ಭಾರತದಲ್ಲಿ ದೂರವಾಣಿ ಸೇವೆ
ಭಾರತದಲ್ಲಿ ದೂರವಾಣಿ ಸೇವೆಗಳ ಆರಂಭ ಮತ್ತು ಪ್ರಗತಿ:
1902 ಕ್ಕಿಂತ ಮೊದಲು - ತಂತಿಯಿಂದ ಟೆಲಿಗ್ರಾಫ್ ಸೇವೆ.
1902 – ಮೊದಲ ತಂತಿರಹಿತ ಟೆಲಿಗ್ರಾಫ್ ಕಚೇರಿ ಸ್ಥಾಪನೆ.
1907 – ಕಾನ್ಪುರ ನಗರದಲ್ಲಿ ಮೊದಲ ಕೇಂದ್ರೀಯ ವಿದ್ಯುತ್ [50 ವೋಲ್ಟ್ ನೇರ ವಿದ್ಯುತ್ ಬಳಕೆಯ] ಟೆಲಿಫೋನ್ ವಿನಿಮಯ ಕೇಂದ್ರದ ಆರಂಭ.
1913–1914 – ಸಿಮ್ಲಾದಲ್ಲಿ ಮೊದಲ ಸ್ವಯಂ ಚಾಲಿತ ದೂರವಾಣಿ ವಿನಿಮಯ ಕೇಂದ್ರ ಸ್ಥಾಪಿಸಲಾಯಿತು.
1927 – ಇಂಗ್ಲೆಂಡ್ ಮತ್ತು ಭಾರತದ ನಡುವೆ ತಂತಿರಹಿತ ರೇಡಿಯೋ ಟೆಲಿಗ್ರಾಫ್ ವೆವಸ್ಥೆ ಆರಂಭಗೊಂಡಿತು.
1933 – ಇಂಗ್ಲೆಂಡ್ ಮತ್ತು ಭಾರತದ ನಡುವೆ ರೇಡಿಯೋ ದೂರವಾಣಿ ವೆವಸ್ಥೆ ಆರಂಭಗೊಂಡಿತು.
1947 - ಮೊದಲ ಇಲೆಕ್ಟ್ರಾನಿಕ್ ಮತ್ತು ಟೆಲಿಕಮ್ಯುನಿಕೇಷನ್ ತಾಂತ್ರಿಕ ವಿಭಾಗ ಜಬಲ್ಪುರದಲ್ಲಿ ಆರಂಭ.
1953 – 12 ಚಾನೆಲ್ ಗಳ [ಧ್ವನಿಮಾಹಿತಿ ಹೊತ್ತೊಯುವ] ವಾಯಿಸ್ ಕ್ಯಾರಿಯರ್ ವೆವಸ್ಥೆ ಆರಂಭ.
1960 – ಮೊದಲ ಎಸ.ಟಿ.ಡಿ. ಮಾರ್ಗ ಲಖ್ನೌ ಮತ್ತು ಕಾನಪುರ್ ಗಳ ಮಧ್ಯ ಆರಂಭವಾಯಿತು.
1975 – ಮೊದಲ PCM ಕ್ಯಾರಿಯರ್ ವೆವಸ್ಥೆ ಮುಂಬೈನಗರ ಮತ್ತು ಅಂಧೇರಿ ದೂರವಾಣಿ ಕೇಂದ್ರಗಳ ಮಧ್ಯ ಸ್ಥಾಪಿಸಲಾಯಿತು.
1976 – ಮೊದಲ digital microwave ತಂತ್ರದಿಂದ ಮಾಹಿತಿ ಹೊತ್ತೊಯ್ಯುವ [ಕ್ಯಾರಿಯರ್] ಮಾರ್ಗದ ಸ್ಥಾಪನೆ.
1979 – ಮೊದಲ optical fiber ಕೇಬಲ್ ಅನ್ನು, ಸ್ಥಳೀಯ ಚಾನಲ್ ಕ್ಯಾರಿಯರ್ ಮಾರ್ಗಗಳಿಗಾಗಿ ಎಸೆಸ್ವಿಯಾಗಿ ಪುಣೆಯಲ್ಲಿ ಸ್ಥಾಪಿಸಲಾಯಿತು.
1980 – ಮೊದಲ satellite earth station ರಾಷ್ಟ್ರೀಯ ದೂರವಾಣಿ ಸಂಪರ್ಕಕ್ಕಾಗಿ, ಉತ್ತರ ಪ್ರದೇಶದಲ್ಲಿ ಸ್ಥಾಪಿಸಲಾಯಿತು.
1983 – ಮೊದಲ analogue ಸ್ಟೋರ್ ಪ್ರೋಗ್ರಾಮ್ ಕಂಟ್ರೋಲ್ ಟೆಲಿಫೊನ್ ವಿನಿಮಯ ಕೇಂದ್ರ, ಟ್ರಂಕ್-ಲೈನ್ ಸೇವೆಗಳಿಗಾಗಿ ಮುಂಬೈಯಲ್ಲಿ ಸ್ಥಾಪಿಸಲಾಯಿತು.
1984 – ಭಾರತದಲ್ಲಿ ಡಿಜಿಟಲ್ ದೂರವಾಣಿ ಸ್ವಿಚಗಳ [ವಿನಿಮಯ-ಕೇಂದ್ರಗಳ], ದೇಶೀಯ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ, C-DOT ಸಂಸ್ಥೆಯನ್ನು ಸ್ಥಾಪಿಸಿದರು.
1995 – ಮೊದಲ mobile telephone ಸೇವೆ ದಿಲ್ಲಿಯಲ್ಲಿ ಆರಂಭವಾಯಿತು.
1995 – ಭಾರತದಲ್ಲಿ ಇಂಟರ್ನೆಟ್ ಸೇವೆಯು ದಿಲ್ಲಿಯಿಂದ ಆರಂಭವಾಯಿತು.