ಮಟಿಲ್ಡಾ ಬೆಥಮ್ ಎಡ್ವರ್ಡ್ಸ್
ಮಟಿಲ್ಡಾ ಬೆಥಮ್-ಎಡ್ವರ್ಡ್ಸ್ | |
---|---|
Born | ವೆಸ್ಟರ್‌ಫೀಲ್ಡ್, ಇಪ್ಸ್ವಿಚ್ | ೪ ಮಾರ್ಚ್ ೧೮೩೬
Died | ಜನವರಿ 4, 1919 ಹೇಸ್ಟಿಂಗ್ಸ್, ಸಸೆಕ್ಸ್ | (Aged 82)
Nationality | ಇಂಗ್ಲಿಷ್ |
Known for | ಕಾದಂಬರಿ, ಪ್ರವಾಸ ಕಥನ, ಫ್ರಾಂಕೋಫಿಲಿಯಾ |
ಮಟಿಲ್ಡಾ ಬೆಥಮ್ ಎಡ್ವರ್ಡ್ಸ್ ಅವರು ಆಂಗ್ಲ ಕಾದಂಬರಿಗಾರ್ತಿ, ಪ್ರವಾಸ ಕಥನ ಬರಹಗಾರ್ತಿ ಮತ್ತು ಖ್ಯಾತ ಕವಿಯತ್ರಿ. ಇವರು ಫ್ರಾನ್ಸ್‌ನ ಇತಿಹಾಸ, ಭಾಷೆ, ಸಂಸ್ಕೃತಿ ಸೇರಿದಂತೆ ಆ ದೇಶದ ಹಲವಾರು ವಿಷಯಗಳಲ್ಲಿ ಪರಿಣಿತರು. ಇವರು ಹಲವಾರು ಮಕ್ಕಳ ಪುಸ್ತಕಗಳನ್ನೂ ಕೂಡ ಬರೆದಿದ್ದಾರೆ.
ಜೀವನ ಚರಿತ್ರೆ
[ಬದಲಾಯಿಸಿ]ಇವರು ೪ ಮಾರ್ಚ್ ೧೮೩೬ ರಲ್ಲಿ ಇಪ್ಸ್ವಿಚ್‌ನ ವೆಸ್ಟರ್ ಫೀಲ್ಡ್ ನಲ್ಲಿ ಜನಿಸಿದರು. ಮಟಿಲ್ಡಾ ಬೆಥಮ್ ಎಡ್ವರ್ಡ್ಸ್ ಅವರು ಎಡ್ವರ್ಡ್ಸ್ ಮತ್ತು ಬರ್ಬರಾ ದಂಪತಿಗಳ ನಾಲ್ಕನೇ ಮಗಳು. ಇವರ ತಂದೆ ಇಪ್ಸ್ವಿಚ್‌ನ ವೆಸ್ಟರ್ ಫೀಲ್ಡ್ ನಲ್ಲಿ ಕೃಷಿಕರಾಗಿದ್ದರು. ಇವರು ಅಲ್ಲೇ ತಮ್ಮ ಬಾಲ್ಯವನ್ನು ಕಳೆದರು.[೧] ಇವರು ತಮ್ಮ ಹತ್ತನೇ ವಯಸ್ಸಿನವರೆಗೂ ತಮ್ಮಷ್ಟಕ್ಕೆ ತಾವೇ ಕಲಿಯ ತೊಡಗಿದರು. ನಂತರ ಇಪ್ಸ್ವಿಚ್ ನಲ್ಲಿ ಶಾಲೆಗೆ ಸೇರಿದರು. ಅಲ್ಲಿ ಶಿಕ್ಷಕರು, ತಮ್ಮ ಆಸಕ್ತಿಯನ್ನು ಕಂಡು ಟೀಕೆ ಮಾಡತೊಡಗಿದರು. ಆದರೂ ಇವರು ಬೇಸರಪಟ್ಟುಕೊಳ್ಳದೆ ಓದಿನಲ್ಲಿ ಮುಂದುವರೆಯ ತೊಡಗಿದರು.
