ವಿಷಯಕ್ಕೆ ಹೋಗು

ಭಾರತೀಯ ರೂಪಾಯಿ ಮತ್ತು ಅದರ ಮೌಲ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭಾರತೀಯ ರೂಪಯಿ ಮತ್ತು ಅದರ ಮೌಲ್ಯ ಇಂದ ಪುನರ್ನಿರ್ದೇಶಿತ)


ಭಾರತಕ್ಕೆ ಸ್ವಾತಂತ್ರ್ಯ ದೊರೆತ ವರ್ಷ ೧೯೪೭ರಲ್ಲಿ ಭಾರತದ ರೂಪಾಯಿಯ ಮೌಲ್ಯ ಅಮೆರಿಕಾದ ಡಾಲರ್ನಷ್ಟೇ ಆಗಿದ್ದು ಎರಡೂ ಸರಿಸಮಾನವಾಗಿದ್ದವು. ಅಂದಿನಿಂದ ಇಂದಿನ ವರೆಗೆ ಭಾರತದ ರೂಪಾಯಿ ಸರಿ ಸುಮಾರು ೬೫ ರಷ್ಟು ಕಡಿಮೆಯಾಗಿರುವುದು ಗಮನಾರ್ಹ ಮಾಹಿತಿ. ಭಾರತದ ಇತಿಹಾಸದಲ್ಲೇ ನಾವು ಕಂಡರಿಯದ ಹಾಗೆ ರೂಪಯಿಯ ಮೌಲ್ಯ ಒಮ್ಮೆಲೆ ಕುಸಿದಿತ್ತು. ಇದಕ್ಕಿದ್ದ ಮುಖ್ಯ ಕಾರಣ ಆಮದುದಾರರು ಡಾಲರ್ಗೋಸ್ಕರ ಬೇಡಿಕೆ ಹೆಚ್ಚಿಸುತ್ತಿದ್ದದ್ದು. ಭಾರತದ ರೂಪಾಯಿಯು ಕಳೆದ ಎರಡು ವರ್ಷಗಳಲ್ಲಿ ರೂಪಾಯಿಯ ಮೌಲ್ಯದಲ್ಲಿ ಬಹಳ ವ್ಯತ್ಯಾಸವಾಗಿದ್ದು ಇದು ಭಾರತ ದೇಶದ ಬೆಳವಣಿಗೆ,ವ್ಯಾಪಾರ ಮತ್ತು ಬಂಡವಾಳ ಹೀಗೆ ಹಲವಾರು ರೀತಿಯಲ್ಲಿ ಧಕ್ಕೆ ಉಂಟು ಮಾಡಿತ್ತು. ದೇಶದೆಲ್ಲೆಡೆ ಹಣದುಬ್ಬರ ಉಂಟಾಗಿತ್ತು. ಕರೆನ್ಸಿ ಮಾರುಕಟ್ಟೆಯಲ್ಲಿ ವ್ಯವಸ್ಥಾಪಕ ಚಂಚಲತೆಯನ್ನು ಕುರಿತು ಬಹಳ ದೊಡ್ಡ ಸವಾಲು ಮೂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ಮಾಡಿದ ಯಾವುದೇ ನಿಯಮಗಳು ಫಲಿಸದ ಕಾರಣ ರೂಪಾಯಿಯ ಮೌಲ್ಯ ಕುಸಿಯುತ್ತಲೇ ಇತ್ತು. ಭಾರತದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ರೂಪಾಯಿಯ ಕುಸಿತ ಭಾರತದಲ್ಲಿ ಹಣದುಬ್ಬರಕ್ಕೆ ಎಡೆ ಮಡಿಕೊಟ್ಟಿದೆ.

ಚಿತ್ರ:Https://commons.wikimedia.org/wiki/File:Indian rupee sign.svg
ಭಾರತದ ರೂಪಾಯಿಯ ಚಿನ್ಹೆ

ರೂಪಾಯಿಯ ಪ್ರಯಾಣ

[ಬದಲಾಯಿಸಿ]

