ಭಯೋತ್ಪಾದನೆ

ವಿಕಿಪೀಡಿಯ ಇಂದ
(ಭಯೋತ್ಪಾದಕ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಭಯೋತ್ಪಾದನೆ ಅಥವಾ ಸ್ವಚ್ಛಂದ ಹಿಂಸೆ ಎಂದರೆ ಹೆದರಿಸುವುದು. ಸಮಾಜದಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಕದಡಿ ಭಯ ಹುಟ್ಟಿಸುವುದು. ಇದು ಸಮಾಜ ವಿರೋಧಿ ಕೃತ್ಯವಾಗಿದೆ. ಇದರಿಂದ ಸಮಾಜದಲ್ಲಿ ಬದುಕು ದುಸ್ತರಗೊಳ್ಳುವುದು. ಅಪರಾಧವೆಂಬುದು ಸಮಾಜದಲ್ಲಿ ಅಸಹಜ ಪ್ರಕ್ರಿಯೆಯೇನಲ್ಲ. ದಮನ, ಮರ್ದನ, ಬಲಾತ್ಕಾರಗಳಿಗೆ ವಿರುದ್ಧ ಪ್ರತಿಕ್ರಿಯೆಯಾಗಿಯೂ ಅಪರಾಧ ಕೃತ್ಯ ನಡೆಯಬಹುದು. ಸ್ವಾರ್ಥವೂ ಅಂತಹ ಕೆಲಸವನ್ನು ಮಾಡಿಸಬಹುದು. ಹಾಗಂತ ಅದು ಭಯೋತ್ಪಾದನೆ ಆಗುವುದಿಲ್ಲ. ಇಂದು ರಾಜಕೀಯ, ಧಾರ್ಮಿಕ ಅಥವಾ ಸೈದ್ಧಾಂತಿಕ ಗುರಿ ಸಾಧಿಸಲು, ಸ್ವಚ್ಛಂದ ಹಿಂಸೆಯನ್ನು ಅನುಸರಿಸುವುದು ಸಹಜವೇ ಆಗಿದೆ.

11 ಸೆಪ್ಟಂ.2001ರಂದು ಅಮೆರಿಕಾದ ವರ್ಲ್ಡ್ ಟ್ರೇಡ್ ಉತ್ತರ ಭಾಗದ ಗೋಪುರಕ್ಕೆ ಭಯೋತ್ಪಾದಕರು ವಿಮಾನ ಅಪ್ಪಳಿಸಿದ ದೃಶ್ಯ; ಅದನ್ನು 9-11 ಎನ್ನುವರು.

ಪರಿಚಯ[ಬದಲಾಯಿಸಿ]

  • ಭಯೋತ್ಪಾದನೆ ಎಂಬುದೀಗ ಗುಪ್ತ ಕಾರ್ಯಾಚರಣೆಯ ರೂಪವನ್ನು ಕಳಚಿಕೊಂಡು ಬಹಿರಂಗ 'ಯುದ್ಧ'ದ ರೂಪದಲ್ಲಿ ರುದ್ರ ನರ್ತನ ನಡೆಸುವ ಧಾಷ್ಟ್ರ್ಯ ಪ್ರದರ್ಶಿಸಿದೆ. ಈ ಭಯೋತ್ಪಾದನೆ ಮತ್ತೆ ಮತ್ತೆ ಏಕೆ ನಮ್ಮನ್ನು ಕಾಡುತ್ತಿದೆ ಮತ್ತು ಇದನ್ನು ಏಕೆ ಶಾಶ್ವತವಾಗಿ ನಿರ್ಮೂಲನ ಮಾಡಲಾಗುತ್ತಿಲ್ಲ ಎಂಬುದನ್ನು ಯೋಚಿಸಿ, ಅ ಬಗ್ಗೆ ಕ್ರಮ ಕೈಗೊಳ್ಳುವಂತಹ ವಾತಾವರಣವನ್ನು ನಿರ್ಮಿಸುವುದು ಇಂದಿನ ಸಂದರ್ಭದಲ್ಲಿ ನಿಜವಾದ ದೇಶಪ್ರೇಮದ ಅಭಿವ್ಯಕ್ತಿ ಎನಿಸಿಕೊಳ್ಳುತ್ತದೆ.
  • ಇದು ನಾಲ್ಕನೇ ಪೀಳಿಗೆಯ ಯುದ್ಧ ಎನ್ನಬಹುದು ಮತ್ತು ಒಂದು ಹಿಂಸಾತ್ಮಕ ಅಪರಾಧ ಎಂದು ವರ್ಗೀಕರಿಸಲಾಗಿದೆ. ಆಧುನಿಕ ಕಾಲದಲ್ಲಿ, ಭಯೋತ್ಪಾದನೆ ಸಮಾಜದ ಒಂದು ಪ್ರಮುಖ ಶತ್ರು. ಬಹುತೇಕ ಸಂಧರ್ಭಗಳಲ್ಲಿ ಒಪ್ಪಿತ ಅಧಿಕಾರ ವ್ಯಾಪ್ತಿವ್ಯವಸ್ಥೆಗಳಲ್ಲಿ ಭಯೋತ್ಪಾದನಾ ವಿರೋಧಿ ಕಾನೂನುಗಳ ಅಡಿಯಲ್ಲಿ ಭಯೋತ್ಪಾದನೆ ಸಮಾಜಕ್ಕೆ ಬೆದರಿಕೆ; ಆದ್ದರಿಂದ ಅಕ್ರಮ.ಎಂದು ಪರಿಗಣಿಸಲಾಗುತ್ತದೆ.
  • ನಾಗರಿಕರು ತಟಸ್ಥ ಸೇನಾ ಸಿಬ್ಬಂದಿ ಅಥವಾ ಯುದ್ಧದ ಶತ್ರು ಖೈದಿಗಳನ್ನೂ ವಿರೋಧಿ ಅಲ್ಲದವರು, ಇಂತಹವರನ್ನು ಗುರಿಯಾಗಿ ಹಿಂಸೆ ಕೊಲೆ ಬಳಸಿದಾಗ ಇದು ಯುದ್ಧದ ಕಾನೂನು ಅಡಿಯಲ್ಲಿ ಯುದ್ಧ ಅಪರಾಧದ ಪರಿಗಣಿಸಲಾಗಿದೆ.

