ಭಾರತೀಯ ವಿಜ್ಞಾನ ಮಂದಿರದ ಕನ್ನಡ ಸಂಘ, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಕನ್ನಡ ಸಂಘ [೧],ಕ್ಕೆ ಸುಮಾರು ೭೦ ವರ್ಷಗಳ ಸುದೀರ್ಘ ಇತಿಹಾಸವಿದೆ. ಅಂದಿನ ವಿಧ್ಯಾರ್ಥಿಗಳು, ಕಾರ್ಮಿಕರು. ಉಪಾಧ್ಯಾಯರುಗಳು,ವರ್ಷದಲ್ಲಿ ಒಂದು ಅಥವಾ ಎರಡು ಸಲ ಸೇರಿ, ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಭೋಜನ ಕೂಟವನ್ನು ಏರ್ಪಡಿಸುವುದರ ಮೂಲಕ ಸಂಸ್ಥೆಯ ಎಲ್ಲಾ ಕನ್ನಡಿಗರೂ ಒಟ್ಟಾಗಿ ಸೇರುತ್ತಿದ್ದರು. ಕಾಲಕ್ರಮದಲ್ಲಿ ಪ್ರಾಚಾರ್ಯ. ಲಕ್ಷಣ್ ರಾವ್, ಡಾ|| ನಾರಾಯಣಮಹಿಷಿ, ಶ್ರೀಯುತರುಗಳಾದ ಬಿ ವಿ ರಾಮಕೃಷ್ಣ, ಶೇಷಗಿರಿರಾವ್, ಸುದರ್ಶನ, ಶ್ರೀನಿವಾಸರಾವ್, ವೇಣುಗೋಪಾಲ್, ಭೋಜರಾಜ, ಗಂಗಾಧರ್, ಹೀಗೆ ಹಲವಾರು ಪದಾಧಿಕಾರಿಗಳು ಸಂಘವನ್ನು ಸುವ್ಯವಸ್ಥಿತವಾಗಿ ಬೆಳೆಸುತ್ತಾ ಬಂದಿರುತ್ತಾರೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು 'ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ'ದಲ್ಲಿ ಆಯೋಜಿಸುತ್ತಿದ್ದರು.

ಸಂಘ ಬೆಳೆದ ಬಗೆ[ಬದಲಾಯಿಸಿ]

ಮುಂದೆ, ಸಂಘದ ಕಾರ್ಯದರ್ಶಿಗಳಾದ ಸ.ಸೋಮಸುಂದರ, ಹಾಗೂ ಅಂದಿನ ಪದಾಧಿಕಾರಿಗಳಾದ ಚಿಕ್ಕೇಗೌಡ, ಎಂ ಜಿ ನಾರಾಯಣ, ಎಸ್ ಆರ್ ರಾಮಕೃಷ್ಣ, ಎಸ್ ಸೀತಾರಾಂ, ಅನ್ನಪೂರ್ಣಯ್ಯ, ಹೀಗೆ ಹಲವಾರು ಕಾರ್ಯಕರ್ತರ ನೇತೃತ್ವದಲ್ಲಿ ಹೆಚ್ಚಿನ ರೀತಿಯಲ್ಲಿ ಕನ್ನಡದ ಹಲವಾರು ಕಾರ್ಯಕ್ರಮಗಳು ನಡೆಯಲಾರಂಭಿಸಿದವು. ಅದೇ ಸಮಯದಲ್ಲಿ ಸಂಘಕ್ಕೆ 'ರಾಜ್ಯೋತ್ಸವದ ಕಾರ್ಯಕ್ರಮ'ಗಳನ್ನು ನಡೆಸಲು ಸಂಸ್ಧೆಯಿಂದ ಧನ ಸಹಾಯ ಒದಗಿ ಬಂತು. ಸಂಘಕ್ಕೆ ಹಲವಾರು ಮಟ್ಟದಲ್ಲಿ ಹೊಸ ಸದಸ್ಯರುಗಳು ಬರಲಾರಂಭಿಸಿದರು. ಅವರನ್ನು ನೋಂದಾಯಿಸುವುದರ ಮೂಲಕ ಹೆಚ್ಚಿನ ಜನರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರೇಪಣೆ ಸಿಕ್ಕಿತು.