ಇವರ ಮೊದಲ ಕಾದಂಬರಿ, 'ದ ವೈಟ್ ಹೌಸ್ ಬೈ ದ ಸಿ' (೧೮೫೭) ಅಲ್ಪಾವಧಿಯಲ್ಲೇ ಯಶಸ್ಸನ್ನು ಕಂಡು ಹಲವಾರು ಬಾರಿ ಮರುಮುದ್ರವಾಗಿದೆ. ಅಲ್ಲದೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ೪೦ ವರ್ಷಗಳ ಕಾಲ ಮುದ್ರಣಗೊಂಡಿದೆ.[೨] ಇವರು ವಿದೇಶಗಳಲ್ಲಿ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನು ಕಲಿತು ನಂತರ ತಮ್ಮ ಸೋದರಿಯ ಜೊತೆ ತಮ್ಮ ತಂದೆಯ ಜಮೀನನ್ನು ನೋಡಿಕೊಳ್ಳಲು ಸುಫ್ಫೋಲ್ಕ್‌ನಲ್ಲಿ ನೆಲೆಸಿದರು. ಈ ರೀತಿ ಗ್ರಾಮೀಣ ವೃತ್ತಿಯಲ್ಲಿ ತೊಡಗಿಕೊಂಡ ನಂತರ ಚಾರ್ಲ್ಸ್ ಡಿಕೆನ್ಸ್‌ನ ಸ್ನೇಹ ಬೆಳೆದು ಅವರ 'ಹೌಸ್ ಹೋಲ್ಡ್ ವರ್ಡ್ಸ್' ಎಂಬ ಪತ್ರಿಕೆಗೆ ತಮ್ಮ ಬರಹವನ್ನು ನೀಡಿದರು.
ತಮ್ಮ ಸಹೋದರಿಯ ಮರಣದ ನಂತರ, ಅವರು ಲಂಡನ್‌ಗೆ ತೆರಳಿದರು ಮತ್ತು ಫ್ರಾನ್ಸ್‌ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಪ್ರಾಂತೀಯ ಫ್ರೆಂಚ್ ಮನೆಗಳ ಬಗ್ಗೆ ಅವರ ನಿಕಟ ಜ್ಞಾನದಿಂದ, ಮಕ್ಕಳ ಪುಸ್ತಕಗಳು ಮತ್ತು ಫ್ರಾನ್ಸ್‌ನ ಬಗ್ಗೆ ಕಾಲ್ಪನಿಕವಲ್ಲದ ಪುಸ್ತಕಗಳ ಆಧಾರದ ಮೇಲೆ ಫ್ರೆಂಚ್ ಜೀವನದ ಹಲವಾರು ಕಾದಂಬರಿಗಳನ್ನು ಬರೆದರು. ಅವನ್ನು ಜಾರ್ಜ್ ಮತ್ತು ರಿಚರ್ಡ್ ಬೆಂಟ್ಲಿ ಪ್ರಕಟಿಸಿದರು.[೩] [೨] ಅವರು ಸ್ತ್ರೀವಾದಿ ಶಿಕ್ಷಣತಜ್ಞ ಬಾರ್ಬರಾ ಬೋಡಿಚನ್ ಅವರೊಂದಿಗೆ ಅಲ್ಜೀರಿಯಾದಲ್ಲಿ ಉಳಿದುಕೊಂಡರು ಮತ್ತು ಅವರೊಂದಿಗೆ ಫ್ರಾನ್ಸ್ ಮತ್ತು ಸ್ಪೇನ್‌ಗೆ ಭೇಟಿ ನೀಡಿದರು.
