ಭಾರತ್ ನಿರ್ಮಾಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತ್ ನಿರ್ಮಾಣ್ ಭಾರತದ ಯುವಜನತೆಯ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮತ್ತು ದೇಶದ ಭದ್ರ ಬುನಾದಿಯಾಗಿರುವ ಯುವ ಶಕ್ತಿಯನ್ನು ನಿರಂತರವಾಗಿ ಸದೃಢಗೊಳಿಸುವ ಕೆಲಸಕ್ಕಾಗಿ ಕೇಂದ್ರ ಸರಕಾರ ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲ್ಯಾಬ್ ಟು ಲ್ಯಾಂಡ್ ಎಂಬ ಯೋಜನೆಯಡಿ ಆಯಾ ರಾಜ್ಯಗಳ ಗ್ರಾಮೀಣ ಅಭಿವೃದ್ದಿ ತರಬೇತಿ ಸಂಸ್ಥೆಗಳಿಂದ "ಭಾರತ್ ನಿರ್ಮಾಣ್" ಸ್ವಯಂ ಸೇವಕರನ್ನು ತರಬೇತಿ ನೀಡಿ ಆಮೂಲಕ ಗ್ರಾಮೀಣಾಭಿವೃದ್ದಿ ಸಾಧಿಸುವುದೇ ಈ ಯೋಜನೆಯ ಉದ್ದೇಶವಾಗಿದೆ.

ವಿಶೇಷತೆ[ಬದಲಾಯಿಸಿ]

ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇ ೭೦ ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.ಸ್ವಾತಂತ್ರ್ಯ ದೊರೆತು ೬೫ ವರ್ಷಗಳೇ ಕಳೆದರೂ ಇಂದಿಗೂ ಗ್ರಾಮೀಣ ಪ್ರದೇಶಗಳು ನಿರೀಕ್ಷಿತ ಅಭಿವೃದ್ದಿ ಸಾಧಿಸಲಾಗಲಿಲ್ಲ.ಗ್ರಾಮೀಣ ಅಭಿವೃದ್ದಿಗಾಗಿ ಕೇಂದ್ರ ಗ್ರಾಮೀಣ ಅಭಿವೃದ್ದಿ ಸಚಿವಾಲಯ ಪ್ರತೀವರ್ಷ 8ಲಕ್ಷ ಕೋಟಿ ರೂ ಹಾಗೂ ರಾಜ್ಯ ಸರಕಾರಗಳು ಪ್ರತೀವರ್ಷ 7.5ಲಕ್ಷ ಕೋರೂ ಅನುದಾನ ಬಿಡುಗಡೆಗೊಳಿಸುತ್ತಿದ್ದು,ಇದರ ಸಮರ್ಪಕ ಅನುಷ್ಠಾನದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಡವಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲ್ಯಾಬ್ ಟು ಲ್ಯಾಂಡ್ ಎಂಬ ಯೋಜನೆಯಡಿ ಆಯಾ ರಾಜ್ಯಗಳ ಗ್ರಾಮೀಣ ಅಭಿವೃದ್ದಿ ತರಬೇತಿ ಸಂಸ್ಥೆಗಳಿಂದ ಭಾರತ್ ನಿರ್ಮಾಣ್ ಸ್ವಯಂ ಸೇವಕರನ್ನು ತರಬೇತಿ ನೀಡಿ ಆಮೂಲಕ ಗ್ರಾಮೀಣಾಭಿವೃದ್ದಿ ಸಾಧಿಸುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ.೧೮ ರಿಂದ ೪೫ ವರ್ಷದೊಳಗಿನ ಮಹಿಳೆಯರು ಹಾಗೂ ಪುರುಷರಿಗೆ ತರಬೇತಿ ನೀಡಿ ಭಾರತ್ ನಿರ್ಮಾಣ್ ಸ್ವಯಂಸೇವಕರಾಗಿ ರೂಪಿಸುವ ಗುರಿ ಹೊಂದಲಾಗಿದೆ.ಕರ್ನಾಟಕದ ಎಲ್ಲಾ ತಾಲೂಕುಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು,ಯುವಕ ಯುವತಿಯರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ರಾಜ್ಯದಲ್ಲಿ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಸಂಸ್ಥೆಗೆ ನೀಡಲಾಗಿದೆ.ರಾಜ್ಯ ಗ್ರಾಮೀಣ ಅಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಮುಖ್ಯ ಸಲಹೆಗಾರ ವಿಲ್ಫ್ರೆಡ್ ಡಿಸೋಜಾ,ನಿರ್ದೇಶಕರಾದ ಅಶ್ರಫುಲ್ ಹಸನ್ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನ ಪ್ರತೀ ೩೦ರಿಂದ ೪೦ ಕುಟುಂಬಗಳಿಗೆ ಒಬ್ಬರಂತೆ ಸ್ವಯಂಸೇವಕರನ್ನು ಸಜ್ಜುಗೊಳಿಸಲಾಗುತ್ತಿದೆ.


ಕೇಂದ್ರ ಸರಕಾರ ದೂರದೃಷ್ಟಿಯನ್ನಿಟ್ಟುಕೊಂಡು ರೂಪಿಸಿರುವ ಈ ಯೋಜನೆಯ ಮೂಲಕ ಗ್ರಾಮೀಣ ಅಭಿವೃದ್ದಿ ಸಾಧಿಸಲು ಭಾರತ್ ನಿರ್ಮಾಣ್ ಸ್ವಯಂಸೇವಕರೊಂದಿಗೆ ಪ್ರತಿಯೊಬ್ಬ ನಾಗರೀಕರೂ ಸಹಕರಿಸಬೇಕು.ಭಾರತ ನಿರ್ಮಾಣ್ ಸ್ವಯಂಸೇವಕರನ್ನು ತರಬೇತಿ ನೀಡಿ ಸಿದ್ದಗೊಳಿಸಲಾಗುತ್ತಿದೆ.ಸರಕಾರದಿಂದ ಯಾವುದೇ ತರಹದ ವೇತನವನ್ನು ಪಡೆಯದೇ ಸಮಾಜಸೇವಾ ಮನೋಭಾವದ ಉತ್ಸಾಹೀ ಯುವಕ ಯುವತಿಯರಿಗೆ ತರಬೇತಿಯ ಬಳಿಕ ಕೇಂದ್ರ ಸರಕಾರದಿಂದ ಗುರುತುಚೀಟಿ ನೀಡಲಾಗುತ್ತದೆ.ಭಾರತ ನಿರ್ಮಾಣ್ ಸ್ವಯಂಸೇವಕರು ಸರಕಾರದ ಯೋಜನೆಗಳ ಮಾಹಿತಿ ಪಡೆಯಲು ಜಿಲ್ಲಾಧಿಕಾರಿವರೆಗಿನ ಯಾವ ಅಧಿಕಾರಿಯನ್ನಾದರೂ ಯಾವ ವೇಳೆಯಲ್ಲೂ ಸಂಪರ್ಕಿಸುವ ಅಧಿಕಾರವನ್ನು ಸರಕಾರ ನೀಡಿದೆ.ಬಲಾಢ್ಯರ ನಡುವೆ ಸಿಕ್ಕಿ ಅವಕಾಶ ವಂಚಿತ ಅರ್ಹ ಬಡಫಲಾನುಭವಿಗಳಿಗೆ ಸರಕಾರ ಯೋಜನೆಗಳನ್ನು ತಲುಪಿಸುವ ಮಹತ್ವದ ಜವಾಬ್ದಾರಿ ವಹಿಸಬೇಕಿದೆ.

ಸರಕಾರದ ಎಷ್ಟೋ ಸವಲತ್ತುಗಳು ಮಾಹಿತಿ ಕೊರತೆಯಿಂದ ಬಡಫಲಾನುಭವಿಗಳಿಗೆ ತಲುಪುತ್ತಿಲ್ಲ.ಕೇಂದ್ರ ಸರಕಾರ ೬೫ ವರ್ಷಗಳಿಂದ ಸಾವಿರಾರು ಕೋಟಿ ಅನುದಾನ ನೀಡಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಪರಿಣಾಮಕಾರಿಯಾಗಿ ಗ್ರಾಮೀಣಾಭಿವೃದ್ದಿ ಸಾಧಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಭಾರತ್ ನಿರ್ಮಾಣ್ ಸ್ವಯಂಸೇವಕರಿಗೆ ಅವಕಾಶ ಕಲ್ಪಿಸಲಾಗಿದೆ.ಈಗಾಗಲೇ ಭಾರತ್ ನಿರ್ಮಾಣ್ ಸ್ವಯಂಸೇವಕರು ಹಲವು ಸಾಮಾಜಿಕ ಕಳಕಳಿಯ ಕೆಲಸಗಳನ್ನೂ ಮಾಡಿದ್ದು,ಈ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ."ನಮನ"

ಉಲ್ಲೇಖಗಳು[ಬದಲಾಯಿಸಿ]