ವಿಷಯಕ್ಕೆ ಹೋಗು

ಭಗವಾನ್ ಆದಿನಾಥ ಸ್ವಾಮಿ ಬಸದಿ ಕೊಳಕ್ಕೆ ಇರ್ವತ್ತೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಕಾರ್ಕಳ ಜೈನ ಮಠಕ್ಕೆ ಸೇರಿದ್ದು. ಕಾರ್ಕಳ ತಾಲೂಕಿನ ಇರ್ವತ್ತೂರು ಗ್ರಾಮದ ಕೊಳಕ್ಕೆ ಎಂಬಲ್ಲಿ ಶ್ರೀ ಆದಿನಾಥ ಸ್ವಾಮಿ ವಿರಾಜಮಾನರಾಗಿರುವ ಬಸದಿ ಇದೆ. ಕಾರ್ಕಳ ತಾಲೂಕು ಕೇಂದ್ರದಿಂದ ಇಲ್ಲಿಗೆ ದೂರ ಕೇವಲ ಎಂಟು ಕಿ.ಮೀ.

ಪೀಠಿಕೆ

[ಬದಲಾಯಿಸಿ]

ಪುರೋಹಿತರು ಶ್ರೀ ವೀರೇಂದ್ರ ಇಂದ್ರರು ಕಾರ್ಕಳವನ್ನಾಳಿದ ಭೈರವರಸರ ಮಂತ್ರಿಗಳು ಸುಮಾರು ೬೦೦ ವರ್ಷಗಳ ಹಿಂದೆ ಇದನ್ನು ಕಟ್ಟಿಸಿದರೆಂದು ಹೇಳುತ್ತಾರೆ. ಇತ್ತೀಚಿಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿದೆ. ಕರ್ನಾಟಕದಲ್ಲಿರುವ ಎರಡೆರಡು ಕ್ಷೇತ್ರಪಾಲ ದೇವರ ಪ್ರತ್ಯೇಕ ದೇವಸ್ಥಾನಗಳಲ್ಲಿ ಇರ್ವತ್ತೂರು ಒಂದು. ಶ್ರೀ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಇಲ್ಲಿನ ಮೂಲನಾಯಕ. ಮಹಾಮಾತೆ ಜ್ವಾಲಾಮಾಲಿನಿ ಯಕ್ಷಿ. ಇದೊಂದು ಶಕ್ತಿಯ ಕೇಂದ್ರ.

ಒಳಾಂಗಣ

[ಬದಲಾಯಿಸಿ]

ಮೂಲಬಸದಿಯು ಶಿಲಾಮಯವಾಗಿದೆ. ಮೇಗಿನ ನೆಲೆಯಲ್ಲಿ ಭಗವಾನ್ ಚಂದ್ರನಾಥ ಸ್ವಾಮಿಯ ಬಸದಿ ಇದೆ. ಇದರ ಮೇಲೆ ಮಹಡಿಯನ್ನು ತಾಮ್ರದ ಮಾಡಿನಿಂದ ಮಾಡಿರುತ್ತಾರೆ. ಬಸದಿಯ ಸುತ್ತುಪೌಳಿಗೆ ಹಂಚಿನ ಮಾಡು ಇದೆ. ಬಸದಿಗೆ ಮೇಗಿನ ನೆಲೆಯಿದೆ. ಬಸದಿಯ ಕೆಳಗಿನ ನೆಲೆಯಲ್ಲಿ ಬ್ರಹ್ಮ ದೇವಿಯ ಮೂರ್ತಿ. ೨೪ ತೀರ್ಥಂಕರರ ಮೂರ್ತಿಗಳಿವೆ. ಬಸದಿಯು ಪ್ರವೇಶದ್ವಾರದಲ್ಲಿ ದ್ವಾರ ಪಾಲಕರ ವರ್ಣ ಚಿತ್ರಗಳಿವೆ. ಪ್ರಾರ್ಥನ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪವಿದೆ. ಇಲ್ಲಿ ಜಯಗಂಟೆ, ಜಾಗಟೆಗಳಿವೆ. ತೀರ್ಥ ಮಂಟಪದಲ್ಲಿ ಗಂಧಕುಟಿಯಿದೆ. ಇಲ್ಲಿ ಪೂಜಿಸಲ್ಪಟ್ಟ ಅನೇಕ ಜಿನಬಿಂಬಗಳಿವೆ. ಈ ಬಸದಿಯ ಮೂಲ ನಾಯಕ ಆದಿತ್ಯ ಸ್ವಾಮಿಯ ಬಿಂಬಶಿಲೆಯದ್ದು. ಸುಮಾರು ೨೩ ಇಂಚು ಖಡ್ಗಾಸನ ಭಂಗಿ. ಆದರೂ ಸುತ್ತಲಿನ ಸುಂದರ ಪ್ರಭಾವಳಿಯಿಂದ ಮನೋಹರವಾಗಿ ಕಾಣುತ್ತದೆ. ಈ ಜಿನಾಲಯಕ್ಕೆ ಸಂಬಂಧಿಸಿ ಪ್ರಾಂಗಣದ ಬಲಮೂಲೆಯಲ್ಲಿ ಕ್ಷೇತ್ರಪಾಲ ಸನ್ನಿಧಿ ಇದೆ. ಕಲ್ಲು ಗುಂಡುಗಳು ಮತ್ತು ನಾಗರ ಕಲ್ಲುಗಳು ಪ್ರತ್ಯೇಕವಾಗಿಯೇ ಇವೆ. ಆದರೆ ಇವುಗಳನ್ನು ಪದ್ಧತಿಯಂತೆ ಪ್ರತಿಷ್ಠಾಪಿಸಲಾಗಿದೆ. ವಿಶಿಷ್ಟವಾಗಿ ಈ ಬಸದಿಯ ಆಗ್ನೇಯ ದಿಕ್ಕಿನಲ್ಲಿ ಕ್ಷೇತ್ರಪಾಲನಿಗೆ ಪ್ರತ್ಯೇಕ ಬಸದಿ ಇದೆ. ಕರ್ಗಲ್ಲುಗಳಿಂದ ನಿರ್ಮಿಸಲ್ಪಟ್ಟ ಇಲ್ಲಿನ ಈ ಪುರಾತನ ಗೋಡೆಗಳನ್ನು ಹಾಗೆಯೇ ರಕ್ಷಿಸಲಾಗಿದೆ.[]

