ಭಾವು ದಾಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಡಾ.ಭಾವು ದಾಜಿ ಲಾಡ್'

(Ramakrishna Vithal Lad),

(೧೮೨೨-೭೪)

ಡಾ.ಭಾವುದಾಜಿ ಲಾಡ್ ರವರು, ಪ್ರಾಚೀನ ಆಯುರ್ವೇದ ಶಾಸ್ತ್ರ, ಹಾಗೂ ಇಂಗ್ಲೀಷ್ ಪದ್ಧತಿಗಳನ್ನು ಸಮಯೋಚಿತವಾಗಿ ಬಳಸುತ್ತಿದ್ದರು[ಬದಲಾಯಿಸಿ]

ಡಾ. ಭಾವುದಾಜಿಯವರು, ಮುಂಬಯಿನ ಹಿಂದೂ ಸಾರಸ್ವತ್ ಬ್ರಾಹ್ಮಣಪರಿವಾರದಲ್ಲಿ, ಜನಿಸಿದರು. ಬಾಲ್ಯದಲ್ಲಿ ಅವರ ಮನೆಯಲ್ಲಿ ಇಟ್ಟಹೆಸರು, 'ರಾಮಕ್ರಿಷ್ಣ ವಿಠಲ್,' ಎಂದು. ವೃತ್ತಿಯಲ್ಲಿ ಡಾಕ್ಟರಾಗಿದ್ದರು. ಆವರು ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರೂ ಹೌದು. ಪ್ರಾಚೀನ ವಸ್ತುಗಳ ಸಂಗ್ರಹಕಾರರು. ೧೮೨೨ ರಲ್ಲಿ, ಮಹಾರಾಷ್ಟ್ರದ ರಾಜ್ಯದ 'ಮಂಜರೆ,' ಎಂಬ (ಸಾವಂತವಾಡಿಹತ್ತಿರದ) ಗ್ರಾಮದಲ್ಲಿ ಜನಿಸಿದರು. ತಂದೆತಾಯಿಗಳು ಮಣ್ಣಿನ ಬೊಂಬೆಗಳನ್ನು ಮಾರಿ, ಜೀವನ ಸಾಗಿಸುತ್ತಿದ್ದರು. ಬಡವರು.

ಚಿತ್ರ:Dr. Lad Museum.jpg
'ಡಾ.ಭಾವುದಾಜಿ ಲಾಡ್ ವಸ್ತುಸಂಗ್ರಹಾಲಯ'

'ಚೆಸ್ ಆಟ', ಹೇಗೋ ಅವರ 'ಮುಂದಿನ-ಜೀವನ ಶೈಲಿ'ಯನ್ನು ನಿರ್ಧರಿಸಿತು[ಬದಲಾಯಿಸಿ]