ನಾಗರಿಕರು ವಿರೋಧಿ ಅಲ್ಲದವರು, ಶಾಂತವಾಗಿ ವಿರೋಧಿಸುವವರು, ಕೇವಲ ಅಭಿಪ್ರಾಯ ಬೇಧವಿದ್ದು ಶಾಂತವಾಗಿ ಅದನ್ನು ಪ್ರಕಟಿಸುವವರು ಇಂತಹವರ ಮೇಲೆ ಯಾವ ಆಭಿಪ್ರಾಯ, ಸಮಜಾಯಶಿಗೂ ಅವಕಾಶಕೊಡದೆ, ಹಿಂಸೆ ಬೆದರಿಕೆ, ಕೊಲೆ ಇವನ್ನು ಭಯೋತ್ಪಾದನೆ ಎನ್ನಬಹುದು.

  • ಹಾಗೆಯೇ ಯಾವುದೇ ಸಿದ್ಧಾಂತ ವಾದಿಗಳು ತಮ್ಮ ಸಿದ್ಧಾಂತವನ್ನು ಒಪ್ಪದವರನ್ನು ವಿರೋದಿಸುವವರನ್ನು ಹಿಂಸೆಯಿಂದ ಒಪ್ಪಿಸಲು ಪ್ರಯತ್ನಿಸುವುದು, ಅಥವಾ ವಿರೋಧವನ್ನು ಹತ್ತಿಕ್ಕಲು ಯಾವ ಚರ್ಚೆಗೂ ಅವಕಾಶ ಕೊಡದೆ ಕೊಲೆ ಬಲಾತ್ಕಾರ ಬಂದನ, ಈಕ್ರಮ ಅನುಸರಿಸುವುದನ್ನು ಭಯೋತ್ಪಾದನೆ ಎನ್ನಬಹುದು. ಇದರಲ್ಲಿ ತಮ್ಮ ಅಥವಾ ತಮ್ಮ ನಾಯಕನ ಅಭಿಪ್ರಾಯ ಒಪ್ಪದವರಿಗೆ ಬದುಕುವ ಹಕ್ಕೇ ಇಲ್ಲವೆನ್ನುವ ಗಟ್ಟಿ ಕ್ರೂರ ನಿರ್ಧಾರವಿದೆ. ಆದ್ದರಿಂದ ಅದನ್ನು -ಭಯೋತ್ಪಾದನೆಯನ್ನು ಅಪರಾಧವೆಂದು ಎಲ್ಲಾ ಸರಕಾರಗಳೂ ಕಾನೂನು ಮಾಡಿವೆ.

