ಬ್ರೆಕ್ಸಿಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರನಡೆಯುವ ಬ್ರಿಟನ್ ಎಕ್ಸಿಟ್ ಪ್ರಕ್ರಿಯೆ ಮಾರ್ಚ್ ೨೯, ೨೦೧೯ರಂದು ಜಾರಿಯಾಗಲಿದೆ. ೧೯೭೫ರಿಂದ ೪೪ ವರ್ಷಕಾಲ ಯುರೋಪಿಯನ್ ಆರ್ಥಿಕ ಒಕ್ಕೂಟದ ಅಂಗವಾಗಿದ್ದ ಬ್ರಿಟನ್, ಯುರೋಪಿಯನ್ ಕೌನ್ಸಿಲ್ ನಿಂದ ಹೊರನಡೆದು ತನ್ನದೇ ಸ್ವಂತ ಆರ್ಥಿಕ ವಹಿವಾಟು ನಡೆಸುವ ನಿರ್ಧಾರವು ಬ್ರೆಕ್ಸಿಟ್ ಎಂದೇ ಹೆಸರಾಗಿದೆ.

ಹಿನ್ನೆಲೆ[ಬದಲಾಯಿಸಿ]

೧೯೫೧ರಲ್ಲಿ ಯುರೋಪಿನ ೬ ರಾಷ್ಟ್ರಗಳ (ಪಶ್ಚಿಮ ಜರ್ಮನಿ, ಫ್ರಾನ್ಸ್, ಇಟಲಿ, ಬೆಲ್ಜಿಯಂ, ನೆದರ್ ಲ್ಯಾಂಡ್ಸ್ ಮತ್ತು ಲಕ್ಸೆಂಬರ್ಗ್) ಕಲ್ಲಿದ್ದಲು ಮತ್ತು ಉಕ್ಕು ತಯಾರಿಕೆ ಉದ್ದಿಮೆಗಳು[೧] ಪರಸ್ಪರ ಖರ್ಚು-ವೆಚ್ಚ ತಗ್ಗಿಸುವ ಮತ್ತು ವೇಗವಾಗಿ ರಫ್ತು-ಆಮದು ಮಾಡುವ ಉದ್ದೇಶದಿಂದ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದವು.[೨] ವ್ಯಾಪಾರ ವಹಿವಾಟು ಸರಾಗವಾಗಿ ನಡೆದು ಆದಾಯ ಹೆಚ್ಚಾಗಿ, ಈ ಒಪ್ಪಂದವನ್ನು ಇನ್ನಿತರ ಹಲವು ರಂಗಗಲಲ್ಲಿ ತರುಅ ಸಲುವಾಗಿ ಚರ್ಚೆಗಳು ನಡೆದವು. ಇದರ ಪರಿಣಾಮವಾಗಿ, ೧೯೬೭ರಲ್ಲಿ ಯುರೋಪಿಯನ್ ಆರ್ಥಿಕ ಸಮುದಾಯ ತಲೆ ಎತ್ತಿತು. ೧೯೭೫ರಲ್ಲಿ ಸರ್ ಎಡ್ವರ್ಡ್ ಹೀತ್ ನೇತೃತ್ವದಲ್ಲಿ ಬ್ರಿಟನ್, ತದ್ನಂತರ ಐರ್ಲ್ಯಾಂಡ್ ಮತ್ತು ಡೆನ್ಮಾರ್ಕ್ ಈ ಸಮುದಾಯವನ್ನು ಸೇರಿತು.

