ವಿಷಯಕ್ಕೆ ಹೋಗು

ಬ್ಲ್ಯಾಕ್‌ಜಾಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
21ರ ಬ್ಲ್ಯಾಕ್‌ಜಾಕ್‌ ಎಲೆಗಳನ್ನು ಹೊಂದಿರುವ ಒಂದು ಬ್ಲ್ಯಾಕ್‌ಜಾಕ್‌ ಆಟ.

ಬ್ಲ್ಯಾಕ್‌ಜಾಕ್‌ ಪ್ರಪಂಚದಲ್ಲೇ ಅತಿ ವ್ಯಾಪಕವಾಗಿ ಆಡುವ ಕ್ಯಾಸಿನೊ ಬ್ಯಾಂಕಿಂಗ್ ಆಟವಾಗಿದೆ, ಇದನ್ನು ಟ್ವೆಂಟಿ-ಒನ್ , ವಿಂಗ್ಟ್-ಎಟ್-ಉನ್ ("ಟ್ವೆಂಟಿ-ಒನ್"ಗೆ ಫ್ರೆಂಚ್‌‌ನಲ್ಲಿ) ಅಥವಾ ಪಾಂಟೂನ್ ಎಂದೂ ಕರೆಯುತ್ತಾರೆ.[] ಈ ಪ್ರಮಾಣಿತ ಆಟವನ್ನು 52 ಎಲೆ‌ಗಳನ್ನು ಹೊಂದಿರುವ ಒಂದು ಅಥವಾ ಅದಕ್ಕಿಂತ ಹೆಚ್ಚು ಆಂಗ್ಲೊ-ಅಮೆರಿಕನ್ ಡೆಕ್(ಇಸ್ಪೀಟು ಕಟ್ಟು)ಗಳನ್ನು ಬಳಸಿಕೊಂಡು ಆಡಲಾಗುತ್ತದೆ. ಈ ಆಟದ ಮೂಲಭೂತ ನಿಯಮಗಳೆಂದರೆ ಇಪ್ಪತ್ತೊಂದು ಮೌಲ್ಯವನ್ನು ಹಂಚುವ ಮೂಲಕ ಕೈಯಲ್ಲಿರುವ ಆರಂಭಿಕ ಎರಡು ಎಲೆ‌ಗಳ ಮೌಲ್ಯವನ್ನು ಸೇರಿಸುವುದಾಗಿರುತ್ತದೆ. ಇಪ್ಪತ್ತೊಂದಕ್ಕಿಂತ ಕಡಿಮೆ ಮೌಲ್ಯವು ಹಂಚಲ್ಪಟ್ಟರೆ, ಆಟಗಾರನು ಇಪ್ಪತ್ತೊಂದು ಮೌಲ್ಯವನ್ನು ತಲುಪುವವರೆಗೆ, ಆಡಲು ಸೂಕ್ತವಾಗಿದೆಯೆಂದು ಭಾವಿಸುವ ಮೌಲ್ಯವನ್ನು ತಲುಪುವವರೆಗೆ ಅಥವಾ ಇಪ್ಪತ್ತೊಂದನ್ನು ಮೀರಿಸುವ ಮೌಲ್ಯವನ್ನು ತಲುಪುವವರೆಗೆ ಒಂದೊಂದೇ ಎಲೆಗಳನ್ನು ಹಂಚುವುದನ್ನು ಆರಿಸುತ್ತಾನೆ. ಜಯಶಾಲಿಯು ಇಪ್ಪತ್ತೊಂದು ಮೌಲ್ಯದ ಎಲೆಗಳನ್ನು ಹೊಂದಿರುತ್ತಾನೆ. ಈ ಆಟವನ್ನು ವಿವಿಧ ನಿಯಮಗಳೊಂದಿಗೆ ಕ್ಯಾಸಿನೊಗಳಲ್ಲಿ ವಿವಿಧ ಬದಲಾವಣೆಗಳೊಂದಿಗೆ ಆಡಲಾಗುತ್ತದೆ. ಬ್ಲ್ಯಾಕ್‌ಜಾಕ್‌ ಜನಪ್ರಿಯವಾಗಲು ಎಲೆಯನ್ನು ಲೆಕ್ಕಮಾಡುವಿಕೆಯ ಸುತ್ತಲಿರುವ ಸಾಧ್ಯತೆ, ಕೌಶಲ್ಯ ಮತ್ತು ಪ್ರಸಿದ್ಧಿಯ ಮಿಶ್ರಣವು (ಒಬ್ಬರ ಪಂತವನ್ನು ಬದಲಾಯಿಸುವುದು. ಅದಲ್ಲದೇ ಮುಂದೆ ಹಂಚಲಾಗುವ(ವಿತರಿಸುವ) ಎಲೆಗಳ ಬಗೆಗಿನ ತಿಳಿವಳಿಕೆಯ ಪ್ರಯೋಜನ ಪಡೆಯಲು ನಿರ್ವಹಣಾ-ಚಾತುರ್ಯದಿಂದ ಆಡುವುದು) ಕಾರಣವಾಗಿರುತ್ತದೆ. ಕ್ಯಾಸಿನೊ ಆಟವನ್ನು ಬ್ರಿಟಿಷ್ ಎಲೆ‌ ಆಟವಾದ ಬ್ಲ್ಯಾಕ್‌ ಜಾಕ್‌ ಆಗಿ ತಪ್ಪಾಗಿ ತಿಳಿಯಬಾರದು.

ಇತಿಹಾಸ

[ಬದಲಾಯಿಸಿ]

ಬ್ಲ್ಯಾಕ್‌ಜಾಕ್‌ನ ಪೂರ್ವಸೂಚಕವೆಂದರೆ ಅಜ್ಞಾತ ಮೂಲದ ಆಟವಾದ ಟ್ವೆಂಟಿ-ಒನ್. ಮೊದಲ ಲಿಖಿತ ಆಕರವು ಅತ್ಯಂತ ಪ್ರಸಿದ್ಧ ಡಾನ್ ಕ್ವಿಕ್ಸೋಟ್ಅನ್ನು ಬರೆದ ಮಿಗ್ವೆಲ್ ಡಿ ಸರ್ವಾಂಟೆಸ್‌ನ ಪುಸ್ತಕದಲ್ಲಿ ಕಂಡುಬಂದಿದೆ. ಸರ್ವಾಂಟೆಸ್ ಸ್ವತಃ ಜೂಜುಗಾರನಾಗಿದ್ದನು. ಅವನ "ನಾವೆಲಾಸ್ ಎಜೆಂಪ್ಲಾರೆಸ್"‌ನ "ರಿಂಕನೆಟೆ ವೈ ಕಾರ್ಟಡಿಲ್ಲೊ" ಎಂಬ ಕಥೆಯ ಮುಖ್ಯ ಪಾತ್ರಗಳು ಸೆವಿಲ್ಲೆಯಲ್ಲಿ ಕೆಲಸ ಮಾಡುವ ಒಂದು ಜೋಡಿ ಮೋಸಗಾರರಾಗಿದ್ದಾರೆ. ಅವರು "ವೆಂಟಿಯುನ" (ಟ್ವೆಂಟಿ-ಒನ್‌ಗೆ ಸ್ಪಾನಿಶ್‌ನಲ್ಲಿ) ಆಟದಲ್ಲಿ ಮೋಸಗೊಳಿಸುವುದರಲ್ಲಿ ಪ್ರವೀಣರಾಗಿರುತ್ತಾರೆ.ಅಲ್ಲದೇ ಬಸ್ಟಿಂಗ್ ಮಾಡದೆ 21 ಮೊತ್ತವನ್ನು ಸಾಧಿಸುವುದು ಆಟದ ಮುಖ್ಯ ಗುರಿಯಾಗಿರುತ್ತದೆ.ಅಲ್ಲದೇ ಎಕ್ಕದ(ಎಲೆ ಅಥವಾ ಕಾರ್ಡಿನ) ಮೌಲ್ಯಗಳು 1 ಅಥವಾ 11 ಆಗಿರುತ್ತದೆ ಎಂದು ಹೇಳುತ್ತಾರೆ. ಈ ಆಟವನ್ನು ಸ್ಪ್ಯಾನಿಶ್ ಬರಾಜ ದೊಂದಿಗೆ ಆಡಲಾಗುತ್ತದೆ, ಇದರಲ್ಲಿ ಎಂಟುಗಳು, ಒಂಭತ್ತುಗಳು ಮತ್ತು ಹತ್ತುಗಳಿರುವುದಿಲ್ಲ. ಈ ಸಣ್ಣ ಕಥೆಯನ್ನು 1601 ಮತ್ತು 1602ರ ಮಧ್ಯದಲ್ಲಿ ಬರೆಯಲಾಗಿತ್ತು. ಆದ್ದರಿಂದ ಈ ಆಟವನ್ನು 17ನೇ ಶತಮಾನದ ಆರಂಭದಲ್ಲಿ ಅಥವಾ ಅದಕ್ಕಿಂತ ಮುಂಚೆ ಕ್ಯಾಸ್ಟಿಲಿಯಾದಲ್ಲಿ ಆಡಲಾಗುತ್ತಿತ್ತು. ಈ ಆಟದ ನಂತರದ ಆಕರಗಳು ಫ್ರಾನ್ಸ್ ಮತ್ತು ಸ್ಪೇನ್‌ನಲ್ಲಿ ಕಂಡುಬಂದಿವೆ.[]

21 ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಚಾಲ್ತಿಗೆ ಬಂದಾಗ ಹೆಚ್ಚು ಜನಪ್ರಿಯವಾಗಿರಲಿಲ್ಲ. ಆದ್ದರಿಂದ ಜೂಜಿನ ಮನೆಗಳು ಹೆಚ್ಚಿನ ಸಂಖ್ಯೆಯ ಆಟಗಾರರು ಬರಬೇಕೆಂದು ವಿವಿಧ ರೀತಿಯ ಬೋನಸ್ ಹಣಪಾವತಿ ಮಾಡಲು ಆರಂಭಿಸಿದರು. ಅಂತಹ ಬೋನಸ್‌ಗಳಲ್ಲಿ ಒಂದು ಟೆನ್-ಟು-ಒನ್ ಬೋನಸ್, ಇದನ್ನು ಆಟಗಾರನು ಸ್ಪೇಡ್‌ಗಳ ಎಕ್ಕ ಮತ್ತು ಒಂದು ಬ್ಲ್ಯಾಕ್‌ ಜಾಕ್ಅನ್ನು (ಕ್ಲಬ್‌ಗಳ ಜ್ಯಾಕ್ ಅಥವಾ ಸ್ಪೇಡ್‌ಗಳ ಜ್ಯಾಕ್) ಹೊಂದಿದ್ದರೆ ನೀಡಲಾಗುತ್ತಿತ್ತು. ಈ ಆಟಗಾರನನ್ನು "ಬ್ಲ್ಯಾಕ್‌ಜಾಕ್‌" ಎಂದು ಕರೆಯಲಾಗುತ್ತಿತ್ತು. ಬೋನಸ್ ಹಣವು ಅತಿಶೀಘ್ರದಲ್ಲಿ ರದ್ದುಗೊಂಡರೂ ಆ ಹೆಸರನ್ನು ಆ ಆಟಕ್ಕೆ ಇಡಲಾಯಿತು. ಆಧುನಿಕ ಆಟದಲ್ಲಿ "ನ್ಯಾಚುರಲ್" ಅಥವಾ "ಬ್ಲ್ಯಾಕ್‌ಜಾಕ್‌" ಎಂದರೆ ಎಕ್ಕ ಮತ್ತು ಹತ್ತು-ಮೌಲ್ಯದ ಒಂದು ಎಲೆ‌ಯಾಗಿರುತ್ತದೆ.

ಕ್ಯಾಸಿನೊದಲ್ಲಿ ಆಟವಾಡುವ ನಿಯಮಗಳು

[ಬದಲಾಯಿಸಿ]

ಕ್ಯಾಸಿನೊದಲ್ಲಿನ ಬ್ಲ್ಯಾಕ್‌ಜಾಕ್‌ನಲ್ಲಿ, ಕಮಾನಿನಾಕಾರದ ಮೇಜಿನ ಹಿಂದೆ ಎಲೆ ಹಾಕುವವನ ಮುಂದೆ ಒಂದರಿಂದ ಏಳು ಮಂದಿ ಆಟಗಾರರಿರುತ್ತಾರೆ. ಪ್ರತಿಯೊಬ್ಬ ಆಟಗಾರರನೂ ಎಲೆ ಹಾಕುವವನಿಗೆ ಪೈಪೋಟಿ ಎನ್ನುವ ಹಾಗೆ ಸ್ವತಂತ್ರವಾಗಿ ಆಡುತ್ತಾನೆ. ಪ್ರತಿ ಸುತ್ತಿನ ಆರಂಭದಲ್ಲಿ, ಆಟಗಾರನು "ಬೆಟ್ಟಿಂಗ್ ಬಾಕ್ಸ್"ನಲ್ಲಿ (ಆವ್ಹಾನ)ಪಂತವೊಂದನ್ನು ಒಡ್ಡಿ,ಆರಂಭದಲ್ಲಿ ಎರಡು ಎಲೆ‌ಗಳನ್ನು ಪಡೆಯುತ್ತಾನೆ. ಎಲೆ ಹಾಕುವವನಿಗಿಂತ ಹೆಚ್ಚು ಮೊತ್ತದ ಎಲೆಗಳನ್ನು ಪಡೆಯುವುದು ಆಟದ ಮುಖ್ಯ ಗುರಿಯಾಗಿರುತ್ತದೆ. ಆದರೆ 21ಅನ್ನು ಮೀರಿಸಬಾರದು, ಮೀರಿಸಿದರೆ “ಬಸ್ಟಿಂಗ್” ಅಥವಾ “ಮುರಿಯುವುದು" ಎನ್ನುತ್ತಾರೆ. 2ರಿಂದ 10ರವರೆಗೆ ಸಂಖ್ಯೆಗಳನ್ನು ಪ್ರಿಂಟ್ ಮಾಡಿದ ಎಲೆ‌ಗಳನ್ನು ಆ ಮೌಲ್ಯವಾಗಿ ಪರಿಗಣಿಸಲಾಗುತ್ತದೆ; ಜ್ಯಾಕ್, ರಾಣಿ ಮತ್ತು ರಾಜ ("ಫೇಸ್ ಕಾರ್ಡ್"ಗಳೆಂದೂ ಕರೆಯುತ್ತಾರೆ) 10 ಮೌಲ್ಯವಾಗಿರುತ್ತವೆ; ಆಟಗಾರನ ಆಯ್ಕೆಯ ಪ್ರಕಾರ ಎಕ್ಕವು 1 ಅಥವಾ 11 ಆಗಿರುತ್ತದೆ. ಆಟಗಾರನು ಮೊದಲು ಹೋಗಿ ಅವನು ಇಚ್ಛಿಸಿದರೆ ಹೆಚ್ಚುವರಿ ಎಲೆ‌ಗಳನ್ನು ತೆಗೆದು ತನ್ನ ಎಲೆಗಳನ್ನು ಆಡುತ್ತಾನೆ. ಅವನು 21ಅನ್ನು ಮೀರಿದರೆ "ಬಸ್ಟ್" ಆಗುತ್ತಾನೆ ಹಾಗೂ ಅವನ ಎಲೆಗಳನ್ನು ಮತ್ತು ಪಂತವನ್ನು ಕಳೆದುಕೊಳ್ಳುತ್ತಾನೆ. ನಂತರ ಎಲೆಗಳನ್ನು ಹಾಕಿದವನು ಅವನ ಎಲೆಗಳನ್ನು ಆಡುತ್ತಾನೆ. ಎಲೆಗಳನ್ನು ಹಾಕಿದವನು ಬಸ್ಟ್ ಆದರೆ, ಅವನು 21ಕ್ಕೆ ಸಮನಾದ ಅಥವಾ ಅದಕ್ಕಿಂತ ಕೆಳಗಿನ ಮೌಲ್ಯದ ಎಲೆ‌ಗಳನ್ನು ಹೊಂದಿರುವ ಎಲ್ಲಾ ಉಳಿದ ಆಟಗಾರರನ್ನು ಕಳೆದುಕೊಳ್ಳುತ್ತಾನೆ.ತ್ ಬಸ್ಟ್ ಆಗದಿದ್ದರೆ ಹೆಚ್ಚು ಮೊತ್ತದ ಎಲೆಗಳನ್ನು ಹೊಂದಿರುವವರು ಜಯಶಾಲಿಯಾಗುತ್ತಾರೆ. ಆಟಗಾರನು ಎಲೆಗಳನ್ನು-ಹಾಕಿದವನೊಂದಿಗೆ ಸಮಮಾಡಿಕೊಂಡರೆ(ಟೈ ಮಾಡಿಕೊಂಡರೆ) ಆಟವು "ಪುಶ್" ಆಗುತ್ತದೆ, ಇದನ್ನು "ಸ್ಟ್ಯಾಂಡ್ಆಫ್" ಎಂದೂ ಕರೆಯುತ್ತಾರೆ, ಹಾಗೂ ಆಟಗಾರನ ಪಂತವು ಹಿಂತೆಗೆದುಕೊಳ್ಳಲ್ಪಡುತ್ತದೆ. (ಅಂದರೆ ಆಟಗಾರನು ಅವನ ಪಂತವನ್ನು ಕಳೆದುಕೊಳ್ಳುವುದೂ ಇಲ್ಲ, ಗೆಲ್ಲುವುದೂ ಇಲ್ಲ; ಈ ನಿಯಮವು US ಮತ್ತು ಯುರೋಪಿಯನ್ ಕ್ಯಾಸಿನೊಗಳಲ್ಲಿ ಅನ್ವಯಿಸುವುದಿಲ್ಲ). ಇದರಲ್ಲಿ ಎಲೆಗಳನ್ನು-ಹಾಕಿದವನು ಕೆಲವು ಆಟಗಾರರನ್ನು ಕಳೆದುಕೊಳ್ಳುವ ಸಂಭವವಿರುತ್ತದೆ, ಆದರೂ ಅದೇ ಸುತ್ತಿನಲ್ಲಿ ಉಳಿದ ಆಟಗಾರರನ್ನು ಸೋಲಿಸಬಹುದಾಗಿರುತ್ತದೆ.

ಒಂದು ಬ್ಲ್ಯಾಕ್‌ಜಾಕ್‌ ಆಟದ ಉದಾಹರಣೆ.ಚಿತ್ರದ ಮೇಲಿನ ಅರ್ಧವು ಸುತ್ತಿನ ಆರಂಭವನ್ನು ತೋರಿಸುತ್ತದೆ, ಇದರಲ್ಲಿ ಪಂತಗಳನ್ನು ಮತ್ತು ಪ್ರತಿಯೊಬ್ಬ ಆಟಗಾರನಿಗೆ ಆರಂಭಿಕ ಎರಡು ಎಲೆಗಳನ್ನು ಇಡಲಾಗಿದೆ.ಚಿತ್ರದ ಕೆಳಗಿನ ಅರ್ಧವು ಸಂಬಂಧಿತ ನಷ್ಟ ಅಥವಾ ಪಾವತಿಗಳೊಂದಿಗೆ ಸುತ್ತಿನ ಕೊನೆಯನ್ನು ತೋರಿಸುತ್ತದೆ.