ಭಯೋತ್ಪಾದನೆ ವಿಧಗಳು[ಬದಲಾಯಿಸಿ]

  1. ಅಭಿವೃದ್ಧಿ ಭಯೋತ್ಪಾದನೆ
  2. ಅಂತರರಾಷ್ಟ್ರೀಯ ಭಯೋತ್ಪಾದನೆ'
  3. ಹೈಟೆಕ್ ಭಯೋತ್ಪಾದನೆ

ಭಯೋತ್ಪಾದನೆಯಲ್ಲಿ ನೀತಿ ನಿಯಮಗಳು[ಬದಲಾಯಿಸಿ]

  • ಭಯೋತ್ಪಾದನೆಯು ರಾಜಕೀಯ ಲಾಭಕ್ಕಾಗಿ ನೆಡೆಸುವ ಹಿಂಸೆಯ ಪ್ರಯೋಗ. ಸಾಮಾನ್ಯವಾಗಿ ಯುದ್ಧಗಳಲ್ಲಿರುವಂತೆ ಯಾವುದೂ ನೀತಿ ನಿಯಮಗಳು ಭಯೋತ್ಪಾದನೆಯಲ್ಲಿರುವುದಿಲ್ಲ. ಇದರಿಂದಾಗಿ ಯಾವುದೇ ಸಮಾಜದ ನೀತಿ ನಿಯಮಗಳನ್ನು ಧಿಕ್ಕರಿಸಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ವ್ಯವಸ್ಥಿತವಾಗಿ ನೆಡೆಸಲ್ಪಡುವ ಕ್ರಿಯೆ.
26-11-2008ರಂದು ಭಯೋತ್ಪಾದಕ ಧಾಳಿಗೆ ತುತ್ತಾದ ತಾಜ್ ಮಹಲ್ ಹೋಟೆಲ್ ರಾತ್ರಿ ಬೆಳಕಿನಲ್ಲಿ
  • ಭಯೋತ್ಪದಕರ ಧಾಳಿಯು ಸಮಾಜದ ಎಲ್ಲ ವರ್ಗ ಮತ್ತು ಪಂಗಡಗಳನ್ನು ಭೇದ ಭಾವವಿಲ್ಲದೆ ನಾಶಪಡಿಸುವುದರಿಂದ "ಭಯೋತ್ಪಾದನೆ" ಎಂಬ ಪದವು, "ಅನ್ಯಾಯ", "ಅನೀತಿ", "ದೋಷಪೂರಿತ", "ವಿತಂಡ", "ಹೇಯ" ಮತ್ತು "ಹಿಂಸಾತ್ಮಕ" ಎಂಬ ಅರ್ಥ ಕೊಡುವ ಎಲ್ಲ ಪದಗಳ ಜೊತೆ ತಾಳೆ ಹೊಂದುತ್ತದೆ. ವಿಶ್ವದ ಸರ್ಕಾರಿ, ಅಸರ್ಕಾರಿ ಸಂಸ್ಥೆಗಳು ಮತ್ತು ವಿದ್ವಾಂಸರು "ಭಯೋತ್ಪಾದನೆ ಅಥವಾ ಭಯೋತ್ಪಾದಕ" ಎಂಬ ಪದವನ್ನು ವಿಶ್ವ ಮಾನ್ಯತೆ ಹೊಂದದ ಸೈನಿಕ ಶಕ್ತಿ ಎಂದೇ ಪರಿಗಣಿಸುತ್ತಾರೆ. ಯಾಕೆಂದರೆ ವಿಶ್ವದ ಎಲ್ಲ ದೇಶಗಳ ಸೈನ್ಯ ಸಂಸ್ಥೆಗಳು ವಿಶ್ವಸಂಸ್ಥೆಯ ಸಾಮಾನ್ಯ ಸೈನಿಕ ನಿಯಮಗಳಿದೆ ಬಧ್ಧರಾಗಿರುತ್ತಾರೆ. ಆದ್ಧರಿಂದ ಭಯೋತ್ಪಾದಕರು ಯಾವಾಗಲೂ ವಿಶ್ವದ ಖಂಡನೆಗೆ ಒಳಗಾಗುವ "ದುರ್ಜನರು".
  • ಆದರೆ ಈ ಮೇಲಿನ ವಿವರಣೆಯನ್ನು ಯಾವುದೇ ಭಯೋತ್ಪಾದಕರು ಒಪ್ಪುವುದಿಲ್ಲ, ಆದ್ದರಿಂದ "ಭಯೋತ್ಪಾದಕರೆಂದು" ಕರೆಯಲ್ಪಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ತನ್ನನ್ನು ಈ ವಿವರಣೆಗಳಿಂದ ಗುರುತಿಸಲ್ಪಡುವುದಕ್ಕೆ ವಿರೋಧಿಸುತ್ತದೆ. ಆದ್ಧರಿಂದ "ಭಯೋತ್ಪಾದಕರು" ತಮ್ಮನ್ನು ಪ್ರತ್ಯೇಕತಾವಾದಿಗಳು, ಸ್ವಾತಂತ್ರ ಯೋಧರು, ಬಿಡುಗಡೆಮಾಡುವವರು, ದೈವ ಸೈನಿಕರು, ಕ್ರಾಂತಿಕಾರಿಗಳು, ಫಿದಾಯೀ, ಮುಜಾಹಿದ್ದೀನ್, ಜಿಹಾದಿಗಳು ಮತ್ತು ಗೆರಿಲ್ಲಾ‌ಗಳೆಂದು ಕರೆದುಕೊಳ್ಳುತ್ತಾರೆ.
  • ಜಿಹಾದ್ ಎಂದರೆ ಭಯೋತ್ಪಾದನೆ ಅಲ್ಲ. ಇಸ್ಲಾಮ್ ಧಮ‍ ಭಯೋತ್ಪಾದನೆಯನ್ನು ಉಗ್ರವಾಗಿ ಖಂಡಿಸುತ್ತದೆ. ಜಿಹಾದ್ ಎಂದರೆ ಹೋರಾಟ ಎಂದಾಗಿದೆ. ಆದರೆ ಅದು ಭಯೋತ್ಪಾದನೆ ಅನ್ನುವ ಅಥ‍ದಲ್ಲಿಲ್ಲ. ಆದ್ದರಿಂದ ಭಯೋತ್ಪಾನೆಗೂ ಜಿಹಾದ್ ಗೂ ಸಂಬಂಧವಿಲ್ಲ ಎಂದು ಮುಸ್ಲಿಮ್ ವಿದ್ವಾಂಸರು ಹೇಳುತ್ತಾರೆ. ಆದರೆ ಇತರರ ದೃಷ್ಟಿಯಲ್ಲಿ ಸಿದ್ಧಾಂತ ವಿರೋಧವನ್ನು ಹಿಂಸೆಯಿಂದ ನಿಗ್ರಹಿಸುವುದು, ಅಥವಾ ಅದಕ್ಕೆ ಮರಣದಂಡನೆಯೇ ಪರಿಹಾರವೆನ್ನುವುದನ್ನು ಒಪ್ಪುವುದಿಲ್ಲ.[೧]

