ಭಾರತೀಯ ಚಿತ್ರರಂಗ
ಈ ಪುಟವನ್ನು ಇನ್ನೂ ಸೃಷ್ಟಿಸಲಾಗುತ್ತಿದೆ ಈ ಹೊಸ ವಿಕಿಪೀಡಿಯ ಪುಟವನ್ನು ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ.ಸ್ವಲ್ಪ ಸಮಯದವರೆಗೆ ಈ ಪುಟವನ್ನು ಅವಶ್ಯಕತೆ ಇಲ್ಲದೆ ಸಂಪಾದಿಸದಂತೆ, ಅಥವಾ ಅಳಿಸುವಿಕೆಗೆ ಹಾಕದಂತೆ ಲೇಖನದ ಸಂಪಾದನೆಯ ಸಮಯದಲ್ಲಿ ಸಂಪಾದಕರು ಕೇಳಿಕೊಳ್ಳುತ್ತಾರೆ. |
ಭಾರತೀಯ ಚಿತ್ರರಂಗಕ್ಕೆ ಸೆಂಚುರಿ ಸಂಭ್ರಮ ... ಲವ್, ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್, ಸೆಂಟಿಮೆಂಟ್ ಎಲ್ಲವನ್ನೂ ಎರಡೂವರೆ ಗಂಟೆಯಲ್ಲಿ ನಮ್ಮ ನಿಮ್ಮ ಮುಂದೆ ಇಡೋದೆ ಸಿನಿಮಾ. ಬೆಳ್ಳಪರದೆ ಮೇಲೆ ಕಲರ್ ಪುಲ್ಲಾಗಿ ತನ್ನ ಖದರ್ ತೋರಿಸಿಕೋಡು ಬರ್ತಿರೋ ಈ ಸಿನಿಮಾ ಇಂಡಸ್ಟ್ರಿ ,ಭಾರತದಲ್ಲಿ ಬೇರೂರಿ ಸೆಂಚುರಿ ಬಾರಿಸಿದೆ. ಹೌದು ಚಿತ್ರರಂಗಕ್ಕೆ ಈಗ ಶತಕದ ಸಂಭ್ರಮ .ಭಾರತೀಯ ಸಿನಿಮಾರಂಗವೀಗ ಹೆಮ್ಮರವಾಗಿ ಬೆಳೆದುನಿಂತಿದೆ.ಭಾರತವು ೧೯೧೩ರಲ್ಲಿ ತನ್ನ ಮೊದಲ ಚಲನಚಿತ್ರವನ್ನ ತಯಾರಿಸಿತು ಸಾರ್ವತಿಕವಾಗಿ ಹೇಳುವಾದದರೆ ಆರು ಪ್ರಮುಖ ಪ್ರಭಾವಗಳು ಭಾರತದ ಸಂಪ್ರದಾಯ ಚಲನಚಿತ್ರಗಳನ್ನು ರೂಪಿಸಿವೆ. ಅವುಗಳಲ್ಲಿ ಮೊದಲ ಸ್ಥಾನ ಭಾರತದ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ.ಭಾರತೀಯ ಜನಪ್ರಿಯ ಚಲನಚಿತ್ರಗಳ ಮೇಲೆ ಅದರಲ್ಲೂ ನಿರ್ಧಿಷ್ಠವಾಗಿ ಅದರ ನಿರೂಪಣ ವಿಧಾನದಲ್ಲಿ ಆಲೋಚನಾ ಕ್ರಮ ಹಾಗೂ ಕಲ್ಪನಾಶಕ್ತಿ ಮೇಲೆ ಈ ಮಹಾಕಾವ್ಯಗಳು ಒಂದು ಆಳವಾದ ಪ್ರಭಾವವನ್ನು ಬೀರಿದವು. ಕಥೆ, ಕಥೆಯೊಳಗೊಂದು ಉಪಕಥೆ ಒಳಗೊಳ್ಳುವುದು ಈ ಪ್ರಭಾವಕ್ಕೆಉದಾಹರಣೆಯಾಗಿದೆ. ಭಾರತೀಯ ಚಲನಚಿತ್ರೊಧ್ಯಮವು ಮುಂಬಯಿ , ದೆಹಲಿ ಸಿನಿಮೀಯ ಸಂಸ್ಕ್ರುತಿಗಳನ್ನಷ್ಟೆ ಅಲ್ಲದೆ ಆಂದ್ರಪ್ರದೇಶ, ಅಸ್ಸಾಂ, ಕರ್ನಾಟಕ,ಕೇರಳ, ಪಂಜಾಬ್, ತಮಿಳುನಾಡು, ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯದ ಸಿನಿಮೀಯ ಸಂಪ್ರದಾಯಗಳನ್ನು ಒಳಗೊಂಡಿದೆ.