ಕಳೆದ ೬೬ ವರ್ಷ್ಗಳಲ್ಲಿ ಭಾರತದ ರೂಪಾಯಿ ಬಹಳಷ್ಟು ಏರುಪೇರುಗಳನ್ನು ಕಂಡಿದೆ. ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿ ರೂಪಯಿಯ ಮೌಲ್ಯವನ್ನು ಪ್ರಭಾವಿಸಿರುವುದು ಸತ್ಯದ ಮಾತು. ಭಾರತದ ಆಯವ್ಯಯದ ಪಟ್ಟಿಯಲ್ಲಿ ಯಾವುದೇ ವಿದೇಶೀ ಸಾಲಗಳು ಇರಲಿಲ್ಲ. ಭಾರತದ ಏಳಿಗೆಗಾಗಿ ಜಾರಿಗೆ ತಂದ " ೫ ವರ್ಶದ ಯೋಜನೆ " ವಿದೇಶದಿಂದ ಹಣಕಾಸಿನ ಸಾಲ ಪಡೆಯವುದನ್ನೂ ಪ್ರಾರಂಭಿಸಿತು. ಇದರಿಂದ ಭಾರತದ ರೂಪಯಿಯ ಮೌಲ್ಯ ಮತ್ತಶ್ಟು ಕಡಿಮೆಯಾಗಬೇಕಾಯಿತು. ೧೯೪೮ ಇಸವಿಯಿಂದ ೧೯೬೬ ರ ವರೆಗೂ ರೂಪಾಯಿಯ ಮೌಲ್ಯ ಪ್ರತಿ ಡಾಲರ್ ಗೆ ೪.೭ ರೂಪಾಯಿಯಂತೆ ವಿಶ್ವ ಮಾರುಕಟ್ಟೆಯಲ್ಲಿ ನಡೆಯುತ್ತಿತ್ತು. ೧೯೬೨ರಲ್ಲಿ ಚೀನಾ ದೀಶದ ವಿರುದ್ಧ ಮತ್ತು ೧೯೬೫ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧಗಳ ಕಾರಣ ರೂಪಾಯಿಯ ಮೌಲ್ಯವನ್ನು ಭಾರತ ಸರ್ಕಾರ ಮತ್ತಷ್ಟು ಕಡಿಮೆ ಮಾಡಬೇಕಾಯಿತು. ಇದರಿಂದ ಭಾರತದ ಬಜೆಟ್ ಮೇಲೆ ಪರಿಣಾಮ ಬೀರಿದ್ದು ಬಹಳ ಕೊರತೆ ಕಂಡು ಬಂದಿತು. ಹಿಂದೆ ಭಾರತದ ರೂಪಾಯಿ ಮತ್ತು ಬ್ರಿಟಿಷರ ಪೌಂಡ್ ಎರಡನ್ನು ಹೋಲಿಸಿ ಮೌಲ್ಯವನ್ನು ನಿರ್ಧಾರ ಮಾಡುತ್ತಿದ್ದರು. ೧೯೭೧ ನೇ ಇಸವಿಯ ನಂತರ ಬ್ರಿಟಿಷರ ಪೌಂಡನ್ನು ಬಿಟ್ಟು ಅಮೆರಿಕನ್ನರ ಡಾಲರ್ ಬಳಕೆಯ ಪ್ರಾರಂಭವಾಯಿತು. ೧೯೭೫ ರಲ್ಲಿ ರೂಪಾಯಿ ಮತ್ತೆ ೮.೩೯ ರೂಪಾಯಿಗಳಿಗೆ ಇಳಿದು ಹೋಯಿತು. ೧೯೮೫ ನೇ ಇಸವಿಯ ಹೊತ್ತಿಗೆ ಭಾರತದ ರೂಪಾಯಿಯ ಮೌಲ್ಯ ಪ್ರತಿ ಡಾಲರ್ ಗೆ ೧೨ ರೂಪಾಯಿಯಂತೆ ಮತ್ತಷ್ಟು ಕಡಿಮೆಯಾದದ್ದು ದೇಶದೆಲ್ಲೆಡೆ ಅಚ್ಚರಿ ಮೂಡಿಸಿತು. ೧೯೯೧ ರಲ್ಲಿ ಭಾರತದ ಸಮತೋಲನ ಪಟ್ಟಿಯಲ್ಲಿ ಗಂಭೀರವಾದ ಕೊರತೆಯೊಂದು ಕಂಡು ಬಂದಿತು. ಇದ್ದಕ್ಕಿದ್ದ ಹಾಗೆ ಭಾರತದ ರೂಪಾಯಿ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಿ ಅದರ ಮೌಲ್ಯ ತಕ್ಷಣ ಜಾರಿತು. ಹಣದುಬ್ಬರ ದೇಶವನ್ನು ತನ್ನ ವಶ ಪಡೆಸಿಕೊಂಡಿತ್ತು. ಇಂತಹ ಸಂದರ್ಭದಲ್ಲಿ ಡಾಲರ್ ಗೆ ಸುಮಾರು ೧೭.೯೦ ರೂಪಾಯಿಯಂತೆ ರೂಪಾಯಿಯ ಮೌಲ್ಯ ಮತ್ತಷ್ಟು ಇಳಿಯಿತು. ೧೯೯೩ ನೇ ಇಸವಿ ಭಾರತದ ದೇಶಕ್ಕೆ ಮತ್ತು ದೇಶದ ಬೆಳವಣಿಗೆಗೆ ಬಹಳ ಮುಖ್ಯವಾದ ವರ್ಷವಾಯಿತು. ಭಾರತದ ಮಾರುಕಟ್ಟೆಯಲ್ಲಿ ಹಣಕಾಸು ಮತ್ತು ವ್ಯವಹಾರ ಉಚಿತವಾಯಿತು. ವಿನಿಮಯದ ದರವನ್ನು ಮಾರುಕಟ್ಟೆಯ ಶಕ್ತಿಗಳೇ ನಿರ್ಧರಿಸುವಂತೆ ಅವಕಾಶ ಮಾಡಿಕೊಡಲಾಯಿತು. ತುರ್ತು ಸಂದರ್ಭದಲ್ಲಿ ಮಾತ್ರ ರಿಸರ್ವ್ ಬ್ಯಾಂಕ್ ನಿರ್ಧಾರ ತೆಗೆದುಕೊಳ್ಳುವಂತೆ ನಿಯಮ ಒಂದನ್ನು ಜಾರಿಗೆ ತರಲಾಯಿತು. ೨೦೦೦ ಮತ್ತು ೨೦೧೦ ನೆ ಇಸವಿಗಳ ನಡುವೆ ಪ್ರತಿ ಡಾಲರ್ ಗೆ ೪೦ ರಿಂದ ೫೦ ರೂಪಾಯಿಗಳ ನಡುವೆ ಬದಲಾವಣೆಗಳನ್ನು ಎದುರಿಸಿತು. ೨೦೦೮ ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ರೂಪಾಯಿಯ ಮೌಲ್ಯ ನಿಧಾನವಾಗಿ ಇಳಿಯುತ್ತಲೇ ಹೋಯಿತು. ವಿದೇಶಿ ಬಂಡವಾಳದ್ ಒಳಹರಿವು ಹೆಚ್ಚಿದ್ದು ದೇಶದ ಆರ್ಥಿಕ ಬೆಳವಣಿಗೆಗೂ ಸಹಾಯವಾಯಿತು.