ಎಲೆಗಳನ್ನು ಮೂರು ವಿಧಾನಗಳಲ್ಲಿ ಹಂಚಲಾಗುತ್ತದೆ, ಒಂದು ಅಥವಾ ಎರಡು ಕೈಯಿಂದ-ಹಿಡಿದಿರುವ ಡೆಕ್‌ಗಳಿಂದ, ನಾಲ್ಕರಿಂದ ಎಂಟು ಡೆಕ್‌ಗಳನ್ನು ಹೊಂದಿರುವ ಬಾಕ್ಸ್‌ನಿಂದ ("ಶೂ" ಎಂದು ಕರೆಯಲಾಗುತ್ತದೆ) ಅಥವಾ ಕಲೆಸುವ ಯಂತ್ರದಿಂದ ಹಂಚಲಾಗುತ್ತದೆ. ಕೈಯಿಂದ ಹಾಕುವಾಗ, ಆಟಗಾರನ ಎರಡು ಆರಂಭಿಕ ಎಲೆ‌ಗಳು ಸಾಮಾನ್ಯವಾಗಿ ಕೆಳಮುಖವಾಗಿರುತ್ತವೆ. ಎಲೆಗಳನ್ನು-ಹಾಕುವವನು "ಅಪ್‌ಕಾರ್ಡ್" ಎನ್ನುವ ಒಂದು ಮೇಲ್ಮುಖವಾಗಿರುವ ಎಲೆ‌ಯನ್ನು ಹಾಗೂ "ಹೋಲ್ ಕಾರ್ಡ್" ಎನ್ನುವ ಒಂದು ಕೆಳಮುಖವಾಗಿರುವ ಎಲೆ‌ಯನ್ನು ಹೊಂದಿರುತ್ತಾನೆ. (ಯುರೋಪಿಯನ್ ಬ್ಲ್ಯಾಕ್‌ಜಾಕ್‌ನಲ್ಲಿ, ಎಲೆಗಳನ್ನು-ಹಾಕುವವನ ಹೋಲ್ ಕಾರ್ಡ್ ಆಟಗಾರರೆಲ್ಲರೂ ಅವರ ಎಲೆಗಳನ್ನು ಆಡುವವರೆಗೆ ಹಂಚಲ್ಪಡುವುದಿಲ್ಲ.) ಶೂನಿಂದ ಹಂಚುವಾಗ, ಎಲ್ಲಾ ಆಟಗಾರರ ಎಲೆ‌ಗಳು ಕೆಲವು ವಿನಾಯಿತಿಗಳೊಂದಿಗೆ ಸಾಮಾನ್ಯವಾಗಿ ಮೇಲ್ಮುಖವಾಗಿರುತ್ತವೆ. ನಿಪುಣನಲ್ಲದ ಆಟಗಾರನಿಗೆ ಅವನ ಎಲೆ‌ಗಳು ಮೇಲ್ಮುಖವಾಗಿವೆಯೇ ಅಥವಾ ಕೆಳಮುಖವಾಗಿವೆಯೇ ಎಂಬುದು ಮುಖ್ಯವಾಗಿರುವುದಿಲ್ಲ; ಏಕೆಂದರೆ ಎಲೆಗಳನ್ನು-ಹಾಕುವವನು ಪೂರ್ವನಿರ್ಧರಿತ ನಿಯಮಗಳ ಪ್ರಕಾರ ಆಡಬೇಕಾಗಿರುತ್ತದೆ. ಎಲೆಗಳನ್ನು-ಹಾಕುವವನು 17ಕ್ಕಿಂತ ಕಡಿಮೆ ಹೊಂದಿದ್ದರೆ, ಅವನು ಹಿಟ್ ಮಾಡಬೇಕು. ಎಲೆಗಳನ್ನು-ಹಾಕುವವನು 17 ಅಥವಾ ಅದಕ್ಕಿಂತ ಹೆಚ್ಚು ಹೊಂದಿದ್ದರೆ, ಅದು "ಸಾಫ್ಟ್ 17" ("11" ಮೌಲ್ಯದ ಎಕ್ಕವೊಂದನ್ನು ಒಳಗೊಂಡ ಎಲೆಗಳು, ಉದಾರಣೆಗಾಗಿ ಎಕ್ಕ+6 ಅಥವಾ ಎಕ್ಕ+2+4 ಒಳಗೊಂಡ ಎಲೆಗಳು) ಆಗಿರದಿದ್ದರೆ ಅವನು ಸ್ಟ್ಯಾಂಡ್ ಆಗಬೇಕು. (ಯಾವುದೇ ಎಲೆ‌ಗಳನ್ನು ತೆಗೆಯಬಾರದು). ಸಾಫ್ಟ್ 17 ಅನ್ನು ಹೊಂದಿರುವ ಎಲೆಗಳನ್ನು-ಹಾಕುವವನು, "ಸಾಫ್ಟ್ 17 ಅನ್ನು ಹಿಟ್ ಮಾಡಲು" ಅಥವಾ "ಎಲ್ಲಾ 17 ರೊಂದಿಗೆ ಸ್ಟ್ಯಾಂಡ್ ಆಗಲು" ಬ್ಲ್ಯಾಕ್‌ಜಾಕ್‌ ಮೇಜಿನ ಮೇಲೆ ಮುದ್ರಿಸಿದ ಕ್ಯಾಸಿನೊ ನಿಮಯಗಳನ್ನು ಅನುಸರಿಸಿಕೊಂಡು ಆಡುತ್ತಾನೆ.

ಸಾಮಾನ್ಯವಾಗಿ, ಅತಿ ಹೆಚ್ಚು ಮೊತ್ತದ ಎಲೆಗಳನ್ನು "ಬ್ಲ್ಯಾಕ್‌ಜಾಕ್‌" ಅಥವಾ "ನ್ಯಾಚುರಲ್" ಎಂದು ಕರೆಯಲಾಗುತ್ತದೆ, ಅಂದರೆ ಆರಂಭಿಕ ಎರಡು-ಎಲೆ‌ಗಳ ಒಟ್ಟು ಮೌಲ್ಯ 21 (ಒಂದು ಎಕ್ಕ ಮತ್ತು ಒಂದು ಹತ್ತರ-ಮೌಲ್ಯದ ಎಲೆ‌). ಎಲೆಗಳನ್ನು ಹಾಕುವವನೂ ಬ್ಲ್ಯಾಕ್‌ಜಾಕ್ಅನ್ನು ಹೊಂದಿಲ್ಲದೆ, ಆಟಗಾರನು ಮಾತ್ರ ಬ್ಲ್ಯಾಕ್‌ಜಾಕ್‌ ಅನ್ನು ಹೊಂದಿದ್ದರೆ ಅವನು ಜಯಶಾಲಿಯಾಗುತ್ತಾನೆ. ಇಬ್ಬರೂ ಹೊಂದಿದ್ದರೆ, ಆ ಆಟವು "ಪುಶ್" ಆಗುತ್ತದೆ (ಸಮನಾಗುತ್ತದೆ). ಎಲೆಗಳನ್ನು-ಹಾಕುವವನ ಅಪ್‌ಕಾರ್ಡ್ ಎಕ್ಕವಾಗಿದ್ದರೆ, ಅವನು ಬ್ಲ್ಯಾಕ್‌ಜಾಕ್‌ಅನ್ನು (ಅಂದರೆ ಒಂದು ಹತ್ತರ-ಮೌಲ್ಯದ ಎಲೆಯನ್ನು ಅವನ ಹೋಲ್‌ ಎಲೆಯಾಗಿ‌) ಹೊಂದಬಹುದೆಂಬ ಅಪಾಯದ ವಿರುದ್ಧ ರಕ್ಷಣೆ ಪಡೆಯಲು ಆಟಗಾರನು "ಇನ್ಶುರೆನ್ಸ್‌" ಎನ್ನುವ (ಪರ್ಯಾಯ)ಒಂದು ಉಪ-ಪಂತವನ್ನು ಒಡ್ಡಬಹುದಾಗಿರುತ್ತದೆ. ಎಲೆಗಳನ್ನು-ಹಾಕುವವನು ಬ್ಲ್ಯಾಕ್‌ಜಾಕ್‌ಅನ್ನು ಹೊಂದಿದ್ದರೆ, ಇನ್ಶುರೆನ್ಸ್‌ ಪಂತವು 2-ರಿಂದ-1ಅನ್ನು ಪಾವತಿಸುತ್ತದೆ. ಎಲೆಗಳನ್ನು-ಹಾಕುವವನು ಬ್ಲ್ಯಾಕ್‌ಜಾಕ್ಅನ್ನು ಹೊಂದಿದಾಗ, ಮತ್ತೊಂದು ಬ್ಲ್ಯಾಕ್‌ಜಾಕ್‌ಅನ್ನು ಹೊಂದಿರುವವನು ("ಪುಶ್") ಹೊರತುಪಡಿಸಿ ಅವನು ಉಳಿದ ಎಲ್ಲಾ ಆಟಗಾರರನ್ನು ಜಯಿಸುತ್ತಾನೆ.

ಕನಿಷ್ಠ ಮತ್ತು ಗರಿಷ್ಠ ಪಂತಗಳನ್ನು ಮೇಜಿನ ಮೇಲೆ ಪ್ರಕಟಗೊಳಿಸಲಾಗುತ್ತದೆ. ಹೆಚ್ಚಿನ ಪಂತಗಳ ಪಾವತಿಗಳು 1:1 ಆಗಿರುತ್ತದೆ, ಅಂದರೆ ಆಟಗಾರನು ಪಂತಕಟ್ಟಿದಷ್ಟೇ ಮೊತ್ತವನ್ನು ಪಡೆಯುತ್ತಾನೆ. ಆಟಗಾರ-ಬ್ಲ್ಯಾಕ್‌ಜಾಕ್‌ನ ಸಾಂಪ್ರದಾಯಿಕ ಪಾವತಿಯು 3:2 ಆಗಿರುತ್ತದೆ, ಅಂದರೆ ಕ್ಯಾಸಿನೊ ಆರಂಭದಲ್ಲಿ $2 ಕ್ಕೆ ಪಂತಕಟ್ಟಿದವರಿಗೆ $3 ಅನ್ನು ಪಾವತಿಸುತ್ತದೆ. ಆದರೆ ಇಂದು ಹೆಚ್ಚಿನ ಕ್ಯಾಸಿನೊಗಳು ಕೆಲವು ಆಟಗಳಲ್ಲಿ ಕಡಿಮೆ ಪಾವತಿಸುತ್ತವೆ.[]

ಆಟಗಾರನ ನಿರ್ಧಾರಗಳು

[ಬದಲಾಯಿಸಿ]

ಆರಂಭಿಕ ಎರಡು ಎಲೆ‌ಗಳನ್ನು ಪಡೆದ ನಂತರ ಆಟಗಾರನು ನಾಲ್ಕು ಪ್ರಮಾಣಿತ ಆಯ್ಕೆಗಳನ್ನು ಹೊಂದಿರುತ್ತಾನೆ: ಅವನು "ಹಿಟ್", "ಸ್ಟ್ಯಾಂಡ್", "ಡಬಲ್ ಡೌನ್" ಅಥವಾ "ಸ್ಪ್ಲಿಟ್ ಎ ಪೇರ್(ಜೊತೆಯನ್ನು ಪ್ರತ್ಯೇಕಿಸುವುದು)" ಮಾಡಬಹುದು. ಪ್ರತಿಯೊಂದು ಆಯ್ಕೆಗೂ ಕೈಯ-ಸಂಕೇತವನ್ನು ಬಳಸಬೇಕಾಗುತ್ತದೆ. ಕೆಲವು ಕ್ಯಾಸಿನೊಗಳಲ್ಲಿ ಅಥವಾ ಟೇಬಲ್‌ಗಳಲ್ಲಿ, ಆಟಗಾರನು ಐದನೇ ಆಯ್ಕೆ "ಸರೆಂಡರ್‌"ಅನ್ನು ಹೊಂದಿರುತ್ತಾನೆ.

  • ಹಿಟ್‌ : ಎಲೆಗಳನ್ನು-ಹಾಕುವವನಿಂದ ಮತ್ತೊಂದು ಎಲೆಯನ್ನು ತೆಗೆದುಕೊಳ್ಳುವುದು.
ಸಂಕೇತ : (ಕೈಯಲ್ಲಿ ಹಿಡಿಯುವುದು) ಎಲೆ‌ಗಳನ್ನು ಮೇಜಿನ ಮೇಲೆ ಉಜ್ಜುವುದು. (ಮೇಲ್ಮುಖ) ಬೆರಳನ್ನು ಮೇಜಿಗೆ ಮುಟ್ಟಿಸುವುದು ಅಥವಾ ತಮ್ಮ ಕಡೆಗೆ ಕೈಬೀಸುವುದು.
  • ಸ್ಟ್ಯಾಂಡ್ : ಯಾವುದೇ ಎಲೆ‌ಗಳನ್ನು ತೆಗೆದುಕೊಳ್ಳದಿರುವುದು; "ಸ್ಟ್ಯಾಂಡ್ ಪ್ಯಾಟ್", "ಸ್ಟಿಕ್" ಅಥವಾ "ಸ್ಟೇ" ಎಂದೂ ಕರೆಯಲಾಗುತ್ತದೆ.
ಸಂಕೇತ : (ಕೈಯಲ್ಲಿ ಹಿಡಿಯುವುದು) ಎಲೆ‌ಗಳನ್ನು ಚಿಪ್‌ಗಳ ಕೆಳಗೆ ಸರಿಸುವುದು. (ಮೇಲ್ಮುಖ) ಕೈಯನ್ನು ಸಮಾಂತರವಾಗಿ ಬೀಸುವುದು.
  • ಡಬಲ್ ಡೌನ್ : ಮೊದಲ ಎರಡು ಎಲೆ‌ಗಳನ್ನು ಪಡೆದ ನಂತರ ಮತ್ತು ಹೆಚ್ಚಿನ ಎಲೆಗಳು ಸಿಗುವುದಕ್ಕಿಂತ ಮೊದಲು, ಆಟಗಾರನು "ಡಬಲ್ ಡೌನ್‌"ನ ಆಯ್ಕೆಯನ್ನು ಹೊಂದಿರುತ್ತಾನೆ. ಅಂದರೆ ಆಟಗಾರನು ಎಲೆಗಳನ್ನು-ಹಾಕುವವನಿಂದ ಒಂದು ಹೆಚ್ಚುವರಿ ಎಲೆಯನ್ನು ಪಡೆಯುವ ಬದಲಿಗೆ ಅವನ ಆರಂಭಿಕ ಪಂತವನ್ನು ದ್ವಿಗುಣಗೊಳಿಸುತ್ತಾನೆ. (ಡಬಲ್ ಮಾಡುತ್ತಾನೆ). ಅವನಲ್ಲಿರುವ ಎಲೆಗಳು ಅವನ ಆರಂಭಿಕ ಎರಡು ಎಲೆ‌ಗಳು ಮತ್ತು ಎಲೆಗಳನ್ನು-ಹಾಕುವವನಿಂದ ಪಡೆದ ಮತ್ತೊಂದು ಎಲೆಯನ್ನು ಒಳಗೊಳ್ಳುತ್ತದೆ. ಇದನ್ನು ಮಾಡಲು ಅವನು ಮೊದಲನೆಯದಕ್ಕೆ ಸಮನಾದ ಎರಡನೇ ಪಂತವನ್ನು, ಅವನ ಆರಂಭಿಕ ಪಂತದ ಮುಂದಿನ ಪಂತದ-ಬಾಕ್ಸಿಗೆ ಸರಿಸುತ್ತಾನೆ. (ಆಟಗಾರನು ಸಾಮಾನ್ಯವಾಗಿ "ಕಡಿಮೆ ಮೌಲ್ಯಕ್ಕಾಗಿ ಡಬಲ್ ಡೌನ್‌" ಮಾಡುತ್ತಾನೆ. ಆರಂಭಿಕ ಪಂತಕ್ಕಿಂತ ಕಡಿಮೆ ಮೌಲ್ಯವನ್ನು ಅದರ ಮುಂದಿನ ಪಂತದ-ಬಾಕ್ಸಿನಲ್ಲಿ ಹಾಕುತ್ತಾನೆ. ಆದರೂ ಇದು ಸಾಮಾನ್ಯವಾಗಿ ಉತ್ತಮವಾದುದಲ್ಲ, ಏಕೆಂದರೆ ಆಟಗಾರನು ಅನುಕೂಲವಾದ ಸ್ಥಿತಿಗಳಲ್ಲಿ ಮಾತ್ರ ಡಬಲ್ ಮಾಡಬೇಕಾಗಿರುತ್ತದೆ ಹಾಗೂ ನಂತರ ಪಂತವನ್ನು ಸಾಧ್ಯವಾದಷ್ಟು ಹೆಚ್ಚಿಸಬೇಕಾಗಿರುತ್ತದೆ. ವಿರುದ್ಧವಾಗಿ, ಆಟಗಾರನು ಆರಂಭಿಕ ಪಂತದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯಕ್ಕೆ ಡಬಲ್ ಡೌನ್‌ ಮಾಡುವಂತಿರುವುದಿಲ್ಲ.)
ಸಂಕೇತ : ಹೆಚ್ಚುವರಿ ಚಿಪ್‌ಗಳನ್ನು ಆರಂಭಿಕ ಪಂತದ ಮುಂದಕ್ಕೆ (ಮೇಲೆ ಅಲ್ಲ) ಇಡುವುದು. ಒಂದು ಬೆರಳಿನಿಂದ ತೋರಿಸುವುದು.
  • ಜೋಡಿಯನ್ನು ಪ್ರತ್ಯೇಕಿಸುವುದು.(ಸ್ಪ್ಲಿಟ್ ಎ ಪೇರ್) : ಮೊದಲ ಎರಡು ಎಲೆಗಳು "ಜೋಡಿ"ಯಾಗಿದ್ದರೆ, ಅಂದರೆ ಎರಡು ಎಲೆಗಳು ಒಂದೇ ಮೌಲ್ಯವನ್ನು ಹೊಂದಿದ್ದರೆ, ಆಟಗಾರನು "ಆ ಜೋಡಿಯನ್ನು ಪ್ರತ್ಯೇಕಿಸಬಹುದು.(ಸ್ಪ್ಲಿಟ್ ದಿ ಪೇರ್)". ಇದನ್ನು ಮಾಡಲು, ಆಟಗಾರನು ಮೊದಲನೆಯದಕ್ಕೆ ಸಮನಾದ ಎರಡನೇ ಪಂತವನ್ನು ಆರಂಭಿಕ ಪಂತದ ಪಂತ-ಬಾಕ್ಸಿನಿಂದ ಹೊರಗಿನ ಪ್ರದೇಶಕ್ಕೆ ಸರಿಸುತ್ತಾನೆ. ಎಲೆಗಳನ್ನು-ಹಾಕುವವನು ಎರಡು ಎಲೆಗಳ-ಗುಂಪಾಗಿ ಮಾಡಲು ಎಲೆಗಳನ್ನು ಪ್ರತ್ಯೇಕಿಸಿ, ಪ್ರತಿಯೊಂದಕ್ಕೂ ಒಂದು ಪಂತವನ್ನು ಒಡ್ಡುತ್ತಾನೆ. ನಂತರ ಆಟಗಾರನು ಎರಡು ಪ್ರತ್ಯೇಕ ಎಲೆಗಳೊಂದಿಗೆ ಆಡುತ್ತಾನೆ.
ಸಂಕೇತ : ಆರಂಭಿಕ ಪಂತದ ಮುಂದೆ ಪಂತದ ಬಾಕ್ಸಿನ ಹೊರಗೆ ಹೆಚ್ಚುವರಿ ಚಿಪ್‌ಗಳನ್ನು ಇಡುವುದು. ಎರಡು ಬೆರಳುಗಳನ್ನು V ರಚನೆಯಲ್ಲಿ ಅಗಲಿಸಿ ತೋರಿಸುವುದು.
  • ಸರೆಂಡರ್‌ : ಕೆಲವು ಕ್ಯಾಸಿನೊಗಳಲ್ಲಿ "ಸರೆಂಡರ್‌" ಎನ್ನುವ ಐದನೇ ಆಯ್ಕೆಯಿರುತ್ತದೆ. ಎಲೆಗಳನ್ನು-ಹಾಕುವವನು ಬ್ಲ್ಯಾಕ್‌ಜಾಕ್ಅನ್ನು ಪರಿಶೀಲಿಸಿದ ನಂತರ, ಆಟಗಾರನು ಅವನ ಪಂತದ ಅರ್ಧದಷ್ಟನ್ನು ನೀಡುವ ಮೂಲಕ "ಸರೆಂಡರ್‌" ಆಗಬಹುದು.
ಸಂಕೇತ : ಸಾರ್ವತ್ರಿಕವಾಗಿ ಸ್ವೀಕರಿಸಲಾದ ಯಾವುದೇ ಕೈ-ಸಂತೇಕಗಳಿಲ್ಲ; ಇದನ್ನು ಕೇವಲ ಮಾತಿನ ಮೂಲಕ ಸೂಚಿಸಲಾಗುತ್ತದೆ.

