ಭಾರತದ ಪ್ರಥಮ ಸಾರ್ವಜನಿಕ ರೈಲು ಯಾನ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಭಾರತದ ಪ್ರಥಮ ಸಾರ್ವಜನಿಕ ರೈಲು ಯಾನ ಏಪ್ರಿಲ್ ೧೬, ೧೮೫೩ರಂದು ಏರ್ಪಟ್ಟಿತು.

1853ರ ಏಪ್ರಿಲ್ 16ರದಿನ, ಅಂದರೆ 160 ವರ್ಷಗಳ ಹಿಂದೆ, ಭಾರತದಲ್ಲಿ ಜನಸಂಚಾರಕ್ಕಾಗಿ ಚುಕು ಬುಕು ರೈಲುಬಂಡಿ ಯಾನ ಪ್ರಾರಂಭವಾಯಿತು. ಮುಂಬೈನ ಬೋರಿ ಬಂದರಿನಿಂದ ಥಾನೆಯವರೆಗಿನ 34 ಕಿಲೋಮೀಟರಿನ ಪಯಣ ಅಂದಿನ ದಿನದಲ್ಲಿ 21 ನಿಮಿಷಗಳಲ್ಲಿ ಕ್ರಮಿಸುವ ವ್ಯವಸ್ಥೆ ಇತ್ತು. ಈ ಯಾನದಲ್ಲಿ ಭಾಗಿಯಾಗಿದ್ದ ಮೂರು ಲೋಕೋಮೋಟಿವುಗಳ ಹೆಸರೆಂದರೆ ಸಾಹಿಬ್, ಸಿಂದ್ ಮತ್ತು ಸುಲ್ತಾನ್.

ಪ್ರಪಂಚದ ಎಲ್ಲ ಘಟನೆಗಳನ್ನೂ ತನ್ನದೆಂದು ಆತ್ಮೀಯತೆ ವಹಿಸುವ ಗೂಗಲ್ ಭಾರತದಲ್ಲಿ 160 ವರ್ಷದ ಹಿಂದೆ ಮೂಡಿದ ಈ ಮೊದಲ ಚುಕು ಬುಕು ಯಾನವನ್ನು ತನ್ನ 'ಗೂಗಲ್ ಡೂಡಲ್ನಲ್ಲಿ' ಇರುವ GOOGLE ಎಂಬ ಹೆಸರಿನಲ್ಲಿರುವ ಎರಡನೆಯ ಅಕ್ಷರವಾದ ‘O’ವನ್ನು ಲೋಕೋಮೋಟಿವ್ ಇಂಜಿನ್ನಿನಂತೆ ತೋರಿ ಸಂಭ್ರಮಿಸಿದೆ.

ಆಧಾರ:ಭಾರತದ ಪ್ರಥಮ ಸಾರ್ವಜನಿಕ ರೈಲು ಯಾನ ವರದಿ Archived 2013-04-17 at the Wayback Machine.

ಉಲ್ಲೇಖ[ಬದಲಾಯಿಸಿ]