ಇಂದಿನ ಪರಿಸ್ಥಿತಿ

[ಬದಲಾಯಿಸಿ]
ಚಿತ್ರ:Https://www.google.co.in/search?q=the+american+dollar+and+the+indian+rupee&rlz=1C1CHWA enIN607IN607&es sm=93&biw=1366&bih=667&tbm=isch&source=lnms&sa=X&ei=mO3YVNH1NsThuQTKw4H4Dw&ved=0CAcQ AUoAg
ರೂಪಾಯಿಯ ಇಳಿತ ಮತ್ತು ಡಾಲರ್ ನ ಏರಿಕೆ?

ಕಳೆದ ವರ್ಷದಲ್ಲಿ ಭಾರತದ ರೂಪಾಯಿ ೬೫ ರೂಪಾಯಿಯಷ್ಟು ಕಡಿಮೆ ಮೌಲ್ಯವನ್ನು ದಾಖಲು ಮಡಿರುವುದು ಎಲ್ಲರಿಗು ಕಂಡು ಬಂದಂತಹ ವಿಷಯ. ಆಮದುದಾರರಿಂದ ಬಹಳ ಬೇಡಿಕೆಗಳು ಉಂಟಾಗಿ ಆ ಬೇಡಿಕೆಗಳನ್ನು ಪೂರ್ಣಗೊಳಿಸಲು ನಮ್ಮ ದೇಶದಲ್ಲಿ ಅವಶ್ಯಕ ಸಂಪನ್ಮೂಲಗಳು ದೊರೆಯದ ಕಾರಣ ಭಾರತದ ಅಭಿವೃದ್ಧಿ ನಿಧಾನವಾಗಿದ್ದು, ರೂಪಾಯಿಯ ಮೌಲ್ಯ ಕಡಿಮೆಯಾಗಲು ಬಹಳ ಮೂಖ್ಯವಾದ ಕಾರಣಗಳಲ್ಲಿ ಒಂದಾಗಿದೆ. ಇಷ್ಟೇ ಅಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿಕೆ ನೀಡಿದ ಪ್ರಕಾರ ತಿಂಗಳಿಗೆ ಒಮ್ಮೆಯಾದರೂ ರೂಪಾಯಿಯ ಮೌಲ್ಯ ಬಿದ್ದಿರುವ ಸಂಗತಿ ದೇಶವನ್ನೇ ಗಾಬರಿ ಮೂಡಿಸಿತ್ತು. ಹೀಗೆ ಇಳಿಕೆಯನ್ನು ಕಾಣುತ್ತಿದ್ದ ರೂಪಾಯಿಯ ಮೌಲ್ಯ ಮತ್ತಷ್ಟು ಇಳಿಕೆಯನ್ನು ಕಂಡಿದ್ದು ಬ್ರಿಟಿಷರ ಪೌಂಡ್ ನ ವಿರುದ್ಧ. ಒಂದು ಪೌಂಡ್ ಗೆ ೧೦೨ ರೂಪಾಯಿಗಳು ಕೊಡಬೇಕಾಗಿದ್ದು, ಭಾರತದ ಮಾರುಕಟ್ಟೆಯಲ್ಲೂ ಗೊಂದಲದ ಅಲೆಗಳನ್ನು ಎಬ್ಬಿಸಿತು. ರಿಸರ್ವ್ ಬ್ಯಾಂಕ್ ತೆಗೆದುಕೊಂಡ ವಿವಿಧ ಕ್ರಮಗಳು ಹಾಗು ರೂಪಿಸಿದ ನಿಯಮಗಳು ಭಾರತದ ರೂಪಾಯಿಯ ಮೌಲ್ಯವನ್ನು ವಿದೇಶಿ ಮಾರುಕಟ್ಟೆಯಲ್ಲಿ ಏರಿಸುವುದರಲ್ಲಿ ಯಾವುದೇ ಸಫಲತೆಯನ್ನು ಕಾಣಲಿಲ್ಲ. ಭಾರತದಲ್ಲಿ ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್ ನೊಂದಿಗೆ ಕೈಗೂಡಿಸಿ ಹಲವಾರು ಕ್ರಮಗಲಳನ್ನು ಮತ್ತು ನಿಯಮಗಳನ್ನು ರೂಪುಗೊಳಿಸಿದ್ದು, ಭಾರತದಲ್ಲಿ ಇರುವ ಹಣದುಬ್ಬರವನ್ನು ಕಡಿಮೆ ಮಾಡುವುದೇ ಇವುಗಳ ಉದ್ದೇಶ ಎಂ೦ದು ತಿಳಿಸಿದ್ದಾರೆ.