ಕೈ-ಸಂಕೇತಗಳನ್ನು "ಐ ಇನ್ ದಿ ಸ್ಕೈ"ಅನ್ನು ಬೆಂಬಲಿಸಲು ಬಳಸಲಾಗುತ್ತದೆ. ಮೇಜಿನ ಮೇಲ್ಭಾಗದಲ್ಲಿ ಒಬ್ಬ ವ್ಯಕ್ತಿ ಅಥವಾ ವೀಡಿಯೊ ಕ್ಯಾಮೆರಾವನ್ನು ಇರಿಸಲಾಗುತ್ತದೆ, ಆದರೆ ಇದನ್ನು ಒಂದೇ-ಕಡೆ ಕಾಣುವ ಗಾಜಿನ ಹಿಂದೆ ರಹಸ್ಯವಾಗಿರಿಸಲಾಗುತ್ತದೆ. ಈ ಸಾಧನವನ್ನು ಕ್ಯಾಸಿನೊದಲ್ಲಿ ಎಲೆಗಳನ್ನು-ಹಾಕುವವನು ಅಥವಾ ಆಟಗಾರರು ಮೋಸ ಮಾಡದಂತೆ ತಡೆಯಲು ಬಳಸಲಾಗುತ್ತದೆ. ಇದನ್ನು ಆಟದಲ್ಲಿ ಎಲೆ‌ ಲೆಕ್ಕಮಾಡುವುದನ್ನು ತಡೆಗಟ್ಟಲೂ ಉಪಯೋಗಿಸಲಾಗುತ್ತದೆ. ಆದರೂ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಎಲೆ‌ ಲೆಕ್ಕಮಾಡುವುದು ನಿಮಯಕ್ಕೆ ವಿರುದ್ಧವಾದುದಲ್ಲ.

ಆಟಗಾರನು ಅವನಲ್ಲಿರುವ ಎಲೆಗಳ ಮೊತ್ತವು 20ಅನ್ನು ಮೀರಿಸದವರೆಗೆ ತಾನು ಬಯಸಿದಷ್ಟು ಹಿಟ್‌ಗಳನ್ನು ತೆಗೆದುಕೊಳ್ಳಬಹುದು. ಆದರೆ ಅವನು ಬಸ್ಟ್ ಆದರೆ ಆ ಆಟವನ್ನು ಕಳೆದುಕೊಳ್ಳುತ್ತಾನೆ. ಎಲ್ಲಾ ಆಟಗಾರರು ಅವರ ನಿರ್ಧಾರಗಳನ್ನು ಮಾಡಿದ ನಂತರ, ಎಲೆಗಳನ್ನು-ಹಾಕುವವನು ಅವನ ಹೋಲ್ ಕಾರ್ಡ್ಅನ್ನು ಬಹಿರಂಗಪಡಿಸುತ್ತಾನೆ. ಅಲ್ಲದೇ ಪೂರ್ವನಿರ್ಧರಿತ ನಿಯಮಗಳ ಪ್ರಕಾರ ಅವನ ಎಲೆಗಳನ್ನು ಆಡುತ್ತಾನೆ.

ನಿಯಮ ಬದಲಾವಣೆಗಳು ಮತ್ತು "ಹೌಸ್ ಅಡ್ವಾಂಟೇಜ್"

[ಬದಲಾಯಿಸಿ]

ಬ್ಲ್ಯಾಕ್‌ಜಾಕ್‌ ಆಟಗಾರನು ಅನೇಕ ನಿಯಮ-ಬದಲಾವಣೆಗಳನ್ನು ಎದುರಿಸುತ್ತಾನೆ. ಅದು ಹೌಸ್ ಅಡ್ವಾಂಟೇಜ್‌ಅನ್ನು ಉಂಟುಮಾಡುತ್ತದೆ. ಅದಲ್ಲದೇ ಆ ಮೂಲಕ ಆತನ ಜಯಗಳಿಸುವ ಅವಕಾಶಗಳ ಮೇಲೆ ಪ್ರಭಾವ ಬೀರುತ್ತದೆ. ಕೆಲವು ನಿಯಮಗಳನ್ನು ಕಾನೂನು ಅಥವಾ ವಿಧಿಯಿಂದ ನಿಶ್ಚಯಿಸಲಾಗುತ್ತದೆ, ಕೆಲವನ್ನು ಕ್ಯಾಸಿನೊದಿಂದಲೇ ನಿರ್ಣಯಿಸಲಾಗುತ್ತದೆ. ಎಲ್ಲಾ ನಿಮಯಗಳನ್ನು ಪ್ರಕಟಗೊಳಿಸುವುದಿಲ್ಲ. ಆದ್ದರಿಂದ ಆಟಗಾರರು ಆಡುವುದಕ್ಕಿಂತ ಮೊದಲು ಅಥವಾ ಅಂತಹ ಸ್ಥಿತಿಯು ಒದಗಿ ಬಂದಾಗ ಕೇಳಬೇಕಾಗುತ್ತದೆ. ಸುಮಾರು 100 ಬದಲಾವಣೆಗಳು ಕಂಡುಬರುತ್ತವೆ.[]

ಎಲ್ಲಾ ಕ್ಯಾಸಿನೊ ಆಟಗಳಂತೆ ಬ್ಲ್ಯಾಕ್‌ಜಾಕ್‌ ಸಹ "ಹೌಸ್ ಅಡ್ವಾಂಟೇಜ್" ಅಥವಾ "ಹೌಸ್ ಎಡ್ಜ್"ಅನ್ನು ಒಳಗೊಂಡಿರುತ್ತದೆ. ಬ್ಲ್ಯಾಕ್‌ಜಾಕ್‌‌ನಲ್ಲಿ ಆರಂಭಿಕ ಹೌಸ್ ಅಡ್ವಾಂಟೇಜ್, ಆಟಗಾರನು ಬಸ್ಟ್ ಆದರೆ ಎಲೆಗಳನ್ನು-ಹಾಕುವವನು ಅನಂತರ ಬಸ್ಟ್ ಆಗಲಿ ಬಿಡಲಿ ಇವನು ಮಾತ್ರ ಆಟವನ್ನು ಕಳೆದುಕೊಳ್ಳುತ್ತಾನೆ ಎಂಬ ಸಂಗತಿಯಿಂದ ಬರುತ್ತದೆ. ಮೂಲ ನಿರ್ವಹಣಾ-ಚಾತುರ್ಯವನ್ನು ಬಳಸಿಕೊಂಡು ಆಡುವ ಬ್ಲ್ಯಾಕ್‌ಜಾಕ್‌ ಆಟಗಾರನು ಸ್ವಲ್ಪ ಪ್ರಮಾಣದ ಅದೃಷ್ಟದೊಂದಿಗೆ ಅವನು ಪಣವೊಡ್ಡಿದ ಒಟ್ಟು ಮೊತ್ತದ 1%ಗಿಂತಲೂ ಕಡಿಮೆ ಕಳೆದುಕೊಳ್ಳುತ್ತಾನೆ; ಇದು ಇತರ ಕ್ಯಾಸಿನೊ ಆಟಗಳಿಗೆ ಹೋಲಿಸಿದರೆ ಆಟಗಾರನಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಅರಿವಿಲ್ಲದೆ ಮೂಲ ನಿರ್ವಹಣಾ-ಚಾತುರ್ಯದಿಂದ ಭಿನ್ನವಾಗಿ ಆಡುವ ಆಟಗಾರರ ಕಳೆದುಕೊಳ್ಳುವ ದರವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.

ಎಲೆಗಳನ್ನು-ಹಾಕುವವನು ಸಾಫ್ಟ್ 17 ಅನ್ನು ಹಿಟ್‌ ಮಾಡುತ್ತಾನೆ

[ಬದಲಾಯಿಸಿ]

ಪ್ರತಿಯೊಂದು ಕ್ಯಾಸಿನೊದಲ್ಲಿ ಎಲೆಗಳನ್ನು-ಹಾಕುವವನು ಸಾಫ್ಟ್ 17ಅನ್ನು ಹಿಟ್‌ ಮಾಡುತ್ತಾನೆಯೇ ಎಂಬುದರ ಬಗ್ಗೆ ನಿಯಮವೊಂದಿರುತ್ತದೆ. ಈ ನಿಮಯವನ್ನು ಮೇಜಿನ ಮೇಲೆಯೇ ಮುದ್ರಿಸಲಾಗಿರುತ್ತದೆ. "S17" ಆಟದಲ್ಲಿ, ಎಲೆಗಳನ್ನು-ಹಾಕುವವನು ತನ್ನಲ್ಲಿರುವ 17ರೊಂದಿಗೆ ಸ್ಟ್ಯಾಂಡ್ ಆಗುತ್ತಾನೆ. "H17" ಆಟದಲ್ಲಿ, ಎಲೆಗಳನ್ನು-ಹಾಕುವವನು ಸಾಫ್ಟ್ 17ಅನ್ನು ಹಿಟ್ ಮಾಡುತ್ತಾನೆ. ಸಹಜವಾಗಿ, ಎಲೆಗಳನ್ನು-ಹಾಕುವವನು ಯಾವಾಗಲೂ ಹಾರ್ಡ್ 17ರಲ್ಲಿ ಸ್ಟ್ಯಾಂಡ್ ಆಗುತ್ತಾನೆ. ಇವೆರಡೂ ಸಂದರ್ಭಗಳಲ್ಲಿ, ಎಲೆಗಳನ್ನು-ಹಾಕುವವನು ಯಾವುದೇ ಆಯ್ಕೆಯನ್ನು ಹೊಂದಿರುವುದಿಲ್ಲ; ಅವನು ಒಂದಾ ಹಿಟ್‌ ಮಾಡಬೇಕು ಅಥವಾ ಹಿಟ್‌ ಮಾಡಬಾರದು . "ಸಾಫ್ಟ್ 17ಅನ್ನು ಹಿಟ್‌ ಮಾಡುವ" ಆಟವು ಸುಮಾರು 0.2%ನಷ್ಟು ಹೆಚ್ಚಿನ ಹೌಸ್ ಅಡ್ವಾಂಟೇಜ್ ಒಂದಿಗೆ ಆಟಗಾರನಿಗೆ ಕಡಿಮೆ ಅನುಕೂಲಕರವಾಗಿರುತ್ತದೆ.

ಡೆಕ್‌ಗಳ ಸಂಖ್ಯೆ

[ಬದಲಾಯಿಸಿ]

ಆಟದಲ್ಲಿ ಬಳಸುವ ಡೆಕ್‌ಗಳ ಸಂಖ್ಯೆಯು ಆಟಗಾರನ ಗೆಲ್ಲುವ ಅವಕಾಶಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಏಕೆಂದರೆ ಇದು ಹೌಸ್ ಅಡ್ವಾಂಟೇಜ್ಅನ್ನು ಉಂಟುಮಾಡುತ್ತದೆ. ಎಲ್ಲಾ ಅಂಶಗಳು ಸಮನಾಗಿದ್ದು, ಕಡಿಮೆ ಡೆಕ್‌ಗಳ ಬಳಕೆಯು ಯಾವಾಗಲೂ ಮೂಲ ನಿರ್ವಹಣಾ-ಚಾತುರ್ಯವನ್ನು ಬಳಸುವ ಆಟಗಾರನಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಇದಕ್ಕೆ ಒಂದು ಕಾರಣವೆಂದರೆ - ಒಂದು ಡೆಕ್ ಬ್ಲ್ಯಾಕ್‌ಜಾಕ್‌ನಲ್ಲಿ ಆಟಗಾರನು ಬ್ಲ್ಯಾಕ್‌ಜಾಕ್‌ ಹೊಂದುವ ಸಂಭವವು ಹೆಚ್ಚಿರುತ್ತದೆ. (ಏಕೆಂದರೆ ಬ್ಲ್ಯಾಕ್‌ಜಾಕ್‌ಗೆ ಎರಡು ಬೇರೆ ಬೇರೆ ಎಲೆಗಳು ಬೇಕಾಗುತ್ತದೆ. ಒಂದು ರೀತಿಯ ಎಲೆಯನ್ನು (ಉದಾ, ಒಂದು ಹತ್ತು) ತೆಗೆದು, ಮತ್ತೊಂದು ಬೇರೆ ರೀತಿಯನ್ನು ಎಲೆಯನ್ನು (ಉದಾ, ಒಂದು ಎಕ್ಕ) ಪಡೆಯುವುದು ಸಾಮಾನ್ಯವಾಗಿರುತ್ತದೆ; ಹಾಗೂ ಈ ಪ್ರಭಾವವು ಬಹು-ಡೆಕ್ ಆಟಕ್ಕಿಂತ ಒಂದು ಡೆಕ್ ಆಟದಲ್ಲಿ ಅಧಿಕವಾಗಿರುತ್ತದೆ). ಆಟಗಾರನು ಬ್ಲ್ಯಾಕ್‌ಜಾಕ್ಅನ್ನು ಹೊಂದಿದ್ದರೆ, ಎಲೆಗಳನ್ನು-ಹಾಕುವವನು ಬ್ಲ್ಯಾಕ್‌ಜಾಕ್‌ಅನ್ನು ಹೊಂದುವ ಸಂಭವವು ಕಡಿಮೆ ಇರುತ್ತದೆ, ಅಂದರೆ ಒಂದು ಡೆಕ್ ಆಟದಲ್ಲಿ ಆಟಗಾರನು ಹೆಚ್ಚಾಗಿ 3:2 ನಲ್ಲಿ ಮರುಪಾವತಿಯನ್ನು ಪಡೆಯುತ್ತಾನೆ.

ಒಂದು ಡೆಕ್ ಬ್ಲ್ಯಾಕ್‌ಜಾಕ್‌ಅನ್ನು ನೀಡುವಾಗ, ಹೌಸ್ಅನ್ನು ಉಂಟುಮಾಡಲು ನೆರವಾಗುವ ಹೆಚ್ಚು ಕಟ್ಟುನಿಟ್ಟಾದ ನಿಮಯಗಳೊಂದಿಗೆ ಇದನ್ನು ಒದಗಿಸಲಾಗುತ್ತದೆ. ಉದಾಹರಣೆಗಾಗಿ, ಈ ಕೆಳಗಿನ ಅಂಕಿಅಂಶಗಳೆಲ್ಲವೂ ಒಂದೇ ರೀತಿಯ ನಿಯಮಗಳನ್ನು ಬಳಸುತ್ತವೆ: ಪ್ರತ್ಯೇಕಿಸಿದ ನಂತರ ಡಬಲ್ ಮಾಡುವುದು, ನಾಲ್ಕು ಎಲೆಗಳ ಗುಂಪಾಗಿ ಪುನಃಪ್ರತ್ಯೇಕಿಸುವುದು, ಎಕ್ಕಗಳನ್ನು ಪ್ರತ್ಯೇಕಿಸಲು ಒಂದು ಎಲೆಯನ್ನು ಬಳಸುವುದು,‌ ಸರೆಂಡರ್ ಇಲ್ಲದಿರುವುದು, ಯಾವುದೇ ಎರಡು ಎಲೆಗಳ ಮೇಲೆ ಡಬಲ್ ಮಾಡುವುದು, ಎಲೆಗಳನ್ನು-ಹಾಕುವವನು ಬ್ಲ್ಯಾಕ್‌ಜಾಕ್‌ಅನ್ನು ಹೊಂದಿದಾಗ ಮಾತ್ರ ಆರಂಭಿಕ ಪಂತವು ಕಳೆದುಹೋಗುವುದು, ಎಲೆಗಳನ್ನು-ಹಾಕುವವನು ಸಾಫ್ಟ್ 17ಅನ್ನು ಹಿಟ್‌ ಮಾಡುವುದು ಹಾಗೂ ಕಟ್-ಕಾರ್ಡ್‌ನ ಬಳಕೆ. ಒಂದು ಡೆಕ್ ಆಟವು ಎರಡು ಡೆಕ್‌ಗಳ ಆಟಕ್ಕಿಂತ ಉತ್ತಮವಾಗಿರುತ್ತದೆ, ಇದು ನಾಲ್ಕು ಡೆಕ್‌ಗಳ ಆಟಕ್ಕಿಂತ ಗಮನಾರ್ಹವಾಗಿ ಉತ್ತಮವಾಗಿರುತ್ತದೆ. ಆರು ಮತ್ತು ಅದಕ್ಕಿಂತ ಹೆಚ್ಚಿನ ಡೆಕ್‌ಗಳ ಆಟವು ತುಂಬಾ ಕಡಿಮೆ ವ್ಯತ್ಯಾಸವನ್ನು ಹೊಂದಿರುತ್ತವೆ.

ಡೆಕ್‌ಗಳ ಸಂಖ್ಯೆ ಹೌಸ್ ಅಡ್ವಾಂಟೇಜ್
ಒಂದು ಡೆಕ್ 0.17%
ಎರಡು ಡೆಕ್‌ಗಳು 0.46%
ನಾಲ್ಕು ಡೆಕ್‌ಗಳು 0.60%
ಆರು ಡೆಕ್‌ಗಳು 0.64%
ಎಂಟು ಡೆಕ್‌ಗಳು 0.66%

ಸರೆಂಡರ್

[ಬದಲಾಯಿಸಿ]

ಕೆಲವು ಕ್ಯಾಸಿನೊಗಳು "ಸರೆಂಡರ್‌" ಎನ್ನುವ ಒಂದು ಅನುಕೂಲಕರ ಆಯ್ಕೆಯನ್ನು ಒದಗಿಸುತ್ತವೆ. ಇದು ಆಟಗಾರನು ಅವನ ಪಂತದ ಅರ್ಧವನ್ನು ನೀಡುವಂತೆ ಮತ್ತು ಎಲೆಗಳನ್ನು ಆಡದಂತೆ ಮಾಡುತ್ತದೆ. ಈ ಆಯ್ಕೆಯನ್ನು ಕೆಲವೊಮ್ಮೆ "ಲೇಟ್" ಸರೆಂಡರ್‌ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಎಲೆಗಳನ್ನು-ಹಾಕುವವನು ಅವನ ಹೋಲ್‌-ಕಾರ್ಡ್ಅನ್ನು‌ ಬ್ಲ್ಯಾಕ್‌ಜಾಕ್‌ಗಾಗಿ ಪರಿಶೀಲಿಸಿದ ನಂತರ ಕಂಡುಬರುತ್ತದೆ. ಕ್ಯಾಸಿನೊಗಳು ಅಟ್ಲಾಂಟಿಕ್ ಸಿಟಿಯಲ್ಲಿ ಮೊದಲು ತೆರೆದುಕೊಂಡಾಗ, ಈ ಸರೆಂಡರ್‌ ಆಯ್ಕೆಯು ಎಲೆಗಳನ್ನು-ಹಾಕುವವನು ಬ್ಲ್ಯಾಕ್‌ಜಾಕ್‌ಗಾಗಿ ಪರಿಶೀಲಿಸುವುದಕ್ಕಿಂತ ಮೊದಲು ಲಭ್ಯವಿತ್ತು. ಈ ನಿಯಮವು ಆಟಗಾರನಿಗೆ ಅತ್ಯಂತ ಹೆಚ್ಚು ಅನುಕೂಲಕರವಾದುದಾಗಿದೆ. ಆದರೆ ಈ "ಅರ್ಲಿ(ಆರಂಭಿಕ) ಸರೆಂಡರ್‌" ಆಯ್ಕೆಯು ಅತಿ ಶೀಘ್ರದಲ್ಲಿ ಕಣ್ಮರೆಯಾಯಿತು. ಅರ್ಲಿ ಸರೆಂಡರ್‌ನ ಪರಿವರ್ತನೆಗಳು ಈಗಲೂ ಕೆಲವು ರಾಷ್ಟ್ರಗಳಲ್ಲಿ ಕಂಡುಬರುತ್ತವೆ.

ಆಟಗಾರನು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಮಾತ್ರ ಸರೆಂಡರ್‌ ಆಗಬೇಕು ಏಕೆಂದರೆ 25%ನಷ್ಟು ಗೆಲ್ಲುವ ಅವಕಾಶವೂ ಸಹ ಅವನ ಪಂತದ ಅರ್ಧವನ್ನು ನೀಡುವುದಕ್ಕಿಂತ ಉತ್ತಮ ಲಾಭವನ್ನು ನೀಡಬಹುದು. ಅರ್ಲಿ(ಆರಂಭಿಕ) ಸರೆಂಡರ್‌ನಲ್ಲಿ ಆಟಗಾರನು ಎಲೆಗಳನ್ನು-ಹಾಕುವವನ ಎಕ್ಕದ ವಿರುದ್ಧ ಸರೆಂಡರ್‌ ಆಗಬೇಕಾಗುತ್ತದೆ.

