ವಿಷಯಕ್ಕೆ ಹೋಗು

ಭೀಮಕಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಎಸ್.ಎಲ್. ಭೈರಪ್ಪನವರ ಮೊದಲನೆಯ ಕೃತಿ.ಇದು 1952 ರಲ್ಲಿ ಪ್ರಕಟವಾಯಿತು.ಈ ಪುಸ್ತಕವು ಒಬ್ಬ ಕುಸ್ತಿಪಟು ಮತ್ತು ಅವನ ಜೀವನದ ಬಗೆಗಿನ ಕಥೆಯನ್ನು ಹೊಂದಿದೆ. ಪ್ರಸಿದ್ದ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರು ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ’ಭೀಮಕಾಯ’ ಕಾದಂಬರಿಯನ್ನು ಬರೆದಿದ್ದಾರೆ. ಹೆಸರೇ ಹೇಳುವಂತೆ ಕಾದಂಬರಿಯಿರುವುದು ಒಬ್ಬ ಕುಸ್ತಿಪಟುವಿನ ಜೀವನದ ಬಗ್ಗೆ. ಕುಸ್ತಿಪಟುವಿನ ಜೀವನಕ್ರಮ, ಅವರ ಅಭ್ಯಾಸಗಳು, ಸಾಧನೆಗಳು, ಅದಕ್ಕಾಗಿ ಅವರು ಪಡುವ ಶ್ರಮ, ಅವರಿಗಿರಬೇಕಾದ ಏಕಾಗ್ರತೆ, ಅವರ ಸಹಪಟುಗಳು ಅವರನ್ನು ನೋಡುವ ರೀತಿ, ಕೊಡುವ ಪ್ರೋತ್ಸಾಹ, ಕುಸ್ತಿಪಟುವಿನ ಆಹಾರಕ್ರಮ, ಮನೋದಾರ್ಢ್ಯತೆ, ಗುರುವಿನ ಬಗೆಗಿನ ಅಗಾಧವಾದ ಭಕ್ತಿ, ಕಿರಿಯಪಟುಗಳ ಬಗೆಗಿನ ಪ್ರೀತಿ, ಪೈಲ್ವಾನನ ಗರಡುಮನೆಯ ಜೀವನ, ವೈಯಕ್ತಿಕ ಜೀವನಕ್ರಮ, ಎದುರಿಸಬೇಕಾದ ಸವಾಲುಗಳು, ಸೋಲುಗಳು, ಗೆಲುವುಗಳು ಇವೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.

ಗರಡಿ ಮನೆ, ಕುಸ್ತಿ, ಜಟ್ಟಿ, ಅಖಾಡ ಎನ್ನುವ ದೈಹಿಕ ಮತ್ತು ಅಂಗ ಸಾಧನೆಗೆ ಸಂಬಂಧಿಸಿದ ವಾತಾವರಣದಲ್ಲಿ ನವಿರಾದ ಮತ್ತು ಅಷ್ಟೇ ಅಸಹಜವಾದ ಪ್ರೇಮಕಥೆಯೊಂದನ್ನು ಹೆಣೆಯಲಾಗಿದೆ.

ಕುಸ್ತಿಪಟುಗಳ ಬದುಕು ರೋಮಾಂಚಕಾರಿಯಾದಷ್ಟೇ ಗಂಡಾಂತರಪೂರ್ಣವೂ ಆಗಿದೆ. ಕುಸ್ತಿಪಟುವಿಗೆ ದೊರೆಯುವ ಮಾನಸಮ್ಮಾನದ ಹಿಂದೆ ಎಂತಹ ಸಂಯಮ ಬೇಕು ಎನ್ನುವುದು ಯಾರೂ ಅರಿಯರು. ಕುಸ್ತಿಕಣದ ನಿಕಟ ಸಂಪರ್ಕವಿರಿಸಿಕೊಂಡ ಈ ಕಾದಂಬರಿಕಾರರು ಕುಸ್ತಿಪಟುಗಳ ಜೀವನವನ್ನು ಸೌಹಾರ್ದತೆಯಿಂದ ಕಂಡುದೇ ಈ ಕಾದಂಬರಿಯಲ್ಲಿ ವಾಸ್ತವಿಕವಾಗಿದೆ; ಕಾಲತ್ಮಕವಾಗಿದೆ.


"https://kn.wikipedia.org/w/index.php?title=ಭೀಮಕಾಯ&oldid=1232039" ಇಂದ ಪಡೆಯಲ್ಪಟ್ಟಿದೆ