ಭಾರತದ ಅಣೆಕಟ್ಟುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ ೨೦೧೨ರ ಅಂತ್ಯತ ವೇಳೆಗೆ ದೊಡ್ದ, ಮದ್ಯಮ ಮತ್ತು ಚೆಕ್ಕ ಅಣೆಕಟ್ಟುಗಳು ಸೆರಿ ಒಟ್ಟು ೫೧೪೪ ಇವೆ. ಜಗತ್ತಿನ ಜಲಾಶಯಗಳ ಸಂಖ್ಯೆಯಲ್ಲಿ ಭಾರತವು ಚೀನಾ,ಅಮೇರಿಕ ಮತ್ತು ರಷ್ಯಾದ ನಂತರದ ೪ನೇ ಸ್ಠಾನದಲ್ಲಿದೆ.

ಜಲಾಶಯಗಳ ನಿರ್ಮಾಣವು ಅನೇಕ ಉದ್ದೇಶಗಳನ್ನು ಹೊಂದಿದೆ ಅವುಗಳೆಂದರೆ,,

  • ನೀರಾವರಿ
  • ಜಲವಿದ್ಯುತ್ ಉತ್ಪಾದನೆ
  • ಕುಡಿಯುವ ನೀರು
  • ಮನರಂಜನೆ
  • ಮೀನುಗಾರಿಕೆ
  • ಪ್ರವಾಹ ನೀಯಂತ್ರಣ
  • ಅಂತರ್ಜಲ ವೃದ್ದಿಸುವುದು
  • ಜೋಗು ಕಡಿಮೆ ಮಾಡುವುದು

ಭಾರತದ ಕೆಲವು ಪ್ರಮುಖ ಜಲಾಶಾಯಗಳೆಂದರೆ

  • ದಾಮೊದರ ಯೊಜನೆ - ಭಾರತ ಸ್ವಾತಂತ್ರ ಗಳಿಸಿದ ನಂತರ ರೂಪಿಸಿದ ಮೊದಲ ಬೃಹತ್ ಅಣೇಕಟ್ಟು ಯೊಜನೆಯಾಗಿದೆ,ಇದನ್ನು ಭಾರತದ ರೊರ್ ಎಂದು ಕರೆಯುತ್ತಾರೆ,,ಇದನ್ನು ಜುಲೈ ೭,೧೯೪೮ ರಲ್ಲಿ ಸ್ಠಾಪಿಸಲಾಯಿತು
  • ಭಾಕ್ರನಂಗಲ್ ಅಣೆಕಟ್ಟು - ಭಾಂಕ್ರ ಮತ್ತು ನಂಗಲ್ ಎಂಬ ಎರಡು ಅಣೆಕಟ್ಟು ಗಳನ್ನು ಕಟ್ಟಲಾಗಿದ್ದು ಒಟ್ಟಾಗಿ "ಭಾಕ್ರನಂಗಲ್" ಅಣೆಕಟ್ಟು ಎಂದು ಕರೆಯುತ್ತಾರೆ. ಇದನ್ನು ಹಿಮಾಚಲ ಪ್ರದೆಶದ ಬಿಲಾಸ್ ಪುರ ಜಿಲ್ಲೆ ಭಾಕ್ರ ಗ್ರಾಮದ ಬಳಿ ಸಟ್ಲೆಜ್ ನದಿಗೆ ಕಟ್ಟಲಾಗಿದೆ,,ಇದು ದೆಶದ ೨ನೇ ಅತಿ ಎತ್ತರವಾದ ಅಣೆಕಟ್ಟು