ಭಾರತದಲ್ಲಿರುವ ಎತ್ತರದ ಕಟ್ಟಡಗಳು

ವಿಕಿಪೀಡಿಯ ಇಂದ
Jump to navigation Jump to search

ಪ್ರಸ್ತುತ ಭಾರತ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ಥಾನ ಮಾನಗಳನ್ನು ಬೆಳೆಸಿಕೊಳ್ಳುತ್ತಿದೆ. ವಿಜ್ಞಾನ, ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಗಟ್ಟಿಯಾಗಿ ನೆಲೆಯುರುತ್ತಿರುವ ನಮ್ಮ ದೇಶವು ಆಧುನೀಕರಣದ ವಿಷಯದಲ್ಲೂ ಮುಂದುವರೆಯುತ್ತಿದೆ. ಹಿಂದೊಮ್ಮೆ ಚಿತ್ರಗಳಲ್ಲೊ ಅಥವಾ ಸಿನೆಮಾಗಳಲ್ಲೊ ನೋಡುತ್ತಿದ್ದ ಪಾಶ್ಚಾತ್ಯ ದೇಶಗಳ ಕಣ್ಣು ಕೊರೈಸುವಂತಹ ಎತ್ತರದ ಕಟ್ಟಡಗಳು ಇಂದು ನಮ್ಮ ದೇಶದಲ್ಲೂ ಕಾಣಬಹುದಾದ ಸತ್ಯ ಸಂಗತಿಗಳಾಗಿವೆ.

ಹೌದು, ಇಂದು ಭಾರತ ದೇಶವು ಆಧುನಿಕತೆಯ ಭರದಲ್ಲಿ ಸಾಗುತ್ತಿದ್ದು, ಅನೇಕ ಭವ್ಯ ಹಾಗು ಎತ್ತರದ ಕಟ್ಟಡಗಳನ್ನು ಒಳಗೊಂಡಿದೆ ಹಾಗು ನಮಗೆಲ್ಲ ಈ ಕಟ್ಟಡಗಳು ಹೆಮ್ಮೆಯ ಸಂಕೇತಗಳಾಗಿವೆ. ಈ ಲೇಖನದ ಮೂಲಕ ಭಾರತದಲ್ಲಿರುವ ಕೆಲವು ಎತ್ತರದ ಕಟ್ಟಡಗಳ ಕುರಿತು ತಿಳಿಯಿರಿ. ಹೆಚ್ಚಿನ ಕಟ್ಟಡಗಳು ಆರ್ಥಿಕ ರಾಜಧಾನಿ ಮುಂಬಯಿನಲ್ಲಿ ಕಂಡುಬರುತ್ತವೆ.

ಇಂಪೇರಿಯಲ್ ಟವರ್, ಮುಂಬಯಿ[ಬದಲಾಯಿಸಿ]

ದಕ್ಷಿಣ ಮುಂಬಯಿನ ತಾರ್ದೇವ್ ನಲ್ಲಿರುವ ಈ ವಸತಿ ಸಮುಚ್ಚಯ ಕಟ್ಟಡವು ಇಲ್ಲಿವರೆಗಿನ ಪೂರ್ಣಗೊಂಡ ಭಾರತದ ಅತಿ ಎತ್ತರದ ಕಟ್ಟಡವಾಗಿದೆ. ಇದರ ಎತ್ತರ 833 ಅಡಿಗಳು.

ಕೊಹಿನೂರ್ ಸ್ಕ್ವೇರ್, ಮುಂಬಯಿ[ಬದಲಾಯಿಸಿ]

ಮುಂಬಯಿನ ಶಿವಾಜಿ ಪಾರ್ಕ್ ಪ್ರದೇಶದಲ್ಲಿರುವ ಕೊಹಿನೂರ್ ಸ್ಕ್ವೇರ್ ಕಟ್ಟಡವು ಒಂದು ಭವ್ಯ ಕಟ್ಟಡವಾಗಿದ್ದು 666 ಅಡಿಗಳಷ್ಟು ಎತ್ತರವಿದೆ. ಇಲ್ಲಿ ವಸತಿ ನಿಲಯ, ಹೋಟೆಲ್ ಹಾಗು ವೈಭವೋಪೇತ ಅಂಗಡಿ ಮುಗ್ಗಟ್ಟುಗಳನ್ನು ಕಾಣಬಹುದು.