ಇವರು ಫ್ರಾನ್ಸ್ ಅನ್ನು ತಮ್ಮ ಎರಡನೇ ಸ್ಥಳೀಯ ಭೂಮಿ ಎಂದು ಪರಿಗಣಿಸಿದರು ಮತ್ತು ಈ ಎರಡು ದೇಶಗಳ ನಡುವೆ ಉತ್ತಮ ತಿಳುವಳಿಕೆ ಮತ್ತು ಸಹಾನುಭೂತಿಯನ್ನು ತರಲು ಪ್ರಯತ್ನಿಸಿದರು. ಈ ರೀತಿಯಾಗಿ, ಇಂಗ್ಲಿಷ್ ಮತ್ತು ಫ್ರೆಂಚ್ ಜನರ ನಡುವೆ ಉತ್ತಮ ಸಂಬಂಧ ಬೆಳೆಯಲು ಅವರು ಪ್ರೇರಣೆಯಾದರು. ಎರಡು ದೇಶಗಳ ನಡುವೆ ನಿಜವಾದ ಮತ್ತು ಶಾಶ್ವತವಾದ ಗೆಳೆತನವನ್ನು ಮೂಡಿಸುವ ಕಡೆಗೆ ಅವರ ಅವಿರತ ಪ್ರಯತ್ನಗಳನ್ನು ಗುರುತಿಸಿ ಫ್ರೆಂಚ್ ಸರ್ಕಾರವು ಅವರನ್ನು 'ಡೆ ಎಲ್'ಇನ್ಸ್ಟ್ರಕ್ಷನ್ ಪಬ್ಲಿಕ್ ಡೆ ಫ್ರಾನ್ಸ್' ಎಂದು ಗುರುತಿಸಿತು. ಫ್ರಾಂಕೋ-ಬ್ರಿಟಿಷ್ ಪ್ರದರ್ಶನದಲ್ಲಿ (೧೯೦೮) ಅವರಿಗೆ ಪದಕವನ್ನು ನೀಡಲಾಯಿತು.[೧]
ಬೆಥಮ್-ಎಡ್ವರ್ಡ್ಸ್ ಅವರನ್ನು ಹೆಚ್ಚಾಗಿ ಸಲಿಂಗಕಾಮದ ಕವನ ಸಂಕಲನಗಳಲ್ಲಿ ಉಲ್ಲೇಖಿಸಲಾಗಿದೆ. ಅವರು ೪ನೇ ಜನವರಿ ೧೯೧೯ರಲ್ಲಿ ಯುನೈಟೆಡ್ ಕಿಂಗ್ ಡಮ್‌ನ ಹ್ಯಾಸ್ಟಿಂಗ್ಸ್‌ನಲ್ಲಿ ಮರಣ ಹೊಂದಿದರು. ಪ್ರೊಫೆಸರ್ ಜೋನ್ ರೀಸ್ ಅವರು ೨೦೦೬ ರಲ್ಲಿ ಮಟಿಲ್ಡಾ ಬೆಥಮ್-ಎಡ್ವರ್ಡ್ಸ್ ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ.
ಸಾಹಿತ್ಯ ಕೊಡುಗೆಗಳು
[ಬದಲಾಯಿಸಿ]ಮಟಿಲ್ಡಾ ಬೆಥಮ್ ಎಡ್ವರ್ಡ್ಸ್ ಅವರು ತಮ್ಮ ಸೋದರಿಯ ಮರಣದ ನಂತರ ಇವರು ಲಂಡನ್ ಗೆ ತೆರಳಿದರು. ನಂತರ ಅಲ್ಲಿ, ಸಾಹಿತ್ಯ ಕ್ಷೇತ್ರದ ಹಲವಾರು ಪ್ರಮುಖರನ್ನು ಭೇಟಿಯಾದರು. ಅವರಲ್ಲಿ ಕೆಲವರೆಂದರೆ, ಹೆನ್ರಿ ಜೇಮ್ಸ್, ಫ್ರೆಡರಿಕ್ ಹ್ಯಾರಿಸನ್, ಕ್ಲೆಮೆಂಟ್ ಶೋರ್ಟರ್, ಕೋವೆಂಟ್ರಿ ಪ್ಯಾಟ್ ಮೋರ್, ಸಾರಾ ಗ್ರ್ಯಾಂಡ್ ಮತ್ತಿತರರು. ಅವರು ಬರೆದ 'ಕಿಟ್ಟಿ' ಎಂಬ ಕೃತಿಯನ್ನು ಲಾರ್ಡ್ ಬ್ರಟೋನ್ ಅವರು ಉತ್ತಮ ಕೃತಿಯೆಂದು ಹೊಗಳಿದ್ದಾರೆ. ಅಲ್ಲದೆ, ಫ್ರೆಡರಿಕ್ ಹ್ಯಾರಿಸನ್ ಅವರು 'ಕಿಟ್ಟಿ', 'ಡಾಕ್ಟರ್ ಜೇಕಬ್' ಮತ್ತು 'ಜಾನ್ ಅಂಡ್ ಐ' ಕೃತಿಗಳನ್ನು ಹೊಗಳಿದ್ದಾರೆ. ತಮ್ಮ ಫ್ರಾನ್ಸ್ ನ ಭೇಟಿ ಮತ್ತು ಜೀವನದ ಬಗ್ಗೆ ಹಲವಾರು ಕಾದಂಬರಿಗಳನ್ನು, ಮಕ್ಕಳ ಪುಸ್ತಕಗಳನ್ನು ಬರೆದಿದ್ದಾರೆ. ನಂತರ ಇವರು ಸ್ತ್ರೀವಾದಿಯಾದ ಬಾರ್ಬರ ಬೋಡಿಕೋನ್ ಜೊತೆ ಅಲ್ಗೇರಿಯಾದಲ್ಲಿ ನೆಲೆಸಿ ಫ್ರಾನ್ಸ್ ಮತ್ತು ಸ್ಪೇನ್ ಗೆ ಭೇಟಿ ನೀಡಿದರು.ಇವರು ತಮ್ಮ ೬೦ನೇ ವಯಸ್ಸಿನಲ್ಲಿ ಹಲವಾರು ವಾರಪತ್ರಿಕೆಗಳಿಗೆ ಲೇಖನಗಳು,ಸಣ್ಣ ಕಥೆಗಳು ,ಕಾದಂಬರಿಗಳು,ಕವಿತೆಗಳು,ಮಕ್ಕಳ ಪುಸ್ತಕಗಳು,ಪ್ರವಾಸ ಕಥನಗಳು ಮತ್ತು ಫ್ರಾನ್ಸ್‌ನ ಬಗ್ಗೆ ಬರೆಯುತ್ತಿದ್ದರು. ತಾವು ಬರೆದ ಕೃತಿಗಳಿಂದ ಜನರು ಅವರನ್ನು ಗುರುತಿಸುತ್ತಾರೆಂದು ಅವರು ನಂಬಿದ್ದರು. ಅಲ್ಲದೇ ಅವರಿಗೆ 'ಫೋರ್ ಸ್ಟಾಲ್ಡ್'(೧೮೮೦) ಮತ್ತು 'ಲವ್ ಅಂಡ್ ಮ್ಯಾರೇಜ್'(೧೮೮೪)ಕೃತಿಗಳು ಬಲು ಪ್ರಿಯವಾದವುಗಳಾಗಿದ್ದವು.
ಕೃತಿಗಳು
[ಬದಲಾಯಿಸಿ]೨.ಹಾಲಿಡೇಸ್ ಅಮಂಗ್ ದ ಮೌಂಟೈನ್ಸ್(೧೮೬೦)
೩.ಲಿಟಲ್ ಬಿರ್ಡ್ ರೆಡ್ ಅಂಡ್ ಲಿಟಲ್ ಬಿರ್ಡ್ ಬ್ಲೂ(೧೮೬೧)
೪.ಜಾನ್ ಅಂಡ್ ಐ(೧೮೬೨)
೫.ಡಾ.ಜೇಕಬ್(೧೮೬೪)
೬.ಎ ವಿಂಟರ್ ವಿಥ್ ದ ಸ್ವಲೋಸ್(೧೮೬೭)
೭.ಥ್ರೋ ಸ್ಪೈನ್ ಟು ದ ಸಹರಾ(೧೮೬೮)
೮.ಕಿಟ್ಟಿ(೧೮೬೯)
೯.ದ ಸೈಲ್ ಸ್ಟ್ರೆಸ್(೧೮೭೧)
೧೦.ಫೆಲಿಸಿಯಾ(೧೮೭೫)
೧೧.ಬ್ರಿಡ್ಜೆಡ್(೧೮೭೭)
೧೨.ಬ್ರದರ್ ಗ್ರೇಬಿಯಲ್(೧೮೭೮)
೧೩.ಸಿಕ್ಸ್ ಲೈಫ್ ಸ್ಟೋರಿಸ್ ಆಫ್ ಫೇಮಸ್ ವುಮೆನ್(೧೮೮೦)
೧೪.ಫೋರ್ ಸ್ಟಾಲ್ಡ್(೧೮೮೦)
೧೫.ಪರ್ಲಾ(೧೮೮೩)
೧೬.ಹಾಫ್ ವೇ(೧೮೮೬)
೧೭.ನೆಕ್ಸ್ಟ್ ಆಫ್ ಕಿನ್ ವಾಂಟೆಡ್(೧೮೮೭)
೧೮.ದ ಪಾರ್ಟಿಂಗ್ ಆಫ್ ದ ವೇಸ್(೧೮೮೮)
೧೯.ಫಾರ್ ಒನ್ ಅಂಡ್ ದ ವರ್ಲ್ಡ್(೧೮೮೯)
೨೦.ಎ ರೊಮ್ಯಾನ್ಸ್ ಆಫ್ ದ ವೈರ್(೧೮೯೧)
೨೧.ಎಡಿಶನ್ ಆಫ್ ಅರ್ತೂರ್ ಯಂಗ್ಸ್ ಟ್ರಾವೆಲ್ಸ್ ಇನ್ ಫ್ರಾನ್ಸ್(೧೮೯೨)
೨೨.ರೊಮ್ಯಾನ್ಸ್ ಆಫ್ ಎ ಫ್ರೆಂಚ್ ಪರ್ಸೊನೇಜ್(೧೮೯೨)
೨೩.ಫ್ರಾನ್ಸ್ ಆಫ್ ಟುಡೇ(೧೮೯೨)
