ಭಾಷಾವಿಜ್ಞಾನದಲ್ಲಿ ವ್ಯಾಕರಣ

ವಿಕಿಪೀಡಿಯ ಇಂದ
Jump to navigation Jump to search

ಪೀಠಿಕೆ[ಬದಲಾಯಿಸಿ]

ಪ್ರತಿಯೊಂದು ಭಾಷೆಯು ತನ್ನ ಬಳಕೆಯ ರಚನೆಯಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅದೇ ರೀತಿಯಲ್ಲಿ ಯಾವುದೇ ಒಂದು ಭಾಷೆಯು ಮಾನವನಿಗೆ ನೈಸರ್ಗಿಕವಾಗಿ ಅಥವಾ ಧೈವದತ್ತವಾಗಿ ಬಂದಿರುವುದಿಲ್ಲ. ಬದಲಿಯಾಗಿ ಭಾಷೆಯು ನಿರಂತರವಾದ ಪ್ರಜ್ಞಾ ಪೂರ್ವಕ ಪ್ರಯತ್ನದಿಂದ ಬಂದಿರುತ್ತದೆ, ಹೀಗೆ ಬಂದಂತಹ ಭಾಷೆಯು ವ್ಯವಸ್ತಿತವಾಗಿ ಬಳಕೆಯಾಗ ಬೇಕಾದರೆ ಅಥವಾ ಜೊಡಣೆಯಾಗಬೇಕಾದರೆ ವ್ಯಾಕರಣದ ಅವಶ್ಯಕತೆ ಇರುತ್ತದೆ. ಇದಕ್ಕೆ ಸಂಬಂದಿಸಿದಂತೆ ಭಾಷಾ ವಿಜ್ಞಾನದಲ್ಲೂ ಸಹಾ ವ್ಯಾಕರಣಕ್ಕೆ ಮನ್ನಣೆ ದೊರೆತಿದೆ. ಈ ಪ್ರಬಂಧದಲ್ಲಿ ನಾವು ಭಾಷಾ ವಿಜ್ಞಾನದಲ್ಲಿ ವ್ಯಾಕರಣದ ರಚನೆ ಬೆಳವಣಿಗೆ ಹಾಗೂ ಭಾಷಾವಿಜ್ಞಾನದಲ್ಲಿ ವ್ಯಾಕರಣದ ಪಾತ್ರವನ್ನು ಈ ಕೆಳಕಂಡಂತೆ ಚರ್ಚಿಸಲಾಗಿದೆ.

ಭಾಷಾ ಶಾಸ್ತ್ರದಲ್ಲಿ ಭಾಷೆ ಎಂಬುದು ತಾತ್ವಿಕವಾದ ಸ್ವಜಾತಿಯ ಅಥವಾ ಒಂದೇ ಮೂಲದಿಂದ ಹುಟ್ಟಿದ ಅಥವಾ ಉತ್ಪತ್ತಿಯಾದ ಪರಮಾಣು ಸಂಬಂಧಿಯ ಔಪಚಾರಿಕ ಕಲ್ಪನೆಯಾಗಿದೆ.

