ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ
ಗೋಚರ
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ (Food Safety and Standards Authority of India (FSSAI)) ಆಹಾರ ಸುರಕ್ಷತೆ ಮತ್ತು ಮಾನಕ ಕಾಯ್ದೆ, 2007 ಅಡಿಯಲ್ಲಿ ಸ್ಥಾಪಿಸಲಾಯಿತು . ಈ ಅಧಿಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಮಾನವನ ಬಳಕೆಗಾಗಿ ಸುರಕ್ಷಿತ ಮತ್ತು ಸಂಪೂರ್ಣ ಆಹಾರದ ಸಾಧನೆಯನ್ನು ಖಚಿತಪಡಿಸಿಕೊಳ್ಳಲು ಆಹಾರ ಪದಾರ್ಥಗಳಿಗೆ ವಿಜ್ಞಾನ ಆಧಾರಿತ ಮಾನದಂಡಗಳನ್ನು ರಚಿಸುವುದು ಮತ್ತು ಆಹಾರ ಪದಾರ್ಥಗಳ ತಯಾರಿಕೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಆಮದು ಇತ್ಯಾದಿಗಳನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿದೆ. . ಎಫ್‌ಎಸ್‌ಎಸ್‌ಎಐ ಅಧ್ಯಕ್ಷ: ರೀಟಾ ಟಿಯೋಟಿಯಾ. ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ: ಅರುಣ್ ಸಿಂಘಾಲ್.