ಭಾವುದಾಜಿಯವರ ಜೀವನದಲ್ಲಿ, ಅನಿರೀಕ್ಷಿತಘಟನೆಯೊಂದು ನಡೆಯಿತು. ಆಗಿನಕಾಲದ ಆಂಗ್ಲ ಮನುಷ್ಯನೊಬ್ಬ, 'ಚೆಸ್ ಆಟ,' ದಲ್ಲಿ ಅವರಿಗಿದ್ದ ನೈಪುಣ್ಯತೆಯನ್ನು ಗುರುತಿಸಿ,ಭಾವುರವರ ತಂದೆಯವರಿಗೆ, ಇಂಗ್ಲೀಷ್ ನಲ್ಲಿ ವಿದ್ಯಾಭ್ಯಾಸ ಕೊಡಿಸಲು ತಿಳಿಹೇಳಿದರು. ಬಹುಶಃ ಇದು ಅವರಜೀವನದಲ್ಲಿ ಒಂದು ತಿರುವು ಆಗಿತ್ತು. ಕೂಡಲೆ, 'ಭಾವು,'ರವರ ತಂದೆಯವರು ತಮ್ಮ ಮಗನನ್ನು ಮುಂಬಯಿಗೆ ಕರೆದುಕೊಂಡುಬಂದು, ಅಲ್ಲಿನ "ಎಲ್ಫಿನ್ ಸ್ಟನ್ ಕಾಲೇಜ್,' ನಲ್ಲಿ, ಅಭ್ಯಾಸಮಾಡಲು ಸೇರಿಸಿದರು. ಆಸಮಯದಲ್ಲಿ ನಡೆದ 'infanticide' ಎಂಬ ಒಂದು ಪ್ರಬಂಧ ಸ್ಪರ್ಧೆಯಲ್ಲಿ, ಭಾವು ಬಹುಮಾನವನ್ನು ಗಿಟ್ಟಿಸಿದರು. ನಂತರ ಅವರನ್ನು ಅದೇ ಕಾಲೇಜ್ ನಲ್ಲಿ , ಉಪಾಧ್ಯಾಯರನ್ನಾಗಿ ನೇಮಿಸಲಾಯಿತು. ಮುಂದೆ, 'ಗ್ರಾಂಟ್ ಮೆಡಿಕಲ್ ಕಾಲೇಜ್,' ನಲ್ಲಿ ವಿದ್ಯಾಭ್ಯಾಸವನ್ನು, ಮುಂದುವರೆಸಿದರು. ೧೮೫೦, ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದ 'ಪ್ರಥಮಬ್ಯಾಚ್,' ನ ಗುಂಪಿನಲ್ಲಿ ಒಬ್ಬರಾಗಿದ್ದರು. ಕಾಲೇಜ್ ಅಭ್ಯಾಸ ಮುಗಿದ ವರ್ಷದಿಂದಲೇ, ೧೮೫೧ ರಲ್ಲಿ ತಮ್ಮ ವೈದ್ಯ-ವೃತ್ತಿಯನ್ನು ಆರಂಭಿಸಿಯೇಬಿಟ್ಟರು. ಆದರಲ್ಲಿ ಅವರಿಗೆ ಸಫಲತೆದೊರೆಯಿತು. ಆಯುರ್ವೇದ ಶಾಸ್ತ್ರಾಭ್ಯಾಸವನ್ನು ಮೂಲ, ಸಂಸ್ಕೃತದಲ್ಲಿ ಮಾಡಿದರು. ಹಾಗಾಗಿ, ಆಯುರ್ವೇದ ಪದ್ಧತಿಯಲ್ಲಿ, ಅವರಿಗೆ ಅಪಾರ ನಂಬಿಕೆ, ಗೌರವವಿತ್ತು. ಕುಷ್ಠರೋಗ, ಆಗಿನಕಾಲದಲ್ಲಿ ಮಹಾಮಾರಿಯಷ್ಟು ಭಯಾನಕ ರೋಗವೆಂದು ಪರಿಗಣಿಸಲ್ಪಟ್ಟಿತ್ತು. ಭಾವು ಅಂತಹ ರೋಗಗಳನ್ನು ನಿವಾರಿಸಲು, ಆಯುರ್ವೇದಪದ್ಧತಿಯನ್ನು ಪ್ರಯೋಗಿಸತೊಡಗಿದರು.

ಸ್ತ್ರೀಯರ ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಟ್ಟರು. ಭಾರತೀಯ ಪರಂಪರೆಯ ಬಗ್ಗೆ ಶ್ರದ್ಧೆ, ಹಾಗೂ ಗೌರವನ್ನು ಅವರ ಕಾರ್ಯಗಳಲ್ಲಿ ಕಾಣಬಹುದು[ಬದಲಾಯಿಸಿ]