ಕನ್ನಡ ಸಂಘವನ್ನು ನೋಂದಾಯಿಸಿದ್ದು[ಬದಲಾಯಿಸಿ]

ಅಧ್ಯಕ್ಷ ಶೇಷಾಚಲ, ಕಾರ್ಯದರ್ಶಿ ಎಂ. ನಾರಾಯಣ, ಮತ್ತು ಅಂದಿನ ಪದಾಧಿಕಾರಿಗಳು ಸಂಘವನ್ನು ನೋಂದಾಯಿಸಿ ಸಂಘಕ್ಕೆ ಒಂದು ಅಸ್ತಿತ್ವವನ್ನು ಪ್ರದಾನಮಾಡಿದರು. ೨೦೦೩ ರಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ರಮವನ್ನು ಶ್ರೇಷ್ಟ ಕನ್ನಡ ಸಾಹಿತಿ, 'ಡಾ. ಬರಗೂರು ರಾಮಚಂದ್ರಪ್ಪ'ರವರು ಸಮಾರಂಭವನ್ನು ಉದ್ಘಾಟಿಸುವ ಮೂಲಕ ಹಮ್ಮಿಕೊಳ್ಳಲಾಯಿತು. 'ಕನ್ನಡ ಕಲಿಸುವಿಕೆಯ ಕಮ್ಮಟಗಳು' ಇಂದಿಗೂ ಯಶಸ್ವಿಯಾಗಿ ನಡೆಯುತ್ತಿವೆ.

ಕೆಲವು ಜನಪರ ಹೋರಾಟಗಳಲ್ಲಿ[ಬದಲಾಯಿಸಿ]

ಅಂದಿನ 'ಕಾವೇರಿ ನೀರಿನ ಜಲವಿವಾದ'ದಲ್ಲಿ ಕನ್ನಡ ಸಂಘ ಸಕ್ರಿಯವಾಗಿ ಹೋರಾಟದಲ್ಲಿ ಭಾಗವಹಿಸಿ ಕರ್ನಾಟಕ ಸರ್ಕಾರವನ್ನು ಕಾವೇರಿ ನೀರು ಬಿಡದಂತೆ ರಸ್ತೆ ತಡೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಕಾರ್ಯದರ್ಶಿಯಾಗಿ ಎನ್ ಕೃಷ್ಣಮೂರ್ತಿ, ಹಾಗೂ ಅಧ್ಯಕ್ಷರಾಗಿ ಶೇಷಾಚಲ, ಮತ್ತು ಪದಾಧಿಕಾರಿಗಳ ಸಹಕಾರದಿಂದ ತಿಂಗಳಿಗೊಂದು ಕಾರ್ಯಕ್ರಮದಂತೆ ಅನೇಕ ಉತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಸ್ಧೆಯಿಂದ 'ಸಂಘಕ್ಕೆ ತನ್ನದೇ ಆದ ಕೊಠಡಿ', ಬೇಕಾದ ಎಲ್ಲಾ ಪೀಠೋಪಕರಣಗಳು, ದೂರವಾಣಿ, ಗಣಕ ಯಂತ್ರಕ್ಕೆ ಬೇಕಾದ ಪೀಠೋಪಕರಣಗಳುನ್ನು ಪಡೆದೊರಕಿಸಿಕೊಳ್ಳಲಾಯಿತು.ಸಂಸ್ಧೆಯಲ್ಲಿ ಮಹಾರಾಜರ ಪ್ರತಿಮೆಯನ್ನು ಪ್ರತಿಷ್ಠಾಪಿಸುವಂತೆ ಸಂಸ್ಧೆಯ ಅಧಿಕಾರಿಗಳ ಜೊತೆ ಪರಾಮರ್ಶೆಮಾಡಲಾಯಿತು.

ನಾಲ್ವಡಿಕೃಷ್ಣರಾಜ ಒಡೆಯರ್ ರವರ ಪ್ರತಿಮೆ ಅನಾವರಣ ಮಹೋತ್ಸವ[ಬದಲಾಯಿಸಿ]

ಪದಾಧಿಕಾರಿಗಳಾಗಿ ಕಾರ್ಯದರ್ಶಿಯಾಗಿ ನಾಗರಾಜ, ಹಾಗೂ ಅಧ್ಯಕ್ಷರಾದ ಶ್ರೀಯುತ ಶೇಷಾಚಲ, ರ ಜೋಡಿಯು 'ಸಂಸ್ದೆಯ ಶತಮಾನೋತ್ಸವ'ವನ್ನು ನಡೆಸುವ ಸಂದರ್ಭದಲ್ಲಿ ಸಂಸ್ಧೆಗೆ ನಮ್ಮ ಸಂಸ್ಧೆಗೆ ಭೂಮಿಯನ್ನು ದಾನವಾಗಿ ಕೊಟ್ಟ ಅಂದಿನ ಮಹಾರಾಜರಾಗಿದ್ದ 'ನಾಲ್ವಡಿ ಕೃಷ್ಣರಾಜ ಒಡೆಯರ್' ರವರ ಪ್ರತಿಮೆಯನ್ನು ಸಂಸ್ಥೆಯಲ್ಲಿ ಪ್ರತಿಷ್ಠಾಪಿಸುವಂತೆ ಮತ್ತೊಮ್ಮೆ ಕೋರಲಾಯಿತು.ಸಂಸ್ಥೆಯಲ್ಲಿ ದಿನಾಂಕ ೧೦/೦೬/೨೦೧೦ ರಂದು ರಾಜವರ್ಯರ ಪ್ರತಿಮೆಯನ್ನು 'ಭಾರತರತ್ನ ಪ್ರಾಚಾರ್ಯ. ಡಾ. ಸಿ ಎನ್ ಆರ್ ರಾವ್',ಉದ್ಘಾಟಿಸುವ ಮೂಲಕ ಸಂಸ್ಧೆಗೆ ಸಮಪರ್ಪಿಸಿದರು. ಕಾರ್ಯದರ್ಶಿಯಾಗಿ 'ಬಿ ಪ್ರಕಾಶ', ಹಾಗೂ ಅಧ್ಯಕ್ಷರಾದ 'ರಾಘವೇಂದ್ರ',ರವರ ನೇತೃತ್ವದಲ್ಲಿ ಉತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಕೆಲವು ಮಹತ್ವದ ಕಾರ್ಯಕ್ರಮಗಳು :[೨]