ರೂಪಾಯಿಯ ಮೌಲ್ಯ ಇಳಿದಿರುವುದು ಏಕೆ?

[ಬದಲಾಯಿಸಿ]

ಭಾರತದ ರೂಪಾಯಿ ೨೦೧೪ನೇ ಇಸವಿಯಲ್ಲಿ ತೀವ್ರ ಕಡಿಮೆಯಾಗಿದ್ದು, ದೇಶದಲ್ಲಿ ಹಣದುಬ್ಬರ ಹೆಚ್ಚಾಯಿತು. ೨೮ ಆಗಸ್ಟ್ ೨೦೧೩ರಲ್ಲಿ ಪ್ರತಿ ಡಾಲರ್ ಗೆ ೬೮.೮೨೫ ರೂಪಾಯಿಗಳಂತೆ ಚಲಾವಣೆಯಲ್ಲಿತ್ತು. ಆದರೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಭಾರತೀಯ ರಿಸರ್ವ್ ಬ್ಯಾಂಕ್ ತತ್ ಕ್ಷಣ ಸರ್ಕಾರದ ಆಡಳಿತದಲ್ಲಿ ನಡೆಯುತ್ತಿದ್ದ ಭಾರತ್ ಪೆಟ್ರೋಲಿಯಂ ಹಾಗು ಹಿಂದೂಸ್ತಾನ್ ಪೆಟ್ರೋಲಿಯಂಗಳಂತಹ ಕಂಪನಿಗಳಿಗೆ ಒಂದು ವಿಶೇಷವಾದ ಅನುಮತಿಯನ್ನು ರಚಿಸಲಾಯಿತು. ಡಾಲರ್ ಗಳ ಮೂಲಕ ಕೊಳ್ಳುವ ಅವಕಾಶ ಒದಗಿಸಿಕೋಡಲಾಯಿತು. ಪ್ರತಿ ತಿಂಗಳು ಸುಮಾರು ೮ ಮಿಲಿಯನ್ ಡಾಲರ್ ಗಳಷ್ಟು ಹಣಕಾಸು ಭಾರತಕ್ಕೆ ಪೆಟ್ರೋಲಿಯಂ ಆಮದು ಮಾಡುವುದಕ್ಕೆ ಬಳಕೆ ಆಗುತ್ತಿತ್ತು. ಡಾಲರ್ ಗಳನ್ನು ಕೊಳ್ಳುವುದರ ಮೂಲಕ ದೊರೆಯುವ ಹಣವನ್ನು ಪೆಟ್ರೋಲಿಯಂ ಕೊಳ್ಳುವುದಕ್ಕಾಗಿ ಸಹಾಯವಾಗುತ್ತದೆ ಎಂಬುದು ಈ ಯೋಜನೆಯ ಉದ್ದೇಶವಾಗಿತ್ತು. ಈ ಯೋಜನೆ ಸಫಲವಾಗಿ ರೂಪಾಯಿಯ ಮೌಲ್ಯ ೬೮ ರೂಪಾಯಿಗಳಿಂದ ೬೭ ರೂಪಾಯಿಗಳಾಗಿ ಬದಲಾವಣೆಯನ್ನು ಕಂಡಿತು. ಆದರೆ ಇಷ್ಟು ಚಂಚಲತೆ ರೂಪಾಯಿಯ ಮೌಲ್ಯದಲ್ಲಿ ಏಕೆ? ೧) ಆರ್ಥಿಕ ವ್ಯವಸ್ಥೆ - ಭಾರತ ದೇಶದಲ್ಲಿ ಡಾಲರ್ ಗಳಿಗಾಗಿ ಬೇಡಿಕೆ ಹೆಚ್ಚಾದಂತೆ, ಇಲ್ಲಿನ ಆರ್ಥಿಕ ವ್ಯವಸ್ಥೆಯಲ್ಲಿ ಆ ಬೇಡಿಕೆಯನ್ನು ಪೂರೈಸಲು ಅವಶ್ಯಕವಾದ ಸಮ್ಪನ್ಮೂಲಗಳು ಲಭಿಸದ ಕಾರಣ ಭಾರತದ್ಲ್ಲಿ ಡಾಲರ್ ನ ಮೌಲ್ಯ ಏರಿ ನಮ್ಮ ರೂಪಾಯಿಯ ಬೆಲೆ ಇಳಿಯುತ್ತದೆ. ಆಮದುದಾರರು ಇತರ ದೇಶಗಳಿಗೆ ಹಣವನ್ನು ಪಾವತಿ ಮಾಡಲು ಡಾಲರ್ ಗಳಿಗಾಗಿ ತಮ್ಮ ಬೇಡಿಕೆಯನ್ನುಇಟ್ಟಿರಬಹುದು ಅಥವಾ ಅಮೆರಿಕಾ ಮತ್ತು ಬ್ರಿಟನ್ ನ೦ತಹ ದೇಶಗಳು ನಮ್ಮ ದೇಶವಾದ ಭಾರತದಲ್ಲಿ ಹೂಡಿರುವ ಬಂಡವಾಳವನ್ನು ಹಿಂದಕ್ಕೆ ತೆಗೆದುಕೊಂಡು ಮತ್ತಿತರ ದೇಶಗಳಲ್ಲಿ ಈ ಬಂಡವಾಳವನ್ನು ಹೂಡಿರಬಹುದು. ಇಂತಹ ಕಾರಣಗಳಿಂದ ಭಾರತದಲ್ಲಿ ಡಾಲರ್ ನ ಬಳಕೆ ಹೆಚ್ಚಾಗುತ್ತಾ ಹೋಯಿತು ಮತ್ತು ಅದರ ದೊರಕೆ ಕಡಿಮೆಯಾಯಿತು. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಿಂದ ಹಿಂದಕ್ಕೆ ಪಡೆದಿರುವ ಬಂಡವಾಳವನ್ನು ಸಿಂಗಾಪುರ್ ನಂತಹ ದೇಶದಲ್ಲಿ ಇಡಲಾಅಗುತ್ತಿದೆ. ನಮ್ಮ ದೇಶದಲ್ಲಿರುವ ಅಧಿಕಾರಶಾಹಿ ಸಮಸ್ಯೆಗಳು ಭಾರತ ದೇಶದ ಆರ್ಥಿಕ ಬೆಳವಣಿಗೆಗೆ ಧಕ್ಕೆ ಉಂಟು ಮಾಡಿರುವುದು ಸತ್ಯದ ಮಾತು. ಅಮೇರಿಕದಂತಹ ದೇಶದಲ್ಲಿರುವ, ಬಂಡವಾಳವನ್ನು ಹೂಡಲು ಆಸಕ್ತಿ ಇರುವವರನ್ನು ನಮ್ಮ ದೇಶಕ್ಕೆ ಕರೆತಂದು ಅವರಿಗೆ ಅನುಕೂಲವಾಗುವಂತಹ ಅವಕಾಶವನ್ನು ದೊರಕಿಸಿಕೊಡುವುದರ ಮೂಲಕ ಈ ಬೇಡಿಕೆಯ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು. ೨) ಭಾರತದಲ್ಲಿ ಅಸ್ಪಷ್ತತೆ - ಭಾರತದ ರೂಪಾಯಿ ಶೇಕಡ ೧೬ರಷ್ಟು ಕೇವಲ ಒಂದು ವರ್ಷದಲ್ಲಿ ಬದಲಾಗಿದ್ದು ಗಮನಾರ್ಹ ವಿಷಯ. ನಿಯಮಗಳನ್ನು ರಚಿಸಿರುವ ನಮ್ಮ ದೇಶದಲ್ಲಿ ಯವುದೇ ರೀತಿಯ ಸ್ಪಷ್ಟತೆ ಕಂಡುಬಂದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಒಮ್ಮೆ ದೇಶದೆಲ್ಲೆಡೆ ಹಣಕಾಸಿನ ದೊರಕೆ ಕಡಿಮೆ ಮಾಡುವುದಾಗಿ ಹೇಳಿಕೆಯನ್ನು ನೀಡಿದ್ದು, ಮತ್ತೊಂದೆಡೆ ಕರೆನ್ಸಿ ಮಾರುಕಟ್ಟೆಗೆ ೧ ಬಿಲಿಯನ್ ಡಾಲರ್ ನಷ್ಟು ಹಣವನ್ನು ನೀಡುವುದಾಗಿ ಹೇಳಿಕೆಯನ್ನು ನೀಡಿತ್ತು. ಇಂತಹ ಹೇಳಿಕೆಗಳ ಕಾರಣ ದೇಶದ ಜನತೆಗೂ ಹಾಗು ಇತರ ದೇಶದ ಬಂಡವಾಳ ಹೂಡುವ್ವರಿಗೂ ಗೊಂದಲ ಮೂಡುವುದು ಸಹಜ. ೩) ೨೦೧೨ ಮತ್ತು ೨೦೧೩ ನೇ ಇಸವಿಗಳಲ್ಲಿ ಭಾರತದ GDP (gross domestic product) ಹತ್ತು ವರ್ಷದಲ್ಲೇ ಅತಿ ಕಡಿಮೆಯಾಗಿತ್ತು (೫%). ಈ ಪರಿಸ್ಥಿತಿ ೨೦೧೩-೧೪ ರಲ್ಲೂ ಏಳಿಗೆ ಕಾಣದ ಕಾರಣ ಭಾರತದಲ್ಲಿರುವ ಇತರ ದೇಶದ ಕರೆನ್ಸಿಯ ದೊರಕೆ ಕಡಿಮೆಯಾಗುತ್ತಾ ಹೋಯಿತು. ಅಮೇರಿಕಾದಲ್ಲಾದ ಹಣದುಬ್ಬರದಿಂದ ಈಗ ನಿಧಾನವಾಗಿ ಚೇತರಿಸಿಕೊಂಡಿರುವ ಅಮೇರಿಕಾ ತನ್ನ ಡಾಲರ್ ನ ಮೌಲ್ಯವನ್ನು ಶಕ್ತಿಶಾಲಿಯನ್ನಗಿಸುವುದರ ಕಡೆ ಪ್ರಯತ್ನಗಳನ್ನು ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತದ ಕೇಂದ್ರ ಸರ್ಕಾರ ಒಂದುಗೂಡಿ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಇತರ ದೇಶಗಳಿಂದ ಒಳಬರುವ ಹಣಕಾಸಿನ ಮೇಲೆ ಕಡಿತಹಗಳನ್ನು ಹೇರಿತು. ಮಾರುಕಟ್ಟೆಯಲ್ಲಿ ಈ ನಿಯಮದ ವಿರುದ್ಧ ಹಲವಾರು ದನಿಗಳು ಎದ್ದವು. ಭಾರತದಿಂದ ಹೊರಹೋಗುವ ಹಣಕಾಸಷ್ಟೇ ಅಲ್ಲದೆ ದೇಶದ ಒಳಗೆ ಬಂಡವಾಳವಾಗಿ ಬರುವ ಹಣಕಾಸನ್ನೂ ಕಡಿಮೆಯಾಗಿಸಿತು. ಭಾರತದ ರೂಪಾಯಿ ಬ್ರಜಿಲ್, ಇಂಡೊನೇಶಿಯ ಮತ್ತು ರಷ್ಯಾದಂತಹ ದೇಶಗಳ ಕರೆನ್ಸಿಯನ್ನು ಅನುಕರಿಸುತ್ತಿದೆ ಎಂಬುದು ಕಂಡು ಬಂದಿದೆ. ೪) ಕಚ್ಛ ತೈಲ - ಭಾರತ ಕಚ್ಛ ತೈಲದ ಸಮ್ಪನ್ಮೂಲಗಳನ್ನು ಇತರ ದೇಶಗಳಿಂದ ಹೆಚ್ಚಾಗಿ ಆಮದು ಮಾಡುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದರ ಬೆಲೆ ಭಹಳ ದೊಡ್ಡ ಸಮಸ್ಯೆಯಾಗಿದ್ದು ಪ್ರತಿ ವರ್ಷ ಹೆಚ್ಚುತ್ತಲೇ ಹೋಗುತ್ತಿದೆ.ವಿಶ್ವದೆಲ್ಲೆಡೆ ತೈಲದ ಬೆಲೆಯನ್ನು ಡಾಲರ್ ಗಳಲ್ಲಿ ವ್ಯಕ್ತ ಪಡಿಸಲಾಗಿದ್ದು, ಬೆಲೆ ಹೆಚ್ಚಿದಂತೆಲ್ಲಾ ಡಾಲರ್ ಗೋಸ್ಕರ ಇರುವ ಬೇಡಿಕೆಯೂ ಹೆಚ್ಚಿತು. ಇದರಿಂದ ಭಾರತ್ದ ರೂಪಯಿಯ ಮೌಲ್ಯ ಮತ್ತಷ್ಟು ಕುಸಿಯಿತು. ಜಪಾನ್ ಮತ್ತು ಯೂರೋಪ್ ದೇಶಗಳಿಂದ ಬಹಳ ಹಣಕಾಸು ಹೊರ ಹೊಮ್ಮುತ್ತಿದ್ದು ಅವುಗಳ ಮೌಲ್ಯ ವಿಶ್ವ ಮಾರುಕಟೆಯಲ್ಲಿ ಕಡಿಮೆಯಾಯಿತು. ಆದ್ರಎ ಸ್ಮೆರಿಕಾದ ಫೆಡೆರಲ್ ಬ್ಯಾಂಕ್ ಡಾಲರ್ ನ ಮೌಲ್ಯವನ್ನು ಹೆಚ್ಚಿಸುವುದರಲ್ಲಿ ತೊಡಗಿಸಿಕೊಂಡು ೨೦೧೩ನೇ ಇಸವಿಯಲ್ಲಿ ಅದರ ಮೌಲ್ಯ ೧.೯೧ % ನಷ್ಟು ಹೆಚ್ಚಿತು. ಭಾರತದ ರೂಪಾಯಿಯ ಮೌಲ್ಯದಲ್ಲಿ ಕುಸಿತ ಕಾಣುವುದಕ್ಕೆ ಕಾರಣ ಅಮೆರಿಕಾದ ಡಾಲರ್ ಹಗೆ ಬೇಡಿಕೆ ಏರಿರುವುದು ಎಂದು ಬಿರ್ಲಾ ಕಂಪನಿಯ ಸಿ.ಐ.ಒ ಆದ ಮಹೇಶ್ ಪಾಟಿಲ್ ಹೇಳಿಕೆಯನ್ನು ನೀಡಿದ್ದರು. ಮಾರುಕಟ್ಟೆಯಲ್ಲಿ ಈ ನಿಯಮದ ವಿರುದ್ಧ ಹಲವಾರು ದನಿಗಳು ಎದ್ದವು. ಭಾರತದಿಂದ ಹೊರಹೋಗುವ ಹಣಕಾಸಷ್ಟೇ ಅಲ್ಲದೆ ದೇಶದ ಒಳಗೆ ಬಂಡವಾಳವಾಗಿ ಬರುವ ಹಣಕಾಸನ್ನೂ ಕಡಿಮೆಯಾಗಿಸಿತು. ಭಾರತದ ರೂಪಾಯಿ ಬ್ರಜಿಲ್, ಇಂಡೊನೇಶಿಯ ಮತ್ತು ರಷ್ಯಾದಂತಹ ದೇಶಗಳ ಕರೆನ್ಸಿಯನ್ನು ಅನುಕರಿಸುತ್ತಿದೆ ಎಂಬುದು ಕಂಡು ಬಂದಿದೆ. ಭಾರತದಲ್ಲಿ ಈಗ ವಿದೇಶಿ ಕರೆನ್ಸಿಯ ದೊರಕೆ ಬಹಳ ಇದ್ದು ವಿದೇಶೀಯರು ತಮ್ಮ ಬಂಡವಾಳವನ್ನು