ವಿಷಯಕ್ಕೆ ಹೋಗು

ಭವಿನಾ ಪಟೇಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭವಿನಾ ಪಟೇಲ್
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಭವಿನಾ ಹಸ್ಮುಖ್ ಭಾಯ್ ಪಟೇಲ್
ಜನನಸುಂಧಿಯಾ ಗ್ರಾಮ, ವದ್ನಗರ್, ಮೆಹ್ಸಾನ ಜಿಲ್ಲೆ, ಗುಜರಾತ್, ಭಾರತ
ಬಾಳ ಸಂಗಾತಿನಿಲ್ಕುಲ್ ಪಟೇಲ್ [೧]
Sport
ದೇಶಭಾರತ
ಕ್ರೀಡೆಟೇಬಲ್ ಟೆನ್ನಿಸ್
ಸದ್ಯದ ವಿಶ್ವ ಶ್ರೇಯಾಂಕ೧೨ (ಆಗಸ್ಟ್ ೨೦೨೧)
ಸ್ಪರ್ಧೆಗಳು(ಗಳು)ಪ್ಯಾರಾ ಟೇಬಲ್ ಟೆನ್ನಿಸ್, C4 ವಿಭಾಗ
ತರಬೇತುದಾರರುಲಾಲನ್ ದೋಶಿ
Achievements and titles
ಅತ್ಯುನ್ನತ ವಿಶ್ವ ಶ್ರೆಯಾಂಕ೨(೨೦೧೧)

ಭವಿನಾ ಹಸ್ಮುಖ್ ಭಾಯ್ ಪಟೇಲ್ ಅವರು ಅಂತರರಾಷ್ಟ್ರೀಯ ಪ್ಯಾರ್ ಟೇಬಲ್ ಟೆನ್ನಿಸ್ ಕ್ರೀಡಾಪಟು. ಇವರು [೨] ನ ಮೆಹ್ಸಾನದವರು. ಇವರು ೨೦೨೦ ರ ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಕ್ಲಾಸ್-೪ ವಿಭಾಗದ ಟೇಬಲ್ ಟೆನ್ನಿಸ್ಸಿನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. [೩] ಭವಿನಾ ಅವರು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸಿಗಳನ್ನು ಗೆದ್ದಿದ್ದಾರೆ. ಅವರು ೨೦೧೧ರಲ್ಲಿ ಥಾಯ್ಲಾಂಡ್ ನಲ್ಲಿ ನಡೆದ ಪಿ.ಟಿ.ಟಿ ಟೇಬಲ್ ಟೆನ್ನಿಸ್ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿಪದಕವನ್ನು ಗೆಲ್ಲುವ ಮೂಲಕ ವರ್ಲ್ಡ್ ನಂ ೨ ರ್ಯಾಂಕಿಂಗಿಗೆ ಏರಿದರು. [೪]

ಏಷಿಯನ್ ಪ್ಯಾರಾ ಟೇಬಲ್ ಟೆನ್ನಿಸ್ ಚಾಂಪಿಯನ್ ಷಿಪ್[ಬದಲಾಯಿಸಿ]

ಅಕ್ಟೋಬರ್ ೨೦೧೩ರಲ್ಲಿ ಬೀಜಿಂಗಿನಲ್ಲಿ ನಡೆದ ಏಷಿಯನ್ ಪ್ಯಾರಾಲಿಂಪಿಕ್ಸಿನಲ್ಲಿ ಇವರು ಬೆಳ್ಳಿಪದಕವನ್ನು ಗೆದ್ದರು. ೨೦೧೭ರ ಆಗಸ್ಟ್ ೨೩ರಿಂದ ೩೧ರ ವರೆಗೆ ಬೀಜಿಂಗಿನಲ್ಲಿ ನಡೆದ ಏಷಿಯನ್ ಪ್ಯಾರಾಲಿಂಪಿಕ್ಸಿನಲ್ಲಿ ಇವರು ಕಂಚಿನ ಪದಕವನ್ನು ಗೆದ್ದರು.[೫] ಇವರನ್ನು ಕೋಚ್ ಲಾಲನ್ ದೋಶಿ [೬] ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ.