೨೪.ದ ಕರ್ಬ್ ಆಫ್ ಹಾನರ್(೧೮೯೩)
೨೫.ಎ ರೊಮ್ಯಾನ್ಸ್ ಆಫ್ ಡಿಜೊನ್(೧೮೯೪)
೨೬.ದ ಗೋಲ್ಡನ್ ಬೀ ಅಂಡ್ ಅದರ್ ರೆಸಿಟೇಷನ್ಸ್(೧೮೯೫)
೨೭.ಆಟೋಬಯೋಗ್ರಫಿ ಆಫ್ ಅರ್ತೂರ್ ಯಂಗ್(೧೮೯೮)
೨೮.ದ ಲಾರ್ಡ್ ಆಫ್ ದ ಹಾರ್ವೆಸ್ಟ್(೧೮೯೯)
೨೯.ಆಂಗ್ಲೋ- ಫ್ರೆಂಚ್ ರೆಮಿನಿಸೆನ್ಸಸ್(೧೯೦೦)
೩೦.ಎ ಸುಫ್ಫೋಲ್ಕ್ ಕೋರ್ಟ್ ಶಿಪ್(೧೯೦೦)
೩೧.ಮೋಕ್ ಬೆಗ್ಗರ್ಸ್ ಹಾಲ್(೧೯೦೨)ಬರ್ಹಮ್ ಬ್ರೋಕ್ಲಿಬ್ಯಾಂಕ್(೧೯೦೩)
೩೨.ಎ ಹಂಬಲ್ ಲವರ್(೧೯೦೩)
೩೩.ಹೋಮ್ ಲೈಫ್ ಇನ್ ಫ್ರಾನ್ಸ್(೧೯೦೫)
೩೪.ಮಾರ್ತಾ ರೋಸ್(೧೯೦೬)
೩೫.ಪೋಯಮ್ಸ್ (೧೯೦೭)
೩೬.ಎ ಕ್ಲೋಸ್ ರಿಂಗ್(೧೯೦೭)
೩೭.ಲಿಟರರಿ ರ್ಯ್ಯಾಂಬಲ್ಸ್ ಇನ್ ಫ್ರಾನ್ಸ್(೧೯೦೭)
೩೮.ಫ್ರೆಂಡ್ಲಿ ಫೇಸಸ್ ಆಫ್ ತ್ರೀ ನ್ಯಾಷನಾಲಿಟಿಸ್(೧೯೧೧)
೩೯.ಇನ್ ಫ್ರೆಂಚ್ ಆಫ್ರಿಕಾ(೧೯೧೨)
೪೦.ಫಮ್ ಆನ್ ಇಸ್ಲಿಂಗ್ಟನ್ ವಿಂಡೋ(೧೯೧೪)
೪೧.ಹಾರ್ಟ್ಸ್ ಆಫ್ ಅಲ್ಸೇಸ್(೧೯೧೬)
೪೨.ಟ್ವೆಂಟಿಯತ್ ಸೆಂಚುರಿ ಫ್ರಾನ್ಸ್(೧೯೧೭)
೪೩.ಫ್ರೆಂಚ್ ಫೈಯರ್ ಸೈಡ್ ಪೊಯಟ್ರಿ(೧೯೧೯)
೪೪.ಮಿಡ್-ವಿಕ್ಟೋರಿಯನ್ ಮೆಮೋರೀಸ್(೧೯೧೯)ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Joan Thirsk, "Edwards, Matilda Barbara Betham (1836–1919)", Oxford Dictionary of National Biography, Oxford University Press, 2004 retrieved 4 April 2015
- ↑ ೨.೦ ೨.೧ The Feminist Companion to Literature in English, eds Virginia Blain, Patricia Clements and Isobel Grundy (London: Batsford, 1990), p. 90.
- ↑ Women in the Literary Marketplace http://rmc.library.cornell.edu/womenLit/getting_into_print/Betham_Edwards_L.htm