ಪುನಃಪ್ರತ್ಯೇಕಿಸುವುದು

[ಬದಲಾಯಿಸಿ]

ಆಟಗಾರನು ಎಕ್ಕಗಳನ್ನು ಹೊರತುಪಡಿಸಿ ಜೋಡಿಯೊಂದನ್ನು ಪ್ರತ್ಯೇಕಿಸಿದರೆ ಮತ್ತು ಆ ಮೌಲ್ಯದ ಮೂರನೇ ಎಲೆಯೊಂದು ಕಂಡುಬಂದರೆ, ಆಟಗಾರನು ಸಾಮಾನ್ಯವಾಗಿ ಮತ್ತೊಮ್ಮೆ ಪ್ರತ್ಯೇಕಿಸುತ್ತಾನೆ. ("ಪುನಃಪ್ರತ್ಯೇಕಿಸುವುದು"), ಆ ಮೂಲಕ ಆರಂಭಿಕ ಪಂತಕ್ಕೆ ಸಮನಾದ ಮತ್ತೊಂದು ಪಂತವನ್ನು ಒಡ್ಡುತ್ತಾನೆ. ಆಗ ಮೇಜಿನ ಮೇಲೆ ಮೂರು ಪಂತಗಳು ಮತ್ತು ಮೂರು ಪ್ರತ್ಯೇಕ ಎಲೆಗಳು ಇರುತ್ತವೆ. ಕೆಲವು ಕ್ಯಾಸಿನೊಗಳಲ್ಲಿ ಎಕ್ಕಗಳನ್ನು ಹೊರತು ಪಡಿಸಿ ಎಲೆಗಳನ್ನು ಅನಿಯಮಿತವಾಗಿ ಪ್ರತ್ಯೇಕಿಸಲಾಗುತ್ತದೆ. ಕೆಲವು ಕ್ಯಾಸಿನೊಗಳು ಇದನ್ನು ನಾಲ್ಕು ಎಲೆಗಳಂತಹ ಕೆಲವು ಸಂಖ್ಯೆಯ ಎಲೆಗಳಿಗೆ ಮಿತಿಗೊಳಿಸುತ್ತವೆ. (ಉದಾಹರಣೆಗಾಗಿ "4 ಕ್ಕೆ ಪುನಃಪ್ರತ್ಯೇಕಿಸುವುದು").

ಪ್ರತ್ಯೇಕಿಸಿದ ಎಕ್ಕಗಳ ಹಿಟ್‌/ಪುನಃಪ್ರತ್ಯೇಕಿಸುವಿಕೆ

[ಬದಲಾಯಿಸಿ]

ಎಕ್ಕಗಳನ್ನು ಪ್ರತ್ಯೇಕಿಸಿದ ನಂತರ ಸಾಮಾನ್ಯವಾಗಿರುವ ಒಂದು ನಿಯಮವೆಂದರೆ ಪ್ರತಿಯೊಂದು ಎಕ್ಕಕ್ಕೆ ಕೇವಲ ಒಂದು ಎಲೆಯನ್ನು ಮಾತ್ರ ಹಂಚುವುದು; ಆಟಗಾರನಿಗೆ ಯಾವುದೇ ಎಲೆಗಳ-ಗುಂಪಿನಲ್ಲಿ ಪ್ರತ್ಯೇಕಿಸಲಾಗುವುದಿಲ್ಲ, ಡಬಲ್ ಮಾಡಲಾಗುವುದಿಲ್ಲ ಅಥವಾ ಮತ್ತೊಂದು ಹಿಟ್ ತೆಗೆದುಕೊಳ್ಳಲಾಗುವುದಿಲ್ಲ. ನಿಮಯದ ಬದಲಾವಣೆಯು ಎಕ್ಕಗಳನ್ನು ಪುನಃಪ್ರತ್ಯೇಕಿಸಲು ಅಥವಾ ಆಟಗಾರನಿಗೆ ಪ್ರತ್ಯೇಕಿಸಿದ ಎಕ್ಕಗಳನ್ನು ಹಿಟ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಆಟಗಾರನು ಎಕ್ಕಗಳನ್ನು ಪ್ರತ್ಯೇಕಿಸಿದಾಗ ಉಳಿಯುವ ಎಲೆಗಳನ್ನು ಹಿಟ್ ಮಾಡುವುದರಿಂದ ಕ್ಯಾಸಿನೊ ಎಡ್ಜ್ ಸುಮಾರು 0.13%ನಷ್ಟು ಕಡಿಮೆಯಾಗುತ್ತದೆ; ಎಕ್ಕಗಳನ್ನು ಪುನಃಪ್ರತ್ಯೇಕಿಸುವುದು ಎಡ್ಜ್ಅನ್ನು ಸುಮಾರು 0.03%ನಷ್ಟು ಕಡಿಮೆಮಾಡುತ್ತದೆ. ಎಕ್ಕಗಳನ್ನು ಪುನಃಪ್ರತ್ಯೇಕಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ಪ್ರತ್ಯೇಕಿಸಿದ ಎಕ್ಕಗಳ ಹಿಟ್ ಮಾಡಲು ಅನುವು ಮಾಡುವ ಹೌಸ್‌ಗಳು ವಿರಳವಾಗಿರುತ್ತವೆ.

ಪ್ರತ್ಯೇಕಿಸಿದ ನಂತರ ಡಬಲ್ ಮಾಡುವುದು

[ಬದಲಾಯಿಸಿ]

ಆಟಗಾರನು ಜೋಡಿಯೊಂದನ್ನು ಪ್ರತ್ಯೇಕಿಸಿದ ನಂತರ, ಹೆಚ್ಚಿನ ಕ್ಯಾಸಿನೊಗಳು ಆತನಿಗೆ ಹೊಸ ಎರಡೂ ಎಲೆಗಳನ್ನು ಅಥವಾ ಒಂದನ್ನು "ಡಬಲ್ ಡೌನ್‌" ಮಾಡಲು ಅವಕಾಶ ಮಾಡಿಕೊಡುತ್ತವೆ. ಇದನ್ನು "ಪ್ರತ್ಯೇಕಿಸಿದ ನಂತರ ಡಬಲ್ ಮಾಡುವುದು" ಎಂದು ಕರೆಯುತ್ತಾರೆ ಹಾಗೂ ಇದು ಆಟಗಾರನಿಗೆ ಸುಮಾರು 0.12%ನಷ್ಟು ಅನುಕೂಲವನ್ನು ಒದಗಿಸುತ್ತದೆ.

9/10/11 ಅಥವಾ 10/11 ಅನ್ನು ಮಾತ್ರ ಡಬಲ್ ಮಾಡುವುದು

[ಬದಲಾಯಿಸಿ]

ಹೆಚ್ಚಾಗಿ ರೆನೊ ನಿಮಯವೆಂದು ಕರೆಯುವ ಈ ನಿಮಯವು ಆಟಗಾರನಿಗೆ ಆರಂಭಿಕ ಒಟ್ಟು ಮೊತ್ತ 10 ಅಥವಾ 11 (ಕೆಲವೊಮ್ಮೆ 9, 10 ಅಥವಾ 11 - ಯುರೋಪ್‍ನಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ)ಅನ್ನು ಮಾತ್ರ ಡಬಲ್ ಡೌನ್ ಮಾಡುವುದನ್ನು ನಿರ್ಬಂಧಿಸುತ್ತದೆ. ಇದು ಸಾಫ್ಟ್ 17 (ಎಕ್ಕ-6)ರಂತಹ ಸಾಫ್ಟ್ ಎಲೆಗಳನ್ನು ಡಬಲ್ ಮಾಡುವುದನ್ನು ತಡೆಗಟ್ಟುತ್ತದೆ ಹಾಗೂ ಇದು ಆಟಗಾರನಿಗೆ ಅನುಕೂಲಕರವಾಗಿರುವುದಿಲ್ಲ. ಇದು ಹೌಸ್ ಅಡ್ವಾಂಟೇಜ್ಅನ್ನು 9-11 ನಿಮಯಕ್ಕೆ 0.09% (8 ಡೆಕ್‌ಗಳು)ರಿಂದ 0.15% (1 ಡೆಕ್‌)ನಷ್ಟು ಹಾಗೂ 10-11 ನಿಮಯಕ್ಕೆ 0.17% (8 ಡೆಕ್‌ಗಳು)ರಿಂದ 0.26% (ಒಂದು ಡೆಕ್‌)ನಷ್ಟು ಹೆಚ್ಚಿಸುತ್ತದೆ. ಈ ಸಂಖ್ಯೆಗಳು ಇತರ ನಿಯಮಗಳೊಂದಿಗಿನ ಪರಸ್ಪರ ಪ್ರಭಾವದಿಂದಾಗಿ ವ್ಯತ್ಯಾಸಗೊಳ್ಳಬಹುದು.

ಹೋಲ್‌-ಕಾರ್ಡ್ ಇಲ್ಲದ

[ಬದಲಾಯಿಸಿ]

ಹೆಚ್ಚಿನ U.S.-ಅಲ್ಲದ ಕ್ಯಾಸಿನೊಗಳಲ್ಲಿ, 'ಹೋಲ್‌ ಕಾರ್ಡ್ ಇಲ್ಲದ' ಆಟವನ್ನು ಆಡಲಾಗುತ್ತದೆ, ಅಂದರೆ ಎಲೆಗಳನ್ನು-ಹಾಕುವವನು ಎಲ್ಲಾ ಆಟಗಾರರು ನಿರ್ಧಾರಗಳನ್ನು ಮಾಡಿಮುಗಿಸುವವರೆಗೆ ಅವನ ಎರಡನೇ ಎಲೆಯನ್ನು ಎಳೆಯಬಾರದು ಅಥವಾ ನೋಡಬಾರದು. ಎಲೆಗಳನ್ನು-ಹಾಕುವವನ ಹತ್ತು ಅಥವಾ ಎಕ್ಕದ ವಿರುದ್ಧ ಡಬಲ್ ಮಾಡಲು ಅಥವಾ ಪ್ರತ್ಯೇಕಿಸಲು(ಸ್ಪ್ಲಿಟ್ ಮಾಡಲು) ಹೋಲ್‌ ಕಾರ್ಡ್ ಇಲ್ಲದಿರುವುದು ಸರಿಯಾದ ಮೂಲ ನಿರ್ವಹಣಾ-ಚಾತುರ್ಯವಲ್ಲ ಏಕೆಂದರೆ ಎಲೆಗಳನ್ನು-ಹಾಕುವವನ ಬ್ಲ್ಯಾಕ್‌ಜಾಕ್‌ ಪ್ರತ್ಯೇಕಿಸುವಿಕೆಯನ್ನು ಮತ್ತು ಡಬಲ್ ಪಂತಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ; ಇದಕ್ಕೆ ಹೊರತಾಗಿರುವುದೆಂದರೆ, ಎಲೆಗಳನ್ನು-ಹಾಕುವವನ 10ರ ವಿರುದ್ಧ Aಯ ಜೋಡಿಯೊಂದಿಗೆ ಮಾಡುವುದು, ಇದರಲ್ಲಿ ಪ್ರತ್ಯೇಕಿಸುವುದು ಸರಿಯಾಗಿರುತ್ತದೆ. ಉಳಿದ ಇತರ ಎಲ್ಲಾ ಸಂದರ್ಭಗಳಲ್ಲಿ, ಸ್ಟ್ಯಾಂಡ್, ಹಿಟ್‌ ಅಥವಾ ಸರೆಂಡರ್‌ ಸಂಭವಿಸುತ್ತದೆ. ಉದಾಹರಣೆಗಾಗಿ, ಎಲೆಗಳನ್ನು-ಹಾಕುವವನ 10ರ ವಿರುದ್ಧ 11 ಅನ್ನು ಹೊಂದಿರುವುದು ಹೋಲ್‌ ಕಾರ್ಡ್ ಆಟದಲ್ಲಿ (ಇದರಲ್ಲಿ ಆಟಗಾರನು ಎಲೆಗಳನ್ನು-ಹಾಕುವವನ ಎರಡನೇ ಎಲೆಯು ಎಕ್ಕವಲ್ಲವೆಂದು ತಿಳಿದಿರುತ್ತಾನೆ) ಡಬಲ್ ಮಾಡುವ ಹಾಗೂ ಹೋಲ್‌ ಕಾರ್ಡ್ ಇಲ್ಲದ ಆಟದಲ್ಲಿ ಹಿಟ್ ಮಾಡುವ ಸರಿಯಾದ ನಿರ್ವಹಣಾ-ಚಾತುರ್ಯವಾಗಿದೆ. ಹೋಲ್‌ ಕಾರ್ಡ್ ಇಲ್ಲದ ನಿಮಯವು ಸರಿಸುಮಾರು 0.11%ನಷ್ಟು ಹೌಸ್ ಎಡ್ಜ್‌ಅನ್ನು ಉಂಟುಮಾಡುತ್ತದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನ ಕೆಲವು ಕ್ಯಾಸಿನೊಗಳಂತಹ ಕೆಲವು ಸ್ಥಳಗಳಲ್ಲಿ, ಎಲೆಗಳನ್ನು-ಹಾಕುವವನು ಬ್ಲ್ಯಾಕ್‌ಜಾಕ್‌ಅನ್ನು ಹೊಂದಿರುವುದು ಕಂಡುಬಂದರೆ ಆಟಗಾರನು ಅವನ ಆರಂಭಿಕ ಪಂತವನ್ನು ಮಾತ್ರ ಕಳೆದುಕೊಳ್ಳುತ್ತಾನೆ, ಯಾವುದೇ ಹೆಚ್ಚುವರಿ ಪಂತಗಳಲ್ಲನ್ನಲ್ಲ (ಡಬಲ್‌ಗಳು ಮತ್ತು ಪ್ರತ್ಯೇಕಿಸುವಿಕೆಗಳು). ಇದು ಹೋಲ್‌ ಕಾರ್ಡ್ ಆಟದ ರೀತಿಯದೇ ಮೂಲ ನಿರ್ವಹಣಾ-ಚಾತುರ್ಯವನ್ನು ಮತ್ತು ಅನುಕೂಲವನ್ನು ಹೊಂದಿರುತ್ತದೆ.

ಬ್ಲ್ಯಾಕ್‌ಜಾಕ್‌ಗೆ ಪಾವತಿಸುವಲ್ಲಿನ ಮಾರ್ಪಾಡುಗಳು

[ಬದಲಾಯಿಸಿ]

ಹೆಚ್ಚಿನ ಕ್ಯಾಸಿನೊಗಳಲ್ಲಿ, ಸಾಮಾನ್ಯವಾಗಿ ಕಡಿಮೆ ಟೇಬಲ್ ಮಿನಿಮಮ್(ಮೇಜಿನ ಕನಿಷ್ಠ)ಗಳನ್ನು ಹೊಂದಿರುವ ಮೇಜುಗಳಲ್ಲಿ ಮತ್ತು ಒಂದು-ಡೆಕ್ ಆಟಗಳಲ್ಲಿ, ಬ್ಲ್ಯಾಕ್‌ಜಾಕ್‌ಗೆ ಸಾಮಾನ್ಯವಾಗಿರುವ 3:2ರ ಬದಲಿಗೆ 6:5ಅನ್ನು ಅಥವಾ 1:1ಅನ್ನು ಮಾತ್ರ ಪಾವತಿಸಲಾಗುತ್ತದೆ. U.S.ನಲ್ಲಿ ನಿಮಯದ ವ್ಯತ್ಯಾಸಗಳು ಸಾಮಾನ್ಯವಾಗಿರುವುದರೊಂದಿಗೆ, ಬ್ಲ್ಯಾಕ್‌ಜಾಕ್‌ಗೆ ಪಾವತಿಸುವಲ್ಲಿನ ಈ ಮಾರ್ಪಾಡುಗಳು ಆಟಗಾರನಿಗೆ ಹೆಚ್ಚು ನಷ್ಟವನ್ನುಂಟುಮಾಡುತ್ತವೆ, ಇವು ಹೆಚ್ಚಿನ ಪ್ರಮಾಣದ ಹೌಸ್ ಎಡ್ಜ್ಅನ್ನು ಉಂಟುಮಾಡುತ್ತವೆ. ಬ್ಲ್ಯಾಕ್‌ಜಾಕ್‌ ಸರಿಸುಮಾರು 4.8%ನಷ್ಟು ಎಲೆಗಳಲ್ಲಿ ಕಂಡುಬರುವುದರಿಂದ, 1:1 ಆಟವು ಹೌಸ್ ಎಡ್ಜ್ಅನ್ನು 2.3%ನಷ್ಟು ಹೆಚ್ಚಿಸುತ್ತದೆ ಹಾಗೂ 6:5 ಆಟವು 1.4%ನಷ್ಟು ಹೆಚ್ಚಿಸುತ್ತದೆ. ವೀಡಿಯೊ ಬ್ಲ್ಯಾಕ್‌ಜಾಕ್‌ನ 1:1 ಪಾವತಿಯು, ಇದು ಜನಪ್ರಿಯವಾಗಿ ಮೇಜಿನ ರೂಪವನ್ನು ತಲುಪದಿರುವುದಕ್ಕೆ ಪ್ರಮುಖ ಕಾರಣವಾಗಿದೆ (ಪ್ರತಿಯೊಂದು ಆಟದ ನಂತರ ಎಲೆಗಳನ್ನು ಕಲೆಸಲಾಗುತ್ತದೆ, ಇದು ಎಣಿಸುವ ಸಂಚನ್ನು ಕಡಿಮೆ ಪರಿಣಾಮಕಾರಿಯಾಗಿ ಮಾಡುತ್ತದೆ). 6:5 ನಿಯಮವನ್ನು ಸಾಮಾನ್ಯವಾಗಿ ಮೇಜಿನ ಬ್ಲ್ಯಾಕ್‌ಜಾಕ್‌‌ನಲ್ಲಿ ಒಂದು ಡೆಕ್‌ ಆಟಗಳಲ್ಲಿ ಬಳಸಲಾಗುತ್ತದೆ, ಇವು ಮೂಲ ನಿರ್ವಹಣಾ-ಚಾತುರ್ಯದ ಆಟಗಾರರ ಹೆಚ್ಚು ಆಕರ್ಷಕ ಆಟವಾಗಿರುತ್ತವೆ.[]

ಸಮಮಾಡಿಕೊಂಡಾಗ ಎಲೆಗಳನ್ನು-ಹಾಕುವವನು ಗೆಲ್ಲುತ್ತಾನೆ

[ಬದಲಾಯಿಸಿ]

ಎಲೆಗಳನ್ನು-ಹಾಕುವವನು ಎಲ್ಲಾ ಪುಶ್ ಎಲೆಗಳನ್ನು ಗೆಲ್ಲುವಂತೆ ಮಾಡುವುದರಿಂದ ಆಟಗಾರನು ಪೂರ್ತಿಯಾಗಿ ಅಯಶಸ್ವಿಯಾಗುತ್ತಾನೆ.[ಸೂಕ್ತ ಉಲ್ಲೇಖನ ಬೇಕು] ಪ್ರಮಾಣಿತ ಬ್ಲ್ಯಾಕ್‌ಜಾಕ್‌ನಲ್ಲಿ ವಿರಳವಾಗಿ ಬಳಸಲಾದರೂ, ಇದು "ಬ್ಲ್ಯಾಕ್‌ಜಾಕ್‌-ರೀತಿಯ" ಆಟಗಳಲ್ಲಿ ಕೆಲವೊಮ್ಮೆ ಕಂಡುಬರುತ್ತದೆ, ಉದಾಹರಣೆಗಾಗಿ ಕೆಲವು ಚಾರಿಟಿ ಕ್ಯಾಸಿನೊಗಳಲ್ಲಿ.

ಇನ್ಶುರೆನ್ಸ್

[ಬದಲಾಯಿಸಿ]

ಎಲೆಗಳನ್ನು-ಹಾಕುವವನ ಮೇಲ್ಮುಖವಾಗಿರುವ ಎಲೆಯು ಎಕ್ಕವಾಗಿದ್ದರೆ, ಅವನು ಅವನ 'ಹೋಲ್‌ ಕಾರ್ಡ್'ಅನ್ನು ಪರಿಶೀಲಿಸುವುದಕ್ಕಿಂತ ಮುಂಚೆ ಆಟಗಾರನು ಇನ್ಶುರೆನ್ಸ್‌ ಅನ್ನು ತೆಗೆಯುವ ಆಯ್ಕೆಯನ್ನು ಹೊಂದಿರುತ್ತಾನೆ.

