ಭಿಕಾ ಬೆಹ್ರಾಮ್ ವೆಲ್, ಕೋಟೆ, ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಂಬಯಿಮಹಾನಗರದ ಕೋಟೆ ಪ್ರದೇಶದಲ್ಲಿರುವ ಭಿಕಾ ಬೆಹ್ರಾಮ್ ಭಾವಿ [೧] ಒಂದು ಅಂತಹ ಈಗ ಗ್ರೇಡ್ ೧ ಹೆರಿಟೇಜ್ ಕಟ್ಟಡವೆಂದು ಪರಿಗಣಿಸಲ್ಪಟ್ಟಿದೆ.[೨] ಈ ಭಾವಿಯನ್ನು ನಿರ್ಮಿಸಿದ ಖ್ಯಾತಿ, ಭಿಕಾ ಬೆಹ್ರಾಮ್ ಜೀ ಯೆಂಬ ಹೆಸರಿನ ಗುಜರಾತ್ ರಾಜ್ಯದಿಂದ ಭಾರೂಚ್ ಬಂದು ನೆಲೆಸಿದ ಪ್ರಮುಖ ಪಾರ್ಸಿ ಮತಸ್ಥನಿಗೆ ಸಲ್ಲುತ್ತದೆ. ಭಾರತದಲ್ಲಿ ಪಾರ್ಸಿ ಧರ್ಮೀಯರು ಬಹಳ ಕಡಿಮೆಜನರಿದ್ದರೂ, ಅವರ ಧಾರ್ಮಿಕ ವಿಧಿ ವಿಧಾನಗಳು ಎಲ್ಲರನ್ನೂ ರಂಜಿಸುತ್ತವೆ. ತಮ್ಮ ನಿಷ್ಠೆ, ಸಹಾಯಮಾಡುವ ಸ್ವಭಾವ, ಮತ್ತು ಪ್ರಾಮಾಣಿಕತೆ, ಹಾಗೂ ಎಲ್ಲ ಜನರೊಡನೆ ಸೌಹಾರ್ದಯುತ ಬೆರೆಯುವಿಕೆಗಳಿಂದ ಎಲ್ಲರಿಗೂ ಪ್ರಿಯರಾಗಿದ್ದಾರೆ. ಭಾರತದ ಬಹುಪಾಲು ಪಾರ್ಸಿಕರು, ಬೊಂಬಾಯಿನಗರದಲ್ಲಿ ವಾಸಿಸುತ್ತಿದ್ದಾರೆ. ಬೇಸಿಗೆಕಾಲದಲ್ಲಿ ಕೋಟೆ ವಲಯಕ್ಕೆ ಬರುವ ಪರ್ಯಟಕರಿಗೆ ಅಲ್ಲಿನ ದೊಡ್ಡ ಮೈದಾನವನ್ನು ಕಾಲ್ನಡಿಗೆಯಲ್ಲಿ ಮುಂದುವರೆಸಿದ ಬಳಿಕ, ಮುಂಬಯಿ ಹೈಕೋರ್ಟ್ ಪ್ರದೇಶಕ್ಕೆ ಬಂದರೆ, ಈ ಪವಿತ್ರಭಾವಿ ಕಾಣಿಸುತ್ತದೆ.

ಕಡಲಿನ ಬಳಿ ಸಿಹಿನೀರು ಬಾವಿ[ಬದಲಾಯಿಸಿ]