ಪೂಜಾ ವಿಧಾನ

[ಬದಲಾಯಿಸಿ]

ಪ್ರತೀ ಸಂಕ್ರಮಣದಂದು ಕೆಳಗಿನ ನೆಲೆಯಲ್ಲಿ ಭಕ್ತಾಮರ ಯಂತ್ರಾರಾದನೆ, ಮೇಗಿನ ನೆಲೆಯಲ್ಲಿ ವಿಶೇಷ ಆರಾಧನೆ. ಕ್ಷೇತ್ರಪಾಲ ದೇವರಿಗೆ ವಿಶೇಷ ಪೂಜೆ ನಾಗದೇವರಿಗೆ ಪೂಜೆ ಬಸದಿಯ ದೈವವಾದ ಶ್ರೀ ರಕ್ತೇಶ್ವರಿ ಸೇವೆ ನಡೆಸಲಾಗುತ್ತದೆ. ಮೂರು ಕಡೆಗಳಲ್ಲಿ ನಿತ್ಯ ನಂದಾದೀಪ ಸೇವೆ ನಡೆಯುತ್ತದೆ. ಜಿನೇಶ್ವರನ ಬಳಿಯಲ್ಲಿ ಮಾತೆ ಪದ್ಮಾವತಿ ದೇವಿಯ ಮೂರ್ತಿ ಇದೆ. ಸದಾ ಪೂಜೆ ನಡೆಯುತ್ತದೆ. ಸೀರೆ ಉಡಿಸಿ, ಬಳೆಗಳನ್ನು ಹಾಕಿ, ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಪೂರ್ವಕ್ಕೆ ಮುಖ ಮಾಡಿಕೊಂಡಿದೆ. ಕಾಲಿನ ಬಳಿ ಕುಕ್ಕಟ ಸರ್ವವಿದೆ. ಅಭೀಷ್ಟ ಫಲ ಪ್ರದಾನಿಯಾದ ಮಾತೆ ಪದ್ಮಾವತಿಗೆ ನಿತ್ಯಪೂಜೆ, ಸಂಕ್ರಮಣದಂದು ವಿಶೇಷ ಪೂಜೆ, ವಾರ್ಷಿಕ ದೀಪೋತ್ಸವದ ವಿಶೇಷ ಪೂಜೆ, ನವರಾತ್ರಿಯ ಪೂಜೆ, ಶ್ರಾವಣ ತಿಂಗಳ ಪ್ರತಿ ಶುಕ್ರವಾರದಂದು ಶ್ರಾವಕ ಬಂಧುಗಳಿಂದ ಶ್ರೀ ಪದ್ಮಾವತಿ ಆರಾಧನೆ ನೆರವೇರುತ್ತದೆ. ಇಲ್ಲಿ ಪ್ರತಿದಿನವೂ ಮೂರು ಹೊತ್ತು ಪೂಜೆ ನಡೆಯುತ್ತದೆ. ಇತರ ನೈಮಿತ್ತಿಕಗಳಲ್ಲಿ ಅಷ್ಟಾಹ್ನಿಕ, ದಶಲಕ್ಷಣ, ಕಾರ್ತಿಕ ದೀಪೋತ್ಸವ, ಸಂಕ್ರಮಣ ಪೂಜೆ, ಆರಾಧನೆಗಳು ಮುಖ್ಯವಾದುವುಗಳು. ಬಲಮೂಲೆಯಲ್ಲಿರುವ ಕ್ಷೇತ್ರಪಾಲನ ಸನ್ನಿಧಿಗೆ ನಿತ್ಯ ಅಭಿಷೇಕ ಪೂಜೆಗಳು ನೆರವೇರುತ್ತದೆ. ಮಂಗಳವಾರ ವಿಶೇಷ ಪೂಜೆ. ಪ್ರತಿ ಸಂಕ್ರಮಣ ವಿಶೇಷ ಪೂಜೆ ಇದೆ. ಸಿಂಹ ಸಂಕ್ರಮಣದಂದು ಕ್ಷೇತ್ರಪಾಲ ದೇವರಿಗೆ ವಿಶೇಷವಾದ ಪೂಜೆ ನಡೆಯುತ್ತದೆ. ಒಂದು ಸುಮಾರು ೫೦೦ಕ್ಕೂ ಹೆಚ್ಚು ಪೂಜೆಗಳು ನಡೆಯುತ್ತವೆ. ನಿತ್ಯ ನಂದಾದೀಪ ಭಕ್ತಾದಿಗಳಿಂದ ನೆರವೇರುತ್ತದೆ. ಸಂಕ್ರಮಣಗಳಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನದ ಅನ್ನಸಂತರ್ಪಣೆ, ಸಾಯಂಕಾಲದ ಉಪಹಾರ ವ್ಯವಸ್ಥೆ ನಡೆಯುತ್ತದೆ.

ಉಲ್ಲೇಖ

[ಬದಲಾಯಿಸಿ]
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (1 ed.). ಮಂಜೂಶ್ರೀ ಪ್ರಿಂಟರ್ಸ್. p. 58-59.