ಭಾರತೀಯ ಬಂಡವಾಳ ಪತ್ರಗಳು

ಭಾರತೀಯ ಬಂಡವಾಳ ಪತ್ರಗಳು &ವಿನಿಮಯ ಮಂಡಳಿಯನ್ನು ೧೨ನೇ ಏಪ್ರಿಲ್ ೧೯೮೮ ರಲ್ಲಿ ಭಾರತ ಸರ್ಕಾರವು ಸ್ಥಾಪಿಸಿತು. ದೇಶದಲ್ಲಿ ಬಂಡವಾಳ ಮಾರುಕಟ್ಟೆಯನ್ನು ಕ್ರಮಬದ್ದಗೊಳಿಸಿ, ಭದ್ರತಾ ಪತ್ರಗಳ ಮಾರುಕಟ್ಟೆಯ ಆರೋಗ್ಯಕರ ಬೆಳವಣಿಗೆ & ಹೂಡಿಕೆದಾರರಿಗೆ ಹಿತ ರಕ್ಷಣೆಯನ್ನು ಒದಗಿಸುವುದು ಇದರ ಮುಖ್ಯ ಧ್ಯೇಯವಾಗಿದೆ. ೧೯೯೨ರಲ್ಲಿ ಜಾರಿಗೆ ತರುವ ಮೂಲಕ ಸೆಬಿಗೆ ಕಾನೂನಿನನ್ವಯ ಸ್ಥಾನ ದೊರಕಿತು.
ಸೆಬಿ ಸಂಸ್ಥೆಯು ಅರೆ-ನ್ಯಾಯಿಕ, ಅರೆ-ಶಾಸಕಾಂಗ, ಅರೆ-ಕಾರ್ಯಾಂಗವಾಗಿ ಕಾರ್ಯನಿರ್ವಹಿಸುತ್ತದೆ. ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿ ಹಲವು ಅಧಿಕಾರಗಳನ್ನು ಸೆಬಿಗೆ ನೀಡಲಾಯಿತು.ಅವು ಯಾವುದೆಂದರೆ:
- ಶೇರು ಮಾರುಕಟ್ಟೆಯನ್ನು ಕ್ರಮಬದ್ದಗೊಳಿಸುವುದು.
- ಹೂಡಿಕೆದಾರರಿಗೆ ಶಿಕ್ಷಣ ನೀಡುವುದು.
- ಸ್ವಯಂ ನಿಯಂತ್ರಿತ ಸಂಸ್ಥೆಗಳನ್ನು ಸ್ಥಾಪಿಸುವುದು,ಮತ್ತು
- ಒಳ ವ್ಯಾಪಾರ ಮತ್ತು ಅನುಚಿತ ವ್ಯಾಪಾರ ಪ್ರವೃತ್ತಿಗಳನ್ನು ಪ್ರತಿಬಂಧಿಸುವುದು.
ಸೆಬಿಯ ಪ್ರಮುಖ ಉದ್ದೇಶಗಳು:
- ಬಂಡವಾಳ ಮಾರುಕಟ್ಟೆಯ ಅಭಿವೃದ್ಧಿ.
- ಹೂಡಿಕೆದಾರರ ಹಿತ ರಕ್ಷಣೆ.
- ಬಂಡವಾಳ ಮಾರುಕಟ್ಟೆಯನ್ನು ಕ್ರಮಬದ್ದಗೊಳಿಸುವುದು.