ಯಾವುದೇ ಒಂದು ಭಾಷೆಯು ಮಾನವನಿಗೆ ನೈಸರ್ಗಿಕವಾಗಿ ಅಥವಾ ಧೈವದತ್ತವಾಗಿ ಬಂದಿರುವುದಿಲ್ಲ. ಬದಲಿಯಾಗಿ ಭಾಷೆಯು ನಿರಂತರವಾದ ಪ್ರಜ್ಞಾಪೂರ್ವಕ ಪ್ರಯತ್ನದಿಂದ ಬಂದಿರುತ್ತದೆ, ಅದೇ ರೀತಿಯಲ್ಲಿ ಯಾವುದೇ ಒಂದು ಭಾಷೆಯಲ್ಲಿ ವ್ಯಾಕರಣವು ಭಾಷಾ ಶಾಸ್ತ್ರದ ನಿಯಮಗಳ ರಚನೆಯ ಗುಚ್ಚವಾಗಿದೆ. ಅದು ನಿಸರ್ಗದಲ್ಲಿ ಬಳಕೆಯಲ್ಲಿರುವ ನಿರ್ದಿಷ್ಟ ಭಾಷೆಯಲ್ಲಿನ ಪದಗಳ ರಚನೆ, ವಾಕ್ಯಗಳ ರಚನೆ ಮತ್ತು ನುಡಿಗಳ ರಚನೆಯ ಮೇಲೆ ಪ್ರಭಾವ ಬೀರುತ್ತದೆ. ಭಾಷೆಯ ರಚನೆಯ ಅಧ್ಯಯನಕ್ಕೆ ಸಹಾಯಕವಾಗುವಂತಹ ನಿಯಮಗಳು ಹಾಗು ವ್ಯಾಕರಣದಲ್ಲಿ ಬಳಕೆಯಾಗುವ ಅದರ ನಿಯಮಗಳ ಅಧ್ಯಯನವನ್ನು ಭಾಷಾಶಾಸ್ತ್ರವು ಒಳಗೊಳ್ಳುತ್ತದೆ ಈ ಒಂದು ಕ್ಷೇತ್ರ ಭಾಷೆಯಲ್ಲಿ ಬಳಕೆಯಾಗುವ ಪದಗಳು ಅವುಗಳ ಶಬ್ದ, ಸ್ವರೂಪ ಅಥವಾ ವಾಸ್ತವ ಹಾಗು ಅದರ ಅರ್ಥದ ಬಳಕೆಯನ್ನು ಒಳಗೊಳ್ಳುತ್ತದೆ. ಇವುಗಳಿಗೆ ನಂತರ ಸ್ವಲ್ಪ ಪೂರಕವಾದ ಬದಲಾವಣೆಯ ಅರ್ಥ ನೀಡುವ ಸಲುವಾಗಿ, ಧ್ವನಿ ಶಾಸ್ತ್ರ , ಸ್ವರೂಪ ಶಾಸ್ತ್ರ ಹಾಗೂ ಅರ್ಥಕ್ಕೆ ಸಂಬಂದಿಸಿದ ಭಾಷಾ ಶಾಸ್ತ್ರ ಎಂದು ಸೂಚಿಸಲಾಯಿತು.

ಭಾಷಾಶಾಸ್ತ್ರಜ್ಞರು ಯಾವುದೇ ಒಂದು ಕಾರಣಕ್ಕಾಗಿ ವ್ಯಾಕರಣ ಅಥವಾ ಭಾಷಾ ವಿಜ್ಞಾನ ಎಂಬ ಶಬ್ದವನ್ನು ಬಳಸಿಲ್ಲ ಬದಲಿಯಾಗಿ ಭಾಷೆಯಲ್ಲಿನ ಸರಿಯಾದ ಅಕ್ಷರಗಳ ಸಂಯೊಜನೆಯ ಕಾರಣಕ್ಕಾಗಿ ಅಥವಾ ಶುದ್ದ ಅಕ್ಷರಗಳ ವಿನ್ಯಾಸದ ಕಾರಣಕ್ಕಾಗಿ ಭಾಷಾಶಾಸ್ತ್ರವು ಭಾಷೆಯನ್ನು ಅದರ ಪದಗಳ ಅರ್ಥ ಶಬ್ದ ಹಾಗೂ ಸ್ವರೂಪವನ್ನು ಅನುಗುಣವಾಗಿ ಧ್ವನಿ ಶಾಸ್ತ್ರ, ಅರ್ಥಕ್ಕೆ ಸಂಬಂದಿಸಿದ ಭಾಷಾಶಾಸ್ತ್ರ ಮತ್ತು ಭಾಷೆಯ ವಾಸ್ತವದ ಸ್ಥಿತಿಶಾಸ್ತ್ರ ಅಥವಾ ಸ್ವರೂಪ ಶಾಸ್ತ್ರ ಎಂಬುದಾಗಿ ಸೂಚಿಸಿದ್ದರೂ, ಭಾಷೆಯ ರಚನೆಯ ಶೈಲಿಗೆ ಸಂಬಂಧಿಸಿದ ಮಾರ್ಗದರ್ಶಿಯ ಪುಸ್ತಕಗಳು ಹಾಗೂ ಸಂಪ್ರದಾಯ ಬದ್ದವಾಗಿ ಬಂದಂತಹ ಅಥವಾ ಔಪಚಾರಿಕವಾಗಿ ರೂಡಿಯಲ್ಲಿರುವ ಕೆಲವು ಪುಸ್ತಕಗಳು ತಿಳಿಸುವಂತೆ ವ್ಯಾಕರಣ ಎಂಬುದು ಕೇವಲ ಭಾಷೆಯಲ್ಲಿ ಬಳಕೆಯಾಗುವ ಶಬ್ದದಲ್ಲಿನ ಕಾಗುಣಿತವನ್ನು ಸೂಚಿಸಲು ಸ್ವರ ಹಾಗು ವ್ಯಂಜನವನ್ನು ಹೇಳಲು ಜೊತೆಗೆ ವಿರಾಮ ಚಿಹ್ನೆ ಅಥವಾ ಅವಶ್ಯಕ ಚಿಹ್ನೆಗಳನ್ನು ಹಾಕುವುದಕ್ಕೆ ಸಂಬಂದಿಸಿದ್ದಾಗಿದೆ.

