ವಿಷಯಕ್ಕೆ ಹೋಗು

ಮಕ್ಖನ್ ಮಲಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಕ್ಖನ್ ಮಲಾಯಿ ಅಥವಾ ಮಲಾಯಿ ಮಕ್ಖನ್ (ಮಲೈಯೊ ಅಥವಾ ನಿಮಿಶ್ ಎಂದೂ ಕರೆಯಲ್ಪಡುತ್ತದೆ) ಹಾಲಿನೆ ಕೆನೆಯಿಂದ ಚಳಿಗಾಲಗಳಲ್ಲಿ ತಯಾರಿಸಲಾದ ಸಿಹಿ ಲಘು ಆಹಾರವಾಗಿದೆ.[೧][೨][೩] ಈ ಡಿಜ಼ರ್ಟ್‌ನ್ನು ಉತ್ತರ ಪ್ರದೇಶದ ಅನೇಕ ಭಾಗಗಳಲ್ಲಿ ತಯಾರಿಸಲಾಗುತ್ತದೆ, ವಿಶೇಷವಾಗಿ ಕಾನ್ಪುರ್, ವಾರಾಣಸಿ ಮತ್ತು ಲಖ್ನೋ ನಗರಗಳಲ್ಲಿ.

ಈ ಸಿಹಿ ತಿನಿಸನ್ನು ತಯಾರಿಸಲು ಎಂಟು ಗಂಟೆಗಳು ಹಿಡಿಯುತ್ತದೆ. ತಯಾರಿಕೆಯು ಒಂದು ದಿನ ಮೊದಲು ಶುರುವಾಗುತ್ತದೆ. ಮೊದಲು ಹಸುವಿನ ಹಾಲನ್ನು ದೊಡ್ಡ ಕಡಾಯಿಯಲ್ಲಿ ಕುದಿಸಲಾಗುತ್ತದೆ. ನಂತರ ತಾಜಾ ಕೆನೆಯನ್ನು ಸೇರಿಸಿ ಹಾಲನ್ನು ಮತ್ತೊಮ್ಮೆ ಕುದಿಸಲಾಗುತ್ತದೆ ಮತ್ತು ಆಕಾಶದ ಕೆಳಗೆ ತಣ್ಣಗಾಗಲು ಬಿಡಲಾಗುತ್ತದೆ. ಬಹುಶಃ ಇದು ಅತ್ಯಂತ ಮುಖ್ಯವಾದ ಹಂತವಾಗಿದೆ. ಹಾಲನ್ನು ಇಬ್ಬನಿಗೆ ಒಡ್ಡಲಾಗುತ್ತದೆ ಮತ್ತು ಹೊರಗೆ ನಾಲ್ಕರಿಂದ ಐದು ಗಂಟೆಗಳವರೆಗೆ ಇರುತ್ತದೆ. ಇದು ಬೇಸಿಗೆಯಲ್ಲಿ ಇದನ್ನು ತಯಾರಿಸಲು ಬರದಿರುವ ಏಕೈಕ ಕಾರಣವಾಗಿದೆ. ಮುಂದೆ, ಇಬ್ಬನಿಗೆ ಒಡ್ಡಿದ ಹಾಲನ್ನು ಬೆಳಿಗ್ಗೆ ಮೂರು ಗಂಟೆಗಳವರೆಗೆ ಕಡೆಯಲಾಗುತ್ತದೆ. ಇದಕ್ಕೆ ಅಂತಿಮ ರುಚಿ ಹಾಗೂ ಪರಿಮಳವನ್ನು ನೀಡಲು ಪುಡಿ ಸಕ್ಕರೆ, ಹಳದಿ ವಣ್ಣ, ಮತ್ತು ಏಲಕ್ಕಿ ಪುಡಿಯನ್ನು ಸೇರಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "THE LIGHTEST INDIAN DESSERT...MAKHAN MALAI". The Times of India. 15 Mar 2011. Archived from the original on 16 February 2013. Retrieved 2013-01-24.
  2. Tripathi, Vaishali (2016). Indian desi tadka (in ಇಂಗ್ಲಿಷ್). Onlinegatha. p. 66. ISBN 978-93-85818-00-4.
  3. Malai Makhan: Lucknow Trip Advisor.