ಅಶೋಕ್ ಟವರ್ಸ್, ಮುಂಬಯಿ[ಬದಲಾಯಿಸಿ]

ಮುಂಬಯಿನಲ್ಲಿರುವ ಅಶೋಕ್ ಟವರ್ಸ್ ಒಂದು ವಸತಿ ಸಮುಚ್ಚಯ(ರೆಸಿಡೆನ್ಷಿಯಲ್ ಅಪಾರ್ಟ್ ಮೆಂಟ್)ವಾಗಿದ್ದು 633 ಅಡಿಗಳಷ್ಟು ಎತ್ತರವಾಗಿದೆ.

ಪ್ಲಾನೆಟ್ ಗೊದ್ರೇಜ್, ಮುಂಬಯಿ[ಬದಲಾಯಿಸಿ]

ದಕ್ಷಿಣ ಮುಂಬಯಿನ ಮಹಾಲಕ್ಷ್ಮಿ ಪ್ರದೇಶದಲ್ಲಿರುವ ಈ ಕಟಡವು 594 ಅಡಿಗಳಷ್ಟು ಎತ್ತರವಿದೆ.

ಸನ್ ಶೈನ್ ಟವರ್, ಮುಂಬಯಿ[ಬದಲಾಯಿಸಿ]

ಮುಂಬಯಿನಲ್ಲಿರುವ ಸನ್ ಶೈನ್ ಟವರ್ ಒಂದು ವಾಣಿಜ್ಯ ಸಂಕೀರ್ಣವಾಗಿದ್ದು, 591 ಅಡಿಗಳಷ್ಟು ಎತ್ತರವಿದೆ.

ವರ್ಲ್ಡ್ ಟ್ರೇಡ್ ಸೆಂಟರ್, ಬೆಂಗಳೂರು[ಬದಲಾಯಿಸಿ]

ಬೆಂಗಳೂರಿನ ರಾಜಾಜಿ ನಗರ ಪ್ರದೇಶದಲ್ಲಿರುವ ಈ ಬೃಹತ್ ವಾಣಿಜ್ಯ ಕಟ್ಟಡವು 32 ಅಂತಸ್ತುಗಳನ್ನು ಹೊಂದಿದ್ದು 420 ಅಡಿಗಳಷ್ಟು ಎತ್ತರವಾಗಿದೆ. ಇದನ್ನು ಉತ್ತರದ ನಕ್ಷತ್ರ (ನಾರ್ಥ್ ಸ್ಟಾರ್) ಎಂತಲೂ ಕರೆಯಲಾಗುತ್ತದೆ.

ಯುಬಿ ಸಿಟಿ, ಬೆಂಗಳೂರು[ಬದಲಾಯಿಸಿ]

ಇದು ಬೆಂಗಳೂರಿನಲ್ಲಿರುವ ಒಂದು ಬೃಹತ್ ವಾಣಿಜ್ಯ ಸಂಕೀರ್ಣವಾಗಿದೆ. ಯುಬಿ ಗ್ರೂಪ್ ನ ಮಾಲಿಕರಾದ ಡಾ.ವಿಜಯ ಮಲ್ಯ ಹಾಗು ಪ್ರತಿಷ್ಠಿತ ಪ್ರೆಸ್ಟೀಜ್ ಗ್ರೂಪ್ ನ ಜಂಟಿ ಯೋಜನೆಯ ಉತನ್ನವಾದ ಈ ಕಟ್ಟಡವು 13 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಿತವಾಗಿದ್ದು ಎತ್ತರನೆಯ ಟವರ್ (ಯುಬಿ ಟವರ್) 420 ಅಡಿಗಳಷ್ಟು ಎತ್ತರವಾಗಿದೆ.

ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್, ಬೆಂಗಳೂರು[ಬದಲಾಯಿಸಿ]

ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್ ಅಥವಾ ಸುಭಾಸ ಚಂದ್ರ ಬೋಸ್ ಟವರ್ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ನೆಲೆಸಿದೆ. 25 ಅಂತಸ್ತುಗಳ ಈ ಬೃಹತ್ ಕಟಡವು ಶಾಪಿಂಗ್ ಮಳಿಗೆಗಳು, ಸಿನೆಮಾ, ಕಚೇರಿ, ಹೋಟೆಲ್ ಮುಂತಾದವುಗಳನ್ನು ಒಳಗೊಂಡಿದೆ.

ಗಿಫ್ಟ್ ವನ್, ಗುಜರಾತ್[ಬದಲಾಯಿಸಿ]

ಗುಜರಾತಿನಲ್ಲಿರುವ ಗಿಫ್ಟ್ (GIFT) ವನ್ ಅಥವಾ ಗುಜರಾತ್ ಇಂಟರ್ ನ್ಯಾಷನ್ಲ್ ಫೈನಾನ್ಸ್ ಟೆಕ್ ಸಿಟಿ ವನ್ ಪ್ರಸ್ತುತ ರಾಜ್ಯದ ಅತಿ ಎತ್ತರದ ಕಟ್ಟಡವಾಗಿದ್ದು 400 ಅಡಿಗಳಷ್ಟು ಎತ್ತರವಿದೆ.