ಇನ್ಶುರೆನ್ಸ್‌ ಆರಂಭಿಕ ಪಂತದ ಅರ್ಧದಷ್ಟಿರಬಹುದಾದ ಒಂದು ಉಪ-ಪಂತವಾಗಿದೆ, ಇದನ್ನು ಸಾಮಾನ್ಯವಾಗಿ ಮೇಜಿನ ಮೇಲೆ "ಇನ್ಶುರೆನ್ಸ್‌ ಪೇಸ್ 2 ಟು 1" ಎಂದು ಗುರುತು ಮಾಡಲಾದ ವಿಶೇಷ ಭಾಗವೊಂದರಲ್ಲಿ ಇರಿಸಲಾಗುತ್ತದೆ. ಎಲೆಗಳನ್ನು-ಹಾಕುವವನ ಪ್ರಕಟಗೊಳ್ಳುವ ಎಲೆಯು ಎಕ್ಕವಾಗಿದ್ದರೆ ಮಾತ್ರ ಈ ಉಪ-ಪಂತವನ್ನು ಹಾಕಲಾಗುತ್ತದೆ. ಇದರ ಮುಖ್ಯ ಉದ್ದೇಶವೆಂದರೆ ಎಲೆಗಳನ್ನು-ಹಾಕುವವನ ಎರಡನೇ ಎಲೆಯು ಹತ್ತರ-ಮೌಲ್ಯವನ್ನು ಹೊಂದುವ ಹೆಚ್ಚಿನ ಸಂಭವವಿರುತ್ತದೆ (ಸುಮಾರು ಮೂರನೇ ಒಂದರಷ್ಟು), ಆ ಸಂಭವವು ನಿಜವಾದರೆ ಎಲೆಗಳನ್ನು-ಹಾಕುವವನು ಬ್ಲ್ಯಾಕ್‌ಜಾಕ್‌ಅನ್ನು ಹೊಂದುತ್ತಾನೆ ಹಾಗೂ ಆಟಗಾರನು ಆಟವನ್ನು ಕಳೆದುಕೊಳ್ಳಬೇಕಾಗುತ್ತದೆ. (ಆದ್ದರಿಂದ ಈ "ಏಸ್ ಇನ್ ದಿ ಹೋಲ್‌" ಎಂಬ ವ್ಯಕ್ತಪಡಿಸುವಿಕೆಯಾಗಿರುತ್ತದೆ). "ಇನ್ಶುರೆನ್ಸ್‌" ಪಂತವನ್ನು ಹಾಕುವ ಮೂಲಕ ಈ ಸಂಭಾವ್ಯತೆಯ ವಿರುದ್ಧ ರಕ್ಷಣೆ ಪಡೆಯುವುದು ಆಟಗಾರನಿಗೆ ಆಕರ್ಷಣೀಯವಾಗಿರುತ್ತದೆ (ಆದರೆ ಹೆಚ್ಚು ಸೂಕ್ಷ್ಮವಿವೇಚನೆಯಿಂದ ಕೂಡಿರುವುದಿಲ್ಲ). ಇದು ಎಲೆಗಳನ್ನು-ಹಾಕುವವನು ಬ್ಲ್ಯಾಕ್‌ಜಾಕ್‌ಅನ್ನು ಹೊಂದಿದ್ದರೆ 2-ರಿಂದ-1ಅನ್ನು ಪಾವತಿಸುತ್ತದೆ. ಈ ಸಂದರ್ಭದಲ್ಲಿ "ಇನ್ಶುರೆನ್ಸ್‌ಅನ್ನು ತೆಗೆದುಕೊಳ್ಳುವುದು" ಆರಂಭಿಕ ಪಂತವನ್ನು ಕಳೆದುಕೊಳ್ಳದಂತೆ ಸರಿದೂಗಿಸುತ್ತದೆ. ಎಲೆಗಳನ್ನು-ಹಾಕುವವನು ಬ್ಲ್ಯಾಕ್‌ಜಾಕ್‌ಅನ್ನು ಹೊಂದಿಲ್ಲದಿದ್ದರೆ ಇನ್ಶುರೆನ್ಸ್‌ ಪಂತವು ಕಳೆದುಹೋಗುತ್ತದೆ, ಆದರೂ ಆಟಗಾರನು ಆರಂಭಿಕ ಪಂತವನ್ನು ಗೆಲ್ಲಬಹುದು ಅಥವಾ ಕಳೆದುಕೊಳ್ಳಬಹುದು.

ಆಟಗಾರನು ಎಲೆಗಳನ್ನು ಲೆಕ್ಕಮಾಡದಿದ್ದರೆ ಇನ್ಶುರೆನ್ಸ್‌ ಒಂದು ಕಳಪೆ ಪಂತವಾಗಿರುತ್ತದೆ ಏಕೆಂದರೆ ಅಸಂಖ್ಯಾತ ಡೆಕ್‌ಗಳಲ್ಲಿ 4/13ನಷ್ಟು ಎಲೆಗಳು ಹತ್ತರ ಮೌಲ್ಯವನ್ನು (10, J, Q ಅಥವಾ K) ಹೊಂದಿರುತ್ತವೆ ಹಾಗೂ 9/13ನಷ್ಟು ಹೊಂದಿರುವುದಿಲ್ಲ, ಆದ್ದರಿಂದ ಅಸಂಖ್ಯಾತ ಡೆಕ್‌ಗಳ ಆಟದ ಊಹಾತ್ಮಕ ಲಾಭವು 4/13 * 2 * ಪಂತ - 9/13 * ಪಂತ = -1 /13 * ಪಂತ ಅಥವಾ -7.69% ಆಗಿರುತ್ತದೆ. ಪ್ರಾಯೋಗಿಕವಾಗಿ, ಇದಕ್ಕಿಂತ ಸರಾಸರಿ ಹೌಸ್ ಎಡ್ಜ್ ಕಡಿಮೆಯಾಗಿರುತ್ತದೆ ಏಕೆಂದರೆ ಶೂನಿಂದ (ಎಲೆಗಳನ್ನು-ಹಾಕುವವನ ಎಕ್ಕ) ಹತ್ತಲ್ಲದ ಒಂದು ಎಲೆಯನ್ನು ತೆಗೆದುಹಾಕಿದರೂ ಎಲೆಗಳನ್ನು-ಹಾಕುವವನಲ್ಲಿನ ಹತ್ತರ ಮೌಲ್ಯದ ಉಳಿದ ಎಲೆಗಳ ಪ್ರಮಾಣವು ಹೆಚ್ಚಾಗಿರುತ್ತದೆ. ಆದರೂ ಸಹ ಹೌಸ್‌ನ ಸರಾಸರಿ ಎಡ್ಜ್ 7% ಗಿಂತಲೂ ಹೆಚ್ಚಿರುವುದರಿಂದ ಪಂತವನ್ನು ಸಾಮಾನ್ಯವಾಗಿ ತಳ್ಳಿಹಾಕಲಾಗುತ್ತದೆ.

ಎಲೆಗಳನ್ನು ಲೆಕ್ಕಮಾಡುವ ಆಟಗಾರನು ಶೂನಲ್ಲಿರುವ ಉಳಿದ ಹತ್ತರ ಎಲೆಗಳ ಲೆಕ್ಕವನ್ನಿಟ್ಟುಕೊಳ್ಳಬಹುದು ಹಾಗೂ ಅವನು ಎಡ್ಜ್ಅನ್ನು ಹೊಂದಿದಾಗ (ಉದಾ. ಉಳಿದ ಎಲೆಗಳಲ್ಲಿ ಮೂರನೇ ಒಂದಕ್ಕಿಂತ ಹೆಚ್ಚು ಹತ್ತಾಗಿದ್ದಾಗ) ಮಾತ್ರ ಇನ್ಶುರೆನ್ಸ್‌ ಪಂತವನ್ನು ಒಡ್ಡಲು ಇದನ್ನು ಬಳಸಿಕೊಳ್ಳಬಹುದು. ಇದಕ್ಕೆ ಹೆಚ್ಚುವರಿಯಾಗಿ, ಬಹು-ಆಟಗಾರರ ಏಕ-ಡೆಕ್‌ ಆಟದಲ್ಲಿ, ಇನ್ಶುರೆನ್ಸ್‌ ಉತ್ತಮ ಪಂತವಾಗುವ ಸಂಭವವಿರುತ್ತದೆ. ಆಟಗಾರನು ಮೇಜಿನ ಮೇಲಿರುವ ಇತರ ಎಲೆಗಳನ್ನು ಸುಮ್ಮನೆ ಗಮನಿಸಿದರೆ ಸಾಕಾಗುತ್ತದೆ. ಆರಂಭಿಕ ಎಲೆಗಳಲ್ಲಿ ಎಲೆಗಳನ್ನು-ಹಾಕುವವನು ಎಕ್ಕವನ್ನು ಹೊಂದಿದ್ದರೆ, ನಂತರ ಡೆಕ್‌ನಲ್ಲಿ ಉಳಿದ 51 ಎಲೆಗಳಲ್ಲಿ 16 ಹತ್ತುಗಳಾಗಿರುತ್ತವೆ. ಕೇವಲ 2 ಆಟಗಾರರು ಮಾತ್ರ ಆಟವಾಡುತ್ತಿದ್ದರೆ ಹಾಗೂ ಅವರಿಬ್ಬರ ಆರಂಭಿಕ ಎರಡು ಎಲೆಗಳು ಹತ್ತಾಗಿಲ್ಲದಿದ್ದರೆ, ಉಳಿದ 47 ಎಲೆಗಳಲ್ಲಿ 16 ಎಲೆಗಳು ಹತ್ತುಗಳಾಗಿರುತ್ತವೆ, ಇದು 3ರಲ್ಲಿನ 1 ಬಾಗಕ್ಕಿಂತ ಉತ್ತಮವಾಗಿರುತ್ತದೆ. ಇದು ಇನ್ಶುರೆನ್ಸ್‌ ಪಂತವನ್ನು ಉತ್ತಮ ಪಂತವಾಗಿ ಮಾಡುತ್ತದೆ.[]

ಆಟಗಾರನು ಬ್ಲ್ಯಾಕ್‌ಜಾಕ್‌ಅನ್ನು ಮತ್ತು ಎಲೆಗಳನ್ನು-ಹಾಕುವವನು ಎಕ್ಕವನ್ನು ಹೊಂದಿದ್ದಾಗ, ಇನ್ಶುರೆನ್ಸ್‌ಅನ್ನು "ಈವನ್ ಮನಿ"ಯಾಗಿ ನೀಡಲಾಗುತ್ತದೆ, ಅಂದರೆ ಆಟಗಾರನ ಬ್ಲ್ಯಾಕ್‌ಜಾಕ್‌ಗೆ ಎಲೆಗಳನ್ನು-ಹಾಕುವವನ ಎಲೆಗಳನ್ನು ಪರಿಶೀಲಿಸುವುದಕ್ಕಿಂತ ಮೊದಲು 1:1 ರಲ್ಲಿ ಪಾವತಿಸಲಾಗುತ್ತದೆ. 'ಈವನ್ ಮನಿ'ಯು ಕೊಂಚ ಭಿನ್ನ ಪಂತವಾಗಿದೆ; ಅದರ ಭಿನ್ನತೆಯೆಂದರೆ ಆವನ್ ಮನಿಯನ್ನು ನೀಡದಿದ್ದಾಗ ಬ್ಲ್ಯಾಕ್‌ಜಾಕ್‌ಅನ್ನು ಖಚಿತಪಡಿಸಲು ಆಟಗಾರನು ಸಾಕಷ್ಟು ಹಣವನ್ನು ಹೊಂದಿರಬೇಕಾಗಿರುತ್ತದೆ. ಈವನ್ ಮನಿಯನ್ನು ಪಡೆಯುವುದು ಸಾಮಾನ್ಯವಾಗಿ ಒಂದು ಕಳಪೆ ಆಯ್ಕೆಯಾಗಿದೆ, ಏಕೆಂದರೆ ಆಟಗಾರನ ಎರಡು ಎಲೆಗಳಲ್ಲಿ ಒಂದು ಎಲೆ ಹತ್ತಾಗಿದ್ದರೆ, ಡೆಕ್‌ನಲ್ಲಿ ಉಳಿಯುವ ಹತ್ತರ ಪ್ರಮಾಣವು ಕಡಿಮೆಯಾಗುತ್ತದೆ.

ಹೋಲ್‌ ಕಾರ್ಡ್ಅನ್ನು ಹಂಚಲಾಗುವ ಕ್ಯಾಸಿನೊಗಳಲ್ಲಿ, ಎಕ್ಕ ಅಥವಾ 10ರ ಮೌಲ್ಯದ ಎಲೆಯೊಂದನ್ನು ಹೊಂದಿರುವ ಎಲೆಗಳನ್ನು-ಹಾಕುವವನು ತಾನು ಬ್ಲ್ಯಾಕ್‌ಜಾಕ್‌ಅನ್ನು ಹೊಂದಿದ್ದಾನೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಲು ಅವನ ಹೋಲ್‌ ಕಾರ್ಡ್‌ನ ಅಂಚನ್ನು ಮೇಜಿನ ಮೇಲಿರುವ ಸಣ್ಣ ಕನ್ನಡಿ ಅಥವಾ ಎಲೆಕ್ಟ್ರಾನಿಕ್ ಗ್ರಾಹಕದ ಮೇಲೆ ಜಾರಿಸಬಹುದು. ಈ ಅಭ್ಯಾಸವು ಹೋಲ್ ಕಾರ್ಡ್ಅನ್ನು ಅಜಾಗರೂಕತೆಯಿಂದ ಬಹಿರಂಗ ಪಡಿಸುವುದನ್ನು ಕಡಿಮೆಮಾಡುತ್ತದೆ. ಇದು ಸೂಕ್ಷ್ಮದೃಷ್ಟಿಯ-ಕಣ್ಣುಗಳ ಆಟಗಾರರಿಗೆ ಗಮನಾರ್ಹ ಪ್ರಯೋಜನವನ್ನು ನೀಡಬಹುದು.

ಉಪ ಪಂತಗಳು

[ಬದಲಾಯಿಸಿ]

ಕೆಲವು ಕ್ಯಾಸಿನೊಗಳು ಅವುಗಳ ಬ್ಲ್ಯಾಕ್‌ಜಾಕ್‌ ಆಟಗಳೊಂದಿಗೆ ಉಪ ಪಂತವನ್ನು ಒದಗಿಸುತ್ತವೆ. ಉದಾಹರಣೆಗಳೆಂದರೆ ಮೂರು 7 ಗಳನ್ನು ಹೊಂದುವ ಉಪ-ಪಂತ, ಮೂರು ಎಲೆಯ ಪೋಕರ್-ಶೈಲಿಯ ಪಂತ, ಒಂದು ಜೋಡಿ ಮತ್ತು ಇತರ ಅನೇಕ.[] ಉಪ-ಪಂತಕ್ಕಾಗಿ ಆಟಗಾರನು ಅವನ ಮುಖ್ಯ ಪಂತದೊಂದಿಗೆ ಹೆಚ್ಚುವರಿ ಬಾಜಿಗಳನ್ನು ಕಟ್ಟುತ್ತಾನೆ. ಆಟಗಾರನು ಉಪ-ಪಂತವನ್ನು ಗೆಲ್ಲಬಹುದು ಅಥವಾ ಕಳೆದುಕೊಳ್ಳಬಹುದು, ಇದು ಮುಖ್ಯ ಆಟದ ಫಲಿತಾಂಶದ ಲೆಕ್ಕಕ್ಕೆ ಬರುವುದಿಲ್ಲ. ಉಪ-ಪಂತಗಳ ಹೌಸ್ ಎಡ್ಜ್ ಸಾಮಾನ್ಯವಾಗಿ ಮುಖ್ಯ ಆಟಕ್ಕಿಂತ ಹೆಚ್ಚಾಗಿರುತ್ತದೆ.

ಬ್ಲ್ಯಾಕ್‌ಜಾಕ್‌ ನಿರ್ವಹಣಾ-ಚಾತುರ್ಯ

[ಬದಲಾಯಿಸಿ]

ಮೂಲ ನಿರ್ವಹಣಾ-ಚಾತುರ್ಯ

[ಬದಲಾಯಿಸಿ]

ಏಕ-ಬಾಕ್ಸ್ ಆಟದಲ್ಲಿ ಎಲೆಗಳನ್ನು ಕಲೆಸಿದ ನಂತರ ಸಿಕ್ಕುವ ಮೊದಲ ಎಲೆಗಳ ಆಧಾರದಲ್ಲಿ ಆಟಗಾರನು ಮಾಡುವ ಪ್ರಶಸ್ತ ನಿರ್ಧಾರಗಳ ಸಂಪೂರ್ಣ ಸಮೂಹವನ್ನು ಮೂಲ ನಿರ್ವಹಣಾ-ಚಾತುರ್ಯ ವೆಂದು ಕರೆಯಲಾಗುತ್ತದೆ. ಮೂಲ ನಿರ್ವಹಣಾ-ಚಾತುರ್ಯವು, ಕಳೆದ ಕಲೆಸುವಿಕೆಯಲ್ಲಿ ಯಾವ ಎಲೆಗಳು ಪ್ರಕಟವಾಗಿದ್ದವೆಂಬುದನ್ನು ಮರೆತುಬಿಡುವ ಆಟಗಾರನಿಗೆ ಅತ್ಯುತ್ತಮ ಆಟವಾಗಿರುತ್ತದೆ. ಕೆಳಗಿರುವ ಮೂಲ ನಿರ್ವಹಣಾ-ಚಾತುರ್ಯ ಕೋಷ್ಟಕವು ಈ ಕೆಳಗಿನ ನಿಯಮಗಳ ಸಮೂಹಕ್ಕೆ ಅನ್ವಯಿಸುತ್ತದೆ:

  • 4ರಿಂದ 8 ಡೆಕ್‌ಗಳು
  • ಎಲೆಗಳನ್ನು-ಹಾಕುವವನು ಸಾಫ್ಟ್ 17 ರಲ್ಲಿ ಸ್ಟ್ಯಾಂಡ್ ಆಗುವುದು
  • ಯಾವುದೇ 2 ಎಲೆ‌ಗಳನ್ನು ಡಬಲ್ ಮಾಡುವುದು
  • ಪ್ರತ್ಯೇಕಿಸಿದ ನಂತರ ಡಬಲ್ ಮಾಡಲು ಅನುವು ನೀಡುವುದು
  • ಎಲೆಗಳನ್ನು-ಹಾಕುವವನು ಬ್ಲ್ಯಾಕ್‌ಜಾಕ್‌ಅನ್ನು ಹೊಂದಿದಾಗ ಮಾತ್ರ ಆರಂಭಿಕ ಪಂತವು ಕಳೆದುಹೋಗುತ್ತದೆ
  • ತಡವಾದ ಸರೆಂಡರ್‌
ನಿಮ್ಮ ಎಲೆಗಳು ಎಲೆಗಳನ್ನು-ಹಾಕುವವನ ಮೇಲ್ಮುಖವಾಗಿರುವ ಎಲೆ‌
2 3 4 5 6 7 8 9 10 A
ಒಟ್ಟು ಮೊತ್ತ (ಜೋಡಿಗಳನ್ನು ಹೊರತುಪಡಿಸಿ)
17-20 s s s s s s s s s s
16 s s s s s H H SU SU SU
15 s s s s s H H H SU H
13-14 s s s s s H H H H H

! 12 | style="background:lime; color:black" | H | style="background:lime; color:black" | H | style="background:red; color:black" | S | style="background:red; color:black" | S | style="background:red; color:black" | S | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H |- ! 11 | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:lime; color:black" | H |- ! 10 | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:lime; color:black" | H | style="background:lime; color:black" | H |- ! 9 | style="background:lime; color:black" | H | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H |- ! 5-8 | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H |- ! COLSPAN="11" | Soft totals |- | | 2 | 3 | 4 | 5 | 6 | 7 | 8. | 9 10 A |- ! A,8 A,9 | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S |- ! A,7 | style="background:red; color:black" | S | style="background:cyan; color:black" | Ds | style="background:cyan; color:black" | Ds | style="background:cyan; color:black" | Ds | style="background:cyan; color:black" | Ds | style="background:red; color:black" | S | style="background:red; color:black" | S | style="background:lime; color:black" | H | style="background:lime; color:black" | H | style="background:lime; color:black" | H |- ! A,6 | style="background:lime; color:black" | H | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H |- ! A,4 A,5 | style="background:lime; color:black" | H | style="background:lime; color:black" | H | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H |- ! A,2 A,3 | style="background:lime; color:black" | H | style="background:lime; color:black" | H | style="background:lime; color:black" | H | style="background:cyan; color:black" | Dh | style="background:cyan; color:black" | Dh | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H |- ! COLSPAN="11" | Pairs |- | | 2 | 3 | 4 | 5 | 6 | 7 | 8. | 9 10 A |- ! A,A | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP |- ! 10,10 | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S | style="background:red; color:black" | S |- ! 9,9 | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:red; color:black" | S | style="background:yellow; color:black" | SP | style="background:yellow; color:black" | SP | style="background:red; color:black" | S | style="background:red; color:black" | S |- ! −2.8% | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP |- ! [7] ^ [6] | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H |- ! 2/6 | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H |- ! (5.2%) | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:cyan; color:black" | Dh | style="background:lime; color:black" | H | style="background:lime; color:black" | H |- ! −4.4% | style="background:lime; color:black" | H | style="background:lime; color:black" | H | style="background:lime; color:black" | H | style="background:yellow; color:black" | SP | style="background:yellow; color:black" | SP | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H |- ! 2,2 3,3 | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:yellow; color:black" | SP | style="background:lime; color:black" | H | style="background:lime; color:black" | H | style="background:lime; color:black" | H | style="background:lime; color:black" | H |}

ಕೀ:

S = ಸ್ಟ್ಯಾಂಡ್
H = ಹಿಟ್‌
Dh = ಡಬಲ್ (ಅನುಮತಿ ಇಲ್ಲದಿದ್ದರೆ, ಹಿಟ್‌)
Ds = ಡಬಲ್ (ಅನುಮತಿ ಇಲ್ಲದಿದ್ದರೆ, ಸ್ಟ್ಯಾಂಡ್)
SP = ಸ್ಪ್ಲಿಟ್
SU = ಸರೆಂಡರ್‌ (ಅನುಮತಿ ಇಲ್ಲದಿದ್ದರೆ, ಹಿಟ್‌, ಮೊದಲ ಎರಡು ಎಲೆಗಳಲ್ಲದಿದ್ದರೆ 16v10 ನಲ್ಲಿ ಸ್ಟ್ಯಾಂಡ್ ಆಗುವುದನ್ನು ಹೊರತುಪಡಿಸಿ.)

