾಳಿ ಬೊಟ್ಟುಗಳಿರುವ ಸರ ಧರಿಸುತ್ತಿದ್ದರು. ಕಾಲ ಕ್ರಮೇಣ ಮಹಿಳೆಯರ ಅಭಿರುಚಿಗೆ ತಕ್ಕಂತೆ ಮಾಂಗಲ್ಯ ಸರಗಳಲ್ಲಿಯೂ ಸಾಕಾಷ್ಟು ಬದಲಾವಣೆಯಾಗಿದೆ. ಕರಿಮಣಿ ನಡುವೆ ಬಂಗಾರದ ಗುಂಡು ಪೋಣಿಸಿ ಮಾಂಗಲ್ಯ, ಬಂಗಾರದ ಚೈನ್ ಮಧ್ಯೆ ಒಂದೊಂದೆ ಕರಿಮಣಿ, ಕರಿಮಣಿ ಸರಗಳ ಮಧ್ಯೆ ಬಂಗಾರದ ಗುಂಡುಗಳನ್ನು ಪೋಣಿಸಲಾಗುತ್ತದೆ. ಮೊದಲು ಒಂದು ಎಳೆಯ ಮಾಂಗಲ್ಯ ಸರಗಳು ಕಂಡು ಬಂದರೆ ಇಂದು ಎರಡು ಎಳೆಗಳಲ್ಲಿ ಸರಗಳು ಕಂಡು ಬರುತ್ತದೆ.

ಇಂದು ನಾರಿಯರ ಮಾಂಗಲ್ಯಗಳು ನೆಕ್‍ಲೆಸ್ ಮಾದರಿಯಲ್ಲಿ ಸರಗಳು ಸಿಗುತ್ತದೆ. ಎಲ್ಲಾ ರೀತಿಯಾದಂತಹ ಉಡುಗೆಗೂ ಸೈ ಎನಿಸುವಂತಹ ಮಾಂಗಲ್ಯಗಳನ್ನು ಧರಿಸುತ್ತಾರೆ. ಬೇಕಾದ ರೀತಿಯಲ್ಲಿ ಡಿಸೈನ್‍ಗಳನ್ನು ಮಾಡಿಕೊಂಡು ಇಂದು ಮಾಂಗಲ್ಯವನ್ನು ಧರಿಸುತ್ತಾರೆ.[೧]

ಡಿಸೈನರ್ ಕಮರ್‍ಬಾಂದ್: ಬಳಕುವ ಸೊಂಟಕ್ಕೆ ಬಳ್ಳಿಯ ಅಲಂಕಾರ

[ಬದಲಾಯಿಸಿ]

ಕಮರ್‍ಬಾಂದ್‍ಧರಿಸುವ ವಿಧಾನ ಇಂದು ನಿನ್ನೆಯದಲ್ಲ. ಗುಪ್ತಾರ ಕಾಲದಿಂದಲ್ಲೂ ಪ್ರಚಲಿತದಲ್ಲಿದೆ. ರಾಜ- ಮಹಾರಾಜರ ಕಾಲದಿಂದ ಪ್ರಚಲಿತದಲ್ಲಿರುವ ಇವುಗಳ ಮೂಲ ವಿನ್ಯಾಸವನ್ನು ಉಳಿಸಿಕೊಂಡು ಬಂದಿದೆ. ಎಲ್ಲಾ ಕಾಲಕ್ಕೂ ಮ್ಯಾಚ್ ಆಗುವಂತಹ ರೀತಿಯಲ್ಲಿ ವಿನ್ಯಾಸಗೊಳಿಸಿ ಇಂದು ಕೂಡ ಚಾಲ್ತಿಯಲ್ಲಿ ಇವೆ.

ಕಮರ್‍ಬಾಂದ್‍ಗಳು ಮಧುಮಗಳ ಸೊಂಟಕ್ಕೆ ಹೆಚ್ಚು ಆಕರ್ಷಣೆಯನ್ನು ನೀಡುತ್ತದೆ. ಸೀರೆಗಳಿಗೆ ಒಪ್ಪುವಂತಹ ಕಮರ್‍ಬಾಂದ್‍ಗಳನ್ನು ಇಂದು ನಾವು ಕಾಣಬಹುದಾಗಿದೆ. ಗ್ಯ್ರಾಂಡ್ ಹಾಗೂ ಬ್ರೈಡಲ್ ಲುಕ್ ನೀಡುವ ಕಮರ್ ಬಾಂದ್ ಗಳನ್ನು ನಾವು ಇಂದು ಹೆಚ್ಚಾಗಿ ನೋಡುತ್ತೆವೆ.

