ಭಾರತೀಯ ರಾಷ್ಟ್ರೀಯ ಸೈನ್ಯ

ವಿಕಿಪೀಡಿಯ ಇಂದ
Jump to navigation Jump to search

ಭಾರತೀಯ ರಾಷ್ಟ್ರೀಯ ಸೈನ್ಯ ೧೯೪೨ ರಲ್ಲಿ ಆರಂಭವಾದ ಭಾರತೀಯರ ಒಂದು ಸಶಸ್ತ್ರ ಪಡೆ.ಇದರ ಸಂಸ್ಥಾಪಕರು ಖ್ಯಾತ ಕ್ರಾಂತಿಕಾರಿ 'ರಾಸ್ ಬಿಹಾರಿ ಬೋಸ್' ಅವರು.ಎರಡನೇ ಮಹಾಯುದ್ಧದ ಸಂಧರ್ಭದಲ್ಲಿ ನೇತಾಜಿಯವರ ಸುಪರ್ದಿಗೆ ವಹಿಸಿಕೊಟ್ಟರು.ಸುಭಾಷ್ ಚಂದ್ರ ಬೋಸ್. ಇದರ ಉದ್ದೇಶ ಜಪಾನೀಯರ ಸಹಾಯದಿಂದ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಉರುಳಿಸುವುದಾಗಿತ್ತು. ಈ ಪಡೆ ದಕ್ಷಿಣ ಪೂರ್ವ ಏಷ್ಯಾದಲ್ಲಿ ರೂಪುಗೊಂಡಿತು. ಆರಂಭದಲ್ಲಿ ಇದು ಜಪಾನೀಯರು ಸೆರೆಹಿಡಿದಿದ್ದ ಭಾರತೀಯ ಸೈನಿಕರನ್ನು ಒಳಗೊಂಡಿತ್ತು. ನಂತರದ ದಿನಗಳಲ್ಲಿ ಮಲಯಾ ಮತ್ತು ಬರ್ಮಾದಲ್ಲಿ ನೆಲೆಸಿದ್ದ ಭಾರತೀಯರೂ ಈ ಸೈನ್ಯವನ್ನು ಸೇರಿದರು. ಎರಡನೆಯ ಮಹಾಯುದ್ಧದಲ್ಲಿ ಭಾರತೀಯ ರಾಷ್ಟ್ರೀಯ ಸೈನ್ಯ ಜಪಾನೀಯರೊಂದಿಗೆ ಬ್ರಿಟಿಷರ ವಿರುದ್ಧ ಬರ್ಮಾ, ಇಂಫಾಲ್ ಮತ್ತು ಕೋಹಿಮಾ ಗಳಲ್ಲಿ ಹೋರಾಡಿತು.

ದೆಹಲಿಯ ಕೆಂಪುಕೋಟೆಯಲ್ಲಿ ಒಂದು ವಿಶಿಷ್ಟ ರೀತಿಯ ವಿಚಾರಣೆ ನಡೆಯುತ್ತಿತ್ತು.ವಿಚಾರಣೆ ನಡೆಸುತ್ತಿದ್ದವರು ಸೈನ್ಯದ ಅಧಿಕಾರಿಗಳು. ಅವರ ನ್ಯಾಯಾಲಯದ ಮುಂದೆ ಅಪರಾಧಿಗಳು ಎನಿಸಿ ಕೊಂಡು ನಿಂತವರು ಮೂರು ಜನ ಭಾರತೀಯ ಸೈನ್ಯದ ಅಧಿಕಾರಿಗಳು. ಎರಡನೆಯ ಮಹಾಯುದ್ಧ ನಡೆಯುತ್ತಿದ್ದಾಗ ಜಪಾನೀಯರ ಕೈಗೆ ಸಿಕ್ಕ ಭಾರತೀಯ ಸೈನಿಕರು ಅನಂತರ ಭಾರತ ರಾಷ್ಟ್ರೀಯ ಸೈನ್ಯ (ಇಂಡಿಯನ್ ನ್ಯಾಷನಲ್ ಆರ್ಮಿ-ಐ.ಎನ್.ಎ.) ರಚಿಸಿಕೊಂಡರು, ಭಾರತದ ಸ್ವಾತಂತ್ರ್ಯಕ್ಕಾಗಿ ಇಂಗ್ಲೆಂಡಿನ ವಿರುದ್ಧ ಹೋರಾಡಲು ತೀರ್ಮಾನಿಸಿದರು. ಈ ಸೈನ್ಯದ ಸ್ಫೂರ್ತಿ ನೇತಾಜಿ ಸುಭಾಷ್ ಚಂದ್ರ ಬೋಸರು. ಮತ್ತೆ ಇವರು ಇಂಗ್ಲಿಷರ ಸೈನ್ಯದ ಕೈಗೆ ಸಿಕ್ಕರು. ಐ.ಎನ್.ಎ. ಯ ಸೈನಿಕರು ಭಾರತದಲ್ಲಿ ಸೈನ್ಯವನ್ನು ಸೇರಿದಾಗ ಭಾರತದ ಚಕ್ರವರ್ತಿಗೆ (ಇಂಗ್ಲೆಂಡಿನ ರಾಜನಿಗೆ) ನಿಷ್ಠರಾಗಿರುವುದಾಗಿ ಪ್ರಮಾಣ ಮಾಡಿದ್ದರು, ಆದುದರಿಂದ ಅವರೆಲ್ಲ ರಾಜದ್ರೋಹಿಗಳು ಎಂದು ಆಗಿನ ಭಾರತದ ಸರ್ಕಾರದ ವಾದ. ಆ ಸೈನಿಕರಲ್ಲಿ ಮೂವರನ್ನು ವಿಚಾರಣೆಗೆ ಗುರಿಮಾಡಿತು.ಭಾರತವೆಲ್ಲ ಕೆರಳಿ ನಿಂತಿತು. ಇವರ ಪರವಾಗಿ ವಿಚಾರಣೆ ಯಲ್ಲಿ ಭಾಗವಹಿಸಲು ಪ್ರಸಿದ್ಧ ವಕೀಲರ ತಂಡವೇ ಸಿದ್ಧವಾಯಿತು. ಈ ತಂಡದ ಮುಖಂಡರಾದರು ಒಬ್ಬ ವಕೀಲರು.