ನಾಲ್ವರು ಉಗ್ರರು ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದವರು[ಬದಲಾಯಿಸಿ]

ಉರಿಯಲ್ಲಿನ ಸೇನಾ ನೆಲೆಯ ಮೇಲೆ ಭಾನುವಾರ ದಾಳಿ ನಡೆಸಿ 18 ಯೋಧರ ಸಾವಿಗೆ ಕಾರಣರಾದ ನಾಲ್ವರು ಉಗ್ರರು ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದವರು ಎಂಬುದನ್ನು ತನಿಖೆ ಖಚಿತಪಡಿಸಿದೆ. ಭಾರಿ ಭದ್ರತೆಯ ಸೇನಾ ಶಿಬಿರದ ಹೊರಗಿನ ತಂತಿ ಬೇಲಿಯನ್ನು ಕತ್ತರಿಸಿ ಉಗ್ರರು ಒಳ ನುಗ್ಗಿದ್ದಾರೆ ಎಂಬ ಅಂಶವೂ ತಿಳಿದು ಬಂದಿದೆ. ನಿಯಂತ್ರಣ ರೇಖೆಯ ಸಮೀಪದಲ್ಲಿರುವ ಸೇನಾ ನೆಲೆಯ ಬಗ್ಗೆ ಉಗ್ರರಿಗೆ ಸಮಗ್ರ ಜ್ಞಾನ ಇತ್ತು. ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಗೆ ಉಗ್ರರು ಹೊರಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿದ ನಂತರ ಯೋಧರು ಅಲ್ಲಿಂದ ಹೊರಬರಲಾಗದಂತೆ ಮಾಡಿದ್ದರು ಎಂಬ ಅಂಶವೂ ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.[೨]

ಭಾರತದಲ್ಲಿ ಭಯೋತ್ಪಾದಕ ಧಾಳಿಗೆ ಬಲಿಯಾದವರು[ಬದಲಾಯಿಸಿ]

ವರ್ಷ ನಾಗರೀಕರು ಭದ್ರತಾ ಸಿಬ್ಬಂದಿ ಭಯೊತ್ಪಾದಕರು ಒಟ್ಟು
2011 34 30 119 183
2012 16 17 84 117
2013 20 61 100 181
2014 32 51 110 193
2015 20 41 113 174
2016 10 69 128 207
ಒಟ್ಟು 132 269 654 1055