ಹೊಸ ಡಿಸೈನ್ ಗಳಲ್ಲಿ ಕಮರ್‍ಬಾಂದ್

[ಬದಲಾಯಿಸಿ]

ವೈಡ್, ಬ್ರೈಡಲ್, ಹುಕ್, ಟ್ರಾವೆಲ್ ಸ್ಟಡ್ಸ್, ಕ್ರಿಸ್ಟಲ್ಸ್, ಕುಂದನ್, ವೈಟ್-ಬ್ಲ್ಯಾಕ್ ಮೆಟಲ್, ಬಕ್ಕಲ್ ಡಿಸೈನ್‍ನ ಕಮರ್ ಬಾಂದ್‍ಗಳು ಹೊಸ ಟಚ್ ಪಡೆದು ಮತ್ತೆ ಮರಳಿದೆ. ಇಂದು ಸಿಗುತ್ತಿರುವಂತಹ ಕಮರ್‍ಬಾಂದ್‍ಗಳನ್ನು ಎಲ್ಲಾ ರೀತಿಯಾದಂತಹ ಡ್ರೆಸ್ಸ್‍ಗಳಿಗೆ ಹಾಕಬಹುದಾಗಿದೆ.[೨]

ಮಧುಮಗಳ ಸೀರೆಗೆ ತಕ್ಕಂತೆ ಇಂದು ಈ ಕಮರ್‍ಬಾಂದ್‍ಗಳು ಸಿಗುತ್ತಿವೆ. ಈ ಕಮರ್‍ಬಾಂದ್ ಗಳಿಂದ ಮದುಮಗಳ ಅಲಂಕಾರ ಮತ್ತಷ್ಟು ಹೆಚ್ಚಿದೆ.

ಮದುಮಗಳ ಅಂದಕ್ಕೆ ಇನ್ನಷ್ಟು ಮೆರಗು ನೀಡುವ ಚಪ್ಪಲಿಗಳು

[ಬದಲಾಯಿಸಿ]

ಮದುಮಗಳ ವಸ್ತ್ರಾಭರಣಕ್ಕೆ ತಕ್ಕಂತೆ ಚಪ್ಪಲಿಗಳನ್ನು ಆಯ್ಕೆ ಮಾಡುತ್ತಾರೆ. ಸೌಂದರ್ಯ ಪ್ರೀತಿಗೆ ಪೂರಕವಾಗಿ ನೂರಾರು ವಿನ್ಯಾಸಗಳ ಚಪ್ಪಲಿಗಳು ಇಂದು ಮದುಮಗಳ ಅಲಂಕಾರವನ್ನು ಹೆಚ್ಚಿಸಿದೆ. ಹಿಂದೆಲ್ಲಾ ಮ್ಯಾಚಿಂಗ್ ಮ್ಯಾಚಿಂಗ್ ಚಪ್ಪಲಿಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದರು. ಆದ್ರೆ ಇಂದು ಮದುಮಗಳ ಕಾಲಿಗೆ ಒಪ್ಪುವಂತಹ ಬ್ರೈಡಲ್ ಚಪ್ಪಲಿಗಳನ್ನೇ ಆರಿಸಿಕೊಳ್ಳುತ್ತಾರೆ.

ಇನ್ನೂ ಕೇಲವರು ವರ ಎತ್ತರವಿದ್ದರೆ ಅವನ ಭುಜದವರೆಗೆ ಕಾಣಿಸಿಕೊಳ್ಳಲು ಹೈಹೀಲ್ಡ್ ಚಪ್ಪಲಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರು ತಮಗೆ ಸರಿ ಹೊಂದುವಂತಹ ಚಪ್ಪಲಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂದು ಚಪ್ಪಲಿಗಳು ಪ್ರತಿಯೊಂದು ಬಣ್ಣದಲ್ಲಿಯೂ ಕೂಡ ಲಭ್ಯವಿದೆ. ಜೊತೆಗೆ ಕಾಲಿಗೆ ಅಂದವನ್ನು ಹೆಚ್ಚಿಸುವಂತಹ ಹೂವಿನ ಅಲಂಕಾರಿಕ ಚಪ್ಪಲಿಗಳು, ಬೋಟ್ ಶೂ, ಮುತ್ತುಗಳಿಂದ ಅಲಂಕಾರಗೊಂಡ ಚಪ್ಪಲಿಗಳು, ಹರಳು, ಮಣಿಗಳಿಂದ ಪೋಣಿಸಿದ ಚಪ್ಪಲಿಗಳು ಇಂದು ಮದುಮಗಳ ಕಾಲಿಗೆ ಅಂದವನ್ನು ಹೆಚ್ಚಿಸುತ್ತದೆ.[೩]

ಹೀಗೆ ಇಂದಿನ ಕಾಲಕ್ಕೆ ತಕ್ಕಂತೆ ಮದುಮಗಳ ಅಲಂಕಾರ ಇಂದು ಸಾಕಷ್ಟು ರೀತಿಯಲ್ಲಿ ಬದಲಾವಣೆಯಾಗಿದೆ. ಹೊಸ ವಿನ್ಯಾಸಗಳಿಗೆ ಮದುಮಗಳು ತೆರೆದುಕೊಳ್ಳುತ್ತಿದ್ದಾಳೆ.

ಎಲ್ಲರೊಳಗೊಂದಾಗು ಮಂಕುತಿಮ್ಮ

ಉಲ್ಲೇಖ

[ಬದಲಾಯಿಸಿ]
  1. http://stylesatlife.com/articles/south-indian-mangalsutra/
  2. https://www.bollywoodshaadis.com/articles/kamarbands-designs-6060
  3. https://www.google.co.in/search?q=fancy+sandals+for+wedding&sa=X&ved=0ahUKEwivneiJ1obaAhXLO48KHalHBUcQ1QII8wEoBQ&biw=1366&bih=677