ಭಗವಾನ್ ತೀರ್ಥಂಕರ ಬಸದಿ, ಬೇಡ್ಕಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರ್ಗ[ಬದಲಾಯಿಸಿ]

ಸಿದ್ಧಾಪುರ-ಕುಮಟಾ ರಸ್ತೆಯ ಸಮೀಪದಲ್ಲಿ ಸಿದ್ಧಾಪುರ ಪೇಟೆಯಿಂದ ಆರು ಕಿಲೋಮೀಟರ್ ದೂರದಲ್ಲಿ ಒಂದು ಗ್ರಾಮೀಣ ಪ್ರದೇಶದಲ್ಲಿ ಈ ಬಸದಿಯಿದೆ. ಆ ಮುಖ್ಯ ರಸ್ತೆಯಿಂದ ಇಲ್ಲಿಯವರೆಗೆ ಅರ್ಧ ಕಿಲೋಮೀಟರ್ ಮಣ್ಣಿನ ರಸ್ತೆಯಿದೆ.

ದೇವಾಲಯದ ವಿನ್ಯಾಸ[ಬದಲಾಯಿಸಿ]

ಬಸದಿಯ ಅಸ್ತಿವಾರ ಮತ್ತು ಗರ್ಭಗೃಹದ ಕಟ್ಟಡ ಮಾತ್ರವಿದ್ದು, ಅವುಗಳ ಆಧಾರದಿಂದ ಇದನ್ನು ಬಸದಿಯೆಂದು ತಿಳಿಯಬಹುದು. ಗರ್ಭಗೃಹದಲ್ಲಿ ಮುರಿದು ಬಿದ್ದಿರುವ ಕಲ್ಲಿನ ತೊಲೆಗಳು ಮಾತ್ರ ಇದೆ. ತೀರ್ಥಂಕರರ ಬಿಂಬವಿದ್ದ ಪೀಠ ಮಾತ್ರ ಅಸ್ಪಷ್ಟವಾದ ಕೆಲವು ಆಕೃತಿಗಳಿಂದ ಅಲಂಕೃತವಾಗಿದೆ. ಬರವಣಿಗೆಯನ್ನು ಹೊಂದಿರುವ ಕೆಲವು ವೀರಗಲ್ಲುಗಳು ಮಾತ್ರ ಇಲ್ಲಿ ಮೂಕ ಸಾಕ್ಷಿಗಳಾಗಿ ನಿಂತುಕೊಂಡಿವೆ.

ಸ್ಥಳ[ಬದಲಾಯಿಸಿ]

ಈ ಬಸದಿಯ ಕಟ್ಟಡವು ಸಿದ್ಧಾಪುರ ತಾಲೂಕು ಬೆಡಕಣಿ ಗ್ರಾಮದ ಬೆಡಕಣಿ ಎಂಬ ಸ್ಥಳದಲ್ಲಿದೆ.[೧]

ಇತಿಹಾಸ[ಬದಲಾಯಿಸಿ]

ಇದು ೧೩ ನೇ ಶತಮಾನದಲ್ಲಿ ನಿರ್ಮಾಣಗೊಂಡಿರಬೇಕೆಂದು ಹೇಳಲಾಗುತ್ತದೆ.ಬಸದಿಯ ಎದುರುಗಡೆ ಮರದ ಕೆಳಗೆ ನಾಲ್ಕು ವೀರಗಲ್ಲುಗಳು ಹಾಗೂ ನಾಗರಕಲ್ಲುಗಳು ಕಂಡು ಬರುವುದರಿಂದ ಇದೊಂದು ಅಸಾಮಾನ್ಯ ಹಿನ್ನೆಲೆ ಇರುವ ಸ್ಥಳವೆಂದು ಹೇಳಬಹುದು. ಅವುಗಳ ಪೈಕಿ ಒಂದರಲ್ಲಿ ಕ್ರಿ.ಶ ೧೨೭೯ ಕ್ಕೆ ಸಂಬಂಧಿಸಿದ ಶಾಸನವಿದ್ದು ಅದು ಸ್ಥಳೀಯ ಅರಸ ಕಾಲದೇವನ ಕಾಲಕ್ಕೆ ಸಂಬಂಧಿಸಿದ್ದು ವೀರಸಿಂಗಣಧಾಳಿಯ ಸಮಯದಲ್ಲಿ ಸಿಂದದ ಬೊಮ್ಮೆಯನು ಮರಣ ಹೊಂದಿದ ವಿಚಾರವನ್ನು ಹೇಳುತ್ತದೆ. ಬಳಿಯ ಅದೇ ಕಾಲದ ಇನ್ನೊಂದು ಶಾಸನವು ಬೊಮ್ಮೆಯ ನಾಯಕನ ಶೌರ್ಯ ಸಾಧನೆಗಳ ಬಗ್ಗೆ ಹೇಳುತ್ತದೆ. ಪರಿಸರದಲ್ಲಿರುವ ಇನ್ನೊಂದು ವಿಶಿಧಿಕಲ್ಲು ಒಬ್ಬ ಅವದೂತನ ಬಗ್ಗೆ ಹೇಳುತ್ತದೆ. ಬಳಿಯ ಬೀಳಗಿಯಿಂದ ವೀರಶೈವ ಅರಸರು ಆಳುತ್ತಿದ್ದುದರಿಂದ ಅವರ ಕಾಲದಲ್ಲೇ ಹಲವಾರು ಏರಿಳಿತಗಳನ್ನು ಇದು ಕಂಡಿರಬಹುದು. ಆ ಬಳಿಕ ಬಸದಿಯು ನಾಶವನ್ನು ಕಾಣತೊಡಗಿದೆ. ಇದು ಕೇವಲ ಬೀಳಗಿ ಅರಸರ ಆಳ್ವಿಕೆಯ ಅವಶೇಷವಾಗಿ ಉಳಿದುಕೊಂಡು ಬಂದಿದೆ. ಬದಲಾಗಿ ಉತ್ತರ ದಿಕ್ಕು ಒಂದು ಬಿಟ್ಟು ಮತ್ತೆಲ್ಲಾ ಬದಿಗಳು ಕಾಡು, ಗಿಡ- ಮರಗಳಿಂದ ಆವೃತವಾಗಿದೆ. ಪಾಣಿಪೀಠದ ಮೇಲೆ ನಿಂತಿದ್ದ ಜಿನ ಬಿಂಬವು ದಿಗಂಬರವಾಗಿದ್ದು ಖಡ್ಗಾಸನ ಭಂಗಿಯಲ್ಲಿತ್ತು ಎಂಬುದು ಇಲ್ಲಿಯ ಹಿರಿಯರಿಗೆ ನೆನಪಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೪೧೦-೪೧೧.