೧೯೮೩ರ ಬ್ರಿಟನ್ ಚುನಾವಣೆಯ ವಿಜಯದ ನಂತರ ಮಾರ್ಗರೇಟ್ ಥ್ಯಾಚರ್, ಏಕ ಯೂರೋಪ್ ಯೋಜನೆಗೆ ಅನುವಾದರು. ರಫ್ತು-ಆಮದುಗಳ ಸರಳೀಕರಣ, ಗಡಿಯಲ್ಲಿ ಚೆಕ್ ಪೋಸ್ಟ್ ಮತ್ತು ಸುಂಕಗಳ ಏಕರೂಪತೆ ಮತ್ತು ಮುಕ್ತ ಮಾರುಕಟ್ಟೆ ವ್ಯವಸ್ಥೆಗಳ ಗುರಿ ಹೊಂದಿದ ಈ ಕ್ರಮವನ್ನು ೧೯೮೫ರಲ್ಲಿ ಜಾರಿಗೆ ತರಲಾಯಿತು. ವಾಣಿಜ್ಯ ವಹಿವಾಟುಗಳಿಗೆ ಮಾತ್ರ ಸೀಮಿತವಾಗಿದ್ದ ಈ ವ್ಯವಸ್ಥೆಯ ಕಾರಣ, ಆರ್ಥಿಕ ಚಟುವಟಿಕೆಗಳು ಗರಿಗೆದರಿ, ಯುರೋಪಿಯನ್ ರಾಷ್ಟ್ರಗಳ ಅಭಿವೃದ್ಧಿಗೆ ನೆರವಾಯಿತು. ಇದರ ಹಿನ್ನೆಲೆಯಲ್ಲಿ ಎಲ್ಲಾ ಯುರೋಪಿಯನ್ ರಾಷ್ಟ್ರಗಳೂ ಒಂದೇ ಚಲಾವಣೆಯ ನಾಣ್ಯ ಮತ್ತು ತೆರಿಗೆ ನೀತಿ ಹೊಂದುವ ಚರ್ಚೆಗಳು ಶುರುವಾದವು. ಮಾರ್ಗರೇಟ್ ಥ್ಯಾಚರ್, ಈ ಯೋಚನೆಗಳಿಗೆ ವಿರೊಧ ವ್ಯಕ್ತಪಡಿಸಿದರು. ೧೯೯೦ರಲ್ಲಿ ಬ್ರಿಟಿಷ್ ಪೌಂಡ್ ಅನ್ನು ಜರ್ಮನಿಯ ಡಾಯ್ಷೆ ಮಾರ್ಕ್ ನ ಮೌಲ್ಯಕ್ಕೆ ಅನುಗುಣವಾಗಿ ಲೆಕ್ಕ ಹಾಕುವ ಯುರೋಪಿಯನ್ ಎಕ್ಸ್ ಚೇಂಜ್ ಪದ್ಧತಿಯನ್ನು ಜಾರಿಗೆ ತರಲಾಯಿತು.

ವಿರೋಧ[ಬದಲಾಯಿಸಿ]

೧೯೯೨ರ ಸೆಪ್ಟೆಂಬರ್ ನಲ್ಲಿ ಪೌಂಡ್ ಮತ್ತು ಡಾಯ್ಷೆ ಮಾರ್ಕ್ ನ ಮೌಲ್ಯದಲ್ಲಿ ಏರಿಳಿತಗಳು ಉಂಟಾಗಿ, ಪೌಂಡ್ ಮೌಲ್ಯ ಬಹಳವಾಗಿ ಇಳಿಯಿತು. [೩] ಯೂರೋ ಕರೆನ್ಸಿ ಮತ್ತು ಯುರೋಪಿಯನ್ ಆರ್ಥಿಕ ಸಮುದಾಯದಿಂದ ಹೊರಬರುವ ಪ್ರಸ್ತಾವವು ಮಂಚೂಣಿಗೆ ಬಂತು.

೨೦೧೬ರಲ್ಲಿ ಇದರ ಬಗ್ಗೆ ಮತಸಮೀಕ್ಷೆ ನಡೆದು, ಬ್ರಿಟನ್ ಮಾರ್ಚ್ ೨೯ ೨೦೧೯ರಂದು ಹೊರಬರುವುದಾಗಿ ನಿರ್ಧಾರವಾಯಿತು.

ಉಲ್ಲೇಖಗಳು[ಬದಲಾಯಿಸಿ]