ಎಂಸಿಡಿ ಸಿವಿಕ್ ಸೆಂಟರ್, ನವದೆಹಲಿ[ಬದಲಾಯಿಸಿ]

ಮುನಿಸಿಪಲ್ ಕಾರ್ಪೊರೇಷನ್ ಆಫ್ ಡೆಲ್ಲಿ ಸಿವಿಕ್ ಸೆಂಟರ್, ದೆಹಲಿಯಲ್ಲಿನ ಅತಿ ಎತ್ತರದ ಕಟ್ಟಡವಾಗಿದೆ. 28 ಅಂತಸ್ತುಗಳುಳ್ಳ ಈ ಕಟ್ಟಡವು 335 ಅಡಿಗಳಷ್ಟು ಎತ್ತರವಿದೆ.

ಡಿಎಲ್‍ಎಫ್ ಗೇಟ್ ವೇ ಟವರ್, ಗುರಗಾಂವ್[ಬದಲಾಯಿಸಿ]

ಗುರಗಾಂವ್ ನ ಸೆಕ್ಟರ್ 24 ನಲ್ಲಿರುವ ಡಿಎಲ್‍ಎಫ್ ಗೇಟ್ ವೆ ಟವರ್ ಕಟ್ಟಡವು 295 ಅಡಿಗಳಷ್ಟು ಎತ್ತರವಿದೆ. ಇದೊಂದು ವಾಣಿಜ್ಯ ಉದ್ದೇಶದ ಕಟ್ಟಡವಾಗಿದೆ.

ಸೌತ್ ಸಿಟಿ ಟವರ್, ಕೊಲ್ಕತ್ತಾ[ಬದಲಾಯಿಸಿ]

ಕೊಲ್ಕತ್ತಾದಲ್ಲಿನ ಸೌತ್ ಸಿಟಿ ಟವರ್ಸ್ ಹಲವು ಕಟ್ಟಡಗಳನ್ನು ಹೊಂದಿದ್ದು ಕೊಲ್ಕತ್ತಾದ ಎತ್ತರದ ಕಟ್ಟಡಗಳಲ್ಲಿ ಒಂದಾಗಿದೆ. ಗರಿಷ್ಠ ಎತ್ತರ 489 ಅಡಿಗಳು.

ಎವರೆಸ್ಟ್ ಹೌಸ್, ಕೊಲ್ಕತ್ತಾ[ಬದಲಾಯಿಸಿ]

1978 ರಲ್ಲಿ ನಿರ್ಮಿಸಲಾದ ಕೊಲ್ಕತ್ತಾದ ಈ ವಾಣಿಜ್ಯ ಕಟ್ಟಡವು 21 ಅಂತಸ್ತುಗಳನ್ನು ಒಳಗೊಂಡಿದ್ದು, 276 ಅಡಿಗಳಷ್ಟು ಎತ್ತರವಿದೆ.

ಟಾಟಾ ಸೆಂಟರ್, ಕೊಲ್ಕತ್ತಾ[ಬದಲಾಯಿಸಿ]

ಕೊಲ್ಕತ್ತಾ ನಗರ ಕೇಂದ್ರದಲ್ಲಿ ಪ್ರಮುಖ ಹೆಗ್ಗುರುತಾಗಿದೆ ಈ ಕಟ್ಟಡ. 259 ಅಡಿಗಳಷ್ಟು ಎತ್ತರವಿರುವ ಈ ಕಟ್ಟಡವು ಟಾಟಾ ಸ್ಟೀಲ್ ಲಿಮಿಟೆಡ್ ನ ಮಾರಾಟ ವಿಭಾಗದ ಕೇಂದ್ರ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ.

ಸೋಭಾ ಟೊಪಾಜ್, ತ್ರಿಶ್ಶೂರ್[ಬದಲಾಯಿಸಿ]

ಸೋಭಾ ಟೊಪಾಜ್, ಕೇರಳದ ತ್ರಿಶ್ಶೂರ್ ನಗರದಲ್ಲಿರುವ ಒಂದು ಭವ್ಯ ವಸತಿ ಸಮುಚ್ಚಯವಾಗಿ ಕೇರಳ ರಾಜ್ಯದಲ್ಲೆ ಎರಡನೆಯ ಎತ್ತರದ ಕಟ್ಟಡವಾಗಿದೆ.