[೩]

ತರಬೇತಿ[ಬದಲಾಯಿಸಿ]

‘ಸ್ನೇಹಿತನೊಬ್ಬನ  ಮೂಲಕ 2002ರಲ್ಲಿ ಸಂಘಟನೆ ಸೇರಿಕೊಂಡಿದ್ದೆ. ತ್ರಿಪುರ, ಬಿಹಾರ, ಗುಜರಾತ್‌ನಲ್ಲಿ ತರಬೇತಿ ಪಡೆದಿದ್ದೆ. ಎ.ಕೆ–56 ಬಂದೂಕು ಬಳಕೆ, ಬಾಂಬ್‌ ತಯಾರಿಕೆ ಹಾಗೂ  ಆತ್ಮಾಹುತಿ ಬಾಂಬ್‌ ಬಗ್ಗೆ ಅಲ್ಲಿಯೇ ತರಬೇತಿ ಪಡೆದಿದ್ದೆ. ತರಬೇತಿ ವೇಳೆಯೇ ಎಲ್‌ಇಟಿ ಮುಖ್ಯಸ್ಥರು, ದೇಶದ ವಿಜ್ಞಾನಿಗಳ ಹತ್ಯೆ ಮಾಡುವ ಬಗ್ಗೆ ಸಂಚು ರೂಪಿಸಿದ್ದರು.’ ‘ದೇಶದ ಹಲವೆಡೆ ನೆಲೆಸಿದ್ದ ಆಯ್ದ ವಿಜ್ಞಾನಿಗಳ ವಾಸಸ್ಥಾನ ಹಾಗೂ ಕಚೇರಿಗಳ ಮಾಹಿತಿ ಸಂಗ್ರಹಿಸಿದ್ದೆವು. ಅವರ ಚಲನವಲನಗಳ ಬಗ್ಗೆ ನಿಗಾವಹಿಸಿ  ಹತ್ಯೆ ಮಾಡುವುದು ನಮ್ಮ ಉದ್ದೇಶವಾಗಿತ್ತು’ ಎಂದು ಹಬೀಬ್‌ ಹೇಳಿಕೊಂಡಿದ್ದಾನೆ.

ಐಐಎಸ್‌ಸಿ ಬಳಿ ಮಾಹಿತಿಸಂಗ್ರಹ[ಬದಲಾಯಿಸಿ]

ಐಐಎಸ್‌ಸಿ ಬಳಿಯೇ ಸುತ್ತಾಟ: ‘2005ರ ಡಿ. 28ರಂದು ಐಐಎಸ್‌ಸಿಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ವಿಜ್ಞಾನಿಗಳು ಬರುತ್ತಾರೆ ಎಂಬ ಮಾಹಿತಿ ಇತ್ತು. ಹೀಗಾಗಿ ಎ.ಕೆ.56 ಬಂದೂಕು ಬಳಸುವಲ್ಲಿ ಪರಿಣಿತನಾಗಿದ್ದ ನೂರುಲ್ಲಾ ಖಾನ್‌ ಅಲಿಯಾಸ್‌ ಶಬಾವುದ್ದೀನ್‌ ನೇತೃತ್ವದ ತಂಡವು ಬೆಂಗಳೂರಿಗೆ ಬಂದಿತ್ತು. ಆ ತಂಡ ಹಲವು ದಿನಗಳವರೆಗೆ  ಐಐಎಸ್‌ಸಿ ಸುತ್ತ ಓಡಾಡಿ ಮಾಹಿತಿ ಕಲೆಹಾಕಿತ್ತು’ ಎಂದು ಶಂಕಿತ ಹೇಳಿರುವುದಾಗಿ ಎಟಿಎಸ್‌ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ದಾಳಿ ಮುಗಿದ ಬಳಿಕ ತಂಡವು ಅಲ್ಲಿಂದ ತಪ್ಪಿಸಿಕೊಂಡು ಬಿಹಾರಕ್ಕೆ ಬಂದಿತ್ತು. ತಂಡದ ಸದಸ್ಯರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದ್ದೆ. ಅಷ್ಟರಲ್ಲಿ ಕರ್ನಾಟಕ ಪೊಲೀಸರು ಅವರನ್ನು ಬಂಧಿಸಿದರು’ ಎಂದು ಶಂಕಿತ ತಿಳಿಸಿದ್ದಾನೆ.

