ವಿಷಯಕ್ಕೆ ಹೋಗು

ಮಂಗಳೂರು ಕನ್ನಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಗಳೂರು ಕನ್ನಡವು ಕರ್ನಾಟಕದ ಮೂರು ಪ್ರಾದೇಶಿಕ ಪ್ರಭೇದಗಳಲ್ಲಿ ಒಂದಾಗಿದೆ, ಇದು ಭಾರತದ ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗಿದೆ. ಇದನ್ನು "ಕರಾವಳಿ ಉಪಭಾಷೆ" ಎಂದು ಸಹ ಕರೆಯಲಾಗುತ್ತದೆ. ಕನ್ನಡದ ಇತರ ಪ್ರಾದೇಶಿಕ ವಿಧಗಳು ಬೆಂಗಳೂರು / ಮೈಸೂರು ಕನ್ನಡ ಮತ್ತು ಧಾರವಾಡ ಕನ್ನಡ (ಉತ್ತರ ಉಪಭಾಷೆ). ಮಂಗಳೂರಿನ ಕನ್ನಡವು ಪ್ರಾಥಮಿಕ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಐತಿಹಾಸಿಕ ಮತ್ತು ಪೌರಾಣಿಕ ಕನ್ನಡ ಚಲನಚಿತ್ರಗಳು ಮತ್ತು ನಾಟಕಗಳು ಮಂಗಳೂರು ಕನ್ನಡವನ್ನು ಬಳಸುತ್ತವೆ. ಇದು ಕೇಳುಗರಿಗೆ ಬಹಳ ಔಪಚಾರಿಕ ಮತ್ತು ಗೌರವಾನ್ವಿತವಾದದ್ದು. ಈ ಕನ್ನಡ ನಾವು ಬರೆಯುವ ಕನ್ನಡಕ್ಕೆ ಹತ್ತಿರವಾಗಿದೆ. ಅಂದರೆ ಹೆಚ್ಚು ಶಿಷ್ಟ / ಗ್ರಾಂಥಿಕ. ಮಂಗಳೂರು ಕಡೆಯವರ ಮನೆಯ ಭಾಷೆ ಕನ್ನಡವಲ್ಲ - ಅದು ತುಳು ಅಥವಾ ಕೊಂಕಣಿ. ಹಾಗಾಗಿ ಆ ಕನ್ನಡ ’ಕನ್ನಡಿಗರಲ್ಲದವರು” ಮಾತಾಡುವ ಕನ್ನಡ- ಅದಕ್ಕೇ ಅದು ಬರಹದ ಕನ್ನಡಕ್ಕೆ ಹತ್ತಿರವಾಗಿದೆ. ಮಂಗಳೂರು ಕನ್ನಡದಲ್ಲಿ ಬೇರೆಡೆ ಕಾಣಸಿಗದ ಕೆಲವು ವಿಶಿಷ್ಟ ಪ್ರಯೋಗಗಳು ಇವೆ.[]

ಪದಗಳು

[ಬದಲಾಯಿಸಿ]
  1. ಅವನು ಇವತ್ತು ನಮ್ಮ ಮನೆಯಲ್ಲಿ ನಿಲ್ಲುತ್ತಾನೆ. (ಇರುತ್ತಾನೆ ಎಂಬರ್ಥದಲ್ಲಿ)
  2. ಬೇಗ ಮಂಗಳೂರಿಗೆ ಎತ್ತಬೇಕು.(ತಲುಪಬೇಕು)
  3. ಮಗು ತುಂಬಾ ಕೂಗುತ್ತಿದೆ (ಅಳುತ್ತಿದೆ)
  4. ನಿಮ್ಮದು ಟೀ ಆಯ್ತಾ? (ಸಾಮಾನ್ಯವಾಗಿ ಬೆಳಗಿನ ತಿಂಡಿ)
  5. ಟೈಮ್ ೧೦ ಗಂಟೆ ಆಯ್ತು. ಇವತ್ತು ಕ್ಲಾಸ್ ಇತ್ತಾ? (ಇದೆಯಾ?)[]

ಉಲ್ಲೇಖಗಳು

[ಬದಲಾಯಿಸಿ]
  1. Concise Encyclopedia of Languages of the World, by Keith Brown, Sarah Ogilvie, page 577
  2. "ಆರ್ಕೈವ್ ನಕಲು". Archived from the original on 2009-11-07. Retrieved 2018-11-24.