ಟೋಕಿಯಾ ೨೦೨೦ ಪ್ಯಾರಾಲಿಂಪಿಕ್ಸ್[ಬದಲಾಯಿಸಿ]

೨೦೨೦ರ ಟೋಕಿಯೋ ಪ್ಯಾರಾಲಿಂಪಿಕ್ಸಿನಲ್ಲಿ [೭] ಇವರು ಪ್ರಪಂಚದ ೨ನೇ ರ್ಯಾಂಕಿಗಿನಲ್ಲಿದ್ದ ಮತ್ತು ಹಿಂದಿನ ರಿಯೋ ಒಲಂಪಿಕ್ಸಿನ ಸ್ವರ್ಣ ಪದಕ ವಿಜೇತೆ ಬೋರಿಸ್ಲವ ರಾಂಕೋವಿಕ್ ಅವರನ್ನು ಕ್ವಾಟರ್ ಫೈನಲ್ಲಿನಲ್ಲಿ ಸೋಲಿಸಿದರು. ಇವರು ಚೀನಾದ ಝಾಂಗ್ ಮಿಯಾ ಅವರನ್ನು ಸೋಲಿಸಿ ಫೈನಲ್ಲಿಗೇರಿದರು. ಇವರು ಚೀನಾದವರೇ ಆದ ಪ್ರಸ್ತುತ ೨ನೇ ರ್ಯಾಂಕಿಂಗಿನಲ್ಲಿರುವ ಝಾವ್ ಯಿಂಗ್ ಅವರೆದುರು ಫೈನಲ್ಲಿನಲ್ಲಿ ಸೋಲು ಕಂಡು ಪ್ಯಾರಾಲಿಂಪಿಕ್ಸಿನಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. [೮]

ವೃತ್ತಿ ಜೀವನ[ಬದಲಾಯಿಸಿ]

ಭವಿನಾ ಪಟೇಲ್ ಅವರು ಪ್ರಸ್ತುತ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಕೆಳಗೆ ಬರುವ Employees State Insurance Corporation (ESIC) ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಅಹಮದಾಬಾದಿನ ಆಫೀಸಿನಲ್ಲಿ ಸಹಾಯಕ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. Bhargava, Shubham (28 August 2021). "Who is Bhavina Patel? Bio, Career, Medals, Net Worth, Coach, Parents, and more". firstsportz.com (in ಇಂಗ್ಲಿಷ್). Retrieved 2021-08-28.
  2. ಭವಿನಾ ಅವರ ಬಗ್ಗೆ ಟೈಂಸ್ ಆಫ್ ಇಂಡಿಯಾ ವರದಿ, ಜುಲೈ ೩, ೨೦೨೧
  3. ಭವಿನಾ ಪಟೇಲ್ ಅವರು ೨೦೨೦ರ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ಬಗ್ಗೆ news18 ತಾಣದ ವರದಿ, ಆಗಸ್ಟ್ ೨೯, ೨೦೨೧
  4. firstsportz.com ನಲ್ಲಿ ಭವಿನಾ ಪಟೇಲ್ ಅವರು ಗೆದ್ದ ಪದಕಗಳ ಉಲ್ಲೇಖ
  5. ಭವಿನಾ ಅವರು ೨೦೧೭ರ ಪ್ಯಾರಾಲಿಂಪಿಕ್ಸಿನಲ್ಲಿ ಕಂಚಿನ ಪದಕ ಗೆದ್ದ ಬಗೆಗಿನ ಮಾಹಿತಿ
  6. ಕೋಚ್ ಲಾಲನ್ ದೋಶಿಯವರ ಚಿತ್ರ ಮತ್ತು ಮಾಹಿತಿ
  7. ahmedabadmirror.com ನಲ್ಲಿ ಭವಿನಾ ಪಟೇಲ್ ಅವರು ಪ್ಯಾರಾಲಿಂಪಿಕ್ಸ್ ಪ್ರವೇಶ ಪಡೆದ ಬಗೆಗಿನ ವರದಿ
  8. ಭವಿನಾ ಪಟೇಲ್ ಅವರು ಪ್ಯಾರಾಲಿಂಪಿಕ್ಸಿನ ಬೆಳ್ಳಿ ಪದಕ ಗೆದ್ದ ಬಗ್ಗೆ ಕನ್ನಡಪ್ರಭದ ವರದಿ, ೨೯ ಆಗಸ್ಟ್, ೨೦೨೧