ಹೆಚ್ಚಿನ ಲಾಸ್ ವೆಗಾಸ್ ಸ್ಟ್ರಿಪ್ ಕ್ಯಾಸಿನೊಗಳಲ್ಲಿ, ಸಾಫ್ಟ್ 17 ರಲ್ಲಿ ಹಿಟ್ ಮಾಡಲಾಗುತ್ತದೆ. ಈ ನಿಯಮದ ಬದಲಾವಣೆಗೆ ಸ್ವಲ್ಪ ಪ್ರಮಾಣದಲ್ಲಿ ಮಾರ್ಪಡಿಸಲಾದ ಮೂಲ ನಿರ್ವಹಣಾ-ಚಾತುರ್ಯದ ಕೋಷ್ಟಕವು ಬೇಕಾಗುತ್ತದೆ: ಎಲೆಗಳನ್ನು-ಹಾಕುವವನ ಮೇಲ್ಮುಖವಾಗಿರುವ ಎಲೆಯು ಎಕ್ಕವಾಗಿದ್ದಾಗ 11 ರಲ್ಲಿ ಡಬಲ್ ಮಾಡುವುದು, ಎಲೆಗಳನ್ನು-ಹಾಕುವವನು 2ಅನ್ನು ಹೊಂದಿದ್ದಾಗ A/7 ರಲ್ಲಿ ಡಬಲ್ ಮಾಡುವುದು ಹಾಗೂ 6 ಮತ್ತು ಈ ಕೆಳಗಿನವುಗಳನ್ನು ಸರೆಂಡರ್‌ ಮಾಡಿದಾಗ A/8 ರಲ್ಲಿ ಡಬಲ್ ಮಾಡುವುದು: 15 ವರ್ಸಸ್ A, 17 ವರ್ಸಸ್ A ಮತ್ತು 8/8 ವರ್ಸಸ್ A. ಲಾಸ್ ವೆಗಾಸ್‌ನ ಹೊರಗಿನ ಹೆಚ್ಚಿನ ಕ್ಯಾಸಿನೊಗಳಲ್ಲಿ ಸಾಫ್ಟ್ 17 ರಲ್ಲಿಯೂ ಸ್ಟ್ಯಾಂಡ್ ಆಗಲಾಗುತ್ತದೆ.

ಎಲೆಗಳನ್ನು ಎಣಿಸುವುದು

[ಬದಲಾಯಿಸಿ]

ಬ್ಲ್ಯಾಕ್‌ಜಾಕ್‌ ಆಟದಲ್ಲಿ, ಎಲೆಗಳನ್ನು-ಹಾಕುವವನು ಅವನಿಗೆ ಮತ್ತು ಆಟಗಾರರಿಗೆ ಹಂಚಲಾದ ಎಲೆಗಳನ್ನು ಕ್ರಮಕ್ರಮವಾಗಿ ಪ್ರಕಟಪಡಿಸುತ್ತಾನೆ. ಪ್ರಕಟಪಡಿಸಿದ ಎಲೆಗಳನ್ನು ಗಮನಕೊಟ್ಟು ವೀಕ್ಷಿಸುವುದರಿಂದ ಆಟಗಾರನು ಹಂಚಲು ಉಳಿದಿರುವ ಎಲೆಗಳ ಬಗ್ಗೆ ನಿರ್ಣಯ ಮಾಡಬಹುದು ಹಾಗೂ ಈ ನಿರ್ಣಯಗಳನ್ನು ಈ ಕೆಳಗಿನ ಎರಡು ವಿಧಾನಗಳಲ್ಲಿ ಯಾವುದಾರೊಂದರಲ್ಲಿ ಬಳಸಬಹುದು:

  • ಆಟಗಾರನು ಅನುಕೂಲತೆಯನ್ನು ಹೊಂದಿದ್ದಾಗ ಹೆಚ್ಚಿನ ಪಂತಗಳನ್ನು ಒಡ್ಡಬಹುದು. ಉದಾಹರಣೆಗಾಗಿ, ಆಟಗಾರನು ಡೆಕ್‌ನಲ್ಲಿ ಅನೇಕ ಎಕ್ಕಗಳು ಮತ್ತು ಹತ್ತುಗಳು ಉಳಿದಿದ್ದರೆ ಬ್ಲ್ಯಾಕ್‌ಜಾಕ್‌ಅನ್ನು ಹಿಟ್ ಮಾಡುವ ನಿರೀಕ್ಷೆಯಿಂದ ಆರಂಭಿಕ ಪಂತವನ್ನು ಹೆಚ್ಚಿಸಬಹುದು.
  • ಆಟಗಾರನು ಆತನ ಹಂಚಲಾಗದ ಎಲೆಗಳ ಆಧಾರದಲ್ಲಿ ಮೂಲ ನಿರ್ವಹಣಾ-ಚಾತುರ್ಯವನ್ನು ಬಿಟ್ಟು ಬೇರೆ ವಿಧಾನವನ್ನು ಬಳಸಬಹುದು. ಉದಾಹರಣೆಗಾಗಿ, ಡೆಕ್‌ನಲ್ಲಿ ಅನೇಕ ಹತ್ತುಗಳು ಉಳಿದಿರುವಾಗ ಆಟಗಾರನು ಹೆಚ್ಚು ಸ್ಥಿತಿಗಳಲ್ಲಿ ಡಬಲ್ ಡೌನ್‌ ಮಾಡಬಹುದು ಏಕೆಂದರೆ ಉತ್ತಮವಾದ ಎಲೆಗಳನ್ನು ಪಡೆಯುವ ಅವಕಾಶವಿರುತ್ತದೆ.

ಎಲೆಗಳನ್ನು ಎಣಿಸುವ ಒಂದು ವಿಶಿಷ್ಟ ವ್ಯವಸ್ಥೆಯು ಪ್ರತಿಯೊಂದು ಎಲೆಗೆ ಒಂದು ಅಂಕವನ್ನು ನೀಡುತ್ತದೆ (ಉದಾ. 2-6 ಕ್ಕೆ 1 ಅಂಕ, 7-9 ಕ್ಕೆ 0 ಅಂಕ ಮತ್ತು 10-A ಕ್ಕೆ -1 ಅಂಕ). ಎಲೆಯನ್ನು ಪ್ರಕಟಪಡಿಸಿದಾಗ ಆ ಎಲೆಯ ಅಂಕವನ್ನು ಅವನಲ್ಲಿರುವ ಒಟ್ಟು ಮೊತ್ತಕ್ಕೆ ಸೇರಿಸಲಾಗುತ್ತದೆ. ಅದು ಆತನು ತಿಳಿದ ಮೇಜಿನ ಪ್ರಕಾರ ಪಂತವನ್ನು ಒಡ್ಡಲು ಮತ್ತು ನಿರ್ಧಾರಗಳನ್ನು ಮಾಡಲು ಬಳಸಲ್ಪಡುತ್ತದೆ. "ಸಮತೋಲಿತ" ಎಣಿಸುವ ವ್ಯವಸ್ಥೆಗಳಲ್ಲಿ ಆರಂಭದಲ್ಲಿ-ಕಲೆಸಿದ ಡೆಕ್‌ಗೆ ಎಣಿಕೆಯು 0 ಯಲ್ಲಿ ಆರಂಭವಾಗುತ್ತದೆ. ಅಸಮತೋಲಿಕ ಎಣಿಕೆಗಳು ಹೆಚ್ಚಾಗಿ ಡೆಕ್‌ಗಳ ಒಟ್ಟು ಸಂಖ್ಯೆಯನ್ನು ಪ್ರತಿಬಿಂಬಿಸುವ ಸಂಖ್ಯೆಯಿಂದ ಆರಂಭವಾಗುತ್ತವೆ.

ಗೊತ್ತುಪಡಿಸಿದ ಕ್ಯಾಸಿನೊದಲ್ಲಿನ ನಿರ್ದಿಷ್ಟ ಬ್ಲ್ಯಾಕ್‌ಜಾಕ್‌ ನಿಯಮಗಳ ಆಧಾರದಲ್ಲಿ, ಮೂಲ ನಿರ್ವಹಣಾ-ಚಾತುರ್ಯವು ಹೌಸ್ ಅಡ್ವಾಂಟೇಜ್ಅನ್ನು 1%ಗಿಂತಲೂ ಕಡಿಮೆ ಮಾಡುತ್ತದೆ.[] ಸರಿಯಾಗಿ ಮಾಡುವ ಎಲೆಗಳ-ಎಣಿಕೆಯು ಆಟಗಾರ ನಿಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ, ಹೌಸ್ ಅಡ್ವಾಂಟೇಜ್ 0ರಿಂದ 2%ನಷ್ಟಿರುತ್ತದೆ.[]

ಎಲೆಯನ್ನು ಎಣಿಸುವುದು ಮಾನಸಿಕವಾಗಿ ನ್ಯಾಯಬದ್ಧವಾಗಿದ್ದು, ಇದನ್ನು ವಂಚನೆಯೆಂದು ಪರಿಗಣಿಸಲಾಗುವುದಿಲ್ಲ.[] ಹೆಚ್ಚಿನ ಕ್ಯಾಸಿನೊಗಳು ಕಾರಣವಿದ್ದು ಅಥವಾ ಇಲ್ಲದೆ ಆಟಗಾರರನ್ನು ನಿರ್ಬಂಧಿಸುವ ಹಕ್ಕನ್ನು ಹೊಂದಿರುತ್ತವೆ. ಆಟಗಾರನನ್ನು ನಿಷೇಧಿಸಲು ಸಾಧಾರಣವಾಗಿ ಕಂಡುಬರುವ ಕಾರಣವೆಂದರೆ ಎಲೆಗಳ ಎಣಿಕೆ. ಸಾಮಾನ್ಯವಾಗಿ ಕ್ಯಾಸಿನೊ ಆಟಗಾರನಿಗೆ ಈ ಕ್ಯಾಸಿನೊದಲ್ಲಿ ಬ್ಲ್ಯಾಕ್‌ಜಾಕ್‌ಅನ್ನು ಆಡಲು ಅವಕಾಶವಿಲ್ಲವೆಂದು ಸೂಚಿಸುತ್ತದೆ ಹಾಗೂ ಅವನು ಅಲ್ಲಿಂದ ನಿಷೇಧಿಸಲ್ಪಡಬಹುದು. ಆಟಗಾರರು ಎಲೆಗಳನ್ನು ಲೆಕ್ಕಮಾಡುವ ಬಗ್ಗೆ ಸೂಚನೆ ಸಿಗದಂತೆ ಎಚ್ಚರಿಕೆವಹಿಸಬೇಕು ಹಾಗೂ ಎಲೆಕ್ಟ್ರಾನಿಕ್ ಅಥವಾ ಇತರ ಎಣಿಸುವ ಸಾಧನಗಳನ್ನು ಬಳಸುವುದು ಸಾಮಾನ್ಯವಾಗಿ ನಿಯಮಬಾಹಿರವಾಗಿರುತ್ತದೆ.

ಇದನ್ನೂ ಗಮನಿಸಿ: MIT ಬ್ಲ್ಯಾಕ್‌ಜಾಕ್‌ ಟೀಮ್

ವಿನ್ಯಾಸ-ಆಧಾರಿತ ನಿರ್ವಹಣಾ-ಚಾತುರ್ಯ

[ಬದಲಾಯಿಸಿ]

ಮೂಲ ನಿರ್ವಹಣಾ-ಚಾತುರ್ಯವು ಆಟಗಾರನ ಒಟ್ಟು ಮೊತ್ತ ಮತ್ತು ಎಲೆಗಳನ್ನು-ಹಾಕುವವನ ಗೋಚರವಾಗುವ ಎಲೆಯನ್ನು ಆಧರಿಸಿರುತ್ತದೆ. ಆಟಗಾರನ ನಿರ್ಧಾರವು ಮೂಲ ನಿರ್ವಹಣಾ-ಚಾತುರ್ಯದ ಮಾಹಿತಿಯನ್ನು ಮಾತ್ರವಲ್ಲದೆ ಅವನ ಎಲೆಗಳ ವಿನ್ಯಾಸವನ್ನು ಅವಲಂಬಿಸಿರಬಹುದು. ಉದಾಹರಣೆಗಾಗಿ, ಆಟಗಾರನು ಎಲೆಗಳನ್ನು-ಹಾಕುವವನ 4ರ ವಿರುದ್ಧ 12ಅನ್ನು ಹೊಂದಿರುವಾಗ ಸಾಮಾನ್ಯವಾಗಿ ಸ್ಟ್ಯಾಂಡ್ ಆಗಬೇಕು. ಆದರೆ ಏಕ-ಡೆಕ್ ಆಟದಲ್ಲಿ, ಆಟಗಾರನು ಅವನ 12ರಲ್ಲಿ 10 ಮತ್ತು 2 ಇದ್ದರೆ ಹಿಟ್ ಮಾಡಬೇಕು; ಇದು ಏಕೆಂದರೆ ಆಟಗಾರನು ಹಿಟ್ ಮಾಡುವ ಮೂಲಕ 10ಅನ್ನು ಹೊರತುಪಡಿಸಿ ಬೇರೆ ಯಾವುದೇ ಎಲೆಯನ್ನು ಪಡೆಯಲು ಬಯಸುತ್ತಾನೆ ಹಾಗೂ ಆಟಗಾರನಲ್ಲಿರುವ 10, ಆಟಗಾರನಿಗೆ ಅಥವಾ ಎಲೆಗಳನ್ನು-ಹಾಕುವವನಿಗೆ ಬಸ್ಟ್ ಮಾಡಲು ಲಭ್ಯಯಿರುವ ಒಂದು ಸೂಕ್ತ ಎಲೆಯಾಗಿರುತ್ತದೆ.[೧೦]

ಮೂಲ ಮತ್ತು ವಿನ್ಯಾಸ-ಆಧಾರಿತ ನಿರ್ವಹಣಾ-ಚಾತುರ್ಯವು ಬೇರೆ ಬೇರೆ ಪರಿಣಾಮಗಳನ್ನು ಉಂಟುಮಾಡುವ ಸಂದರ್ಭಗಳಲ್ಲಿ, ಎರಡು ನಿರ್ಧಾರಗಳ ನಡುವಿನ ನಿರೀಕ್ಷಿತ ಮೌಲ್ಯದ ವ್ಯತ್ಯಾಸವು ತುಂಬಾ ಕಡಿಮೆಯಾಗಿರುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಬ್ಲ್ಯಾಕ್‌ಜಾಕ್‌ ಆಟದಲ್ಲಿ ಬಳಸುವ ಡೆಕ್‌ಗಳ ಸಂಖ್ಯೆಯು ಹೆಚ್ಚಾದಂತೆ, ವಿನ್ಯಾಸವು ಸರಿಯಾದ ನಿರ್ವಹಣಾ-ಚಾತುರ್ಯವನ್ನು ನಿರ್ಧರಿಸುವ ಸಂದರ್ಭಗಳ ಸಂಖ್ಯೆ ಮತ್ತು ವಿನ್ಯಾಸ-ಆಧಾರಿತ ನಿರ್ವಹಣಾ-ಚಾತುರ್ಯವನ್ನು ಬಳಸಿಕೊಂಡು ಆಗುವ ಹೌಸ್ ಎಡ್ಜ್ ಸುಧಾರಣೆಗಳೆರಡೂ ಕುಸಿಯುತ್ತವೆ. ವಿನ್ಯಾಸ-ಆಧಾರಿತ ನಿರ್ವಹಣಾ-ಚಾತುರ್ಯದ ಬಳಕೆಯು ಆರು-ಡೆಕ್‌ ಆಟದಲ್ಲಿ ಹೌಸ್ ಎಡ್ಜ್ಅನ್ನು 0.0031%ನಷ್ಟು ಕಡಿಮೆ ಮಾಡುತ್ತದೆ. ಇದು ಏಕ-ಡೆಕ್‌ ಆಟದಲ್ಲಿ ಉಂಟುಮಾಡುವ ಸುಧಾರಣೆಯ (0.0387%) ಹತ್ತನೆ ಒಂದಕ್ಕಿಂತ ಕಡಿಮೆಯಾಗಿದೆ.[೧೧]

ಕಲೆಸುವುದರ ಜಾಡುಹಿಡಿಯುವುದು ಮತ್ತು ಇತರ ಅನುಕೂಲಗಳು - ಆಡುವ ತಂತ್ರಗಳು

[ಬದಲಾಯಿಸಿ]

ಎಲೆಯನ್ನು-ಎಣಿಸುವುದನ್ನು ಹೊರತು ಪಡಿಸಿ ಇತರ ಅನೇಕ ತಂತ್ರಗಳೂ ಸಹ ಕ್ಯಾಸಿನೊ ಬ್ಲ್ಯಾಕ್‌ಜಾಕ್‌ನಲ್ಲಿ ಆಟಗಾರನಿಗೆ ಅನುಕೂಲವನ್ನು ಉಂಟುಮಾಡುತ್ತವೆ. ಅಂತಹ ತಂತ್ರಗಳೆಲ್ಲವೂ ಆಟಗಾರನ ಮತ್ತು ಕ್ಯಾಸಿನೊದ ಎಲೆಗಳ ಮೌಲ್ಯವನ್ನು ಆಧರಿಸಿರುತ್ತವೆ, ಇದನ್ನು ಮೊದಲು ಎಡ್ವರ್ಡ್ O. ಥೋರ್ಪ್ ನಿರೂಪಿಸಿದನು.[೧೨] ಮುಖ್ಯವಾಗಿ ಬಹು-ಡೆಕ್‌ ಆಟಗಳಲ್ಲಿ ಅನ್ವಯವಾಗುವ ಒಂದು ತಂತ್ರವೆಂದರೆ, ಶೂವಿನ ಆಟದ ಸಂದರ್ಭದಲ್ಲಿ ಎಲೆಗಳ ಗುಂಪುಗಳ (ಸ್ಲಗ್‌ಗಳು, ಕ್ಲಂಪ್‌ಗಳು, ಪ್ಯಾಕ್‌ಗಳೆಂದೂ ಕರೆಯುತ್ತಾರೆ) ಜಾಡುಹಿಡಿಯವುದು. ಅವುಗಳನ್ನು ಕಲೆಸುವ ಮೂಲಕ ಅನುಸರಿಸುವುದು ಹಾಗೂ ಆ ಎಲೆಗಳು ಹೊಸ ಶೂನಿಂದ ಆಟಕ್ಕೆ ಬರುವಾಗ ಅದಕ್ಕೆ ಅನುಸಾರವಾಗಿ ಆಡುವುದು ಮತ್ತು ಪಂತ ಒಡ್ಡುವುದು. ಈ ತಂತ್ರವು ನೇರವಾದ ಎಲೆಗಳ-ಎಣಿಕೆಗಿಂತ ತುಂಬಾ ಕಷ್ಟಕರವಾದುದು ಹಾಗೂ ಇದಕ್ಕೆ ಹೆಚ್ಚಿನ ನೋಟದ ಮತ್ತು ದೃಷ್ಟಿಕೋನವನ್ನು ಅಂದಾಜಿಸುವ ಸಾಮರ್ಥ್ಯವಿರಬೇಕಾಗುತ್ತದೆ. ಇದು ಆಟಗಾರರ ಚಟುವಟಿಕೆಗಳ ಮತ್ತು ಎಣಿಕೆಯ ಮೇಲ್ವಿಚಾರಣೆ ನಡೆಸುವ ಕ್ಯಾಸಿನೊ ಕಾರ್ಯಕರ್ತರನ್ನು ಮೋಸಹೋಗಿಸುವ ಹೆಚ್ಚುವರಿ ಪ್ರಯೋಜನವನ್ನು ಹೊಂದಿರುತ್ತದೆ ಏಕೆಂದರೆ ಕಲೆಸುವುದರ ಜಾಡುಹಿಡಿಯುವವನು ನೇರವಾಗಿ ಎಲೆಗಳನ್ನು ಎಣಿಸುವವನಿಗೆ ವಿರುದ್ಧವಾಗಿ ಪಂತ ಒಡ್ಡಬಹುದು ಮತ್ತು/ಅಥವಾ ಆಡಬಹುದು.[೧೩]