ಸ್ನೇಹಿತರು ಜೈಲಿನಲ್ಲಿ[ಬದಲಾಯಿಸಿ]

  • ‘ಹಬೀಬ್‌ನ ಸ್ನೇಹಿತರಲ್ಲಿ ಹಲವರು ಜೈಲಿನಲ್ಲಿದ್ದಾರೆ. ಕೆಲವರು ತೀರಿಕೊಂಡಿದ್ದಾರೆ. ಒಂಟಿಯಾಗಿದ್ದ ಆತ ಅಗರ್ತಲಾ ಬಳಿಯ ಜ್ಞಾನೇಂದ್ರನಗರದಲ್ಲಿ ನೆಲೆಸಿದ್ದ. ಎಲ್‌ಇಟಿಯ ಸಾರಿಗೆ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ’ ಎಂದು ಎಟಿಎಸ್‌ ಅಧಿಕಾರಿ ತಿಳಿಸಿದರು.

ದಾಖಲೆ ನಿಲುಗಡೆ[ಬದಲಾಯಿಸಿ]

ನೋಡಿ[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]

  • ಅಭಿವ್ಯಕ್ತಿ ಸ್ವಾತಂತ್ರ್ಯ: ದ್ವಂದ್ವದ ದುರಂತ (ಅಮ್ಮಾನ್, ಜೋರ್ಡನ್);8 Oct, 2016;[೩]

ಉಲ್ಲೇಖ[ಬದಲಾಯಿಸಿ]