"ಭಾಷೆಯಲ್ಲಿ ಅಥವಾ ಭಾಷಾಶಾಸ್ತ್ರದಲ್ಲಿ ವ್ಯಾಕಣದ ಪರಿವಿಡಿ"

  • ಭಾಷಾವಿಜ್ಞಾನದಲ್ಲಿ ವ್ಯಾಕಣದ ಬಳಕೆ
  • ಶಬ್ದದ ಉತ್ಪತ್ತಿ ಮತ್ತು ಶಬ್ದದ ವಿಚಾರ ಪ್ರಕರಣ
  • ವ್ಯಾಕರಣದ ಇತಿಹಾಸ
  • ವ್ಯಾಕರಣದ ಬೆಳವಣಿಗೆ
  • ವ್ಯಾಕರಣದ ರಚನೆ ಮತ್ತು ಅದರ ಚೌಕಟ್ಟುಗಳು
  • ವ್ಯಾಕರಣದ ಅಧ್ಯಯನ

ಭಾಷೆಯ ರಚನೆಗೆ ಸಂಬಂಧಿಸಿದಂತೆ ವ್ಯಾಕರಣ ಎಂಬ ಪದವನ್ನು ಕೇವಲ ಭಾಷಾಶಾಸ್ತ್ರಜ್ಞರೂ ಮಾತ್ರವಲ್ಲದೆ ಹಲವಾರು ವಿಚಾರವಾದಿಗಳು, ಚಿಂತಕರು ತಮ್ಮದೇ ಆದ ಹಾಗೂ ವಿಶಾಲವಾದ ಅರ್ಥವನ್ನು ವ್ಯಾಕರಣಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದರೆ. Jeremy Butterfield ಪ್ರಕಾರ "grammar is often a generic way of referring to any aspect of english that people object to".ಅದು ಏನೇ ಆದರೂ ವ್ಯಾಕರಣ ಎಂಬ ಪದಕ್ಕೆ , ಭಾಷಾ ಶಾಸ್ತ್ರಜ್ಞರು , ವಿಚಾರವಾದಿಗಳು ಮತ್ತು ಚಿಂತಕರು ನೀಡಿರುವಂತಹ ಹೇಳಿಕೆಗಿಂತ ಹೆಚ್ಚಿನ ಅರ್ಥವನ್ನು ಇವರು ವ್ಯಾಕರಣಕ್ಕೆ ನೀಡಿದ್ದಾರೆ. ಇವರ ಪ್ರಕಾರ ಯಾವುದೇ ಭಾಷೆಯನ್ನು ಮಾತನಾಡುವ ಪ್ರತಿಯೊಬ್ಬ ವ್ಯಕ್ತಿಗೂ ಭಾಷೆಯನ್ನು ಹೇಗೆ ಬಳಸಬೇಕು ಎಂಬ ಕೆಲವು ನಿಯಮಗಳಾದರು ಅವನಿಗೆ ಅರಿವಿಲ್ಲದೆ ಆತನ ತಲೆಯಲ್ಲಿ ಅಂರ್ತಗತವಾಗಿರುತ್ತವೆ ಎನ್ನುತ್ತಾರೆ. ಈ ರೀತಿಯಲ್ಲಿ ತಿಳಿಯುವುದಾದರ ಭಾಷೆಯನ್ನು ಬಳಸುವ ಅನಾಗರಿಕನಿಗೂ ಸಹ ತನಗೆ ಅರಿವಿಲ್ಲದಂತೆ ವ್ಯಾಕರಣದ ಕೆಲವು ನಿಯಮಗಳನ್ನು ಭಾಷೆಯ ಬಳಕೆಯಲ್ಲಿ ಬಳಸಿರುತ್ತಾನೆ. ಒಂದು ಭಾಷೆಯನ್ನು ಕಲಿತ ನಂತರ ಮತ್ತೊಂದು ಭಾಷೆಯನ್ನು ಜೀವನದಲ್ಲಿ ಕಲಿಯಬೇಕಾದರೆ ಸಾಮಾನ್ಯವಾಗಿ ಆ ಭಾಷೆಯ ಬಗ್ಗೆ ಕೂಲಂಕೂಶವಾದ ಮಾರ್ಗದರ್ಶನ ಅಥವಾ ಸಲಹೆಯನ್ನು ಆ ಭಾಷೆ ಒಳಗೊಳ್ಳುತ್ತದೆ.

ವ್ಯಾಕರಣ ಎಂಬ ಪದವನ್ನು ಭಾಷಾವಿಜ್ಞಾನದಲ್ಲಿ ಭಾಷೆಯ ನಿಯಮಗಳನ್ನು ವಿವರಿಸುವ ಉದ್ದೇಶದಿಂದ ಬಳಸಬಹುದಾಗಿದ್ದರೂ ಅದೂ ನಿರ್ದಿಷ್ಟ ಭಾಷೆಯ ಬಳಕೆಯ ಬಗ್ಗೆ ಭಾಷಾಶಾಸ್ತ್ರಕ್ಕೆ ಆದೇಶ ನೀಡುತ್ತದೆ. ಆಂಗ್ಲ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದಂತೆ ಹಲವಾರು ಅರ್ಥಗಳನ್ನು ಚಿಂತಕರು ಸೂಚಿಸಿದ್ದಾರೆ. ಆದರೂ ಹೀಗೆ ಎಲ್ಲರೂ ನೀಡಿರುವಂತಹ ಒಟ್ಟಾರೆ ಅರ್ಥ ಭಿನ್ನವಾಗಿ ಕಂಡು ಬಂದಿದ್ದರು ಕೂಡಾ ಅದು ಆಂಗ್ಲ ಭಾಷೆಯ ವ್ಯಾಕರಣವನ್ನು ಸೂಚಿಸುತ್ತದೆ. ವ್ಯಾಕರಣ ಎಂಬ ಪದ ಒಂದು ಭಾಷೆಯ ವ್ಯವಸ್ಥಿತ ಬದಲಾವಣೆಯನ್ನು ಸುತ್ತುವರೆದಿರುತ್ತದೆ. ಯಾವುದೇ ಒಂದು ಭಾಷೆ ವ್ಯವಸ್ಥಿತ ರೀತಿಯಲ್ಲಿ ಬಳಕೆಯಾದರೆ ಅಥವಾ ಜೋಡಣೆಯಾದರೆ ಆ ಭಾಷೆಯು ವ್ಯಾಕರಣ ಬದ್ದವಾಗಿದೆ ಎಂದರ್ಥ.