ಮಠರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Mathri.JPG

ಮಠರಿ (ರಾಜಸ್ಥಾನಿ: मठरी, ಹಿಂದಿ:मठी) ಒಂದು ರಾಜಸ್ಥಾನಿ ಲಘು ಆಹಾರವಾಗಿದೆ. ಇದು ಭಾರತದ ವಾಯವ್ಯ ಭಾಗದ ಒಂದು ಬಗೆಯ ಹಲ್ಲೆಹಲ್ಲೆಯಾದ ಬಿಸ್ಕತ್ತಾಗಿದೆ. ಒಂದು ಕಾಲದಲ್ಲಿ ಕೇವಲ ಆಯ್ದ ಸ್ಥಳಗಳಲ್ಲಿ ಲಭ್ಯವಿರುತ್ತಿದ್ದ ಮಠರಿ ಈಗ ಭಾರತದ ಬಹುತೇಕ ಎಲ್ಲ ಸಿಹಿಖಾದ್ಯದ ಅಂಗಡಿಗಳಲ್ಲಿ ಲಭ್ಯವಿದೆ. ಇದನ್ನು ಹಿಟ್ಟು, ನೀರು ಮತ್ತು ಐಚ್ಛಿಕವಾಗಿ ಅಜವಾನದ ಬೀಜಗಳಿಂದ ತಯಾರಿಸಲಾಗುತ್ತದೆ.

ಮಠರಿಯನ್ನು ಚಹಾದೊಂದಿಗೆ ಮಾವಿನಕಾಯಿ, ಮೆಣಸಿನಕಾಯಿ ಅಥವಾ ನಿಂಬೆಕಾಯಿ ಉಪ್ಪಿನಕಾಯಿಯ ಜೊತೆಗೆ ಬಡಿಸಲಾಗುತ್ತದೆ. ಇದನ್ನು ಮದುವೆಗಳು ಮತ್ತು ಪೂಜೆಗಳಲ್ಲಿ ಕೂಡ ಬಡಿಸಲಾಗುತ್ತದೆ. ಮಸಾಲಾ ಮಠರಿ ಮಠರಿಯ ಒಂದು ಬಗೆಯಾಗಿದ್ದು ಹೆಚ್ಚು ಗರಿಗರಿಯಾಗಿಸಲು ಇದರಲ್ಲಿ ಸಂಬಾರ ಪದಾರ್ಥಗಳನ್ನು ಸೇರಿಸಲಾಗಿರುತ್ತದೆ. ಮಠರಿ ವಿಭಿನ್ನ ರುಚಿಗಳಲ್ಲಿಯೂ ಲಭ್ಯವಿದೆ, ಉದಾಹರಣೆಗೆ ಮೆಂತೆ ಎಲೆಗಳು (ಮೇಥಿ), ಉಪ್ಪಿನಕಾಯಿ (ಅಚಾರಿ ಮಠರಿ), ಜೀರಿಗೆ (ಜೀರಾ) ಮತ್ತು ಮಸಾಲಾ.

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಮಠರಿ&oldid=1005191" ಇಂದ ಪಡೆಯಲ್ಪಟ್ಟಿದೆ