ಭೀಷ್ಮಕ್‍ನಗರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಸ್ತುಸಂಗ್ರಹಾಲಯದ ಇತಿಹಾಸದ ಫಲಕ

ಭೀಷ್ಮಕ್‍ನಗರ್ ಭಾರತದ ಅರುಣಾಚಲ ಪ್ರದೇಶ ರಾಜ್ಯದಲ್ಲಿರುವ ಒಂದು ಪುರಾತತ್ವ ಸ್ಥಳ. ಈ ಅವಶೇಷಗಳು ಸಾಮಾನ್ಯವಾಗಿ ಕ್ರಿ.ಶ. 11 ರಿಂದ 16 ನೇ ಶತಮಾನದವರೆಗೆ ಸಾದಿಯಾ ಪ್ರದೇಶವನ್ನು ಆಳಿದ ಬೋಡೋ-ಕಚಾರಿ (ಟಿಬೆಟೊ-ಬರ್ಮೀಸ್) ಜನಾಂಗೀಯ ಗುಂಪಾದ ಚೂಟಿಯಾಗಳ ಆಡಳಿತ ಕಾಲದ್ದೆಂದು ಹೇಳಲಾಗಿದೆ.[೧]

ಇತಿಹಾಸ[ಬದಲಾಯಿಸಿ]

ಭೀಸ್ಮಕ್‍ನಗರವನ್ನು ಚೂಟಿಯಾ ಸಾಮ್ರಾಜ್ಯದ ರಾಜಕೀಯ ಕೇಂದ್ರವಾದ ಸಾಧಯಪುರಿ (ಅಥವಾ ಸ್ವಾಧಯಪುರಿ) ಯೊಂದಿಗೆ ಗುರುತಿಸಲಾಗಿದೆ.[೨] ಇಟ್ಟಿಗೆಗಳ ಮೇಲಿನ ಶಾಸನದ ಆಧಾರದ ಮೇಲೆ, ಇದು ಹದಿನೈದನೆಯ ಶತಮಾನದ ಚುಟಿಯಾ ರಾಜ ಲಕ್ಷ್ಮೀನಾರಾಯಣನ ರಾಜಧಾನಿ ಎಂದು ಊಹಿಸಲಾಗಿದೆ. ಶಾಸನದ ಬರಿಗೆಯರಿಮೆ ವಿಶ್ಲೇಷಣೆಯು ಈ ಕಾಲನಿರ್ಧಾರವನ್ನು ಬೆಂಬಲಿಸುತ್ತದೆ.

ವಾಸ್ತುಕಲೆ[ಬದಲಾಯಿಸಿ]

ಅದರ ರಕ್ಷಣಾರಚನೆ ಮತ್ತು ಕಟ್ಟಡಗಳೊಂದಿಗೆ ಕೋಟೆಯನ್ನು ಬೆಂಕಿಯಲ್ಲಿ ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಕೋಟೆನಗರವು 10 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ. ಗೋಡೆಯು 4.5 ಮೀಟರ್ ಎತ್ತರ ಮತ್ತು 6 ಮೀಟರ್ ಅಗಲವನ್ನು ಹೊಂದಿದೆ. ಇದನ್ನು ಗ್ರಾನೈಟ್ ಕಲ್ಲಿನಿಂದ[೩][೪][೫] ಮತ್ತು ಪೂರ್ವ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಇಟ್ಟಿಗೆಗಳನ್ನು ಬಳಸಿ ಮಾಡಲಾಗಿದೆ. ಉತ್ತರದಲ್ಲಿ, ಮಿಶ್ಮಿ ಬೆಟ್ಟಗಳು ನೈಸರ್ಗಿಕ ತಡೆಗೋಡೆಯನ್ನು ಒದಗಿಸಿದವು. ಅರುಣಾಚಲ ಸರ್ಕಾರವು ಅತ್ಯಂತ ಕಡಿಮೆ ಉತ್ಖನನವನ್ನು ನಡೆಸಿದ್ದರೂ, ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಮೂರು ಟ್ಯಾಂಕ್‌ಗಳು ಮತ್ತು ಎರಡು ಗೇಟ್‌ಗಳನ್ನು ಪ್ರಾಥಮಿಕ ಉತ್ಖನನಗಳು ಬಹಿರಂಗಪಡಿಸಿವೆ.[೬]

ಚಿತ್ರಸಂಪುಟ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

  1. http://asiguwahaticircle.gov.in/bhismaknagar.html Remains at Bhismaknagar (ASI official website), "The remains are generally ascribe to he rule of the 'Chutias', a Tibeto-Burmese tribe who ruled over the region of Sadiya from 11th to 16th Century CE."
  2. Momin, Mawlong & Qādrī 2006.
  3. Gait, Edward. A history of Assam(2nd Edition). 1962, p. 16.
  4. Tada 2011.
  5. Chattopadhyay 1984.
  6. A. Raikar 1980.

ಉಲ್ಲೇಖಗಳು[ಬದಲಾಯಿಸಿ]

 

  • Shin, Jae-Eun (2020). "Descending from demons, ascending to kshatriyas: Genealogical claims and political process in pre-modern Northeast India, The Chutiyas and the Dimasas". The Indian Economic and Social History Review. 57 (1): 49–75. doi:10.1177/0019464619894134. S2CID 213213265.
  • Tada, Tage; Dutta, J. C.; Deori, Nabajit (2012). Archaeological Heritage of Arunachal Pradesh. Government of Arunachal Pradesh, Department of Cultural Affairs, Directorate of Research.
  • Momin, Mignonette; Mawlong, Cecile A.; Qādrī, Fuz̤ail Aḥmad (2006). Society and Economy in North-East India (in ಇಂಗ್ಲಿಷ್). Regency Publications. ISBN 9788189233402.
  • Tada, Tage (2011). Archaeological remains of Arunachal Pradesh up to 16th century (Ph.D.). Rajiv Gandhi University. hdl:10603/288770.
  • A. Raikar, Yashavant (1980). Archaeology in Arunachal Pradesh. Directorate of Research, Govt. of Arunachal Pradesh.
  • Chattopadhyay, Subid (1984). History and archaeology of Arunachal Pradesh (Ph.D.). University of Calcutta. hdl:10603/159414.
  • C. Allen, B (1928). Assam district gazetteers. Vol. XI. Baptist Mission Press.