ವಿಷಯಕ್ಕೆ ಹೋಗು

ಭಾರತೀಯ ಆಹಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ.
ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ.


ಭಾರತೀಯ ಆಹಾರ

ಭಾರತ ತನ್ನ ಸಂಸ್ಕೃತಿ ಮತ್ತು ಸಂಪ್ರದಾಯ ತುಂಬಿದ ಒಂದು ದೇಶ. ಭಾರತೀಯ ಆಹಾರ ಬಹುವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯ್ಕೆಗಳನ್ನು ಮತ್ತು ಸಂಪ್ರದಾಯಗಳಿಂದ ಪ್ರಭಾವಿತವಾಗಿರುವುದು. ಭಾರತೀಯ ತಿನಿಸು ಭಾರತಕ್ಕೆ ಸ್ಥಳೀಯ ಪ್ರಾದೇಶಿಕ ತಿನಿಸುಗಳ ವಿವಿಧತೆಗಳನ್ನು ಒಳಗೊಳ್ಳುತ್ತದೆ. ಭಾರತ ದೇಶವು ತಿ೦ಡೀ, ತಿನಿಸುಗಳನ್ನು ಬಹಳ ಹಿಂದಿನಿಂದ ತಯಾರಿಸುತ್ತಿದೆ. ಮೆಣಸು, ಗಿಡಮೂಲಿಕೆಗಳು , ತರಕಾರಿಗಳನ್ನು ಮತ್ತು ಆಯುರ್ವೇದ ಗಿಡ ಮೂಲಿಕೆಗಳನ್ನು ತಯಾರಿ ಮಾಡುತ್ತಿದೆ.

ಭಾರತೀಯ ತಿನಿಸು ಅಂತಾರಾಷ್ಟ್ರೀಯ ಸಂಬಂಧಗಳ ಕುರಿತ ಇತಿಹಾಸ ಆಪಾರ. ಮುಘಲ್ ಆಡಳಿತದ ವರ್ಷಗಳಿಂದ ಉತ್ತರ ಭಾರತದ ಪಾಕಪದ್ಧತಿಯಲ್ಲಿ ಕೇಂದ್ರ ಏಷ್ಯನ್ ಪ್ರಭಾವವು ಅಲ್ಲಿದೆ. ಜಾನಪದ ವಿದ್ವಾಂಸರುಗಳು 'ದೇಸೀ ಆಹಾರ ಪದ್ಧತಿ'ಯ ಸಂಗ್ರಹ, ಸಂರಕ್ಷಣೆ ಮತ್ತು ಪುನರುಜ್ಜೀವನದ ಕುರಿತು ಪುಸ್ತಕಗಳನ್ನು ಹೊರತರುತ್ತಿದ್ದಾರೆ.ಕಳೆದ ಅರ್ಧ ಶತಮಾನದಲ್ಲಿ ಭಾರತದ ಆಹಾರ ಪದ್ಧತಿ ತೀವ್ರವಾಗಿ ಬದಲಾಗಿದೆ. ವೇಗವಾಗಿ ಬದಲಾಗುತ್ತಿರುವ ಭಾರತದ ನಗರಗಳು ಅಷ್ಟೇ ವೇಗವಾಗಿ ನಮ್ಮಆಹಾರ ಪದ್ಧತಿಯನ್ನು ಬದಲಾಯಿಸಿವೆ. ಇದರಲ್ಲಿಎದ್ದು ಕಾಣುವ ವಿಚಾರವೆಂದರೆ, ನಮ್ಮ ಸಮ್ಮಿಶ್ರ ಮತ್ತು ವೈವಿಧ್ಯಮಯ ಆಹಾರ ಪದ್ಧತಿಯನ್ನು ಜಾಗತೀಕರಣದ ಆರ್ಥಿಕ ಶಕ್ತಿಗಳು ಒಳ್ಳೆಯ ಆರೋಗ್ಯಕ್ಕಾಗಿ ಆಹಾರ ಮತ್ತು ಆಧುನಿಕ ಸಾಮಾಜಿಕ ಆಚರಣೆಗಳ ಭಾಗವಾಗಿ ಆಹಾರ ಎಂಬೆರಡು ಸೂತ್ರದಡಿಯಲ್ಲಿ ಮರು ಹೊಂದಾಣಿಕೆ ಮಾಡಿಕೊಂಡು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿರುವುದು. ಫಲವಾಗಿ ಇಂದು ಭಾರತವೊಂದರಲ್ಲಿಯೇ ಇದು ಕೋಟ್ಯಂತರ ರೂಪಾಯಿಗಳ ಬಹತ್ ಉದ್ಯಮವಾಗಿ ಬೆಳೆದಿದೆ. ಈ ಉದ್ಯಮ ವಿಸ್ತರಣೆಯ ಭಾಗವಾಗಿಯೇ ಮುಂಬಯಿ, ದೆಹಲಿ, ಕೋಲ್ಕೊತಾ, ಬೆಂಗಳೂರು ಮೊದಲಾದ ನಗರಗಳಲ್ಲಿ ಹೊಸ ಬಗೆಯ ಆಹಾರ ಪದ್ಧತಿಯಿಂದ ಆರೋಗ್ಯ ಸುಧಾರಿಸುತ್ತದೆ ಎಂಬ ಪ್ರಚಾರ ಪತ್ರಗಳನ್ನು ಹೋಟೆಲ್ ಗಳಲ್ಲಿಗ್ರಾಹಕರಿಗೆ ವಿತರಿಸಲಾಗುತ್ತದೆ. ಅಂದರೆ ಆಹಾರ ಪದ್ಧತಿಯನ್ನು ಇದೀಗ ವೈದ್ಯಕೀಯ ಪದ್ಧತಿಯ ಹಾಗೆ ನೋಡಲಾಗುತ್ತಿದೆ. ಇದನ್ನುತಿಂದರೆ ದಪ್ಪಗಾಗುವುದಿಲ್ಲ, ಅದರಲ್ಲಿ ದೇಹಕ್ಕೆ ಬೇಕಾದ ಅಗತ್ಯ ವಿಟಮಿನ್‌ಗಳು ದೊರೆಯುತ್ತವೆ, ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲ, ಅದು ಹದಯಕ್ಕೆ ಒಳ್ಳೆಯದು, ಮಧುಮೇಹಿಗಳಿಗೋಸ್ಕರವೇ ಇದನ್ನು ತಯಾರಿಸಲಾಗಿದೆ, ಎಂಬಿತ್ಯಾದಿ ಮಾತುಗಳನ್ನು ಈಗ ಎಲ್ಲೆಡೆಯೂ ಕೇಳಬಹುದು. ಇಂಥ ಬೆಳವಣಿಗೆಗಳ ಪರಿಣಾಮವಾಗಿ ಇಂದು ಹೋಟೆಲ್ ಮತ್ತು ಆಸ್ಪತ್ರೆಗಳ ನಡುವಣ ವ್ಯತ್ಯಾಸಗಳೇ ಕಡಿಮೆಯಾಗುತ್ತಿದೆ. ಇದು ಊಟದ ಸಂಭ್ರಮವನ್ನು ಕಳೆದು ಹಾಕಿದೆ.

