ಭಾರತದ ಅತಿ ದೊಡ್ಡ ಆಣೆಕಟ್ಟುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ನೂರಾರು ಆಣೆಕಟ್ಟುಗಳನ್ನು ನೀರಾವರಿ, ವಿದ್ಯುತ್ ಉತ್ಪಾದನೆ, ಪ್ರವಾಸ ಮತ್ತು ಪ್ರವಾಹ ನಿಯ್ಂತ್ರಣಕ್ಕಾಗಿ ನಿರ್ಮಿಸಲಾಗಿದೆ. ಅದರಲ್ಲಿ ಕೆಲವು ಆಣೆಕಟ್ಟುಗಳು ದೊಡ್ಡ ಪ್ರಮಾಣದಲ್ಲಿವೆ.

ತೇಹರಿ ಆಣೆಕಟ್ಟು[ಬದಲಾಯಿಸಿ]

ಉತ್ತರಖಂಡ ರಾಜ್ಯದ ತೇಹರಿಯಲ್ಲಿ ತೇಹರಿ ಆಣೆಕಟ್ಟುನ್ನು ಭಾಗೀರಥಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

ಅಣೆಕಟ್ಟು 260 ಮೀಟರ್ (850 ಅಡಿ) ಎತ್ತರ, ಉದ್ದ 575 ಮೀಟರ್ (1,886 ಅಡಿ), ಅಗಲ 20 ಮೀಟರ್ (66 ಅಡಿ), ಮತ್ತು ಮೂಲ ಅಗಲ 1.128 ಮೀಟರ್ (3,701 ಅಡಿ) ಇದೆ.


ಮುಲ್ಲಪೇರಿಯಾರ ಆಣೆಕಟ್ಟು[ಬದಲಾಯಿಸಿ]

ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ತೇಕ್ಕಡಿಯಲ್ಲಿ ಪೇರಿಯಾರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

ಅಣೆಕಟ್ಟಿನ ತಳಪಾಯದಿಂದ 53.6 ಮೀ (176 ಅಡಿ) ಎತ್ತರವನ್ನು ಮತ್ತು ಉದ್ದ 365,7 ಮೀ (1,200 ಅಡಿ) ಹೊಂದಿದೆ.


ಭಾಕ್ರಾ ನಂಗಲ್ ಆಣೆಕಟ್ಟು[ಬದಲಾಯಿಸಿ]

ಪಂಜಾಬ ಮತ್ತು ಹಿಮಾಚಲ ಪ್ರದೇಶ ರಾಜ್ಯದ ಗಡಿಯ ಭಾಕ್ರಾದಲ್ಲಿ ಸಟ್ಲೇಜ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

ಅಣೆಕಟ್ಟಿನ ಏಷ್ಯಾದ ಎರಡನೇ ಅತಿ ಎತ್ತರ 225.55 ಮೀ (740 ಅಡಿ) 261m ಮತ್ತು ಉದ್ದ 518.25 ಮೀ ಇದ್ದು "ಗೋವಿಂದ ಸಾಗರ್" ಎಂದು ಕರೆಯಲ್ಪಡುವ ಜಲಾಶಯ, 9.34 ಶತಕೋಟಿ ಘನ ಮೀಟರ್ ವರೆಗೆ ನೀರನ್ನು ಸಂಗ್ರಹಿಸುತ್ತದೆ.