ವಿದ್ಯಾಭ್ಯಾಸವನ್ನು ಪ್ರಚಾರಮಾಡುವ ಕರ್ತವ್ಯವನ್ನು ಅವರು ಬಹಳ ಜವಾಬ್ದಾರಿಯಿಂದ ನಿರ್ವಹಿಸಿದರು. 'ಎಡುಕೇಶನ್ ಬೋರ್ಡ್,' ಗೆ ಅವರನ್ನು ಸದಸ್ಯರನ್ನಾಗಿ ನೇಮಕಮಾಡಲಾಯಿತು. ಭಾವುದಾಜಿಯವರನ್ನು, ಮುಂಬಯಿ ವಿಶ್ವವಿದ್ಯಾಲಯದ, 'ಮೂಲ ಫೆಲೋ,' ಎಂದು ಪರಿಗಣಿಸಲಾಯಿತು. 'ವಿದ್ಯಾರ್ಥಿಗಳ ಸಾಹಿತ್ಯ,ಮತ್ತು ವೈಜ್ಞಾನಿಕ ಸಂಘ',ಕ್ಕೆ ಫ್ರಥಮ ಅಧ್ಯಕ್ಷರಾಗಿದ್ದರು. ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ಪಸರಿಸುವಲ್ಲಿ ಅಗ್ರಗಣ್ಯರೆಂದು ಹೆಸರಾದವರು. ಅದಕ್ಕಾಗಿ ಬೇಕಾದ ಸಹಾಯಧನವನ್ನು ತಮ್ಮ ಸ್ನೇಹಿತರಿಂದ ಹಾಗೂ ಇಷ್ಟಮಿತ್ರರಿಂದ ಪಡೆದು, ತಮ್ಮ ಹೆಸರಿನಲ್ಲಿ, ಹುಡುಗಿಯರ ಶಾಲೆಯೊಂದನ್ನು ಸ್ಥಾಪಿಸಿದರು. ಭಾರತೀಯ ರಾಜಕೀಯ ಪ್ರಗತಿ ಕಾರ್ಯದಲ್ಲಿ ಆಸಕ್ತಿಯನ್ನು ತೋರಿಸಿದರು. ಈಸ್ಟ್ ಇಂಡಿಯ ಅಸೋಸಿಯೇಷನ್, ಮುಂಬಯಿ ಶಾಖೆ, ಗೆ ಸದಸ್ಯರಾಗಿದ್ದರು. 'ಮುಂಬಯಿನ ಶೆರಿಫ್,' ಆಗಿ , ೧೮೬೯ ರಲ್ಲಿ ಇನ್ನೊಮ್ಮೆ ೧೮೭೧, ರಲ್ಲಿ ನೇಮಕಗೊಂಡಿದ್ದರು. ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಮತ್ತು ಅಮೆರಿಕದ ಅನೇಕ 'ಪ್ರತಿಷ್ಠಿತ ವೈದ್ಯಶಾಸ್ತ್ರದ ವೈಜ್ಞಾನಿಕ ಸೊಸೈಟಿಗಳು', ಅವರನ್ನು ತಮ್ಮ ಸಂಸ್ಥೆಗಳಿಗೆ ಗೌರವ-ಸದಸ್ಯರನ್ನಾಗಿ ನೇಮಿಸಿ, ಗೌರವ ವ್ಯಕ್ತಪಡಿಸಿದವು. ಮುಂಬಯಿ ಶಾಖೆಯ 'ಏಶಿಯಾಟಿಕ್ ಸೊಸೈಟಿ,' ಯ ಪತ್ರಿಕೆಗೆ, ನೂರಾರು ಲೇಖನಗಳನ್ನು ಬರೆದು, ಪ್ರಕಟಿಸಿದರು. ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಆಸಕ್ತಿ ಕೊನೆಯವರೆಗೆ ಉಳಿಸಿಕೊಂಡಿದ್ದರು. ಆವರ ಬಳಿ ಅಪರೂಪದ ಹಲವಾರು, ಭಾರತೀಯ ನಾಣ್ಯಗಳಿದ್ದವು. ಭಾರತೀಯ ಪರಂಪರೆಯಲ್ಲಿ ಕಾವ್ಯರಚಿಸಿದ, ಪ್ರಾಚೀನ ಸಂಸ್ಕೃತದ ಲೇಖಕರನ್ನು ಅವರ ಕಾಲ, ಮತ್ತು ವಿವರಗಳ ಬಗ್ಗೆ ಅಭ್ಯಾಸಮಾಡಿ, ಮಾಹಿತಿ ಸಂಗ್ರಹಮಾಡಿದ್ದಾರೆ. ಡಾ. ಭಾವುದಾಜಿಯವರು, ಮೇ, ೧೮೭೪. ರಲ್ಲಿ ಮರಣಿಸಿದರು. ಮುಂಬಯಿ ನ ಮಾಟುಂಗಾದ ರಸ್ತೆಯೊಂದನ್ನು, 'ಭಾವುದಾಜಿ ರೆಸ್ತೆಯೆಂದು ನಾಮಕರಣ ಮಾಡಿ ಅವರಿಗೆ ಗೌರವ ಸೂಚಿಸಲಾಗಿದೆ. ಮುಂಬಯಿ ಕನ್ನಡಿಗರ ಅತಿ ಹಿರಿಯಸಂಸ್ಥೆ, 'ಮೈಸೂರ್ ಅಸೋಸಿಯೇಷನ್', ಹಾಗೂ 'ಕನ್ನಡಸಂಘ', ಗಳು ಇದೇ ರಸ್ತೆಯಲ್ಲಿವೆ.

ಸಂಗ್ರಹ[ಬದಲಾಯಿಸಿ]