ಭಾರತೀಯ ಪಾಕಪದ್ಧತಿಯ ಪ್ರಧಾನ ಆಹಾರ ಬಾಜ್ರ , ಅಕ್ಕಿ ,ಗೋಧಿ ಹಿಟ್ಟು, ಮತ್ತು ಮಸೂರ , ತೊಗರಿಬೇಳೆ , ಉದ್ದಿನ , ಮತ್ತು ಹೆಸರುಬೇಳೆ ಮಸೂರ ಅವರೆಯನ್ನು , ವಿವಿಧ ಸೇರಿವೆ . ಮಸೂರ ಇಡೀ ಬಳಸಬಹುದು , ಹುರುಳಿಕಾಳಿನ -ಉದಾಹರಣೆಗೆ, ಧೂಲಿ ಹೆಸರುಬೇಳೆ ಅಥವಾ ಧೂಲಿ ಉದ್ದು - ಅಥವಾ ಒಡಕು . ಒಡೆದ ಮಸೂರ , ಅಥವಾ ಬೇಳೆ , ವ್ಯಾಪಕವಾಗಿ ಬಳಸಲಾಗುತ್ತದೆ . ಇಂತಹ ಚನ್ನಬಸವೇಶ್ವರ, ಕೆಲವು ದ್ವಿದಳ , ವಿಶೇಷವಾಗಿ ಉತ್ತರ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ . ಚನ್ನಬಸವೇಶ್ವರ ಮತ್ತು ಹೆಸರುಕಾಳಿನ ಸಹ ಹಿಟ್ಟಾಗಿ ಸಂಸ್ಕರಿಸಲಾಗುತ್ತದೆ .

