ಮಂತರ್ ಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಮಂತರ್ ಗೌಡ
ವೈಯಕ್ತಿಕ ಮಾಹಿತಿ
ಜನನ ಕರ್ನಾಟಕ ಹಾಸನ
ರಾಜಕೀಯ ಪಕ್ಷ ಕಾಂಗ್ರೆಸ್
ಸಂಗಾತಿ(ಗಳು) ದಿವ್ಯಾ

ಡಾ. ಮಂತರ್ ಗೌಡ ಮಡಿಕೇರಿಯ ವಿಧಾನಸಭಾ ಕ್ಷೇತ್ರದ ಶಾಸಕ. ವೃತ್ತಿಯಲ್ಲಿ ರೇಡಿಯೋಲಜಿಸ್ಟ್.[೧]

ವೈಯಕ್ತಿಕ ಜೀವನ[ಬದಲಾಯಿಸಿ]

ಮಂತರ್ ಗೌಡ ಅವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವರು. ಇವರು ಮಾಜಿ ಸಚಿವ ಎ ಮಂಜು ಅವರ ಪುತ್ರ. ರೇಡಿಯೋಲಜಿ ವಿಷಯದಲ್ಲಿ ಎಂ.ಡಿ ಪದವಿ ಪಡೆದಿದ್ದಾರೆ. ಮಂತರ್ ಅವರ ಪತ್ನಿ ಮಾಡೆಯಂಡ ನರೇಂದ್ರ (ನರೇನ್) ಮತ್ತು ಕರ್ನಾಟಕ ಎಸ್‌ಎಸ್‌ಎಲ್‌ಸಿ ಮಂಡಳಿಯ ನಿವೃತ್ತ ನಿರ್ದೇಶಕಿ ಯಶೋದಾ ಬೋಪಣ್ಣ ಅವರ ಪುತ್ರಿ ದಿವ್ಯಾ.

ರಾಜಕೀಯ ಜೀವನ[ಬದಲಾಯಿಸಿ]

2021ರಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕೊಡಗಿನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಮಂತರ್ ಸ್ಪರ್ಧಿಸಿದ್ದರು. ಕೇವಲ 100 ಮತಗಳ ಅಂತರದಿಂದ ಸೋತಿದ್ದರು. ಕಾಂಗ್ರೆಸ್ ನಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಹಾಸನ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.

ಉಲ್ಲೇಖ[ಬದಲಾಯಿಸಿ]

  1. "CONGRESS CANDIDATE DR MANTAR GOWDA IS 'SON-IN-LAW' OF KODAGU". Coorg News. 14 April 2023. Retrieved 8 June 2023.