ಮಂಜೊಟ್ಟಿ ಕಾಯಿ
ಗೋಚರ


ಮಂಜೊಟ್ಟಿಯ ಮರದ ಕಾಯಿಗೆ ಮಂಜೊಟ್ಟಿ ಕಾಯಿ ಎನ್ನುತ್ತಾರೆ. ಮಂಜೊಟ್ಟಿ ಮರವು ಬೇಗ ಬೆಳೆಯುತ್ತದೆ. ಅದರಲ್ಲಿ ಆಗುವ ಕೋಡಿನ ಒಳಗಿನ ಬೀಜಗಳು ಬಹಳ ವಿಶೇಷ. ಮರದಲ್ಲಿ ಕೋಡು ಬೆಳೆದು ಒಡೆಯುವಾಗ ಬೀಜಗಳು ನೆಲಕ್ಕೆ ಬಿದ್ದು ಸಿಗುತ್ತದೆ.ಅದನ್ನು ಚೆನ್ನೆಮಣೆಯಲ್ಲಿ ಆಡಲು ಉಪಯೋಗಿಸುವ ಕಾರಣ ಚೆನ್ನೆಕಾಯಿ ಎಂದು ಹೆಸರು ಬಂದಿದೆ.
ಮಂಜೊಟ್ಟಿಕಾಯಿಯ ಬೇರೆ ಬೇರೆ ಹೆಸರು
[ಬದಲಾಯಿಸಿ]- ಕನ್ನಡ-ಚೆನ್ನೆಕಾಯಿ,ದೊಡ್ಡ ಗುಲಗುಂಜಿ
- ಇಂಗ್ಲೀಷ್-ರೆಡ್ಡ್ ಲಕ್ಕಿ ಸೀಡ್ಸ್
- ಮಲಯಾಳಂ - ಮಂಜಾಡಿ
- ತುಳು-ಮಂಜಟ್ಟಿಕಾಯಿ, ಮಂಜೊಟ್ಟಿ ಕಾಯಿ
ಪರಿಚಯ
[ಬದಲಾಯಿಸಿ]ಮಂಜಟ್ಟಿ ಕಾಯಿಯ ಕೋಡು ಬೆಳೆದು ಒಣಗಿ ಒಡೆದಾಗ ಒಳಗೆ ಕೆಂಪಾದ ಕಾಯಿಯು ಸಿಗುತ್ತದೆ.ಈ ಕೆಂಪಾದ ಕಾಯಿಯು ಉರುಟಾಗಿ ಮದ್ಯಭಾಗದಲ್ಲಿ ಉಬ್ಬಿಕೊಂಡಿರುತ್ತದೆ.ಈ ಕಾಯಿಗಳು ವಿಷಪೂರಿತವಾಗಿದ್ದು ನೇರವಾಗಿ ಆಹಾರದಲ್ಲಿ ಬಳಸುವಂತಿಲ್ಲ.ಇದನ್ನು ಜಾಸ್ತಿಯಾಗಿ ಚೆನ್ನೆಮಣೆ ಆಡಲು ಉಪಯೋಗಿಸುತ್ತಾರೆ.
ನಂಬಿಕೆ
[ಬದಲಾಯಿಸಿ]ಸಣ್ಣ ಮಕ್ಕಳು ಬಹಳ ಹಠವಾದಿ ಸ್ವಭಾವದವರಾಗಿದ್ದರೆ ಅವರನ್ನು ಗುರುವಾಯೂರು ದೇವಸ್ಥಾನದ ದ್ವಾರದ ಮುಂಭಾಗದಲ್ಲಿ ಇಟ್ಟಿರುವ ಮಂಜಟ್ಟಿ ಕಾಯಿಗಳಲ್ಲಿ ಆಟ ಆಡಿಸಿದರೆ ಅವರ ಹಠ ಸ್ವಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.ಈ ಸೇವೆಯು ಇಂದಿಗೂ ದೇವರಿಗೆ ಒಂದು ಹರಕೆಯ ರೂಪದಲ್ಲಿ ಸಲ್ಲಿಸುತ್ತಾರೆ.
ಉಪಯೋಗಗಳು
[ಬದಲಾಯಿಸಿ]- ಈ ಕಾಯಿಗಳು ಬಹಳ ಕೆಂಪಾಗಿ ಆಕರ್ಷಣೀಯವಾಗಿರುವುದರಿಂದ ಕರಕುಶಲ ವಸ್ತುಗಳ ತಯಾರಿಯಲ್ಲಿ ಹಾಗೂ ಅಲಂಕಾರಿಕ ವಸ್ತುಗಳಲ್ಲಿಯು ಉಪಯೋಗಿಸುತ್ತಾರೆ
ಉಲ್ಲೇಖಗಳು
[ಬದಲಾಯಿಸಿ]