ವರ್ತಮಾನಕಾಲದ ಸಸ್ಯಾಹಾರೀ ಭಾರತೀಯರ ಊಟದ ಪ್ರಧಾನ ಘಟಕಗಳಾದ ಬಟಾಟೆ, ಟೊಮೇಟೋ, ಬೀನ್ಸ್, ಗೆಣಸು, ಮರಗೆಣಸು, ಗೇರು ಬೀಜ, ದೊಣ್ಣೆ (ದೊಡ್ಡ) ಮೆಣಸಿನ ಕಾಯಿ, ಜೋಳ, ರಾಜ್ಮಾ, ಪಪ್ಪಾಯಿ ಇತ್ಯಾದಿಗಳು ನಮ್ಮಲ್ಲಿ ಇರಲೇ ಇಲ್ಲ. ಹಾಗಾಗಿ ಇವ್ಯಾವೂ ನಮ್ಮ ದೇವರುಗಳಿಗೆ ಅರ್ಪಿತವಾಗುವುದೂ ಇಲ್ಲ. ನಮ್ಮಲ್ಲಿಗೆ ಮೆಣಸು ದಕ್ಷಿಣ ಅಮೆರಿಕಾದಿಂದ ಬಂತು, ಅನಾನಸು, ಪೇರಳೆ, ಚಿಕ್ಕು, ಚೆಕ್ಕೆ, ನೇರಳೆ, ಚಹಾ ಮೊದಲಾದುವುಗಳು ಮುಖ್ಯವಾಗಿ ಚೈನಾದ ಮೂಲಕವಾಗಿ ಭಾರತಕ್ಕೆ ಬಂದುವು. ಹೂಕೋಸು ಯುರೋಪಿನಿಂದ ಬಂದರೆ, ನೀರುಳ್ಳಿ ಮಧ್ಯ ಏಷಿಯಾದಿಂದ ಭಾರತಕ್ಕೆ ಬಂದಿದೆ. ಹೊರಗಿನಿಂದ ಆಮದಾದ ಮಸಾಲೆ ಪದಾರ್ಥಗಳಾದ, ಬೆಳ್ಳುಳ್ಳಿ, ಅರಸಿನ, ಶುಂಟಿ, ಮೆಂತೆ ಮೊದಲಾದುವುಗಳು ಇಂದು ನಮ್ಮ ದೇಸೀ ವೈದ್ಯಪದ್ಧತಿಯೊಂದಿಗೆ ಕೂಡಾ ಸೇರಿಕೊಳ್ಳುವಷ್ಟು ನಮ್ಮವಾಗಿವೆ.

ಪ್ರಸಿದ್ಧ ಆಹಾರ ವಿಜ್ಞಾನಿಯಾಗಿದ್ದ ಕರ್ನಾಟಕದ ಕೆ ಟಿ ಅಚಾರ‌್ಯ ಅವರ ಪ್ರಕಾರ ದಕ್ಷಿಣಭಾರತದ ಸಂಕೇತವಾಗಿರುವ ಇಡ್ಲಿಯು ಈಗಿನ ರೂಪದಲ್ಲಿ ಇಂಡೋನೇಶಿಯಾದಿಂದ ಬಂದಿದೆ. ಅದಕ್ಕೂ ಮನ್ನ ಅದು, ರೈಮುಂಡೋ ಪನಿಕ್ಕರ್ ಪ್ರಕಾರ ಚೈನಾದಲ್ಲಿ ಅನ್ನದ ಉಂಡೆಯಾಗಿ ಪ್ರಚಲಿತದಲ್ಲಿತ್ತು. ಅದೇ ರೀತಿ ಜಿಲೇಬಿ, ಬಿರ‌್ಯಾನಿ, ಪುಲಾವ್‌ಗಳು ಪರ್ಷಿಯಾದ ಕೊಡುಗೆ.ಹೀಗೆ ಸ್ಥಳೀಯವಾಗುವ ಪ್ರಕ್ರಿಯೆಯಲ್ಲಿ ನಡೆದ ಪವಾಡಗಳು ಅನಂತ. ಚೈನಾದ ಹುರಿದ ಅನ್ನ, ಭಾರತದ ಕಾಳು ಮೆಣಸು, ಊರಿನ ಕೋಳಿ ಮಾಂಸ ಮತ್ತು ಪರ್ಶಿಯಾದ ಅಡುಗೆ ವಿಧಾನವು ಹೇಗೋ ಹೇಗೋ ಒಟ್ಟು ಸೇರಿ ಇಂದಿನ ಇಂಡಿಯಾದ ಅಡುಗೆ ಮನೆಯನ್ನು ರೂಪಿಸಿದೆ.

ಉಣ್ಣುವ ಅನ್ನದಲ್ಲಿ ಅಸಮಾನತೆಯನ್ನು ಕಾಯ್ದುಕೊಂಡು ಬಂದವರು ನಾವು. ಹೆಚ್ಚು ಉಂಡವರುಆರೋಗ್ಯದ ಬಗ್ಗೆ ಮಾತಾಡಿದರು. ಅನ್ನವಿಲ್ಲದವರು ಹೊಟ್ಟೆ ಮುಟ್ಟಿಕೊಂಡು ನೋಡಿದರು. ಮುಂದೆ ಬರಲಿರುವ ಹಿಂದೂರಾಷ್ಟ್ರದಲ್ಲಿ ಯಾರ ಅನ್ನ ಯಾವುದರ ಸಂಕೇತವಾಗಲಿದೆಯೋ ತಿಳಿಯದು.