ಹಿಂದಕ್ಕೆ ತೆಗೆದು ಕೊಂಡರೆ ಭಾರತದ ಆರ್ಥಿಕ ಪರಿಸ್ಥಿತಿ ಹದಗೆಡುವುದು ಖಂಡಿತ. ಮಾರುಕಟ್ಟೆಯಲ್ಲಿ ಚಂಚಲತೆ - ಭಾರತದ ಕರೆನ್ಸಿ ಮಾರುಕಟ್ಟೆಯಲ್ಲಿ ಹಲವ್ವರು ವರ್ಶಗಳಿಂದಬಹಳಾ ಚಂಚಲತೆಯನ್ನು ಪ್ರದರ್ಶಿಸಿದೆ. ಭಾರತದಲ್ಲಿ ಬಂಡವಾಳ ಹೂಡಬೇಕೋ ಬೇಡವೋ ಎಂಬ ಪ್ರಶ್ನೆ ಇತರ ದೇಶಗಳಿಗೆ ಕಾಡುತ್ತಾ ಬಂದಿದೆ ಜೂನ್ ೨೦೧೩ ನೇ ಇಸವಿಯಲ್ಲಿ ಭಾರತದಿಂದ ಸುಮಾರು ೪೪೧೬೨ ಕೋಟಿಯಷ್ಟು ಹಣಕಾಸು ಹೊರಹೋಯಿತು. ಇದರಿಂದ ಆಯವ್ಯಯದ ಪಟ್ಟಿಯಲ್ಲಿ ಕೊರತೆ ಇರುವುದು ರೂಪಾಯಿಯ ಮೌಲ್ಯ ಇನ್ನೂ ಬೀಳುವುದಕ್ಕೆ ಕಾರಣವಾಯಿತು. ಭಾರತದ ರೂಪಾಯಿ ತನ್ನ ಮೌಲ್ಯವನ್ನು ಭಾರತದ್ಲ್ಲಿ ಬಂಡವಾಳಗಳನ್ನು ಹೂಡುವವರಿಗೆ ನಿರಾಸಕ್ತಿ ಮೂಡಿಸುವುದು ಸಹಜ. ಭಾರತದ ರೂಪಾಯಿ ಮತ್ತು ಅದರ ಚಂಚಲತೆಯನ್ನು ಕಂಡ ಹೂಡಿಕೆದಾರರಿಗೆ ಒಳ್ಳೆಯ ಮೌಲ್ಯದಿಂದ ಸಿಗುವ ಲಾಭವು ದೊರಕುವುದಿಲ್ಲ ಎಂದು ತಿಳಿದ ಕೂಡಲೆ ನಿರಾಸಕ್ತರಾಗುತ್ತಾರೆ. ಭಾರತ ಒಂದೇ ಇ೦ತಹ ಪರಿಸ್ಥಿತಿಯನ್ನು ಅನುಭವಿಸುತ್ತಿರುವ ದೇಶವಲ್ಲ ಎಂಬುದು ಬೆಳಕಿಗೆ ಬಂದಿದೆ. ಇದೇ ರೀತಿಯ ಬಿಕ್ಕಟ್ಟಿನ ಪರಿಸ್ಥಿತಿ ಬ್ರಜ಼ಿಲ್ ಮತ್ತು ಇಂಡೊನೇಶಿಯಾದ೦ತಹ ದೇಶಗಳಲ್ಲಿಯೂ ಸೃಷ್ಟಿಯಾಗಿದೆ. ವಿಶ್ವದೆಲ್ಲೆಡೆ ಅಪಾಯಗಳನ್ನು ಎದುರಿಸಬಾರದೆಂದು ಭಾರತದ ರೂಪಾಯಿಯ ಚಂಚಲತೆಯನ್ನು ಮನಸ್ಸಿನಲ್ಲಿಟ್ಟುಕೊಡು ಕ೦ಪನಿಗಳು ತಮ್ಮ ಮುಂದಿನ ಯೋಜನೆಗಳನ್ನು ನಿರ್ಮಿಸಿಕೊಳ್ಳುತ್ತರೆ. ಭಾರತದ ರೂಪಾಯಿಯ ಮೌಲ್ಯ ನಿರಂತರವಾಗಿ ಬೀಳುತ್ತಲೇ ಇದ್ದರೂ, ಸರ್ಕಾರ ಏನೂ ಮಾಡಲಾಗದ ಸ್ಥಿತಿಯಲ್ಲಿರಲು ಕಾರಣ ಚಾಲ್ತಿ ಖಾತೆಯಲ್ಲಿರುವ ತೀವ್ರ ಕೊರತೆ. ೨೦೧೨ ಮತ್ತು ೨೦೧೩ ನೇ ಇಸವಿಯಲ್ಲಿ 'ಒಟ್ಟು ದೇಶೀಯ ಉತ್ಪನ್ನ' ೪% ನಷ್ಟು ಇತ್ತು. ದೇಶದ ಉತ್ಪನ್ನಗಳನ್ನು ರಫ್ತು ಮಾಡಲು ಯಾವುದೇ ಹೊಸ ದೇಶಗಳನ್ನು ಗುರುತಿಸದ ಕಾರಣ ದೇಶದ ಒಟ್ಟು ಅಭಿವೃದ್ಧಿಗೂ ಹಾನಿ ಉಂಟುಮಾಡಿದೆ. ಈ ಸಮಯದಲ್ಲಿ ಭಾರತ ಯಾವ್ ಖಾತೆಗಳಲ್ಲಿ ಮೂಂದಿನ ಸ್ಥಾನ ಪಡೆದಿತ್ತೋ ಅಲ್ಲಿಯೂ ಸಹ ಒಳ್ಳೆಯ ಪ್ರದರ್ಶನವನ್ನು ನೀಡಲಿಲ್ಲ. ರೂಪಾಯಿಯ ಮೌಲ್ಯ ಮತ್ಥಷ್ಟು ಕುಸಿಯಿತು.