  1. terrorism, the systematic use of violence to create a general climate of fear in a population
  2. 8 ಯೋಧರ ಸಾವಿಗೆ ಕಾರಣ
  3. http://www.prajavani.net/news/article/2016/10/08/443740.html
  4. 61 ಜನರ ಹತ್ಯೆ
  5. ಪಾಕ್ನ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಉಗ್ರರ ದಾಳಿ: 60 ಮಂದಿ ಸಾವು
  6. ಬಾಂಬ್ ದಾಳಿ: 12 ಮಂದಿ ಬಲಿ
  7. 30 ಕುರಿಗಾಹಿಗಳ ಹತ್ಯೆ
  8. ಯೋಧನನ್ನು ಕೊಂದು ದೇಹವನ್ನು ತುಂಡರಿಸಿದ ಪಾಕ್ ;29 Oct, 2016
  9. ಮೋಸುಲ್ಗೆ ಇರಾಕ್ ಸೇನೆ ಮುತ್ತಿಗೆ: ಪತನದತ್ತ ಐಎಸ್:
  10. IS kills over 60 in Mosul
  11. ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಷಾ ನೂರಾನಿ ಯಾತ್ರಾಸ್ಥಳದಲ್ಲಿ ಬಾಂಬ್ ಸ್ಫೋಟ
  12. ಯೋಧನ ಶಿರಚ್ಛೇದ ಅಮಾನುಷ
  13. ನಭ ಜೈಲಿಗೆ ನುಗ್ಗಿದ 10 ಮಂದಿ ಬಂದೂಕುಧಾರಿಗಳು
  14. ಕೆಲವೇ ತಾಸುಗಳಲ್ಲಿ ಸೆರೆ;ಪಿಟಿಐ;29 Nov, 2016
  15. ಉಗ್ರ ದಾಳಿಗೆ ಮೂವರು ಸೈನಿಕರು ಹುತಾತ್ಮ;ಪಿಟಿಐ;29 Nov, 2016
  16. ನೆಲೆ ಮೇಲೆ ದಾಳಿ
  17. [’http://www.prajavani.net/news/article/2016/12/19/459904.html ಆತ್ಮಹತ್ಯಾ ದಾಳಿ: 48 ಯೋಧರ ಸಾವು]
  18. ಕಾಶ್ಮೀರದ ಪುಲ್ವಾಮ ಜಿಲ್ಲೆ: ಶಂಕಿತ ಉಗ್ರರಿಂದ ಬ್ಯಾಂಕ್ ಲೂಟಿ;ಪಿಟಿಐ;8 Dec, 2016
  19. ಹುತಾತ್ಮ ರಾದ ಮೂವರು ಯೋಧರು
  20. ಆತ್ಮಹತ್ಯಾ ದಾಳಿ
  21. ಗುಂಡಿಕ್ಕಿ ರಷ್ಯಾ ರಾಯಭಾರಿ ಹತ್ಯೆ
  22. ಟ್ರಕ್ ಹರಿಸಿ 12 ಜನರ ಹತ್ಯೆ;21 Dec, 2016
  23. *ಗುಂಡಿನ ದಾಳಿಯಲ್ಲಿ ಇಬ್ಬರು ಭಾರತೀಯರ ಸಾವು
  24. ಇಸ್ತಾಂಬುಲ್ ದಾಳಿ: ಹೊಣೆ ಹೊತ್ತ ಐಎಸ್;ಪಿಟಿಐ;3 Jan, 2017
  25. ನೈಟ್ಕ್ಲಬ್ ಮೇಲೆ ದಾಳಿ ಪ್ರಕರಣ:
  26. ಬಾಗ್ದಾದ್ನಲ್ಲಿ ಬಾಂಬ್ ದಾಳಿ:36 ಬಲಿ;3 Jan, 2017
  27. ಫ್ಲೊರಿಡಾದ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ
  28. ಆಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ
  29. ಆಫ್ಘಾನಿಸ್ತಾನ: ಆತ್ಮಾಹುತಿ ದಾಳಿ, 50 ಸಾವುರಾಯಿಟರ್ಸ್;11 Jan, 2017
  30. ಗುಂಡಿನ ದಾಳಿ: 6 ಮಂದಿ ಬಲಿ;ಎಎಫ್ಪಿ;31 Jan, 2017
  31. ಪಾಕ್ನಲ್ಲಿ ಆತ್ಮಾಹುತಿ ಬಾಂಬ್ ದಾಳಿ, 30 ಸಾವು, 100 ಜನರಿಗೆ ಗಾಯ
  32. 100ಕ್ಕೂ ಹೆಚ್ಚು ಶಂಕಿತ ಉಗ್ರರ ಹತ್ಯೆ
  33. ಸೇನಾ ಆಸ್ಪತ್ರೆಯಲ್ಲಿ ಐಎಸ್ ಉಗ್ರರ ಕೃತ್ಯ;ವೈದ್ಯರ ಸೋಗಿನಲ್ಲಿ ದಾಳಿ: 30 ಸಾವು;ಪ್ರಜಾವಾಣಿ ವಾರ್ತೆ;9 Mar, 2017
  34. ಸಿರಿಯಾ: ಅವಳಿ ಬಾಂಬ್ ಸ್ಫೋಟ, 44 ಮಂದಿ ಸಾವು;ಏಜೆನ್ಸಿಸ್;11 Mar, 2017
  35. ವಿಜ್ಞಾನಿಗಳ ಹತ್ಯೆಗೆ ಸಂಚು ರೂಪಿಸಿದ್ದ ಎಲ್ಇಟಿ;ಸಂತೋಷ ಜಿಗಳಿಕೊಪ್ಪ;20 Mar, 2017
  36. ಐಐಎಸ್ಸಿ ದಾಳಿಗೂ ಮುನ್ನ ಮೂರು ಕಡೆ ಸಂಚು!;ಎಂ.ಸಿ.ಮಂಜುನಾಥ್;25 Mar, 2017
  37. ಸಿರಿಯಾ: 47 ಜನರ ಸಾವು;ಐಎಎನ್ಎಸ್;21 Mar, 2017
  38. ಭಯೋತ್ಪಾದನಾ ದಾಳಿ’– ಐವರು ಸಾವು, 40 ಮಂದಿ ಗಾಯಪಿಟಿಐ;23 Mar, 2017