ಬ್ಲ್ಯಾಕ್‌ಜಾಕ್‌ ಫೋರಮ್ ನಿಯತಕಾಲಿಕದಲ್ಲಿನ ಅರ್ನಾಲ್ಡ್ ಸ್ನೈಡರ್‌ನ ಬರಹಗಳು ಕಲೆಸುವುದರ ಜಾಡುಹಿಡಿಯುವುದನ್ನು ಸಾಮಾನ್ಯ ಜನರಿಗೆ ತಿಳಿಸಿಕೊಟ್ಟವು. ಅವನ ಪುಸ್ತಕ ದಿ ಶಫಲ್ ಟ್ರ್ಯಾಕರ್ಸ್ ಕುಕ್‌ಬುಕ್ , ಕಲೆಸುವುದರ ಜಾಡುಹಿಡಿಯುವುದರಿಂದ ಲಭ್ಯವಾಗುವ ಆಟಗಾರರ ಎಡ್ಜ್ಅನ್ನು ಜಾಡುಹಿಡಿದ-ಸ್ಲಗ್‌ನ ನಿಜವಾದ ಗಾತ್ರವನ್ನು ಆಧರಿಸಿ ಕರಾರುವಾಕ್ಕಾಗಿ ವಿಶ್ಲೇಷಿಸಿತು. ಅನುಕೂಲಕರವಾದ ಎಲೆಗಳ ಕ್ಲಂಪ್‌ಗಳ ಜಾಡುಹಿಡಿದು, ಅವುಗಳನ್ನು ಆಟದಲ್ಲಿ ಬಳಸಿಕೊಳ್ಳುವ ಹಾಗೂ ಅನುಕೂಲಕರವಾಗಿಲ್ಲದ ಎಲೆಗಳ ಕ್ಲಂಪ್‌ಗಳ ಜಾಡುಹಿಡಿದು, ಅವುಗಳನ್ನು ಆಟದಲ್ಲಿ ತೊಡಗಿಸಿಕೊಳ್ಳುವ ಕಲೆಸುವುದರ-ಜಾಡುಹಿಡಿಯುವ ವಿಧಾನವೊಂದನ್ನು ಜೆರ್ರಿ L. ಪ್ಯಾಟರ್ಸನ್ ಸಹ ಅಭಿವೃದ್ಧಿಪಡಿಸಿದನು ಮತ್ತು ಪ್ರಕಟಿಸಿದನು. [೧೪][೧೫][೧೬] ಬ್ಲ್ಯಾಕ್‌ಜಾಕ್‌ನಲ್ಲಿ ಆಟಗಾರನು ಅನುಕೂಲವನ್ನು ಪಡೆಯುವ ಇತರ ನಿಮಯಬದ್ಧ ವಿಧಾನಗಳು ಹೋಲ್‌ ಕಾರ್ಡ್ ಅಥವಾ ಹಂಚಲ್ಪಡುವ ಮುಂದಿನ ಎಲೆಯ ಬಗ್ಗೆ ಮಾಹಿತಿ ಪಡೆಯುವ ಹಲವಾರು ವಿಧಾನಗಳನ್ನು ಒಳಗೊಳ್ಳುತ್ತವೆ. ಅಲ್ಲದೆ, ಮ್ಯಾಚ್-ಪ್ಲೇ ಕೂಪನ್‌ಗಳು ಕುಶಲ ಮೂಲ ನಿರ್ವಹಣಾ-ಚಾತುರ್ಯದ ಬ್ಲ್ಯಾಕ್‌ಜಾಕ್‌ ಆಟಗಾರನಿಗೆ ಒಂದು ಎಡ್ಜ್ಅನ್ನು ನೀಡುತ್ತವೆ. ಅಂತಿಮವಾಗಿ, ಒಂದು ಬ್ಲ್ಯಾಕ್‌ಜಾಕ್‌ಗೆ 2:1 ನೀಡುವಂತಹ ವಿಶೇಷ ಬಡತಿಯು ಆಟಗಾರನಿಗೆ ತಾತ್ಕಾಲಿಕ ಅನುಕೂಲವನ್ನು ಒದಗಿಸುತ್ತವೆ.

ವ್ಯತ್ಯಯಗಳು

[ಬದಲಾಯಿಸಿ]

ಪಾಂಟೂನ್ ಎಂಬುದು ಗಮನಾರ್ಹ ನಿಯಮ ಮತ್ತು ನಿರ್ವಹಣಾ-ಚಾತುರ್ಯದ ವ್ಯತ್ಯಾಸಗಳನ್ನು ಹೊಂದಿರುವ ಬ್ಲ್ಯಾಕ್‌ಜಾಕ್‌ನ ಒಂದು ಇಂಗ್ಲಿಷ್ ಬದಲಾವಣೆಯಾಗಿದೆ. ಆದರೆ ಆಸ್ಟ್ರೇಲಿಯಾ ಮತ್ತು ಮಲೇಷಿಯಾದಲ್ಲಿ ಪಾಂಟೂನ್, ಹೋಲ್‌ ಕಾರ್ಡ್ ಇಲ್ಲದೆ ಆಡುವ ಸ್ಪ್ಯಾನಿಶ್ 21 ಎಂಬ ಅಮೆರಿಕಾದ ಆಟದ ಒಂದು ಅನುಮತಿಯಿಲ್ಲದ ರೂಪಾಂತರವಾಗಿದೆ; ಹೆಸರನ್ನು ಹೊರತುಪಡಿಸಿ ಇದು ಇಂಗ್ಲಿಷ್ ಪಾಂಟೂನ್‌ಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.

ಸ್ಪ್ಯಾನಿಶ್ 21 ಆಟಗಾರರಿಗೆ ಕಟ್ಟುನಿಟ್ಟಿಲ್ಲದ ಅನೇಕ ಬ್ಲ್ಯಾಕ್‌ಜಾಕ್‌ ನಿಮಯಗಳನ್ನು ಒದಗಿಸುತ್ತದೆ, ಅವುಗಳೆಂದರೆ - ಯಾವುದೇ ಸಂಖ್ಯೆಯ ಎಲೆಗಳನ್ನು ಡಬಲ್ ಡೌನ್ ಮಾಡಬಹುದು (ಹೌಸ್‌ಗೆ ಕೇವಲ ಒಂದು ಪಂತವನ್ನು ಮಾತ್ರ 'ರಿಸ್ಕ್' ಅಥವಾ ಸರೆಂಡರ್‌ ಮಾಡುವ ಆಯ್ಕೆಯೊಂದಿಗೆ), ಐದು ಅಥವಾ ಅದಕ್ಕಿಂತ ಹೆಚ್ಚು ಎಲೆಗಳು 21 ಗಳು, 6-7-8 21 ಗಳು, 7-7-7 21 ಗಳಿಗೆ ಬೋನಸ್‌ಗಳನ್ನು ಪಾವತಿಸಬಹುದು, ಲೇಟ್ ಸರೆಂಡರ್‌ ಮಾಡಬಹುದು ಹಾಗೂ ಡೆಕ್‌ನಲ್ಲಿ ಯಾವುದೇ 10ರ ಎಲೆಗಳಿಲ್ಲದೆ (ಜ್ಯಾಕ್‌, ರಾಣಿ ಮತ್ತು ರಾಜ ಇದ್ದರೂ) ಆಟಗಾರನ ಬ್ಲ್ಯಾಕ್‌ಜಾಕ್‌ಗಳು ಮತ್ತು 21ರ ಎಲೆಗಳು ಯಾವಾಗಲೂ ಜಯಗಳಿಸುತ್ತವೆ.

21ನೇ ಶತಮಾನದ ಬ್ಲ್ಯಾಕ್‌ಜಾಕ್‌ ("ವೆಗಾಸ್ ಶೈಲಿಯ" ಬ್ಲ್ಯಾಕ್‌ಜಾಕ್ ಎಂದೂ ಕರೆಯುತ್ತಾರೆ‌) ಸಾಮಾನ್ಯವಾಗಿ ಕ್ಯಾಲಿಫೋರ್ನಿಯಾದ ಹೆಚ್ಚಿನ ಎಲೆಗಳನ್ನು-ಆಡುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ರೀತಿಯ ಆಟದಲ್ಲಿ ಆಟಗಾರನು ಬಸ್ಟ್ ಆದಾಗ ಯಾವಾಗಲೂ ನಷ್ಟವಾಗುವುದಿಲ್ಲ; ಎಲೆಗಳನ್ನು-ಹಾಕುವವನು ಅತಿಹೆಚ್ಚಿನ ಮೊತ್ತದೊಂದಿಗೆ ಬಸ್ಟ್ ಆದರೆ ಆಟಗಾರನು ಪುಶ್ ಮಾಡಬಹುದಾದ ಕೆಲವು ಸಂದರ್ಭಗಳಿರುತ್ತವೆ.

ಕೆಲವು ನಿಯಮದ ಬದಲಾವಣೆಗಳನ್ನು ಹೊಸ ಭಿನ್ನ ಆಟಗಳನ್ನು ರಚಿಸುವುದಕ್ಕಾಗಿ ಮಾಡಲಾಗಿದೆ. ಅನನುಭವಿ ಆಟಗಾರರನ್ನು ಸೆಳೆಯುವ ಈ ಬದಲಾವಣೆಗಳು ನಿಜವಾಗಿ ಈ ಆಟಗಳಲ್ಲಿ ಹೌಸ್ ಎಡ್ಜ್ಅನ್ನು ಹೆಚ್ಚಿಸುತ್ತವೆ. ಡಬಲ್ ಎಕ್ಸ್‌ಪೋಸರ್ ಬ್ಲ್ಯಾಕ್‌ಜಾಕ್‌ ಒಂದು ಭಿನ್ನವಾದ ಆಟವಾಗಿದ್ದು, ಇದರಲ್ಲಿ ಎಲೆಗಳನ್ನು-ಹಾಕುವವನ ಎರಡೂ ಎಲೆಗಳು ಮೇಲ್ಮುಖವಾಗಿರುತ್ತವೆ. ಈ ಆಟವು ಬ್ಲ್ಯಾಕ್‌ಜಾಕ್‌ಗಳ ಮತ್ತು ಆಟಗಾರನು ಸಮವಾಗುವುದನ್ನು ಕಳೆದುಕೊಳ್ಳುವುದರ ಮೇಲೆ ಈವನ್ ಮನಿಯನ್ನು ಪಾವತಿಸುವ ಮೂಲಕ ಹೌಸ್ ಎಡ್ಜ್ಅನ್ನು ಹೆಚ್ಚಿಸುತ್ತದೆ. ಡಬಲ್ ಆಟ್ಯಾಕ್ ಬ್ಲ್ಯಾಕ್‌ಜಾಕ್‌ ಹೆಚ್ಚು ಕಟ್ಟುನಿಟ್ಟಾಗಿಲ್ಲದ ಬ್ಲ್ಯಾಕ್‌ಜಾಕ್‌ ನಿಮಯಗಳನ್ನು ಹೊಂದಿದೆ ಹಾಗೂ ಎಲೆಗಳನ್ನು-ಹಾಕುವವನ ಮೇಲ್ಮುಖವಾಗಿರುವ ಎಲೆಯನ್ನು ನೋಡಿದ ನಂತರ ಪಂತವನ್ನು ಹೆಚ್ಚಿಸುವ ಆಯ್ಕೆಯನ್ನು ಹೊಂದಿದೆ. ಈ ಆಟದಲ್ಲಿ ಸ್ಪ್ಯಾನಿಶ್ ಶೂನಿಂದ ಎಲೆಗಳನ್ನು ಹಂಚಲಾಗುತ್ತದೆ ಹಾಗೂ ಬ್ಲ್ಯಾಕ್‌ಜಾಕ್‌ಗಳು ಮಾತ್ರ ಈವನ್ ಮನಿಯನ್ನು ಪಡೆಯುತ್ತವೆ.

ಈ ಆಟದ ಫ್ರೆಂಚ್‌ ಮತ್ತು ಜರ್ಮನ್‌ನ ಭಿನ್ನ ರೂಪಗಳಾದ "ವಿಂಗ್ಟ್-ಎಟ್-ಉನ್" (ಇಪ್ಪತ್ತೊಂದು) ಮತ್ತು "ಸೈಬ್ಜೆಹ್ನ್ ಉಂಡ್ ವೈರ್" (ಹದಿನೇಳನೇ ಮತ್ತು ನಾಲ್ಕು) ಪ್ರತ್ಯೇಕಿಸುವುದನ್ನು ಒಳಗೊಳ್ಳುವುದಿಲ್ಲ. ಒಂದು ಎಕ್ಕವನ್ನು ಹನ್ನೊಂದಾಗಿ ಮಾತ್ರ ಪರಿಗಣಿಸಲಾಗುತ್ತದೆ. ಆದರೆ ಎರಡು ಎಕ್ಕಗಳನ್ನು ಬ್ಲ್ಯಾಕ್‌ಜಾಕ್‌ ಆಗಿ ಎಣಿಸಲಾಗುತ್ತದೆ. ಈ ಭಿನ್ನತೆಗಳು ಕ್ಯಾಸಿನೊಗಳಲ್ಲಿ ವಿರಳವಾಗಿ ಕಂಡುಬರುತ್ತದೆ, ಆದರೆ ಖಾಸಗಿ ಸರ್ಕಲ್‌ಗಳಲ್ಲಿ ಮತ್ತು ಬರಾಕ್‌ಗಳಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತವೆ.

ಚೈನೀಸ್ ಬ್ಲ್ಯಾಕ್‌ಜಾಕ್‌ಅನ್ನು ಏಷ್ಯಾದಲ್ಲಿ ಹೆಚ್ಚಿನವರು ಆಡುತ್ತಾರೆ. ಇದರಲ್ಲಿ ಎಲೆಗಳ ಪ್ರತ್ಯೇಕಿಸುವಿಕೆ ಇರುವುದಿಲ್ಲ ಮತ್ತು ಇತರ ಎಲೆ ಸಂಯೋಜನೆ ನಿಮಯಗಳಿರುತ್ತವೆ. ಕ್ಯಾಂಪಂಗ್ ಬ್ಲ್ಯಾಕ್‌ಜಾಕ್‌ ಚೈನೀಸ್ ಬ್ಲ್ಯಾಕ್‌ಜಾಕ್‌‍‌ನ ಒಂದು ಮಲೇಷಿಯನ್ ಭಿನ್ನತೆಯಾಗಿದೆ.

ಮತ್ತೊಂದು ಭಿನ್ನತೆಯೆಂದರೆ ಬ್ಲ್ಯಾಕ್‌ಜಾಕ್‌ ಸ್ವಿಚ್, ಇದರಲ್ಲಿ ಒಬ್ಬ ಆಟಗಾರನಿಗೆ ಎಲೆಗಳ ಎರಡು ಗುಂಪುಗಳನ್ನು ಹಂಚಲಾಗುತ್ತದೆ ಹಾಗೂ ಎಲೆಗಳನ್ನು ಅದಲುಬದಲು ಮಾಡಿಕೊಳ್ಳಲು ಅವಕಾಶವಿರುತ್ತದೆ. ಉದಾಹರಣೆಗಾಗಿ, ಆಟಗಾರನಿಗೆ 10-6 ಮತ್ತು 5-10ರ ಎಲೆಗಳನ್ನು ಹಂಚಲಾಗಿದ್ದರೆ, ಅವನು ಎರಡು ಎಲೆಗಳನ್ನು ಅದಲುಬದಲು ಮಾಡಿ 10-10 ಮತ್ತು 6-5 ಆಗಿ ಮಾಡಬಹುದು. ನ್ಯಾಚುರಲ್ ಬ್ಲ್ಯಾಕ್‌ಜಾಕ್‌ಗಳಿಗೆ ಪ್ರಮಾಣಿತ 3:2ರ ಬದಲಿಗೆ 1:1ರಷ್ಟು ಪಾವತಿಸಲಾಗುತ್ತದೆ ಹಾಗೂ ಎಲೆಗಳನ್ನು-ಹಾಕುವವನ 22ಅನ್ನು ಪುಶ್ ಎಂದು ಪರಿಗಣಿಸಲಾಗುತ್ತದೆ.

ಮಲ್ಟಿಪಲ್ ಆಕ್ಷನ್ ಬ್ಲ್ಯಾಕ್‌ಜಾಕ್‌‌ನಲ್ಲಿ ಆಟಗಾರನು ಒಂದು ಎಲೆಗಳ-ಗುಂಪಿನಲ್ಲಿ 2 ಅಥವಾ 3 ಪಂತಗಳನ್ನು ಒಡ್ಡುತ್ತಾನೆ. ಆಟಗಾರನು ಒಡ್ಡಿರುವ ಪ್ರತಿಯೊಂದು ಎಲೆಗಳ-ಗುಂಪಿಗೆ ಎಲೆಗಳನ್ನು-ಹಾಕುವವನು ಎಲೆಗಳನ್ನು ಪಡೆಯುತ್ತಾನೆ. ಇದು ಮುಖ್ಯವಾಗಿ ಒಬ್ಬ ಎಲೆಗಳನ್ನು-ಹಾಕುವವನು ಪ್ರತಿ ಗಂಟೆಗೆ ಆಡುವ ಎಲೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ. ಪ್ರತ್ಯೇಕಿಸುವಿಕೆ ಮತ್ತು ಡಬಲ್ ಮಾಡುವಿಕೆಗೆ ಇದರಲ್ಲಿ ಅವಕಾಶವಿರುತ್ತದೆ.

ಇತ್ತೀಚೆಗೆ ಪೋಕರ್ ಆಟದಷ್ಟು ಜನಪ್ರಿಯತೆಯನ್ನು ಪಡೆದುಕೊಂಡ ಎಲಿಮಿನೇಶನ್ ಬ್ಲ್ಯಾಕ್‌ಜಾಕ್‌ ಒಂದು ಅಭಿಮಾನಿವರ್ಗವನ್ನು ಪಡೆದಿದೆ. ಎಲಿಮಿನೇಶನ್ ಬ್ಲ್ಯಾಕ್‌ಜಾಕ್‌ ಒಂದು ಪಂದ್ಯಾವಳಿ ಸ್ವರೂಪದ ಬ್ಲ್ಯಾಕ್‌ಜಾಕ್‌ ಆಗಿದೆ.