ಚಿತ್ರ:Https://www.google.co.in/search?q=a+graph+showing+the+reduction+in+the+value+of+the+indian+rupee&rlz=1C2CHWA enIN607IN607&biw=1366&bih=667&tbm=isch&source=lnms&sa=X&ei=S7vaVMimJMSyuATNp4GwBw&ved=0CAcQ AUoAg
ರೂಪಾಯಿಯ ಬೆಲೆಯ ಕುಸಿತ

ಉದಾಹರಣೆ : ಪೊಸ್ಕೊ ಎಂಬ ಕ೦ಪನಿ ಭಾರತದಲ್ಲಿ ತೊಡಗಿಸಿದ ಹಣವನ್ನು ಹಿಂದಕ್ಕೆ ಪಡೆಯಿತು. ಕರ್ನಾಟಕ ಮತ್ತು ಒರಿಸ್ಸದಲ್ಲಿ ಒಟ್ಟು ೮೨೦೦೦ ಕೋತಿ ರೂಪಯಿಗಳನ್ನು ಬಳಸಿ ಮಾಡ ಬೇಕಾಗಿದ್ದ ಯೋಜನೆ ಕೈಗೂಡಲಿಲ್ಲ. ನಿಂತೇ ಹೋಯಿತು ಈ ಯೋಜನೆ. ಇಂತಹ ಕಾರಣಗಳಿ೦ದ ರೂಪಾಯಿಯ ಮೌಲ್ಯದಲ್ಲಿ ಕುಸಿತವನ್ನು ನಾವು ಕಾಣಾಬಹುದು. ಭಾರತದ ಹಲವಾರು ಮೂಖ್ಯವಾದ ಕ್ಷೇತ್ರಗಳಾದ ವ್ಯವಸಾಯ, ಉತ್ಪಾದನಾ ಹಾಗು ಕಗಣಿಗಾರಿಕೆ ೨೦೧೩ ನೇ ಇಸವಿಯಿಂದ ಅಷ್ಟು ಬೆಳವಣಿಗೆಯನ್ನು ಕಂಡಿಲ್ಲ. ಅದೇ ಇಸವಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಭಾರತದ ಬೆಳವಣಿಗೆ ೫.೭% ಇರಬಹುದಾಅಗಿ ತಿಳಿಸಿದ್ದರೂ ಸಹ ಕೇವಲ ೫.೨% ದಾಖಲಾಯಿತು. ಇದೆಲ್ಲಾ ಆದರು ಸಹ ರೂಪಾಯಿಯ ಮೌಲ್ಯ ಏರುವುದೇ ಇಲ್ಲ ಎಂದು ಹೇಳಲು ಯಾವುದೇ ಸಾಕ್ಷಿ ಇಲ್ಲ. ಭಾರತ ಸರ್ಕಾರ ಅಲ್ಪಾವಧಿಯ ಕ್ರಮಗಳನ್ನು ಕೈಗೊಂಡಲ್ಲಿ ಭಾರತದ ಆರ್ಥಿಕ ವ್ಯ್ವಸ್ಥೆ ಸುಧಾರಿಸುವುದರಲ್ಲಿ ಯಾವುದೇ ಅನುಮಾನ ಇರದಾಗಿ ಅರ್ಥ ಶಾಸ್ತ್ರ ತಜ್ನರು ತಿಳಿಸಿದ್ದಾರೆ. ಭಾರತ ಸರ್ಕಾರ ನಿರಂತರವಾಗಿ ಪ್ರಯತ್ನವನ್ನು ನಡೆಸಬೇಕು. ಆದರೂ ೧ ಡಾಲರ್=೫೫ ರೂಪಾಯಿ ಎಂಬ ಸ್ಥಿತಿಯನ್ನು ತಲುಪುವುದು ಕಷ್ಟ ಸಾಧ್ಯವಾದ ಕೆಲಸ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇಂದು ಪ್ರತಿ ಡಾಲರ್ ಗೆ ೬೨.೩೦ ರೂಪಯಿಗಳಂತೆ ಕೊಡಬೇಕಾಗಿ ಬರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
http://www.mapsofindia.com/my-india/india/why-is-the-indian-rupee-depreciating

http://businesstoday.intoday.in/story/rupee-dollar-value-drop-factors-for-fall/1/21881.html https://commons.wikimedia.org/wiki/Main_Page