  • ಮುಖ್ಯ ಗ್ರಂಥಾಲಯದಲ್ಲಿ ಸುಮಾರು 2 ಲಕ್ಷ ರೂಗಳ ಕನ್ನಡ ಪುಸ್ತಕಗಳನ್ನು ತರಿಸಿ, ವಿತರಣಿಗೆ ಇಡಲಾಗಿದೆ. ಇದರ ಉದ್ಘಾಟನೆಯನ್ನು ಸಂಸ್ದೆಯ ಸಹ-ನಿರ್ದೇಶಕರಾದ 'ಪ್ರಾಚಾರ್ಯ ಏನ್.ಬಾಲಕೃಷ್ಣನ್', ನೆರವೇರಿಸಿದರು
  • ಮೊಟ್ಟ ಮೊದಲನೇ ಬಾರಿಗೆ ಸಂಘದ ವತಿಯಿಂದ 'ರಾಜ್ಯೋತ್ಸವ ಓಟ', ನವಂಬರ ೧ ೨೦೧೩- ರಂದು ಏರ್ಪಡಿಸಿದ್ದು ಭಾಗವಹಿಸಿದೇಲ್ಲರಿಗೂ 'ಟಿ ಶರ್ಟ್' ವಿತರಿಸಲಾಯಿತು.

ಶ್ರೇಯೋಭಿಲಾಶಿಗಳು[ಬದಲಾಯಿಸಿ]

  • ಹೆಚ್ ಜಗದೀಶ,
  • ಪಿ ಎಸ್ ಪ್ರಕಾಶ,
  • ಗೋಪಿನಾಥ್ ರಾವ್,
  • ಬಸವರಾಜ್,
  • ಜಿ ವಿ ಸತೀಶ,
  • ಎಂ ನಾರಾಯಣಪ್ಪ,
  • ಬಿ ಪ್ರಕಾಶ,
  • ಎಲ್ ಆರ್ ವೆಂಕಟರಂಗ,
  • ಮಹದೇವಯ್ಯ,
  • ರಾಜಶೇಖರ,
  • ರಾಜಮುನಿಯಪ್ಪ
  • ವಜ್ರಪ್ಪ,
  • ಗೋಪಾಲ,
  • ಎಸ್.ಆರ್. ರಾಮಕೃಷ್ಣ
  • ಶ್ರೀಮತಿ ವಾಣಿಪ್ರಭಾಕರ್,
  • ಸೋಮಾವತಿ,
  • ಉದಯಕುಮಾರಿ,
  • ನಂದಿನಿ,
  • ಮಧುಪದ್ಮಾವತಿ,
  • ರಾಜಲಕ್ಷ್ಮಿ,
  • ಸುಮನ,

ಆ ಸಮಯದಲ್ಲಿ ವಿದ್ಯಾರ್ಥಿಗಳಾಗಿದ್ದ

  • ಎಸ್ ಜೆ ಸುರೇಶ,
  • ರಾಮಕೃಷ್ಣ ಭಟ್,
  • ವಿನಯ ಭಟ್ಟ,
  • ಜಿ ಕೆ ವಾದಿರಾಜ್

ಉಲ್ಲೇಖಗಳು[ಬದಲಾಯಿಸಿ]

  1. .'ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಕನ್ನಡ ಸಂಘ' Archived 2015-09-23 ವೇಬ್ಯಾಕ್ ಮೆಷಿನ್ ನಲ್ಲಿ.
  2. "'ಹಲವಾರು ಕಾರ್ಯಕ್ರಮಗಳು'". Archived from the original on 2016-03-05. Retrieved 2015-01-21.