ಭಾರತೀಯ ದೇವಾಲಯ ಸಂಕೇತಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ದೇವಾಲಯ ಸಂಕೇತಗಳು ಭಾರತದಲ್ಲಿನ ದೇವಾಲಯ ಸ್ಥಳಗಳಲ್ಲಿ ಜನಪ್ರಿಯವಾಗಿರುವ ಸಂಕೇತ ನಾಣ್ಯಗಳು. ಇವುಗಳಲ್ಲಿ ಹಲವು ರಾಮನನ್ನು ಚಿತ್ರಿಸಿರುವುದರಿಂದ ಇವನ್ನು ರಾಮಟಂಕೆಗಳು ಎಂದು ಕೂಡ ಕರೆಯಲಾಗುತ್ತದೆ. ರಾಮದರ್ಬಾರ್ ಪರ್ಯಾಯ ನಾಮ.

ಅತ್ಯಂತ ಮುಂಚಿನ ರಾಮಟಂಕೆಗಳು ವಾಸ್ತವವಾದ ನಾಣ್ಯಗಳಾಗಿರಬಹುದು (ಸಂಕೇತ ನಾಣ್ಯಗಳು ಅಥವಾ ಪದಕಗಳಲ್ಲ). ೧೨ನೇ ಶತಮಾನದ ರಾಜನಾದ ನಾಲ್ಕನೇ ವಿಗ್ರಹರಾಜನು ಹೊರಡಿಸಿದ ನಾಣ್ಯಗಳು ಆಮೇಲಿನ ರಾಮಟಂಕೆಗಳ ಪೂರ್ವಗಾಮಿ ಎಂದು ಪರಿಗಣಿಸಬಹುದು.[೧] ರಾಮಟಂಕೆಗಳ ಅಸ್ತಿತ್ವದಲ್ಲಿರುವ ಅತ್ಯಂತ ಮುಂಚಿನ ಉಲ್ಲೇಖವನ್ನು ದೆಹಲಿ ಸಲ್ತನತ್‍ನ ಟಂಕಾಧಿಕಾರಿಯಾಗಿದ್ದ ಠಕ್ಕರ್ ಫೇರುನ ದ್ರವ್ಯ ಪರೀಕ್ಷಾದಲ್ಲಿ (೧೩೧೮) ಕಾಣಬಹುದು. ಫೇರು ಸೀತಾರಾಮಿ ಎಂದು ಕರೆಯಲ್ಪಡುವ ಚಿನ್ನದ ನಾಣ್ಯಗಳನ್ನು ವರ್ಣಿಸುತ್ತಾನೆ.[೧]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ P. L. Gupta & A. M. Shastri 1993.