  39. ಬ್ರಿಟನ್ ಸಂಸತ್ ಬಳಿ ದಾಳಿ;ಶರಣಾಗಲು ಒಪ್ಪದ ದಾಳಿಕೋರ;ಪಿಟಿಐ;23 Mar, 2017
  40. ಲಂಡನ್ ದಾಳಿ: ಮತ್ತಿಬ್ಬರ ಬಂಧನ;25 Mar, 2017
  41. http://www.prajavani.net/news/article/2017/03/29/480829.html ಮೂವರು ನಾಗರಿಕರು ಬಲಿ
  42. ಶಂಕಿತ ಉಗ್ರರಿಂದ ದಾಳಿ;ಸಿಆರ್ಪಿಎಫ್ ಕಾವಲುಪಡೆ ಮೇಲೆ ದಾಳಿ:
  43. ಸೇಂಟ್ ಪೀಟರ್ಸ್ಬರ್ಗ್ನ ಮೆಟ್ರೊ ನಿಲ್ದಾಣಗಳಲ್ಲಿ ಸ್ಫೋಟ: ಕನಿಷ್ಠ 10 ಸಾವು
  44. 20 ಜನರ ಹತ್ಯೆ ಮಾಡಿದ ದರ್ಗಾ ಪಾಲಕ;ಪಿಟಿಐ;3 Apr, 2017
  45. ರಷ್ಯಾದ ರೈಲು ಸುರಂಗ ಮಾರ್ಗದಲ್ಲಿ ದುರಂತ; 50ಕ್ಕೂ ಹೆಚ್ಚು ಜನರಿಗೆ ಗಾಯ; ಮೆಟ್ರೊ ರೈಲಿನಲ್ಲಿ ಅವಳಿ ಸ್ಫೋಟ: 10 ಸಾವು;ಏಜೆನ್ಸಿಸ್;3 Apr, 2017
  46. 3 Apr, 2017;ಶ್ರೀನಗರದಲ್ಲಿ ಗುಂಡಿನ ದಾಳಿಯಲ್ಲಿ ಸಿಆರ್ಪಿಎಫ್ ಯೋಧ ಸಾವು, ಹೊಣೆ ಹೊತ್ತ ಎಲ್ಇಟಿ
  47. ರಾಸಾಯನಿಕ ದಾಳಿಯಲ್ಲಿ 27 ಮಕ್ಕಳ ಸಾವು: ಯುನಿಸೆಫ್
  48. ಈಜಿಪ್ಟ್ನ ಎರಡು ಚರ್ಚ್ಗಳಲ್ಲಿ ಸ್ಫೋಟ: 45 ಸಾವು;10 Apr, 2017
  49. ಅಮೆರಿಕದಿಂದ ಆಫ್ಘಾನಿಸ್ತಾನದ ಮೇಲೆ ದೊಡ್ಡ ಬಾಂಬ್;13 Apr, 2017
  50. Five things to know about GBU-43, 'the mother of all bombs';TIMESOFINDIA.COM - Updated: Apr 13, 2017
  51. killed 36 Islamic State militants
  52. http://www.prajavani.net/news/article/2017/04/16/484656.html
  53. ಸಿರಿಯಾದಲ್ಲಿ ನಿರಾಶ್ರಿತರ ಸ್ಥಳಾಂತರ ವೇಳೆ ಆತ್ಮಾಹುತಿ ಬಾಂಬ್ ದಾಳಿಗೆ 112 ಮಂದಿ ಸಾವು;16 Apr, 2017;ರಶಿದಿನ್ ಪ್ರದೇಶ:
  54. ಛತ್ತೀಸ್ಗಡದಲ್ಲಿ ನಕ್ಸಲ್ ದಾಳಿ: 26 ಸಿಆರ್ಪಿಎಫ್ ಯೋಧರು ಹುತಾತ್ಮ;24 Apr, 2017
  55. ಯೋಧರ ದೇಹ ಕತ್ತರಿಸಿದ ಪಾಕ್ನ ಕ್ರಮ ಅಮಾನುಷ;3 May, 2017
  56. ಯೋಧರ ದೇಹ ಕತ್ತರಿಸಿದ ಪಾಕ್;2 May, 2017
  57. ಬ್ರಿಟನ್ನ ಮ್ಯಾಂಚೆಸ್ಟರ್: ಉಗ್ರನ ಕರಾಳ ಕೃತ್ಯಕ್ಕೆ 22 ಬಲಿ;24 May, 2017
  58. ಬಾಗ್ದಾದ್'ನಲ್ಲಿ ಕಾರ್ ಬಾಂಬ್ ದಾಳಿ: 13 ಸಾವು, 24 ಜನರಿಗೆ ಗಾಯ;30 May 2017
  59. http://www.prajavani.net/news/article/2017/05/31/495534.html
  60. http://www.prajavani.net/news/article/2017/05/31/495430.html
  61. ಕಾಬೂಲ್ ಸ್ಫೋಟಕ್ಕೆ 18 ಬಲಿ;3 Jun, 2017
  62. ಇರಾನ್ನಲ್ಲಿ ಐಎಸ್ ದಾಳಿ: 12 ಸಾವು;ಏಜೆನ್ಸಿಸ್;7 Jun, 2017
  63. Mumbai bombings: 400 detained;Thursday, July 13, 2006; Posted: 2:37 p.m. EDT (18:37 GMT)
  64. ಅಬು ಸಲೇಂ,ದೊಸ್ಸಾ ಸೇರಿ 6 ಮಂದಿ ತಪ್ಪಿತಸ್ಥರು;ಪಿಟಿಐ;17 Jun, 2017
  65. ಆಫ್ಘಾನಿಸ್ತಾನ: ಬ್ಯಾಂಕ್ ಹೊರಭಾಗದಲ್ಲಿ ಕಾರ್ಬಾಂಬ್ ಸ್ಫೋಟ, 34 ಸಾವು;ಏಜೆನ್ಸಿಸ್;22 Jun, 2017
  66. http://www.prajavani.net/news/article/2017/06/23/501024.html
  67. http://www.prajavani.net/news/article/2017/06/24/501155.html
  68. ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ;ಏಜೆನ್ಸಿಸ್;10 Jul, 2017