ಸನ್, ೧೭೨೫ ರಲ್ಲಿ ಭಿಕಾ ಬೆಹ್ರಾಮ್' ಬಾವಿತೋಡಿಸಿದಾಗ ಒಳ್ಳೆಯ ಸಿಹಿನೀರು ಬಂದಿತು. ಅರಬ್ಬೀ ಸಮುದ್ರದ ತೀರದಿಂದ ನಗರದ ಒಳಗೆ ಬರುವ ರಸ್ತೆಯಲ್ಲಿ ಹಳ್ಳ-ಕೊಳ್ಳಗಳೇ ಹೆಚ್ಚಾಗಿದ್ದು, ಬಯಲಿನಲ್ಲಿ ಬಿಸಿಲಿನಬೇಗೆಯಲ್ಲಿ ಪರಿತಪಿಸುವಾಗ, ಅಲ್ಲೆಲ್ಲೂ ಕುಡಿಯಲು ಸಿಹಿನೀರು ಸಿಗುತ್ತಿರಲಿಲ್ಲ. ಆ ಸಮಯದಲ್ಲಿ, ಒಮ್ಮೆ 'ಬೆಹ್ರಾಮ್' ಈ ಕಡೆಯಿಂದ ಸಾಗುತ್ತಿದ್ದಾಗ, ಆತನೂ ಇದೇ ಭವಣೆಯನ್ನು ಅನುಭವಿಸಿ, ಒಂದು ಬಾವಿಯನ್ನು ಕಟ್ಟಿಸಿದನು. ಈ ಬಾವಿ 'ಕ್ರಾಸ್ ಮೈದಾನ'ದ ದಕ್ಷಿಣದ ಕೊನೆಯಲ್ಲಿದ್ದು. ಸೆಂಟ್ರೆಲ್ ಟೆಲಿಗ್ರಾಫ್ ಆಫೀಸ್ ನ ಹತ್ತಿರವಿದೆ. ಆ ನಂತರ ಕೆಲವು ಗಣ್ಯರು, ೧೯೫೦ ರಲ್ಲಿ ಈ ಬಾವಿಯ ಒಳಭಾಗ ಹೊರಭಾಗಗಳನ್ನು 'ಸುಂದರವಾದ ಸ್ಟೇನ್ ಗ್ಲಾಸ್' ನಿಂದ ಸಜಾಯಿಸಿ ಆಸ್ಥಳವನ್ನು ಸುಂದರವಾಗಿರಿಸಲು ಪ್ರಯತ್ನಿಸಿದರು. ಹತ್ತಿರದಲ್ಲೇ ಅರಬ್ಬೀಸಮುದ್ರದ ಉಪ್ಪುನೀರು ಇದ್ದಾಗ್ಯೂ, ಈ ಬಾವಿಯಲ್ಲಿ ಸಿಹಿನೀರು ಬಿದ್ದಿದೆ. ಪಾರ್ಸಿಗಳಿಗೆ ಇದು ಪವಿತ್ರಸ್ಥಳವಾಗಿದೆ. 'ಝೊರಾಶ್ಟ್ರಿಯನ್ ಧರ್ಮಸ್ಥರು' ಇಲ್ಲಿಗೆ ಬಂದು ಭಾವಿಯನ್ನು ನಿರ್ಮಿಸಲು ಉದಾರ ಧನಸಹಾಯಮಾಡಿದರು. ಅದರ ಉಸ್ತುವಾರಿಯನ್ನೂ ಅದೇ ಉದಾರ ದಾನಿಗಳು ವಹಿಸಿಕೊಂಡಿದ್ದಾರೆ. ದಿನಕಳೆದಂತೆ, ಈ ಭಾಗದಲ್ಲಿ ಜನರು ವಾಸಮಾಡುವುದಿಲ್ಲವಾಗಿ, ಬಾವಿಯ ಸ್ಥಿತಿಯೂ ಬಿಗಡಾಯಿಸಿತು.

ಭಾವಿಯ ದುರಸ್ತಿಕಾರ್ಯ[ಬದಲಾಯಿಸಿ]

'ಭಿಕಾ ಬೆಹ್ರಾಮ್ ವೆಲ್,' ಬಹಳ ದಿನಗಳಿಂದ ದುರಸ್ತಿನಡೆಯದೆ ಚಿಂತಾಜನಕ ಪರಿಸ್ಥಿತಿಯಲ್ಲಿತ್ತು. ಆದರೆ, ಈ ಭಾವಿಯ ನಿರ್ಮಾಣ ಸಮಿತಿಯವರು, ಭಾವಿಯ ಪಾರಿಸರ ಮೊದಲಿನ ತರಹವೇ ಇದ್ದು, ಹಾಳಾಗದಂತೆ ನಿಗಾವಹಿಸಿ ಮಾಡುತ್ತಿದೆ. ಭಾವಿಯ ಚಾರಿತ್ರ್ಯಿಕ, ಹಾಗೂ ನಿರ್ಮಾಣ ವಿನ್ಯಾಸಕ್ಕೆ ಧಕ್ಕೆಬರದಂತೆ ನಿಗಾವಹಿಸಲಾಗಿದೆ. ನಗರದ ಹಾಗೂ ಪರಸ್ಥಳದಿಂದ ಮುಂಬಯಿಗೆ ಬಂದ ಪಾರ್ಸಿಗಳು ಇಲ್ಲಿಗೆ ಬಂದು, ಭಾವಿಗೆ ತಮ್ಮ ತಲೆಯನ್ನು ವರಗಿಸಿಕೊಂಡು ವಂದಿಸಿ ಪ್ರಾರ್ಥಿಸುತ್ತಾರೆ. ಭಾವಿಯ ಸುತ್ತಲೂ ದೀವಿಗೆಯನ್ನು ಹಚ್ಚಿ ಪ್ರಾರ್ಥಿಸಿದರೆ, ತಮ್ಮ ಇಷ್ಟಾರ್ಥಗಳು ಈಡೇರುವುದೆಂದು ಅವರು ನಂಬುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. "'Nobody learns Parsi history in schools', says historian, 'Nergish Sunavala',Jan, 25,2015". Archived from the original on 2016-03-06. Retrieved 2015-01-25.
  2. Parsi khabar, Alls Well: Bhikha Behram Well in Fort Mumbai, September 29, 2008, Bombay heritage, Mumbai