ಮಥೆಯೊ ರಿಚ್ಚಿ
ಮಥೆಯೋ ರಿಚ್ಚಿಯವರು ಪೋರ್ಚುಗೀಸ್ ನಿಂದ ಚೀನಾಕ್ಕೆ ಬಂದು ಕೆಲಸ ಮಾಡಿದ ಒಬ್ಬ ಸಾಹಸಿ ವಿಜ್ಞಾನಿ. ಅವರು ಜೆಜ್ವಿತ್ ಮಿಶನರಿಯಾಗಿ ಚೀನಾಕ್ಕೆ ಬಂದರು. ರಿಚ್ಚಿಯವರು ಅಕ್ಟೋಬರ್ 6, 1552ರಲ್ಲಿ ಇಟಲಿ ದೇಶದ ಮ್ಯಾಕೆರಟಾದಲ್ಲಿ ಜನಿಸಿದರು.ತನ್ನ ಸ್ಥಳೀಯ ಪಟ್ಟಣದಲ್ಲಿ ಎರಡು ವರ್ಷಗಳ ಕಾಲ ಕಾನೂನು ಅಧ್ಯಯನ ಹಾಗೂ ಶಾಸ್ತ್ರೀಯ ಅಧ್ಯಯನಗಳನ್ನು ಮಾಡಿದರು. ಅವರು ಏಪ್ರಿಲ್ 1571 ರಲ್ಲಿ ರೋಮನ್ ಕಾಲೇಜಿನಲ್ಲಿ ಯೇಸು ಸಭೆಯನ್ನು ಪ್ರವೇಶಿಸಿದರು.ಅಲ್ಲಿರುವಾಗ ಫಿಲಾಸಫಿ ಹಾಗೂ ಥಿಯಾಲಜಿ ಜೊತೆಗೆ ಗಣಿತ, ವಿಶ್ವವಿಜ್ಞಾನ, ಮತ್ತು ಖಗೋಳವನ್ನೂ ಅಭ್ಯಸಿಸಿದರು. 1577 ರಲ್ಲಿ, ಅವರು ದೂರದ ಪೂರ್ವ ದೇಶದ ಒಂದು ಮಿಷನರಿ ದಂಡಯಾತ್ರೆಗೆ ಅರ್ಜಿ ಹಾಕಿದರು. ಮಾರ್ಚ್ 1578 ರಲ್ಲಿ,ಅವರು ಪೋರ್ಚುಗಲ್ಲಿನಿಂದ ಗೋವಾಕ್ಕೆ ಬಂದರು.ಅವರು ಒಂದು ಪೋರ್ಚುಗೀಸ್ ಕಾಲೋನಿಯಲ್ಲಿದ್ದರು.ಆನಂತರ, 1582 ಆಗಸ್ಟ್ ತಿಂಗಳಲ್ಲಿ ಚೀನಾದ ಮಕಾವು ಪ್ರವೇಶಿಸಿದರು. ಕೆಲವೇ ದಿನಗಳಲ್ಲಿ, ಬೀಜಿಂಗ್ ಗೆ ಸಮುದ್ರದ ದಾರಿಯಿಂದ ಪೋರ್ಚುಗೀಸ್ ವಹಿವಾಟು ನಡೆಸಲು ಆಗಮಿಸಿದರು. ಆ ಕಾಲದಲ್ಲಿ, ಚೀನಾ ಕ್ರಿಶ್ಚಿಯನ್ ಮಿಷನರಿ ಚಟುವಟಿಕೆಯು ಸಂಪೂರ್ಣವಾಗಿ ಸ್ಥಳೀಯ ಚೀನೀ ಜನರು,ಕೆಲವು ಕ್ರಿಶ್ಚಿಯನ್ ಧರ್ಮ ಪರಿವರ್ತನೆದಾರರು, ಮತ್ತು ಪೋರ್ಚುಗೀಸ್ ರೀತಿಯಲ್ಲಿ ವಾಸವಿದ್ದ ಮಕಾವು ಜನರಿಗೆ ಸೀಮಿತವಾಗಿತ್ತು. ಯಾವುದೇ ಕ್ರಿಶ್ಚಿಯನ್ ಮಿಷನರಿ ಅಲ್ಲಿ ಕೆಲಸ ಮಾಡಬೇಕಾಗಿದ್ದರೆ, ಚೀನೀ ಭಾಷೆ ಕಲಿತು ಮಾಡಬೇಕಾಗಿತ್ತು.ಮಕಾವುನಲ್ಲಿ ರಿಚ್ಚಿಯವರು ಚೀನೀ ಭಾಷೆ ಮತ್ತು ಕಸ್ಟಮ್ಸ್ ಅಧ್ಯಯನವನ್ನು ಅತೀ ಕಡಿಮೆ ಸಮಯದಲ್ಲಿ ಮುಗಿಸಿದರು.
ರಿಚ್ಚಿಯವರು, ಗಣಿತಜ್ಞ ಮತ್ತು ಭೂಪಟ ತಯಾರಕರಾಗಿದ್ದರು.ಜಪಾನೀಸ್ 1602 ನಕ್ಷೆಯ ಪ್ರತಿಯನ್ನು ಚೀನೀ ಅಕ್ಷರಕ್ಕೆ ಪರಿವರ್ತಿಸಿದರು.1583 ರಲ್ಲಿ, ಗವರ್ನರ್ ಆಹ್ವಾನದ ಮೇರೆಗೆ, ರಿಚ್ಚಿಯವರು ವಾಂಗ್ ಪ್ಯಾನ್ ನಲ್ಲಿ ನೆಲೆಸಿದರು.ಆದರೆ,ಹೊಸ ವೈಸ್ರಾಯ್ ರಿಚ್ಚಿಯವರನ್ನು ಹೊರಹಾಕಿದರು.ಇದು 1584 ರಲ್ಲಿ ವಿಶ್ವದ ಮೊದಲ ಯುರೋಪಿಯನ್ ಶೈಲಿಯ ಚೀನೀ ನಕ್ಷೆಯಾಯಿತು. ಇದನ್ನು ರಿಚ್ಚಿಯವರು ರಚಿಸಿದರು. ಅವರು ಆ ನಕ್ಷೆ ತಯಾರಿಸಲು, ಅಕ್ಕಿ ಹಾಗೂ ಕಾಗದವನ್ನು ಉಪಯೋಗಿಸಿದ್ದಾರೆ.ಯಾವುದೇ ಯುರೋಪಿಯನ್ ಭಾಷೆಯ ಮೊದಲು, ರಿಚ್ಚಿ ಹಾಗೂ ರುಗ್ಗೀರಿಯವರು,ಒಂದು ಪೋರ್ಚುಗೀಸ್ ಚೀನೀ ನಿಘಂಟನ್ನು ರಚಿಸಿದರು ಎಂದು ಭಾವಿಸಲಾಗಿದೆ. ಆಗಲೇ ಇದ್ದ ಚೀನೀ ಭಾಷೆಯನ್ನು ಚೆನ್ನಾಗಿ ಅಭ್ಯಸಿಸಿದರು. ಅವರು ಚೀನಾ ದೇಶಕ್ಕೆ ಗಣಿತ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಚೀನಾದ ಇತಿಹಾಸದಲ್ಲಿ ಮಥೆಯೋ ರಿಚ್ಚಿಯವರ ಹೆಸರು ಅಚ್ಚಳಿಯದೇ ಉಳಿದಿದೆ.