ಹೆಚ್ಚಿನ ಕ್ಯಾಸಿನೊಗಳು ಪ್ರಮಾಣಿತ ಬ್ಲ್ಯಾಕ್‌ಜಾಕ್‌ ಮೇಜುಗಳಲ್ಲಿ ಐಚ್ಛಿಕ ಉಪ-ಪಂತಗಳನ್ನು ಒದಗಿಸುತ್ತವೆ. ಉದಾಹರಣೆಗಾಗಿ, ಸಾಮಾನ್ಯವಾಗಿರುವ ಒಂದು ಉಪ-ಪಂತವೆಂದರೆ "ರಾಯಲ್ ಮ್ಯಾಚ್". ಇದರಲ್ಲಿ ಆಟಗಾರನ ಮೊದಲ ಎರಡೂ ಎಲೆಗಳು ಒಂದೇ ಬಣ್ಣ ಮತ್ತು ಚಿಹ್ನೆಯದಾಗಿದ್ದರೆ ಅವನಿಗೆ ಪಾವತಿಸಲಾಗುತ್ತದೆ ಹಾಗೂ ಅವು ಒಂದೇ ಬಣ್ಣ ಮತ್ತು ಚಿಹ್ನೆಯ ರಾಣಿ ಮತ್ತು ರಾಜನಾಗಿದ್ದರೆ ಅವನು ಹೆಚ್ಚಿನ ಪಾವತಿಯನ್ನು ಪಡೆಯುತ್ತಾನೆ (ಹಾಗೂ ಆಟಗಾರನು ಮತ್ತು ಎಲೆಗಳನ್ನು-ಹಾಕುವವರಿಬ್ಬರೂ ಒಂದೇ ಬಣ್ಣ ಮತ್ತು ಚಿಹ್ನೆಯ ರಾಣಿ-ರಾಜನನ್ನು ಹೊಂದಿದ್ದರೆ ಅವನು ಭಾರಿ ಪಾವತಿಯನ್ನು ಪಡೆಯುತ್ತಾನೆ). ಮತ್ತೊಂದು ಸಾಮಾನ್ಯವಾಗಿ ಕಂಡುಬರುವ ಈ ಆಟದ ಭಿನ್ನ ರೂಪವೆಂದರೆ "21+3", ಇದರಲ್ಲಿ ಆಟಗಾರನ ಎರಡು ಎಲೆಗಳು ಮತ್ತು ಎಲೆಗಳನ್ನು-ಹಾಕುವವನ ಮೇಲ್ಮುಖವಾಗಿರುವ ಎಲೆಯು ಮೂರು-ಎಲೆ ಪೋಕರ್ ಎಲೆಯಾಗುತ್ತದೆ; ಆಟಗಾರರಿಗೆ 9ರಿಂದ 1ರವರೆಗೆ ನೇರವಾಗಿ, ಒಂದೇ ರಂಗಿನ ಎಲೆಗಳಲ್ಲಿ ಅಥವಾ ಮೂರು ರೀತಿಯಲ್ಲಿ ಪಾವತಿಯನ್ನು ಪಡೆಯುತ್ತಾರೆ. ಈ ಉಪ-ಪಂತಗಳು ಚೆನ್ನಾಗಿ ಆಡುವ ಬ್ಲ್ಯಾಕ್‌ಜಾಕ್‌ಗಿಂತ ಕೆಟ್ಟದಾದ ವಿಚಿತ್ರತೆಯನ್ನು ಒದಗಿಸುತ್ತವೆ.

2007ರ ಎಪ್ರಿಲ್‌ನಲ್ಲಿ, "ಮೂರು ಎಲೆಗಳ ಬ್ಲ್ಯಾಕ್‌ಜಾಕ್‌" ಎನ್ನುವ ಬ್ಲ್ಯಾಕ್‌ಜಾಕ್‌ನ ಒಂದು ಹೊಸ ಭಿನ್ನ ರೂಪವು ವಾಷಿಂಗ್ಟನ್ ರಾಜ್ಯದಲ್ಲಿ ಆಡುವ ಅಂಗೀಕಾರವನ್ನು ಪಡೆಯಿತು ಹಾಗೂ ಇದನ್ನು 52 ಎಲೆಗಳ ಒಂದು ಡೆಕ್‌‌ನಿಂದ ಆಡಲಾಗುತ್ತದೆ. ಈ ಆಟದಲ್ಲಿ ಆಟಗಾರರು ಮುಂಗಡವಾಗಿ ಪಣವೊಡ್ಡುತ್ತಾರೆ. ನಂತರ ಆಟಗಾರರು ಮತ್ತು ಎಲೆಗಳನ್ನು-ಹಾಕುವವನು 3 ಎಲೆಗಳನ್ನು ಪಡೆಯುತ್ತಾರೆ. ಆಟಗಾರರು 2 ಅಥವಾ ಎಲ್ಲಾ 3 ಎಲೆಗಳನ್ನು ಬಳಸಿಕೊಂಡು ಉತ್ತಮ ಬ್ಲ್ಯಾಕ್‌ಜಾಕ್‌ (21)ಅನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆಟಗಾರನು ಅವನ ಎಲೆಗಳನ್ನು ಇಷ್ಟಪಟ್ಟರೆ ಮುಂಗಡವಾದ ಪಂತಕ್ಕೆ ಸಮನಾದ ಆಟದ ಪಂತವೊಂದನ್ನು ಒಡ್ಡುತ್ತಾನೆ. ಎಲೆಗಳನ್ನು-ಹಾಕುವವನು 18 ಅಥವಾ ಹೆಚ್ಚಿನದರೊಂದಿಗೆ ಅರ್ಹತೆಯನ್ನು ಪಡೆದಿರಬೇಕು. ಎಲೆಗಳನ್ನು-ಹಾಕುವವನು ಅರ್ಹತೆಯನ್ನು ಪಡೆದು, ಆಟಗಾರನು ಅವನನ್ನು ಸೋಲಿಸಿದರೆ, ಆಟಗಾರನು ಮುಂಗಡವಾದ ಮತ್ತು ಆಟದ ಪಂತಗಳೆರಡಕ್ಕೂ 1-1 ರ ಪಾವತಿಯನ್ನು ಪಡೆಯುತ್ತಾನೆ. ಎಲೆಗಳನ್ನು-ಹಾಕುವವನು ಅರ್ಹತೆಯನ್ನು ಪಡೆಯದಿದ್ದರೆ, ಆಟಗಾರನು ಅವನ ಮುಂಗಡವಾದ ಪಂತಕ್ಕೆ 1-1 ರ ಪಾವತಿಯನ್ನು ಪಡೆಯುತ್ತಾನೆ ಹಾಗೂ ಆಟದ ಪಂತವು ಪುಶ್ ಆಗುತ್ತದೆ. ಇದರಲ್ಲಿ ಹಿಟ್ ಮತ್ತು ಬಸ್ಟ್ ಮಾಡುವುದು ಇರುವುದಿಲ್ಲ. ಮುಂಗಡ ಪಂತವನ್ನು ಒಡ್ಡುವ ಹಾಗೆಯೇ ಆಟಗಾರನು "ಏಸ್ ಪ್ಲಸ್" ಪಂತವನ್ನು ಹಾಕುವ ಆಯ್ಕೆಯನ್ನು ಹೊಂದಿರುತ್ತಾನೆ. ಆಟಗಾರನು ಅವನ 3 ಎಲೆಗಳಲ್ಲಿ ಒಂದು ಎಕ್ಕವನ್ನು ಹೊಂದಿದ್ದರೆ, ಅವನು 1-1ರ ಪಾವತಿಯನ್ನು ಪಡೆಯುತ್ತಾನೆ. ಒಂದು ಎಕ್ಕ ಮತ್ತು ಒಂದು 10 ಅಥವಾ ಫೇಸ್ ಕಾರ್ಡ್ (ರಾಜ, ರಾಣಿ ಅಥವಾ ಗುಲಾಮ ಎಲೆ) 3-1ರ ಪಾವತಿಯನ್ನು ಪಡೆಯುತ್ತದೆ. ಒಂದು ಎಕ್ಕ ಮತ್ತು ಎರಡು ಹತ್ತುಗಳು ಅಥವಾ ಫೇಸ್ ಕಾರ್ಡ್‌ಗಳು 5-1ರಷ್ಟು ಪಡೆಯುತ್ತವೆ. ಎರಡು ಎಕ್ಕಗಳು 15-1ರಷ್ಟು ಪಾವತಿಯನ್ನು ಪಡೆಯುತ್ತವೆ. ಮೂರು ಎಕ್ಕಗಳು 100-1ರಷ್ಟು ಪಾವತಿಯನ್ನು ಪಡೆಯುತ್ತವೆ.

ಬ್ಲ್ಯಾಕ್‌ಜಾಕ್‌ ಹಾಲ್ ಆಫ್ ಫೇಮ್

[ಬದಲಾಯಿಸಿ]

2002ರಲ್ಲಿ ಬ್ಲ್ಯಾಕ್‌ಜಾಕ್‌ ಹಾಲ್ ಆಫ್ ಫೇಮ್‌ನ ಪ್ರವೇಶಕ್ಕಾಗಿ ಶ್ರೇಷ್ಠ ಬ್ಲ್ಯಾಕ್‌ಜಾಕ್‌ ಆಟಗಾರರನ್ನು ನಾಮನಿರ್ದೇಶನಮಾಡಲು ಪ್ರಪಂಚದಾದ್ಯಂತದ ವೃತ್ತಿಪರ ಜೂಜುಗಾರರನ್ನು ಆಮಂತ್ರಿಸಲಾಯಿತು. 2002ರಲ್ಲಿ ಏಳು ಮಂದಿ ಆಯ್ಕೆಯಾದರು, ಆನಂತರ ಪ್ರತಿ ವರ್ಷ ಅನೇಕ ಹೊಸಬರು ಪ್ರವೇಶ ಪಡೆದರು. ಹಾಲ್ ಆಫ್ ಫೇಮ್ ಸ್ಯಾನ್ ಡೈಗೊದ ಬರೋನ ಕ್ಯಾಸಿನೊದಲ್ಲಿದೆ. ಇದರ ಸದಸ್ಯರುಗಳೆಂದರೆ - ಎಡ್ವರ್ಡ್ O. ಥಾರ್ಪ್, 1960ರ ಪುಸ್ತಕ ಬೀಟ್ ದಿ ಡೀಲರ್ ‌ನ ಲೇಖಕ, ಈ ಪುಸ್ತಕವು ಆಟವನ್ನು ಮೂಲ ನಿರ್ವಹಣಾ-ಚಾತುರ್ಯ ಮತ್ತು ಎಲೆಯ ಎಣಿಕೆಯ ಸಂಯೋಜನೆಯೊಂದಿಗೆ ಗೆಲ್ಲಬಹುದೆಂದು ತೋರಿಸಿಕೊಟ್ಟಿತು; ಕೆನ್ ಉಸ್ಟನ್, ಈತನು ತಂಡ ಆಟದ ಅಂಶವನ್ನು ಜನಪ್ರಿಯಗೊಳಿಸಿದನು; ಬ್ಲ್ಯಾಕ್‌ಜಾಕ್‌ ಫೋರಮ್ ವಾಣಿಜ್ಯ ಪತ್ರಿಕೆಯ ಲೇಖಕ ಮತ್ತು ಸಂಪಾದಕ ಅರ್ನಾಲ್ಡ್ ಸ್ನೈಡರ್; "ವೋಂಗಿಂಗ್" ತಂತ್ರದ ಬರಹಗಾರ ಮತ್ತು ಜನಪ್ರಿಯಗೊಳಿಸಿದವನಾದ ಸ್ಟ್ಯಾನ್‌ಫರ್ಡ್ ವೋಂಗ್ ಹಾಗೂ ಇನ್ನೂ ಅನೇಕರು,

ಇವನ್ನೂ ಗಮನಿಸಿ

[ಬದಲಾಯಿಸಿ]
  • ಬ್ಲ್ಯಾಕ್‌ಜಾಕ್‌ ಪದಗಳ ಶಬ್ದಾರ್ಥಗಳು

ಟಿಪ್ಪಣಿಗಳು

[ಬದಲಾಯಿಸಿ]
  1. ಸ್ಕ್ಯಾರ್ನೆಸ್ ನ್ಯೂ ಕಂಪ್ಲೀಟ್ ಗೈಡ್ ಟು ಗ್ಯಾಂಬ್ಲಿಂಗ್ , ಪುಟ 342
  2. Fontbona, Marc (2008). Historia del Juego en España. De la Hispania romana a nuestros días. Barcelona: Flor del Viento Ediciones. p. 89. ISBN 978-84-96495-30-2. Archived from the original on 2009-12-26. Retrieved 2010-08-23.
  3. ೩.೦ ೩.೧ ಟೇಕಿಂಗ್ ಎ ಹಿಟ್‌: ನ್ಯೂ ಬ್ಲ್ಯಾಕ್‌ಜಾಕ್‌ ಆಡ್ಸ್ ಫರ್ದರ್ ಟಿಲ್ಟ್ ಅಡ್ವಾಂಟೇಜ್ ಟುವರ್ಡ್ ದಿ ಹೌಸ್ - ಜೆಫ್ ಹ್ಯಾನಿ, ಲಾಸ್ ವೆಗಾಸ್ ಸನ್, ನವೆಂಬರ್ 13, 2003.
  4. QFIT.com 100+ ಬ್ಲ್ಯಾಕ್‌ಜಾಕ್‌ ವೇರಿಯೇಶನ್ಸ್
  5. ಬ್ಲ್ಯಾಕ್‌ಜಾಕ್‌ ಇನ್ಶುರೆನ್ಸ್‌ ಎಕ್ಸೆಪ್ಶನ್ಸ್
  6. ಬ್ಲ್ಯಾಕ್‌ಜಾಕ್‌ ಸೈಡ್ ಬೆಟ್ಸ್ - ಅನಾಲೈಸ್ಡ್ ಬೈ ದಿ ವಿಜಾರ್ಡ್ ಆಫ್ ಆಡ್ಸ್
  7. ರೂಲ್ಸ್ ಆಂಡ್ ಹೌಸ್ ಎಡ್ಜ್ ಟೇಬಲ್
  8. ಥಿಯರಿ ಆಫ್ ಬ್ಲ್ಯಾಕ್‌ಜಾಕ್‌ , ಪುಟ 5
  9. ಥಿಯರಿ ಆಫ್ ಬ್ಲ್ಯಾಕ್‌ಜಾಕ್‌ , ಪುಟ 6–7
  10. "The Wizard of Odds". Fine points of basic strategy in single-deck blackjack. Retrieved December 8, 2006.
  11. "The Wizard of Odds". Total Dependent and Composition Dependent Basic Strategy in Blackjack. Retrieved December 19, 2006.
  12. ದಿ ಮೆಥಮ್ಯಾಟಿಕ್ಸ್ ಆಫ್ ಗ್ಯಾಂಬ್ಲಿಂಗ್
  13. ಶಫಲ್ ಟ್ರ್ಯಾಕಿಂಗ್ ಕೌಂಟ್ಸ್
  14. ದಿ ಗ್ಯಾಂಬ್ಲಿಂಗ್ ಟೈಮ್ಸ್ ಗೈಡ್ ಟು ಬ್ಲ್ಯಾಕ್‌ಜಾಕ್‌ ; ಗ್ಯಾಂಬ್ಲಿಂಗ್ ಟೈಮ್ಸ್ ಇನ್‌ಕಾರ್ಪೊರೇಟೆಡ್, ಹಾಲಿವುಡ್ CA; © 1984; ಪುಟ 110; ISBN 0-89746-015-4 ಶಫಲ್-ಟ್ರ್ಯಾಕಿಂಗ್ ಆನ್ ಈಸಿ ವೇ ಟು ಸ್ಟಾರ್ಟ್
  15. ಬ್ರೇಕ್ ದಿ ಡೀಲರ್ ; ಜೆರ್ರಿ L. ಪ್ಯಾಟರ್ಸನ್ ಮತ್ತು ಎಡ್ಡೀ ಓಲ್ಸನ್; ಪೆರಿಗೀ ಬುಕ್ಸ್; ಎ ಡಿವಿಜನ್ ಆಫ್ ಪೆಂಗ್ಯುಯಿನ್ ಪುಟ್ನಮ್; © 1986; ISBN 0-399-51233-0 ಶಫಲ್-ಟ್ರ್ಯಾಕಿಂಗ್; ಚ್ಯಾಪ್ಟರ್ 6, ಪುಟ 83]
  16. ಬ್ಲ್ಯಾಕ್‌ಜಾಕ್‌: ಎ ವಿನ್ನರ್ಸ್ ಹ್ಯಾಂಡ್‌ಬುಕ್ ; ಜೆರ್ರಿ L. ಪ್ಯಾಟರ್ಸನ್; ಪೆರಿಗೀ ಬುಕ್ಸ್; ಎ ಡಿವಿಜನ್ ಆಫ್ ಪೆಂಗ್ಯುಯಿನ್ ಪುಟ್ನಮ್; © 1990; ISBN 0-399-51598-4 ಶಫಲ್-ಟ್ರ್ಯಾಕಿಂಗ್; ಚ್ಯಾಪ್ಟಪ್ 4, ಪುಟ 51]

ಮೂಲಗಳು

[ಬದಲಾಯಿಸಿ]
  • ಬೀಟ್ ದಿ ಡೀಲರ್ : ಎ ವಿನ್ನಿಂಗ್ ಸ್ಟ್ರ್ಯಾಟೆಜಿ ಫಾರ್ ದಿ ಗೇಮ್ ಆಫ್ ಟ್ವೆಂಟಿ-ಒನ್ , ಎಡ್ವರ್ಡ್ O. ಥಾರ್ಪ್, 1966, ISBN 978-0-394-70310-7
  • ಬ್ಲ್ಯಾಕ್‌ಬೆಲ್ಟ್ ಇನ್ ಬ್ಲ್ಯಾಕ್‌ಜಾಕ್‌ , ಅರ್ನಾಲ್ಡ್ ಸ್ನೈಡರ್, 1998 (1980), ISBN 978-0-910575-05-8
  • ಬ್ಲ್ಯಾಕ್‌ಜಾಕ್‌: ಎ ವಿನ್ನರ್ಸ್ ಹ್ಯಾಂಡ್‌ಬುಕ್ , ಜೆರ್ರಿ L. ಪ್ಯಾಟರ್ಸನ್, 2001, (1978), ISBN 978-0-399-52683-1
  • ಕೆನ್ ಉಸ್ಟಾನ್ ಆನ್ ಬ್ಲ್ಯಾಕ್‌ಜಾಕ್‌ , ಕೆನ್ ಉಸ್ಟಾನ್, 1986, ISBN 978-0-8184-0411-5
  • ನಾಕ್-ಔಟ್ ಬ್ಲ್ಯಾಕ್‌ಜಾಕ್‌ , ಒಲಾಫ್ ವಂಕುರ ಮತ್ತು ಕೆನ್ ಫಂಚ್ಸ್, 1998, ISBN 978-0-929712-31-4
  • ಲಕ್, ಲಾಜಿಕ್ ಆಂಡ್ ವೈಟ್ ಲೈಸ್: ದಿ ಮೆಥಮ್ಯಾಟಿಕ್ಸ್ ಆಫ್ ಗೇಮ್ಸ್ , ಜಾರ್ಗ್ ಬೆವೆರ್ಸ್‌ಡಾರ್ಫ್, 2004, ISBN 978-1-56881-210-6, 121-134
  • ಮಿಲಿಯನ್ ಡಾಲರ್ ಬ್ಲ್ಯಾಕ್‌ಜಾಕ್‌ , ಕೆನ್ ಉಸ್ಟಾನ್, 1994 (1981), ISBN 978-0-89746-068-2
  • ಪ್ಲೇಯಿಂಗ್ ಬ್ಲ್ಯಾಕ್‌ಜಾಕ್‌ ಆಸ್ ಎ ಬ್ಯುಸಿನೆಸ್ , ಲಾರೆನ್ಸ್ ರೆವರಿ, 1998 (1971), ISBN 978-0-8184-0064-3
  • ಪ್ರೊಫೆಶನಲ್ ಬ್ಲ್ಯಾಕ್‌ಜಾಕ್‌ , ಸ್ಟ್ಯಾನ್‌ಫರ್ಡ್ ವಾಂಗ್, 1994 (1975), ISBN 978-0-935926-21-7
  • ದಿ ಥಿಯರಿ ಆಫ್ ಬ್ಲ್ಯಾಕ್‌ಜಾಕ್‌ , ಪೀಟರ್ ಗ್ರೆಫಿನ್, 1996 (1979), ISBN 978-0-929712-12-3
  • ದಿ ಥಿಯರಿ ಆಫ್ ಗ್ಯಾಂಬ್ಲಿಂಗ್ ಆಂಡ್ ಸ್ಟ್ಯಾಟಿಸ್ಟಿಕಲ್ ಲಾಜಿಕ್ , ರಿಚಾರ್ಡ್ A. ಎಪ್ಸ್ಟೀನ್, 1977, ISBN 978-0-12-240761-1, 215-251
  • ದಿ ವರ್ಲ್ಡ್ಸ್ ಗ್ರೇಟೆಸ್ಟ್ ಬ್ಲ್ಯಾಕ್‌ಜಾಕ್‌ ಬುಕ್ , ಲ್ಯಾನ್ಸ್ ಹಂಬಲ್ ಮತ್ತು ಕಾರ್ಲ್ ಕೂಪರ್, 1980, ISBN 978-0-385-15382-9

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ನಿಯಮಗಳು

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಬ್ಲ್ಯಾಕ್‌ಜಾಕ್‌ ಕ್ಯಾಲ್ಕುಲೇಟರ್ಸ್

[ಬದಲಾಯಿಸಿ]